AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್ ನ್ಯೂಸ್ ನೀಡಿದ ಶಿವರಾಜ್​​ಕುಮಾರ್; ಭಾವುಕ ಪೋಸ್ಟ್ ಹಂಚಿಕೊಂಡ ‘ಡ್ಯಾಡ್’ ತಂಡ

ಡಾ. ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಹಲವು ವರ್ಷಗಳ ಬಳಿಕ ಶಿವಣ್ಣ ವೈದ್ಯನ ಪಾತ್ರದಲ್ಲಿ ನಟಿಸಿರುವ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಹರೀಶ್ ಪೆದ್ದಿ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಮುಗಿದ ಬೆನ್ನಲ್ಲೇ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಗುಡ್ ನ್ಯೂಸ್ ನೀಡಿದ ಶಿವರಾಜ್​​ಕುಮಾರ್; ಭಾವುಕ ಪೋಸ್ಟ್ ಹಂಚಿಕೊಂಡ ‘ಡ್ಯಾಡ್’ ತಂಡ
ಶಿವಣ್ಣ ಡ್ಯಾಡ್ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on:Jul 01, 2026 | 7:44 PM

Share

ಮುಖ್ಯಾಂಶಗಳು

  • ಕ್ಯಾಮೆರಾ ಆಫ್, ಅಸಲಿ ಹಾರ್ಟ್‌ಬೀಟ್ ಶುರು: 'ಡ್ಯಾಡ್' ಶೂಟಿಂಗ್ ಮುಗಿಸಿ ಭಾವುಕರಾದ ನಿರ್ದೇಶಕ
  • ಮೈಸೂರಿನ ನಂದಿ ಬೆಟ್ಟದ ಇತಿಹಾಸ ಮರುಕಳಿಸಿದ ಶಿವಣ್ಣ
  • ಹಲವು ವರ್ಷಗಳ ಬಳಿಕ ಡಾಕ್ಟರ್ ಅವತಾರ

ಸ್ಯಾಂಡಲ್‌ವುಡ್ ಬ್ಯುಸಿ ನಟ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ ‘ಡ್ಯಾಡ್’ ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದೆ. ಈ ವಿಷಯವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಭಾವುಕ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ.

‘ಪ್ರತಿ ಆ್ಯಕ್ಷನ್ ಕಟ್ ಹಿಂದೆಯೂ ಒಂದು ಕನಸಿತ್ತು. ಇಂದಿಗೆ ಚಿತ್ರದ ಶೂಟಿಂಗ್ ಮುಗಿದಿದೆ, ಆದರೆ ಈ ಜರ್ನಿ ನನ್ನ ಹೃದಯದಲ್ಲಿ ಸದಾ ಇರಲಿದೆ. ಲೆಜೆಂಡರಿ ನಟ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ದು ನನ್ನ ಸೌಭಾಗ್ಯ’ ಎಂದು ನಿರ್ದೇಶಕ ಅನಿಲ್‍ ಕನ್ನೆಗಂಟಿ ಕೃತಜ್ಞತೆ ಸಲ್ಲಿಸಿದ್ದಾರೆ. ಕ್ಯಾಮೆರಾಗಳು ಆಫ್ ಆಗಿದ್ದರೂ ‘ಡ್ಯಾಡ್’ ಸಿನಿಮಾದ ಅಸಲಿ ಹಾರ್ಟ್‌ಬೀಟ್ ಈಗಷ್ಟೇ ಶುರುವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಡ್ಯಾಡ್ ತಂಡದ ಪೋಸ್ಟ್

ವೈದ್ಯನ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ!

ಹಲವು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಶಿವಣ್ಣ ಈ ಸಿನಿಮಾದಲ್ಲಿ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಅತಿ ದೊಡ್ಡ ಹೈಲೈಟ್. ಮೈಸೂರಿನ ನಂದಿ ವಿಗ್ರಹದ ಎದುರು ಈ ಚಿತ್ರಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ವಿಶೇಷವೆಂದರೆ, 32 ವರ್ಷಗಳ ಹಿಂದೆ ಶಿವಣ್ಣ ಅಭಿನಯದ ಸೂಪರ್ ಹಿಟ್ ‘ಜಗ ಮೆಚ್ಚಿದ ಹುಡುಗ’ ಚಿತ್ರ ಸಹ ಇದೇ ಜಾಗದಲ್ಲಿ ಮುಹೂರ್ತ ಕಂಡಿತ್ತು. ಈಗ ಅದೇ ಇತಿಹಾಸ ಮರುಕಳಿಸುವ ಮುನ್ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಮುದ್ದಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದ ಶಿವರಾಜ್​​ಕುಮಾರ್

ಮಲ್ಟಿಲಿಂಗ್ವಲ್ ಸ್ಟಾರ್ ತಾರಾಗಣ

ಕನ್ನಡ ಸೇರಿದಂತೆ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಬಿಗ್ ಬಜೆಟ್ ಸಿನಿಮಾ ಮೂಡಿಬರುತ್ತಿದೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ಬೇಬಿ ನಕ್ಷತ್ರಾ, ಬಾಬು ಹಾಗೂ ಮಲಯಾಳಂನ ಖ್ಯಾತ ನಟ ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹರೀಶ್ ಪೆದ್ದಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿ.ಎಸ್‍. ಸುಧೀಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಹಾಗೂ ಬಿ. ರಾಜಶೇಖರ್ ಅವರ ಛಾಯಾಗ್ರಹಣವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:43 pm, Wed, 1 July 26

Follow Us
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?