ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 9ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಶಿಸ್ತು ಬಹಳ ಮುಖ್ಯವಾಗುತ್ತದೆ. ನಿಮಗೆ ತುಂಬ ಆಪ್ತರು, ಬಹಳ ಬೇಕಾದವರು ಹೀಗೆ ಯಾರದೇ ಮನೆಗೆ ಹೋಗುವುದಾಗಲೀ ಅಥವಾ ಅವರ ಯಾವುದಾದರೂ ಕೆಲಸ ವಿಚಾರಕ್ಕೆ ಭೇಟಿ ಮಾಡುವುದೇ ಆಗಲಿ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತೆರಳುವುದು ಉತ್ತಮ. ನಿಮ್ಮ ಜತೆಗೆ ತುಂಬ ಆಪ್ತರಾಗಿದ್ದಾರೆ ಎಂಬ ಕಾರಣಕ್ಕೆ ಸಲುಗೆ ತೆಗೆದುಕೊಳ್ಳಬೇಡಿ. ಮನೆಯ ಸಂಪ್ ಕ್ಲೀನ್ ಮಾಡುವುದಕ್ಕಾಗಿ ಅಥವಾ ನೀರಿನ ಫಿಲ್ಟರ್ ಸರ್ವೀಸ್ ಗಾಗಿ ಹಣ ಖರ್ಚು ಮಾಡಬೇಕಾಗಲಿದೆ. ಖಾರವಾದ ಆಹಾರ ತಿನಿಸುಗಳನ್ನು ಇಷ್ಟ ಪಡುವಂಥವರು ಈ ದಿನ ಇಂಥ ಆಹಾರ ಸೇವಿಸುವುದರಿಂದ ದೂರ ಇರುವುದು ಒಳ್ಳೆಯದು.
ನಿಮ್ಮ ಸ್ವಂತ ವಿಷಯಗಳಲ್ಲಿ ಇತರರು ವಿಪರೀತ ಆಸಕ್ತಿ ತೋರಿಸುತ್ತಿದ್ದಾರೆ, ಮೂಗು ತೂರಿಸುತ್ತಿದ್ದಾರೆ ಎಂದು ಎನಿಸುವುದಕ್ಕೆ ಶುರುವಾಗುತ್ತದೆ. ಇದೇ ಕಾರಣಕ್ಕೆ ನೀವು ಕೂಗಾಟ- ಕಿರುಚಾಟ ಕೂಡ ಮಾಡಬಹುದು. ಸಾಧ್ಯವಾದಷ್ಟು ಎದುರಿನವರ ಮನಸ್ಸಿಗೆ ನೋವಾಗದಂತೆ ಹೇಳುವುದಕ್ಕೆ ಪ್ರಯತ್ನಿಸಿ. ನಿಮ್ಮ ಬಳಿ ಇರುವ ವಸ್ತುಗಳನ್ನು, ಅದರಲ್ಲೂ ಗ್ಯಾಜೆಟ್, ಟ್ಯಾಬ್ ಲೆಟ್ ಈ ಥರದ ವಸ್ತುಗಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ. ಒಂದು ವೇಳೆ ಒಂದು ಊರಿಂದ ಮತ್ತೊಂದು ಊರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಏನಾದರೂ ಪ್ರಯಾಣಿಸಬೇಕು ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ನಿಗಾ ಮಾಡಿ. ಇಲ್ಲದಿದ್ದಲ್ಲಿ ನಷ್ಟ ಅನುಭವಿಸುತ್ತೀರಿ.
ಬೇರೆಯವರ ಆತುರ, ಧಾವಂತಕ್ಕಾಗಿ ನೀವು ವಿಪರೀತ ಶ್ರಮ ಪಡಬೇಕಾಗುತ್ತದೆ. ನಿಮಗೆ ಬೇಕೋ ಬೇಡವೋ ಕೆಲವು ಖರ್ಚುಗಳನ್ನು ಮಾಡಬೇಕಾಗುತ್ತದೆ. ಆಗಲ್ಲ ಎಂದೆನಿಸಿದ ಕೆಲಸಗಳನ್ನು ನೇರಾನೇರವಾಗಿ ಹೇಳುವುದಕ್ಕೆ ಪ್ರಯತ್ನಿಸಿ. ಸಂಕೋಚಕ್ಕೆ ಬಿದ್ದು, ಆ ನಂತರ ಆಲೋಚನೆ ಮಾಡುವಂತಾಗುತ್ತದೆ. ಇನ್ನು ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರು, ಪೊಲೀಸ್, ಸೈನ್ಯದಲ್ಲಿ ಇರುವಂಥವರಿಗೆ ಉತ್ತಮವಾದ ದಿನವಾಗಿರುತ್ತದೆ. ನಿಮ್ಮ ಪ್ರಭಾ ವಲಯ ಹಾಗೂ ಸಾಮಾಜಿಕವಾಗಿ ಸ್ಥಾನ- ಮಾನಗಳು ಹೆಚ್ಚಾಗಲಿವೆ. ನೀವು ಈ ಹಿಂದೆ ಯಾರಿಗೆ ಕೆಲಸ ಮಾಡಿಕೊಟ್ಟಿದ್ದಿರೋ ಅವರು ಈ ದಿನ ನಿಮಗೆ ಸಹಾಯ ಮಾಡಲಿದ್ದಾರೆ.
ಸರಳವಾಗಿ ಅರ್ಥವಾಗುವ ವಿಚಾರವನ್ನು ಸಹ ನಿಮಗೆ ಹೇಳುವವರು ಬಹಳ ಕಠಿಣ ಮಾಡಿ, ಹೇಳುತ್ತಾರೆ. ಆದ್ದರಿಂದ ಯಾವ ವಿಚಾರಕ್ಕೂ ಗಾಬರಿ ಬೀಳಬೇಡಿ, ಸದ್ಯಕ್ಕೆ ಆಗುವುದಿಲ್ಲ, ಆ ಮೇಲೆ ಆಲೋಚನೆ ಮಾಡೋಣ ಅನ್ನಬೇಡಿ. ತಾಳ್ಮೆ- ಸಂಯಮ ಈ ದಿನ ಬಹಳ ಮುಖ್ಯವಾಗುತ್ತದೆ. ಮನೆ ಕಟ್ಟುತ್ತಿರುವವರು ಅಥವಾ ದುರಸ್ತಿ ಮಾಡಿಸುತ್ತಿರುವವರಿಗೆ ಕೆಲಸಗಳು ಬಹಳ ವೇಗವಾಗಿ ಸಾಗುತ್ತವೆ. ಬ್ಯಾಂಕ್ ಗಳಲ್ಲಿ ಸಾಲಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಮುಖ್ಯವಾದ ಕಾಗದ- ಪತ್ರಗಳು ದೊರೆಯಲಿವೆ. ಕುಟುಂಬದ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ಇದರಿಂದ ಒಂದು ಹೊಸ ಉತ್ಸಾಹ, ಉಲ್ಲಾಸ ಇರುತ್ತದೆ.
ನಿಮ್ಮನ್ನು ಬಹಳ ಹತ್ತಿರದವರೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಹಳೇ ಘಟನೆಗಳನ್ನು ತಳುಕು ಹಾಕಿಕೊಂಡು ಆಲೋಚಿಸುವುದಕ್ಕೆ ಶುರು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಹೀಗೆ ಮಾಡುತ್ತಿರುವವರ ಬಳಿಯೇ ನೇರವಾಗಿ ಕೇಳಿಯೂ ಬಿಡುವ ಸಾಧ್ಯತೆ ಇದೆ. ಸಂಗಾತಿಯ ಒತ್ತಡದ ಸನ್ನಿವೇಶಕ್ಕೆ ಪರಿಹಾರಗಳನ್ನು ಸೂಚಿಸಲಿದ್ದೀರಿ. ಮಕ್ಕಳ ಶಿಕ್ಷಣ, ಭವಿಷ್ಯಕ್ಕಾಗಿ ಉಳಿತಾಯ ಯೋಜನೆಗಳನ್ನು ರೂಪಿಸಲಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಗೆ ಬರುವಂತೆ ಆಹ್ವಾನ ಬರಲಿದೆ. ತಂದೆ- ತಾಯಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಈ ದಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯಿರಿ.
ಸಿನಿಮಾ, ರೆಸ್ಟೋರೆಂಟ್, ರೆಸಾರ್ಟ್ ಇಂಥವುಗಳಿಗೆ ತೆರಳುವಂಥ ಯೋಗ ಇದೆ. ಹೊಸ ವಸ್ತ್ರಾಭರಣಗಳನ್ನು ಖರೀದಿಸುವುದಕ್ಕೆ ಕ್ರೆಡಿಟ್ ಕಾರ್ಡ್ ಬಳಸುವಂಥ ಯೋಗ ಇದೆ. ಜಿಮ್, ಯೋಗ, ಪ್ರಾಣಾಯಾಮ ಇಂಥವುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೀರಿ. ನಾಟಕ- ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು, ಮಿಮಿಕ್ರಿ ಸೇರಿದಂತೆ ಇತರ ಪ್ರದರ್ಶನ ಕಲೆಗಳಲ್ಲಿ ಸಕ್ರಿಯರಾಗಿರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಇಷ್ಟು ದಿನ ನೀವು ಯಾವುದನ್ನು ಅಥವಾ ಯಾವ ವ್ಯಕ್ತಿಯಿಂದ ದೂರ ಇರಬೇಕು ಅಂದುಕೊಳ್ಳುತ್ತೀರೋ ಅಂಥವರು ಅಥವಾ ಅಂಥವುಗಳ ಅಗತ್ಯ ಕಂಡುಬರಲಿದೆ.
ಆದಾಯ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಹಳ ಶ್ರಮ ಹಾಕಲಿದ್ದೀರಿ. ಸಾಲವನ್ನು ಪಡೆದವರು ತಕ್ಷಣ ಹಿಂತಿರುಗಿಸುವಂತೆ ಕೇಳಿ, ಒತ್ತಡ ಹೆಚ್ಚಾಗಲಿದೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಖುಷಿ ಇರುತ್ತದೆ. ಹೊಸ ಪ್ರಾಜೆಕ್ಟ್ ಶುರು ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ಯುಪಿಐ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಮಾಮೂಲಿ ದಿನಕ್ಕಿಂತ ಜಾಸ್ತಿ ಜಾಗ್ರತೆಯಾಗಿ ಇರಬೇಕು. ನಿಮ್ಮ ಬಳಿ ಇರುವ ಹಣ ಎಷ್ಟು ಹಾಗೂ ಖರ್ಚು ಹೇಗೆ ಮಾಡಬೇಕು ಎಂಬುದರ ಬಗ್ಗೆ ಸರಿಯಾದ ಬಜೆಟ್ ಲೆಕ್ಕಾಚಾರ ಇರಲಿ. ಇಲ್ಲದಿದ್ದಲ್ಲಿ ಸಿಕ್ಕಾಪಟ್ಟೆ ಖರ್ಚಾಗಿ, ಆ ಮೇಲೆ ಸಾಲ ಹೆಚ್ಚು ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ.
ಮನೆಯಲ್ಲಿ ದೇವತಾ ಕಾರ್ಯಗಳನ್ನು ಮಾಡುವಂಥ ಯೋಗ ಇದೆ. ಮನೆ ದೇವರ ಕೆಲಸಗಳಿಗಾಗಿ ದೇಣಿಗೆ ನೀಡಬೇಕಾಗಬಹುದು. ನವ ದಂಪತಿಗೆ ಯಾವುದಾದರೂ ಪ್ರವಾಸಕ್ಕೆ ತೆರಳುವುದಕ್ಕೆ ಸಿದ್ಧತೆ ನಡೆಸಲಿದ್ದೀರಿ. ತಂದೆ- ತಾಯಿ ಈ ದಿನ ನಿಮಗೆ ನೀಡುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಕಾರು- ಸ್ಕೂಟರ್ ಖರೀದಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ನಿಮಗಿಂತ ಸಣ್ಣ ವಯಸ್ಸಿನವರ ಜತೆಗೆ ಮಾತುಕತೆ ಆಡುವಾಗ ಬಳಸುವ ಪದಗಳ ಕಡೆಗೆ ಲಕ್ಷ್ಯ ಇರಲಿ. ಭಾವನಾತ್ಮಕವಾಗಿಯೋ ಅಥವಾ ತಮಾಷೆಯಾಗಿಯೋ ಹೇಳಿದ ವಿಚಾರಕ್ಕೆ ಈ ದಿನ ಚಿಂತೆ ಮಾಡುವಂಥ ಸನ್ನಿವೇಶ ಎದುರಾಗಬಹುದು.
ಬಹಳ ಕೆಲಸಗಳು ಬರಲಿವೆ. ಶುಭ ಕಾರ್ಯಗಳಿಗೆ ಸಿದ್ಧತೆ ನಡೆಸಬೇಕಾಗುತ್ತದೆ. ಮನೆ ಕಟ್ಟುತ್ತಿರುವವರು ಏಕ ಕಾಲದಲ್ಲಿ ತುಂಬ ನಿರ್ಧಾರ, ಕೆಲಸಗಳನ್ನು ಮಾಡಬೇಕಾಗಬಹುದು. ತಂದೆ- ತಾಯಿ ಸೇರಿದಂತೆ ಕುಟುಂಬಸ್ಥರ ಜತೆಗೂಡಿ, ಮುಖ್ಯ ಸಂಗತಿಗಳು, ವಿಷಯಗಳ ಪಟ್ಟಿ ಮಾಡಲಿದ್ದೀರಿ. ವ್ಯಾಪಾರ- ವಹಿವಾಟುಗಳಿಗಾಗಿ ಹೊಸ ಹೂಡಿಕೆಯನ್ಜು ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಸಂಬಂಧಿಗಳು ಹಣ ಕಾಸಿನ ಸಹಾಯ ಕೇಳಿಕೊಂಡು ಬರಲಿದ್ದಾರೆ. ಅವರಿಗೆ ಇಲ್ಲ, ಆಗಲ್ಲ ಎಂದು ಹೇಳುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ. ಒಂದು ವೇಳೆ ಸಹಾಯ ಮಾಡಲು ಸಾಧ್ಯವಾದಲ್ಲಿ ನೆರವಾಗಿ.