Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 16ರ ದಿನಭವಿಷ್ಯ

| Updated By: Ganapathi Sharma

Updated on: Sep 16, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 16ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 16ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 16ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸುಮ್ಮನಿರಬೇಕಿತ್ತು, ಮಾತನಾಡಿ ಯಾಕೆ ಕೆಟ್ಟವರಾಗಬೇಕು ಎಂದು ಈ ದಿನ ಬಹಳ ನಿಮಗೆ ಅನಿಸಲಿದೆ. ಇತರರ ವೈಯಕ್ತಿಕ ವಿಚಾರಗಳಲ್ಲಿ ಅವರದೇ ಆದ ದೃಷ್ಟಿಕೋನ ಇರುತ್ತದೆ. ಅದು ನಿಮ್ಮ ಕಣ್ಣಿಗೆ ಹೇಗೆ ಕಾಣಿಸುತ್ತದೆ ಎಂಬುದು ಮುಖ್ಯವಲ್ಲ ಅನ್ನೋದನ್ನು ಒಪ್ಪಿಕೊಳ್ಳಿ. ಇನ್ನೊಬ್ಬರಿಗಾಗಿ ಖರ್ಚು ಮಾಡಿದ ಕೂಡಲೇ ನಿಮ್ಮ ಎಲ್ಲ ವಿಚಾರವನ್ನು ಮೆಚ್ಚಿಕೊಳ್ಳಲೇಬೇಕು ಅಂತೇನಿಲ್ಲ. ಒಟ್ಟಿನಲ್ಲಿ ಇತರರಿಂದ ಯಾವುದೇ ನಿರೀಕ್ಷೆ ಮಾಡದಿರುವುದು ಒಳ್ಳೆಯದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ಪ್ರಯಾಣ ಹೊರಟಿದ್ದೀರಿ ಅಂತಾದಲ್ಲಿ ಸಿದ್ಧತೆ ಸರಿಯಾಗಿ ಮಾಡಿಕೊಳ್ಳಿ. ಕುಟುಂಬ ಸದಸ್ಯರ ಸಲುವಾಗಿ ಒಂದಿಷ್ಟು ಹೆಚ್ಚಿನ ಖರ್ಚಾಗುವಂಥ ಸಾಧ್ಯತೆಗಳಿವೆ. ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಜವಾಬ್ದಾರಿಯನ್ನು ಹೊರಬೇಕಾಗಬಹುದು. ಈಗ ತಾನೇ ಕೆಲಸಕ್ಕೆ ಸೇರಿದವರಿಗೆ ಕೆಲಸ ತೆಗೆಸಬೇಕಾದ ಹೊಣೆ ನಿಮಗೆ ನೀಡಬಹುದು. ಈ ದಿನ ಮನೆಯಿಂದ ಹೊರಡುವಾಗ ಗಣೇಶನ ಸ್ಮರಣೆಯನ್ನು ಮಾಡಿಕೊಂಡು ಹೊರಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಖುಷಿಖುಷಿಯಾಗಿ ದಿನವನ್ನು ಕಳೆಯುವುದಕ್ಕೆ ಬೇಕಾದಂಥ ವಾತಾವರಣ ಇರುತ್ತದೆ. ಪುಷ್ಕಳವಾದ- ರುಚಿಕಟ್ಟಾದ ಊಟ, ತಿಂಡಿಗಳನ್ನು ಮಾಡಲಿದ್ದೀರಿ. ನಿಮ್ಮ ಮನಸ್ಸಿಗೆ ಹತ್ತಿರವಾದ ಬಂಧುಗಳೋ ಸ್ನೇಹಿತರೋ ಮನೆಗೆ ಭೇಟಿ ನೀಡಲಿದ್ದಾರೆ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಹಿರಿಯರ, ಅನುಭವಿಗಳು ನೆರವು- ಮಾರ್ಗದರ್ಶನ ದೊರೆಯಲಿದೆ. ಮನೆಗೆ ಅಗತ್ಯ ಇರುವಂಥ ವಸ್ತುಗಳನ್ನು ಖರೀದಿಸಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗೀ ಆಗಲಿದ್ದೀರಿ. ಅಶಕ್ತರಿಗೆ ಹಾಗೂ ಆರ್ಥಿಕವಾಗಿ ಸಬಲರಲ್ಲದವರಿಗೆ ಅಗತ್ಯವಿರುವಂಥ ವಸ್ತುಗಳನ್ನು ಉಚಿತವಾಗಿ ನೀಡುವಂಥ ಕಾರ್ಯಕ್ರಮಗಳಲ್ಲಿ ಭಾಗೀ ಆಗುವಂಥ ಯೋಗ ಇದೆ. ಹೊಸ ಮೊಬೈಲ್ ಫೋನ್ ಅಥವಾ ಐಪ್ಯಾಡ್ ಇಂಥದ್ದನ್ನು ಕೊಳ್ಳುವುದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುವಂಥ ಯೋಗ ಇದೆ. ದಿನದ ದ್ವಿತೀಯಾರ್ಧದಲ್ಲಿ ಆರಾಮವಾಗಿ ಕಳೆಯುವುದಕ್ಕೆ ಆದ್ಯತೆ ನೀಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮಗೆ ಇಲ್ಲ ಎನ್ನಲಾರರು ಎಂದುಕೊಂಡು, ನೀವು ಬೇರೆಯವರಿಗೆ ನೀಡಿದ್ದ ಮಾತನ್ನು ಈ ದಿನ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಇತರರನ್ನು ನೆಚ್ಚಿಕೊಂಡು, ಕೆಲಸ ಮಾಡಿಕೊಡುವುದಾಗಿ ಹೇಳದಿರಿ. ಹೀಗೊಂದು ವೇಳೆ ಮಾಡಿದಲ್ಲಿ ಅವಮಾನದ ಪಾಲಾಗಬೇಕಾಗುತ್ತದೆ. ನವ ವಿವಾಹಿತರು ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ. ಒಂದೇ ವಸ್ತುವನ್ನು ಮನೆಯಲ್ಲಿ ಇಬ್ಬರು ತಂದು, ಆ ನಂತರ ಪೇಚಾಡಿಕೊಳ್ಳುವಂತೆ ಆಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮಗಿಂತ ಚಿಕ್ಕ ವಯಸ್ಸಿನವರ ಜತೆಗೆ ಮಾತುಕತೆ ಆಡುವಾಗ ಪದಗಳ ಬಳಕೆ ಮೇಲೆ ಹಿಡಿತ ಇರಲಿ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಮುಜುಗರದ ಸನ್ನಿವೇಶಗಳು ಎದುರಾಗಬಹುದು. ಮುಖ್ಯವಾಗಿ ನೀವು ಧರಿಸುವ ಬಟ್ಟೆ ಹಾಗೂ ವಸ್ತುಗಳ ಗುಣಮಟ್ಟ ಮತ್ತು ಫ್ಯಾಷನ್ ವಿಚಾರದಲ್ಲಿ ಮಾಮೂಲಿಗಿಂತ ಜಾಸ್ತಿ ನಿಗಾ ಇರಲಿ. ಇಲ್ಲದಿದ್ದಲ್ಲಿ ಟ್ರೋಲ್ ಆಗುವಂಥ ಸಾಧ್ಯತೆಗಳಿವೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ ಅಥವಾ ವಿಡಿಯೋ ಅಪ್ ಲೋಡ್ ಮಾಡುವಾಗ ಜಾಗ್ರತೆ ಅಗತ್ಯ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಏನೂ ನಿರೀಕ್ಷೆ ಮಾಡದೆ, ನೀವಾಗಿಯೇ ಯಾರ ಬಳಿಯೂ ಏನನ್ನೂ ಕೇಳದೆ ಇದ್ದಲ್ಲಿ ಈ ದಿನ ನೆಮ್ಮದಿಯಾಗಿ ಇರಲಿಕ್ಕೆ ಸಾಧ್ಯ. ಮನೆ ದೇವರ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಕೆಲಸಗಳು ತುಂಬ ಸಲೀಸಾಗಿ ಆಗುತ್ತವೆ. ಇತರರು ತಮ್ಮಿಂದ ಆಗಲ್ಲ ಎಂದು ಕೈ ಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಮನೆಗೆ ಸೋಫಾ, ಛೇರ್ ಇಂಥವುಗಳನ್ನು ಖರೀದಿಸಿ ತರುವಂಥ ಯೋಗ ನಿಮ್ಮ ಪಾಲಿಗಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಎಲ್ಲೋ ದೂರದಲ್ಲಿ ಇರುವಂಥ ಸಂಬಂಧಿಕರೋ ಅಥವಾ ಸ್ನೇಹಿತರು ತಮ್ಮ ಪಾಲಿನ ಕೆಲಸವನ್ನು ನೀವು ಮಾಡಿ ಮುಗಿಸುವಂತೆ ಕೇಳಿಕೊಳ್ಳಬಹುದು. ತುಂಬ ಜವಾಬ್ದಾರಿಯದ್ದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ಆ ನಂತರ ಒಪ್ಪಿಕೊಳ್ಳಿ. ಬೇಡ ಎಂದೆನಿಸಿದರೆ ನಯವಾಗಿ ಅದರಿಂದ ತಪ್ಪಿಸಿಕೊಳ್ಳುವ ಬಗ್ಗೆ ಚಿಂತಿಸಿ. ಒಂದೇ ವಿಷಯಕ್ಕೆ ಸೋದರ ಸಂಬಂಧಿಗಳ ಜತೆಗೆ ಸ್ಪರ್ಧೆ ಏರ್ಪಡುವಂಥ ಸಾಧ್ಯತೆ ಇದೆ. ಇದರಿಂದ ಸಂಬಂಧದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸಂಗಾತಿಯಿಂದ ನಿಮ್ಮ ಬಗ್ಗೆ ನಿರೀಕ್ಷೆ ತುಂಬ ಜಾಸ್ತಿ ಆಗುತ್ತದೆ. ಇದರಿಂದ ಒಂದು ಕಡೆ ಬೇಸರವಾದರೆ, ಮತ್ತೊಂದು ಕಡೆಗೆ ಒತ್ತಡವಾಗುತ್ತದೆ. ಅದನ್ನು ಜೋರು ಮಾತಿನ ಮೂಲಕವೋ ಅಥವಾ ಅವರನ್ನು ಮೂದಲಿಸುವ ಮೂಲಕವೋ ತೀರಿಸಿಕೊಳ್ಳುವುದಕ್ಕೆ ಮುಂದಾದರೆ ಮುಂದಿನ ಕೆಲ ದಿನಗಳು ನಿಮ್ಮ ನೆಮ್ಮದಿ ಹಾಳಾಗಬಹುದು. ದೂಳಿನ ಅಲರ್ಜಿ ಇರುವಂಥವರು ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಿ.