AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಫ್ರಾಂಚೈಸಿ ಮಾರಾಟ: ಇನ್ಮುಂದೆ 2 ತಂಡಗಳಿಗೆ ಹೊಸ ಮಾಲೀಕರು!

IPL 2027, RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಹಿಂದೆ ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿತ್ತು. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್​ಸಿಬಿ ಫ್ರಾಂಚೈಸಿಯನ್ನು ಹೊಂದಿತ್ತು. ಇದೀಗ ಡಿಯಾಜಿಯೋ ಕಂಪೆನಿಯು ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಿ, ಮದ್ಯದ ಉದ್ಯಮದ ಮೇಲೆ ಗಮನ ಹರಿಸಲು ನಿರ್ಧರಿಸಿದೆ.

ಝಾಹಿರ್ ಯೂಸುಫ್
|

Updated on: Jul 01, 2026 | 12:28 PM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL)​ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಮಾರಾಟವಾಗಿದೆ. ಈ ಮಾರಾಟ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಅಧಿಕೃತವಾಗಿ ಅನುಮೋದನೆ ನೀಡಿದೆ. (PC: IPL)

1 / 5
ಜಾಗತಿಕ ಮದ್ಯದ ದೈತ್ಯ ಸಂಸ್ಥೆ ಡಿಆಜಿಯೋ (ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್) ಒಡೆತನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ಸಂಸ್ಥೆಯನ್ನು ₹16,660 ಕೋಟಿ ($1.78 ಬಿಲಿಯನ್) ಭಾರಿ ಮೊತ್ತಕ್ಕೆ ಆದಿತ್ಯ ಬಿರ್ಲಾ ನೇತೃತ್ವದ ಬಹುರಾಷ್ಟ್ರೀಯ ಒಕ್ಕೂಟ ಖರೀದಿಸಿದೆ. (PC: IPL)

2 / 5
ಆರ್​ಸಿಬಿ ಫ್ರಾಂಚೈಸಿಯನ್ನು ಕೇವಲ ಒಂದು ಕಂಪನಿ ಮಾತ್ರ ಖರೀದಿ ಮಾಡಿಲ್ಲ. ಬದಲಿಗೆ ವಿಶ್ವದ ಪ್ರಮುಖ ಉದ್ಯಮಿಗಳು ಮತ್ತು ಹೂಡಿಕೆ ಸಂಸ್ಥೆಗಳು ಕೈಜೋಡಿಸಿ ಹೊಸ ಒಕ್ಕೂಟವನ್ನು ರಚಿಸಿವೆ. ಅದರಂತೆ ಆದಿತ್ಯ ಬಿರ್ಲಾ ಗ್ರೂಪ್​, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲ್ಯಾಕ್‌ಸ್ಟೋನ್ ಸಂಸ್ಥೆ ಮತ್ತು ಬೋಲ್ಟ್ ವೆಂಚರ್ಸ್ ಸಂಸ್ಥೆಯನ್ನು ಒಳಗೊಂಡ ಈ ಒಕ್ಕೂಟವು ಇನ್ಮುಂದೆ ಆರ್​ಸಿಬಿ ಫ್ರಾಂಚೈಸಿಯ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ.  (PC.X.com)

3 / 5
ಈ ಮಾರಾಟದೊಂದಿಗೆ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ 100% ಷೇರುಗಳು ಹೊಸ ಒಕ್ಕೂಟಕ್ಕೆ ಹಸ್ತಾಂತರವಾಗಲಿವೆ. ಇದರಲ್ಲಿ ಆರ್​ಸಿಬಿ ಪುರುಷರ ಐಪಿಎಲ್ ಫ್ರಾಂಚೈಸಿ, ಆರ್​ಸಿಬಿ ಮಹಿಳೆಯರ ಡಬ್ಲ್ಯುಪಿಎಲ್ ಫ್ರಾಂಚೈಸಿ ಮತ್ತು ಆರ್‌ಸಿಬಿ ಬ್ರ್ಯಾಂಡ್‌ನ ಎಲ್ಲಾ ಹಕ್ಕುಗಳು, ಲೋಗೋ ಮತ್ತು ವಾಣಿಜ್ಯ ವ್ಯವಹಾರಗಳು ಸೇರಿವೆ. (PC: IPL/WPL)

4 / 5
ಇನ್ನು ಆರ್ಯಮಾನ್ ವಿಕ್ರಮ್ ಬಿರ್ಲಾ ನೇತೃತ್ವದ 'ಬಿಗ್ ಬನ್ಯನ್ ಹೋಲ್ಡಿಂಗ್ಸ್' ಈ ಒಕ್ಕೂಟದ ಪ್ರಮುಖ ನಾಯಕತ್ವ ವಹಿಸಿದ್ದು, ಅದರಂತೆ ಆರ್‌ಸಿಬಿ ತಂಡದ ನೂತನ ಚೇರ್ಮನ್ ಆಗಿ ಆರ್ಯಮಾನ್ ವಿಕ್ರಮ್ ಬಿರ್ಲಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವೈಸ್-ಚೇರ್ಮನ್ ಆಗಿ ಟೈಮ್ಸ್ ಗ್ರೂಪ್‌ನ ಸತ್ಯನ್ ಗಜ್ವಾನಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. (PC.X.com)

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಹಾಸನಾಂಬೆ ಮಹೋತ್ಸವ: ಗುತ್ತಿಗೆದಾರನ ಜತೆ ಸಚಿವ ಶಿವಲಿಂಗೇಗೌಡ ಚೌಕಾಸಿ

ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?

ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?

ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ

‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್

ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ

ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ

ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?

ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ

‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?