Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 24ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 24ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 24ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಒಂದಲ್ಲಾ ಒಂದು ವಿಷಯಕ್ಕೆ ಮನಸ್ತಾಪವನ್ನು ಮಾಡಿಕೊಳ್ಳಲಿದ್ದೀರಿ. ಇತರರ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನೀವಾಗಿಯೇ ಮಾಡಿಕೊಂಡಂಥ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಈ ದಿನ ಹರಸಾಹಸ ಪಡುತ್ತೀರಿ. ಯಾರಿಂದಲೋ ಸಹಾಯ ಕೇಳಿ, ಇಲ್ಲ ಎನಿಸಿಕೊಂಡು ಅವಮಾನಕ್ಕೆ ಗುರಿಯಾದಂತೆ ಎಂದು ನಿಮಗೇ ಎನಿಸುತ್ತದೆ. ಎಲೆಕ್ಟ್ರಿಕಲ್ ಉಪಕರಣಗಳಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ಉದ್ಯಮ- ವ್ಯವಹಾರ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಹೆಚ್ಚಾಗಲಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಒತ್ತಡದ ಸನ್ನಿವೇಶ ಇರುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಣ್ಣ ಕೆಲಸ ಕಡಿಮೆ ಖರ್ಚು, ಸಮಯದಲ್ಲಿ ಮುಗಿದು ಹೋಗುತ್ತದೆ ಎಂದುಕೊಂಡು ಆರಂಭಿಸಿದ್ದು ಎಲ್ಲ ರೀತಿಯಿಂದಲೂ ನಿಮ್ಮ ಅಂದಾಜನ್ನು ಮೀರಲಿದೆ. ಮಾತನಾಡದೆ ಸುಮ್ಮನಿದ್ದರೆ ಆಗಿತ್ತು ಎಂದು ಕೆಲವು ಸನ್ನಿವೇಶಗಳಲ್ಲಿ ಅನಿಸಲಿದೆ. ಎಲ್ಲಿ- ಎಷ್ಟು ಮಾತು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ. ಇನ್ನು ಅಳತೆಗೆ ಮೀರಿದ ಖರ್ಚು ಹಾಗೂ ಸಮಯ ಹಿಡಿಯಬಹುದಾದ ಕೆಲಸಕ್ಕೆ ಕೈ ಹಾಕದಿರುವುದು ಉತ್ತಮ. ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ದ್ವಂದ್ವ- ಗೊಂದಲ ಇಟ್ಟುಕೊಳ್ಳದಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಇನ್ನೇನು ಆ ಕೆಲಸ ಆಗುವುದಿಲ್ಲ ಎಂದು ಇತರರು ಕೈ ಬಿಟ್ಟು ಸುಮ್ಮನಾದಂಥದ್ದನ್ನು ನೀವು ಮುಗಿಸಿ, ಇತರರಲ್ಲಿ ಬೆರಗು ಮೂಡಿಸಲಿದ್ದೀರಿ. ಜಮೀನು ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಹಣಕಾಸು ವಿಚಾರದಲ್ಲಿ ಇತರರಿಗೆ ಮಾತು ನೀಡುವ ಮುನ್ನ ನಿಮ್ಮ ಬಳಿ ಎಷ್ಟು ಮೊತ್ತ ಇದೆ, ಒಂದು ವೇಳೆ ಹೊಂದಿಸಬಹುದು ಎಂದಾದಲ್ಲಿ ಗರಿಷ್ಠ ಎಷ್ಟಾಗಬಹುದು ಎಂಬ ಲೆಕ್ಕಾಚಾರ ಸರಿಯಾಗಿ ಹಾಕಿಕೊಳ್ಳುವುದು ಉತ್ತಮ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಆದಾಯ ಹೆಚ್ಚಳ ಆಗುವ ನಿಟ್ಟಿನಲ್ಲಿ ಹೊಸ ಯೋಜನೆಗಳ ಬಗ್ಗೆ ಸ್ನೇಹಿತರು ಮಾತುಕತೆ ಆಡಬಹುದು. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಪ್ರಾಜೆಕ್ಟ್ ವೊಂದರ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಮುಖ್ಯವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಂಥವರು ಮಾಮೂಲಿ ದಿನಗಳಿಗಿಂತ ಹೆಚ್ಚು ಜಾಗ್ರತೆಯಿಂದ ಇರಬೇಕಾಗುತ್ತದೆ. ಸಂಬಂಧಿಕರೋ ಅಥವಾ ಸ್ನೇಹಿತರೋ ನಿಮ್ಮ ಪರಿಚಿತರ ಮೂಲಕ ಹಣವನ್ನು ಸಾಲವನ್ನಾಗಿ ಕೊಡಿಸುವಂತೆ ಕೇಳಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನಸಾರೆ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಮನೆಯಲ್ಲಿ ಈ ವಿಚಾರವನ್ನು ಹೇಳಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ದ್ವಂದ್ವ ಏರ್ಪಡಲಿದೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರಯತ್ನ ಬಲವಾಗಿ ಮಾಡುತ್ತಿರುವವರಿಗೆ ಕುಟುಂಬದ ಹಾಗೂ ಸ್ನೇಹಿತರ ಬೆಂಬಲ ದೊರೆಯಲಿದೆ. ಹೊಸದಾದ ಯೋಜನೆಗಳಿಗೆ ಕೈ ಹಾಕುತ್ತಿರುವವರು ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಾನು ಪಡೆದುಕೊಂಡಿದ್ದಕ್ಕಿಂತ ನೀಡಿದ್ದೇ ಹೆಚ್ಚು ಎಂದು ಅನಿಸುವುದಕ್ಕೆ ಶುರುವಾಗುತ್ತದೆ. ಒಂದು ವೇಳೆ ಹಳೇ ಪ್ರೀತಿ- ಪ್ರೇಮ ವಿಚಾರಗಳನ್ನು ಈಗಲೂ ಮನಸ್ಸಲ್ಲಿ ಇಟ್ಟುಕೊಂಡು ಸಲುಗೆಯಿಂದ ಮಾತನಾಡಿದಲ್ಲಿ ಪಶ್ಚಾತಾಪ ಪಡುವಂತೆ ಆಗುತ್ತದೆ. ಸಂಬಂಧಿಗಳ ಮನೆಗಳಲ್ಲಿನ ಕಾರ್ಯಕ್ರಮಗಳಿಗೆ ನೀವು ಹೆಚ್ಚು ಓಡಾಟ ನಡೆಸಬೇಕಾಗಬಹುದು. ಗುಂಪಾಗಿ ಜನ ಇರುವ ಕಡೆಗಳಲ್ಲಿ ಗಾಸಿಪ್ ಮಾತನಾಡಬೇಡಿ. ಇದರಿಂದ ನೀವು ಅವಮಾನಕ್ಕೆ ಗುರಿ ಆಗುವಂತಹ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸೈಟು- ಮನೆ ಅಥವಾ ಆಸ್ತಿಗಳನ್ನು ಮಾರಾಟಕ್ಕೆ ಅಂತ ಇಟ್ಟಿದ್ದಲ್ಲಿ ನಿಮ್ಮ ನಿರೀಕ್ಷೆಗಿಂತ ಬಹಳ ಕಡಿಮೆ ಮೊತ್ತಕ್ಕೆ ಖರೀದಿಗೆ ಕೇಳಬಹುದು. ಈ ಕಾರಣದಿಂದ ಮಾನಸಿಕವಾಗಿ ಕುಗ್ಗದಿರಿ. ನಿಮ್ಮ ನಿರ್ಧಾರಗಳಲ್ಲಿ ತಪ್ಪುಗಳನ್ನು ಹುಡುಕಲೇ ಬೇಕು ಎಂದು ಕೆಲವರು ಪ್ರಯತ್ನ ಮಾಡಲಿದ್ದಾರೆ. ಅಂಥವರ ಬಗ್ಗೆ ಹೆಚ್ಚು ಲಕ್ಷ್ಯ ನೀಡಬೇಡಿ. ನೀವಾಯಿತು ನಿಮ್ಮ ಪಾಡಾಯಿತು ಎಂದು ಇದ್ದರೂ ಹೇಗಾದರೂ ಜಗಳ ಆಗುವಂಥ ಸನ್ನಿವೇಶಗಳು ಎದುರಾಗಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಆದಾಯಕ್ಕೂ ವೆಚ್ಚಕ್ಕೂ ತಾಳೆ ಆಗದಿರುವುದು ಒಂದಿಷ್ಟು ಚಿಂತೆಗೆ ಕಾರಣ ಆಗಬಹುದು. ಮುಖ್ಯವಾಗಿ ನವವಿವಾಹಿತರಿಗೆ ಕುಟುಂಬದೊಳಗೆ ನಾನಾ ಬಗೆಯಲ್ಲಿ ಪ್ರಶ್ನೆಗಳು ಎದುರಾಗಲಿವೆ. ನೀವು ಯಾರಿಗೆ ಕಷ್ಟ ಕಾಲದಲ್ಲಿ ನೆರವಾಗಿದ್ದಿರೋ ಅವರೇ ನಿಮ್ಮ ಬಗ್ಗೆ ಹಂಗಿಸುವ ರೀತಿಯಲ್ಲಿ ಅಥವಾ ಹಗುರವಾಗಿ ಮಾತನಾಡುವಂಥ ಸಾಧ್ಯತೆಗಳಿವೆ. ಈ ದಿನ ಮಾನಸಿಕವಾಗಿ ಗಟ್ಟಿಯಾಗಿ ಇರುವುದರ ಜತೆಗೆ ಇತರರ ಕಟು ಮಾತುಗಳಿಗೆ ಮೌನವಾಗಿರುವುದು ಸಹ ಅಷ್ಟೇ ಮುಖ್ಯವಾಗುತ್ತದೆ.