ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 18ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಳ್ಳಿ ವಸ್ತುಗಳು ಅಥವಾ ಒಡವೆಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇನ್ನು ನಿಮ್ಮಲ್ಲಿ ಕೆಲವರು ದಾನ- ಧರ್ಮ ಕಾರ್ಯಗಳನ್ನು ಮಾಡಲಿದ್ದೀರಿ. ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವಂತಹ ಅನುಗ್ರಹ ಆಗಲಿದೆ. ಹಿರಿಯರ ಆಶೀರ್ವಾದ ಬಲ ನಿಮ್ಮ ಮೇಲೆ ಇರಲಿದ್ದು, ಸಂಘ- ಸಂಸ್ಥೆಗಳಲ್ಲಿ ಪ್ರಮುಖವಾದ ಹುದ್ದೆಯೊಂದು ದೊರೆಯಬಹುದು. ಕನಿಷ್ಠ ಪಕ್ಷ ಪ್ರಭಾರಿಯಾಗಿಯಾದರೂ ಹುದ್ದೆಯನ್ನು ವಹಿಸಿಕೊಳ್ಳ ಬೇಕಾಗಬಹುದು. ಸ್ವಂತ ಉದ್ಯಮ ನಡೆಸುತ್ತಿರುವವರು ಹೊಸ ವ್ಯವಹಾರವನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಅಂತಿಮಗೊಳಿಸಲಿದ್ದೀರಿ.
ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯಲ್ಲಿ ಯೋಜನೆ, ಆಲೋಚನೆ ಶುರು ಆಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಮನೆಯನ್ನೋ ಮಳಿಗೆಯನ್ನೋ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದುರ್ಗಾದೇವಿ ಆರಾಧನೆ ಮಾಡುವುದರಿಂದ ಹಾಗೂ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರಲಿದೆ. ಅದೇ ವೇಳೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಫೋಟೋಗ್ರಫಿಯನ್ನೇ ವೃತ್ತಿ ಮಾಡಿಕೊಂಡಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ.
ಮ್ಯಾನೇಜ್ ಮೆಂಟ್ ಜತೆಗೆ ಅಥವಾ ಹತ್ತಿರದಲ್ಲಿ ಕೆಲಸ ಮಾಡುವಂಥ, ನಾಯಕತ್ವ ಸ್ಥಾನದಲ್ಲಿ ಇರುವಂಥವರಿಗೆ ಕಠಿಣವಾದ ಕೆಲಸಗಳನ್ನು ವಹಿಸಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ತುಂಬ ಕಟ್ಟುನಿಟ್ಟಿನಿಂದ ಮಾತನಾಡಲೇ ಬೇಕಾದ ಸನ್ನಿವೇಶ ಎದುರಾಗಲಿದೆ. ಇದರಿಂದ ಸ್ವತಃ ನಿಮ್ಮ ಮನಸ್ಸಿಗೆ ಬೇಸರ ಎನಿಸಲಿದೆ. ಮನೆ ಅಥವಾ ಸೈಟು- ಜಮೀನುಗಳ ದಲ್ಲಾಳಿಗಳಾಗಿ ಇರುವಂಥವರಿಗೆ ಇನ್ನೇನು ಎಲ್ಲ ಕೆಲಸವೂ ಮುಗಿದೇ ಹೋಯಿತು ಅಂದುಕೊಳ್ಳುವ ಹೊತ್ತಿಗೆ ವ್ಯವಹಾರ ಮುರಿದುಹೋಗಬಹುದು. ಆದ್ದರಿಂದ ಇನ್ನೂ ನಿಮ್ಮ ಕೈ ಸೇರದ ಹಣದ ವಿಚಾರದಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗದಿರಿ.
ಸಂಬಂಧಿಕರು ಯಾಕಾದರೂ ಕರೆ ಮಾಡುತ್ತಾರೋ ಅಥವಾ ಯಾಕಾದರೂ ಮನೆಗೆ ಬರುತ್ತಾರೋ ಎಂದು ಬಹಳ ಬೇಸರಿಸಿಕೊಳ್ಳುತ್ತೀರಿ. ಸಂಗಾತಿ ಜತೆಗೆ ಮಾತನಾಡುವಾಗ ಸಣ್ಣ ಸಂಗತಿಗೂ ಸಿಟ್ಟು ಮಾಡಿಕೊಂಡು, ನಿಮ್ಮ ಮೇಲೆ ರೇಗಾಡುವಂಥ ಸಾಧ್ಯತೆಗಳಿವೆ. ಇದೇ ವೇಳೆ ಸ್ನೇಹಿತರು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಆಗುತ್ತದೆ. ಕೆಲಸವೇ ಇಲ್ಲದಿದ್ದರೂ ಬಹಳ ಕೆಲಸ ಮಾಡುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ ಎಂಬ ರೀತಿಯಲ್ಲಿ ನಿಮ್ಮನ್ನು ಮೂದಲಿಸಬಹುದು. ಹೊಸ ಬಟ್ಟೆಯೋ ಅಥವಾ ಗೃಹ ಬಳಕೆ ವಸ್ತುವನ್ನೋ ಇತರರಿಗಾಗಿ ಖರೀದಿಸಿದ್ದಕ್ಕೆ ನೀವೇ ಹಣ ಕೊಟ್ಟು, ಇಟ್ಟುಕೊಳ್ಳಬೇಕಾಗುತ್ತದೆ.
ನೀವು ಅಂದುಕೊಂಡ ಮೊತ್ತಕ್ಕೆ, ನಿರೀಕ್ಷೆ ಮಾಡಿದ್ದ ರೀತಿಯಲ್ಲಿ ಸಮಯಕ್ಕೆ ವ್ಯವಹಾರ ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಹೊಸದಾಗಿ ಪರಿಚಯ ಆದವರ ಮೇಲೆ ವಿಪರೀತವಾದ ಅವಲಂಬನೆ ಬೇಡ. ನಿಮಗೆ ಗೊತ್ತಿಲ್ಲದ ವಿಚಾರಗಳು ಏನಾದರೂ ಇದ್ದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ಬಗ್ಗೆ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದುಬಿಡಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ನಿರ್ಲಕ್ಷ್ಯ ಮಾಡಿದಲ್ಲಿ ಕಾಲು, ಬೆನ್ನಿನ ಹುರಿಗೆ ತೊಂದರೆ ಆಗಬಹುದು.
ನಿಮ್ಮ ನಿರ್ಧಾರಗಳ ಬಗ್ಗೆ ಹೆಮ್ಮೆ ಎನಿಸುವಂತಹ ಬೆಳವಣಿಗೆ ಆಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ನೀವು ಹಾಕಿರುವ ಪೋಸ್ಟ್ ವೈರಲ್ ಆಗುವುದು, ಮೆಚ್ಚುಗೆ ವ್ಯಕ್ತವಾಗುವುದು ಆಗುತ್ತದೆ. ಏಕಾಏಕಿ ಎಲ್ಲ ಕೆಲಸಗಳು ಒಂದು ಕಡೆಯಿಂದ ಮುಗಿಯುತ್ತಾ ಬರುತ್ತಿದ್ದಂತೆ ಮನಸ್ಸಿಗೆ ನೆಮ್ಮದಿ ಆಗುತ್ತದೆ. ಹೊಸ ಮನೆ ನಿರ್ಮಾಣ ಮಾಡುತ್ತಿರುವವರಿಗೆ ಹಣಕಾಸಿನ ಅಡೆತಡೆಗಳು ಎದುರಾಗಿದ್ದಲ್ಲಿ ಅದು ನಿವಾರಣೆ ಆಗುತ್ತದೆ. ಹೊಸದಾಗಿ ಪರಿಚಯ ಆಗುವ ವ್ಯಕ್ತಿಯ ಮೂಲಕ ವೃತ್ತಿ ಬದುಕಿಗೆ ನೆರವಾಗಲಿದೆ. ನೀವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹಲವು ಕೆಲಸಗಳಲ್ಲಿ ಯಶಸ್ಸು ದೊರಕಲಿದೆ. ವೈಯಕ್ತಿಕವಾಗಿ ದಣಿವು ಅಂತಾದರೂ ತೃಪ್ತಿ ಸಿಗುತ್ತದೆ.
ನಿಮ್ಮ ಆಲೋಚನಾ ವಿಧಾನದಲ್ಲಿ ದೊಡ್ಡ ಬದಲಾವಣೆ ಕಾಣಿಸಿಕೊಳ್ಳಲಿದೆ. ಸಾಂಪ್ರದಾಯಿಕ ಚಿಂತನೆಗಳನ್ನು ಬಿಟ್ಟು, ನಿರ್ದಿಷ್ಟ ಕೆಲಸಕ್ಕೆ ಅಗತ್ಯವಾದ ರೀತಿಯಲ್ಲಿ ಆಲೋಚಿಸುವ, ಕೆಲಸ ಮಾಡುವ ನಿಟ್ಟಿನಲ್ಲಿ ತೊಡಗಿಕೊಳ್ಳಲಿದ್ದೀರಿ. ಕಾಂಡಿಮೆಂಟ್ಸ್ ನಡೆಸುತ್ತಿರುವವರು, ಕ್ಯಾಟರಿಂಗ್ ಮಾಡುತ್ತಿರುವವರು ಲಾಭದ ಪ್ರಮಾಣ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಬೆಲೆ ಏರಿಕೆ ಮಾಡಬೇಕು ಎಂದಿದ್ದಲ್ಲಿ ಈ ದಿನ ಆ ಬಗ್ಗೆ ಸೂಕ್ತವಾದ ಯೋಜನೆಯನ್ನು ರೂಪಿಸಿಕೊಳ್ಳಿ. ಮಗನ ಅಥವಾ ಮಗಳ ಮದುವೆಗಾಗಿ ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಮನಸ್ಸಿಗೆ ಸಮಾಧಾನ ತರುವಂತಹ ಬೆಳವಣಿಗೆಗಳು ಆಗಲಿವೆ. ಮನೆದೇವರ ಆರಾಧನೆಯಿಂದ ಮತ್ತಷ್ಟು ಶುಭ ಫಲಗಳು ದೊರೆಯಲಿವೆ.
ತಂದೆ- ತಾಯಿ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ನವ ದಂಪತಿಗೆ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುವಂಥ ಬೆಳವಣಿಗೆಗಳು ಆಗಲಿವೆ. ಮಾತಿನ ಮೂಲಕ ಬಗೆಹರಿಸುವಂಥ ವಿಚಾರಗಳು ಇದ್ದಲ್ಲಿ ಅದನ್ನು ಮಾಡಲಿದ್ದೀರಿ. ಮನೆಯ ಅಲಂಕಾರಕ್ಕಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವಂಥ ಅವಕಾಶಗಳಿವೆ. ನಿಮ್ಮಷ್ಟಕ್ಕೆ ನೀವಿದ್ದರೂ ಈ ದಿನ ರಾಜೀ- ಸಂಧಾನಗಳಿಗಾಗಿ ಬರುವಂತೆ ಕೇಳಬಹುದು. ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಕೆಲಸದ ಒತ್ತಡದಿಂದಾಗಿ ತಪ್ಪುಗಳನ್ನು ಮಾಡುವ ಸಾಧ್ಯತೆ ಇದ್ದು, ಈ ದಿನ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಲಕ್ಷ್ಯ ವಹಿಸಿ, ಕೆಲಸ ಮಾಡಿ.
ಯೂಟ್ಯೂಬರ್ ಗಳು, ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳು, ಆನ್ ಲೈನ್ ಮೀಡಿಯಾಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯಲಿವೆ. ಒಂದು ವೇಳೆ ಈಗ ಮಾಡುತ್ತಿರುವ ಕೆಲಸಗಳಲ್ಲಿ ಅಂದುಕೊಂಡಂತೆ ಫಲಿತಾಂಶ ಬರುತ್ತಿಲ್ಲ ಎಂಬ ಆತಂಕ ಕಾಡುತ್ತಿದ್ದಲ್ಲಿ ಅದು ದೂರವಾಗುವ ನಿಟ್ಟಿನಲ್ಲಿ ಪಾಸಿಟಿವ್ ಆದಂಥ ಬೆಳವಣಿಗೆಗಳು ಆಗಲಿವೆ. ಫ್ಯಾಷನ್ ಡಿಸೈನ್ ಗೆ ಸಂಬಂಧಿಸಿದ ಕೋರ್ಸ್ ಗಳನ್ನು ಮಾಡುತ್ತಿರುವವರಿಗೆ ಉನ್ನತ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಮಾಡುವ ಅಥವಾ ಅಂಥ ಸಂಸ್ಥೆಗಳಿಂದ ನಿಮಗೆ ವಿಶೇಷ ತರಬೇತಿ ಪಡೆದುಕೊಳ್ಳುವಂಥ ಅವಕಾಶ ದೊರಕಬಹುದು. ಹಣಕಾಸು ಸಂಗತಿಗಳಲ್ಲಿ ಕುಟುಂಬದವರ ಬೆಂಬಲ ದೊರೆಯಲಿದೆ.