ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 15ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಸ್ವಭಾವದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಅನ್ನಿಸುವುದಕ್ಕೆ ಶುರು ಆಗುತ್ತದೆ. ಹಣಕಾಸಿನ ವಿಷಯಕ್ಕೆ ಪ್ರಾಮುಖ್ಯ ಹೆಚ್ಚಾಗಲಿದೆ. ನಿಮ್ಮದೇ ಕೈಯಿಂದ ಹಣ ಹಾಕಿಕೊಂಡು ಮಾಡಿದ ಕೆಲಸವೊಂದರಲ್ಲಿ ಬಾಕಿ ಉಳಿದ ಮೊತ್ತ ನಿಮ್ಮ ಕೈ ಸೇರಬಹುದು. ದೂರಾಲೋಚನೆಯಿಂದ ತೆಗೆದುಕೊಂಡ ನಿರ್ಧಾರದಿಂದ ದೀರ್ಘ ಕಾಲದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ ಎಂಬುದು ನಿಮಗೆ ಖಾತ್ರಿ ಆಗುತ್ತದೆ.
ತಂದೆಯೊಂದಿಗೆ ಮುಖ್ಯ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದೀರಿ ಎಂದಾಗ ಅವರನ್ನು ಹೀಯಾಳಿಸುವುದೋ ಮೂದಲಿಸುವುದೋ ಮಾಡದಿರಿ. ಒಂದು ವೇಳೆ ಅಭಿಪ್ರಾಯ ಭೇದಗಳು ಉದ್ಭವಿಸಿದಲ್ಲಿ ಮಾತುಕತೆಯನ್ನು ಮುಂದೂಡುವುದು ಉತ್ತಮ. ನೀವಾಗಿಯೇ ಒಪ್ಪಿಕೊಂಡ ಕೆಲಸಗಳನ್ನು ಅದೇ ರೀತಿಯಲ್ಲಿ, ಹೇಳಿದ ಸಮಯಕ್ಕೆ ಮುಗಿಸಿಕೊಡುವುದಕ್ಕೆ ಪ್ರಯತ್ನಿಸಿ. ನಿಮ್ಮ ಕೈಗೆ ಪೂರ್ತಿ ಹಣ ಬರುವ ತನಕ ಬೇರೆಯವರಿಗೆ ಮಾತು ಕೊಡಬೇಡಿ.
ನಿಮ್ಮ ನೆನಪಿನ ಶಕ್ತಿ ಈ ದಿನ ಬಹಳ ಮುಖ್ಯವಾಗುತ್ತದೆ. ಯಾವುದಾದರೂ ಕೆಲಸ ಬಾಕಿ ಉಳಿಸಿ, ಮರೆತೆ ಕ್ಷಮಿಸಿ ಎಂದೆಲ್ಲ ಹೇಳುವ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಿ. ಲೇವಾದೇವಿ ವ್ಯವಹಾರ ಮಾಡುವವರಿಗೆ ಮುಖ್ಯ ದಾಖಲೆ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಹಣಕಾಸಿನ ತುರ್ತು ಪರಿಸ್ಥಿತಿಗಾಗಿ ಸ್ನೇಹಿತರಿಂದ ಸಾಲ ಪಡೆಯುವಂಥ ಅಗತ್ಯ ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡುವ ಕಡೆಗೂ ಲಕ್ಷ್ಯ ಇರಲಿ.
ಹಲವರು ಬೇಡ ಅಂದಾಗಲೂ ನೀವು ಪಟ್ಟು ಹಿಡಿದು ಮಾಡಿದ ಕೆಲಸದ ಶುಭ ಫಲವನ್ನು ಈ ದಿನ ನೀವು ಕಾಣಲಿದ್ದೀರಿ. ವೃತ್ತಿಪರರು, ಉದ್ಯೋಗಸ್ಥರಿಗೆ ದೊಡ್ಡ ದೊಡ್ಡ ಜವಾಬ್ದಾರಿಗಳು ಹೆಗಲಿಗೆ ಬೀಳುವಂಥ ಸಮಯ ಇದು. ಮನೆ ಬದಲಾವಣೆಗೆ ಅಥವಾ ಮಕ್ಕಳ ಶಾಲೆಯನ್ನು ಬದಲಾಯಿಸಬೇಕು ಎಂದುಕೊಳ್ಳುತ್ತಿರುವವರಿಗೆ ನಿಮ್ಮ ನಿರೀಕ್ಷೆಯಂತೆಯೇ ಬೆಳವಣಿಗೆಗಳು ಕಾಣಲಿವೆ. ದ್ವಿಚಕ್ರ ವಾಹನ ಖರೀದಿ ಮಾಡುವುದಕ್ಕೆ ಹಣಕಾಸು ಹೊಂದಿಸಲು ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಆಗಲಿದೆ.~
ನೀವು ಎಷ್ಟೇ ಶ್ರಮ ಹಾಕಿದರೂ ಕೆಲವು ಕೆಲಸಗಳನ್ನು ಈ ದಿನ ಪೂರ್ಣ ಮಾಡುವುದಕ್ಕೆ ಸಾಧ್ಯ ಆಗುವುದೇ ಇಲ್ಲ. ಇತರರ ಸಾಮರ್ಥ್ಯವನ್ನು ಈ ಕಾರಣದಿಂದ ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ಹಣ- ಸಮಯ, ಶಿಫಾರಸು ಎಂದು ಹಠಕ್ಕೆ ಬಿದ್ದು, ಕೆಲಸ ಮುಗಿಸಲೇ ಬೇಕು ಎಂದು ಹೊರಟರೆ ನಿಮಗೆ ನಷ್ಟವಾದೀತು. ಹೊಂದಾಣಿಕೆ ಮಾಡಿಕೊಂಡಲ್ಲಿ ಉದ್ಯೋಗ ಸ್ಥಳದಲ್ಲಿ ನೆಮ್ಮದಿಯಿಂದ ಇರಬಹುದು. ಅನಿಸಿದ್ದನ್ನು ನೇರಾನೇರ ಹೇಳಿಬಿಡ್ತೀನಿ ಎಂದುಕೊಳ್ಳದಿರಿ.
ಹತ್ತಾರು ವಿಚಾರಗಳು ತಲೆಯಲ್ಲಿ ಸುಳಿದಾಡುವುದಕ್ಕೆ ಆರಂಭವಾಗುತ್ತದೆ. ಘಟನೆಗಳೋ ಸನ್ನಿವೇಶಗಳೋ ಇಂಥದ್ದರ ಕಾರಣಕ್ಕೆ ಜನರ ಗುಣವನ್ನು ಅಳೆಯುವುದಕ್ಕೆ ಆರಂಭಿಸುತ್ತೀರಿ. ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಒಂದು ವೇಳೆ ನೀವೇ ಮಾಲೀಕರಾಗಿದ್ದಲ್ಲಿ ಕೆಲವರಿಗೆ ಸಂಬಳಕ್ಕೆ ಕತ್ತರಿ ಬೀಳಬಹುದು ಅಥವಾ ಹುದ್ದೆಯಿಂದಲೇ ತೆಗೆಯುವಂಥ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಯ ವರ್ತನೆ, ಧೋರಣೆ ನಿಮ್ಮಲ್ಲಿ ಚಿಂತೆ ಹಾಗೂ ಸಿಟ್ಟು ಉಂಟು ಮಾಡಬಹುದು. ಇದನ್ನು ಎಲ್ಲರ ಮೇಲೂ ತೋರಿಸದಿರಿ.
ನಿಮ್ಮ ಬಗ್ಗೆ, ನಿಮ್ಮ ಲಾಭ- ನಷ್ಟದ ಬಗ್ಗೆ ಮಾತ್ರ ಹೆಚ್ಚೆಚ್ಚು ಯೋಚನೆ ಮಾಡಲಿದ್ದೀರಿ. ಹೀಗೆ ನಿಮ್ಮ ಬಗ್ಗೆ ಆಲೋಚನೆ ಮಾಡುತ್ತಿದ್ದೀರಿ ಎಂಬುದು ಇತರರಿಗೆ ಗಮನಕ್ಕೆ ಬಾರದಂತೆ ಜಾಗ್ರತೆಯನ್ನು ವಹಿಸಿ. ಏಕೆಂದರೆ ಈ ಗುಣದ ಕಾರಣಕ್ಕೆ ಬಹಳ ಆಪ್ತರಾದವರಿಗೆ ಬೇಸರ ಆಗಲಿದೆ. ಇತರರ ವೈಯಕ್ತಿಕ ಭಾವನೆಗಳನ್ನು ಸಹ ಗೌರವಿಸುವುದು ಮುಖ್ಯ ಆಗುತ್ತದೆ. ವಾಹನ, ಆಭರಣ, ಹೊಸ ಗ್ಯಾಜೆಟ್ ಗಳು, ಟೀವಿ, ಲ್ಯಾಪ್ ಟಾಪ್ ಇಂಥವುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದೇ ಮೊದಲ ಸಲ ಮಾಡುವಂಥ ಕೆಲಸ ಆಗಿದ್ದಲ್ಲಿ ಒಪ್ಪಿಕೊಳ್ಳುವ ಮುನ್ನ ಅದನ್ನು ನಿಮ್ಮಿಂದ ಮಾಡಲು ಸಾಧ್ಯವೇ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ.
ನಿಮ್ಮ ಒಳ ಮನಸ್ಸು ಹೇಳುವಂತೆ ಕೇಳಿ. ದೊಡ್ಡ ಯೋಜನೆಗಳನ್ನು ಮುನ್ನಡೆಸುವಂತೆ ನಿಮಗೆ ಆಫರ್ ಬರಬಹುದು ಅಥವಾ ಹೊಸ ಉದ್ಯೋಗ ಮತ್ತು ಸಂಬಳದ ಬಗ್ಗೆ ಸ್ನೇಹಿತರೋ ಅಥವಾ ಈ ಹಿಂದೆ ನಿಮ್ಮ ಜತೆಗೆ ಕೆಲಸ ಮಾಡಿದವರೇ ಹೇಳುವಂಥ ಯೋಗ ಇದೆ. ತುಂಬ ಆಪ್ತರೊಂದಿಗೆ ಸಂತೋಷದಿಂದ ಸಮಯ ಕಳೆಯುವಂಥ ಯೋಗ ಇದ್ದು, ಈ ದಿನ ಬಹಳ ದಿನಗಳ ತನಕ ನೆನಪಿನಲ್ಲಿ ಉಳಿಯುವಂಥ ಸಾಧ್ಯತೆ ಇದೆ. ಹೆಣ್ಣುಮಕ್ಕಳು ಕೆಲಸದ ಬ್ರೇಕ್ ತೆಗೆದುಕೊಂಡು, ಮತ್ತೆ ಉದ್ಯೋಗ ಹುಡುಕುವುದಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಶುಭ ಸುದ್ದಿಯನ್ನು ಕೇಳುವಂಥ ಸಾಧ್ಯತೆಗಳಿವೆ. ಮನೆಯಿಂದ ಹೊರಕ್ಕೆ ಹೋಗುವಾಗ ಗಣಪತಿಯ ಪೂಜೆಯನ್ನು ಮಾಡಿ, ಹೊರಡಿ.
ಎಲೆಕ್ಟ್ರಿಕಲ್ ವಾಹನವನ್ನೋ ಅಥವಾ ಗೃಹಬಳಕೆ ವಸ್ತುಗಳನ್ನೋ ಖರೀದಿಸುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಒಂದು ವೇಳೆ ಖರೀದಿಯ ಉದ್ದೇಶವೇ ಇಲ್ಲದಿದ್ದರೂ ಆಫರ್ ಗಳು ಇದೆ ಎಂಬ ಕಾರಣಕ್ಕೆ ಕೊಂಡುಕೊಳ್ಳುವ ಸಾಧ್ಯತೆಗಳಿವೆ. ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದೀರಿ ಎಂದಾದರೆ ಕೆಲವರ ಮಾತುಗಳಿಂದ ನಿರುತ್ಸಾಹ ಆಗಬಹುದು. ಅಂಥವರಿಂದ ಅಂತರವನ್ನು ಕಾಯ್ದುಕೊಳ್ಳಿ. ಈ ದಿನ ಸಾಧ್ಯವಾದಷ್ಟೂ ತಾಜಾ- ಬಿಸಿಯಾದ ಆಹಾರ ಸೇವನೆ ಮಾಡುವುದಕ್ಕೇ ಆದ್ಯತೆಯನ್ನು ನೀಡಿ.
ಲೇಖನ- ಎನ್.ಕೆ.ಸ್ವಾತಿ