ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:21 ರಿಂದ ಸಂಜೆ 04:51, ಯಮಘಂಡ ಕಾಲ ಬೆಳಿಗ್ಗೆ 09:23ರಿಂದ 10:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:22 ರಿಂದ 01:52 ರವರೆಗೆ.
ಸಿಂಹ ರಾಶಿ: ರಾಜಕೀಯ ತಂತ್ರದಿಂದ ನಿಮ್ಮ ಉದ್ಯಮಕ್ಕೆ ತೊಂದರೆಯಾಗುವುದು. ಇಂದು ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಸರ್ಕಾರದ ಉದ್ಯೋಗಿಗಳು ನಿಮಗೆ ಅನುಕೂಲಕರವಾದುದನ್ನು ಸೃಷ್ಟಿಮಾಡಿಕೊಳ್ಳುವಿರಿ. ಯಾರಿಗೂ ಹೇಳದೇ ಎಲ್ಲಿಗಾದರೂ ಹೋಗಲಿದ್ದೀರಿ. ಸಂಬಂಧಗಳಲ್ಲಿ ಒಡಕು ಬರಬಹುದು. ಹೊಸ ಉದ್ಯೋಗಕ್ಕೆ ನೀವು ಹೊಂದಿಕೊಳ್ಳಲು ಕಷ್ಟವಾದೀತು. ಶತ್ರುಗಳ ಗಾಳಕ್ಕೆ ಸಿಕ್ಕಿಬೀಳುವ ಸಾಧ್ಯತೆ ಇದೆ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಂಡು ಸಮಾಧಾನಪಡುವಿರಿ. ಇನ್ನೊಬ್ಬರ ವಿಚಾರಗಳನ್ನು ಕೇಳಲು ನಿಮಗೆ ಕುತೂಹಲವು ಅಧಿಕವಾಗಿರುವುದು. ಏನನ್ನಾದರೂ ಸಾಧಿಸಬೇಕು ಎಂದೆನಿಸಬಹುದು. ನಿಮ್ಮ ನಿರ್ಧಾರಗಳು ಅಸ್ಪಷ್ಟವಾಗಿ ಇರಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಸಂಗಾತಿಯಾಗುವವರ ಜೊತೆ ಮುಕ್ತವಾಗಿ ಮಾತನಾಡಿಕೊಳ್ಳಿ. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ.
ಕನ್ಯಾ ರಾಶಿ: ವಿಳಂಬವಾಗುವ ಕಾರ್ಯಕ್ಕೆ ಹಣವನ್ನು ಕೊಟ್ಟು ವೇಗವರ್ಧನೆಯನ್ನು ಮಾಡುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುತ್ತದೆ. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸಿ ಸಮಯವನ್ನು ವ್ಯರ್ಥಮಾಡುವಿರಿ. ಉದ್ಯಮದಲ್ಲಿ ಎಂದಿಗಿಂತ ಕಡಿಮೆ ಲಾಭವಾಗುವುದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ನಮಗೆ ಗೊತ್ತಾಗದೇ ಒದ್ದಾಡುವಿರಿ. ಅಧಿಕಾರಿಗಳು ನಿಮ್ಮ ಕಾರ್ಯವನ್ನು ಪರೀಕ್ಷಿಸಬಹುದು. ಸಂಗಾತಿಗಾಗಿ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗವನ್ನು ಪಡೆಯಲು ನೀವು ಹಣವನ್ನು ನೀಡಬೇಕಾದೀತು. ಹೊರಗೆ ಭೋಜನವನ್ನು ಮಾಡುವಿರಿ. ನಿಮ್ಮ ಸಹಜತೆಯು ನಾಟಕೀಯದಂತೆ ತೋರೀತು. ಬಂಗಾರವನ್ನು ಖರೀದಿಸಲಿದ್ದೀರಿ. ನಿಮ್ಮ ಚಿಂತನೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಒಟ್ಟಿಗೇ ಹತ್ತಾರು ಕೆಲಸಗಳಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ಉದ್ಯೋಗವನ್ನು ಅನಿವಾರ್ಯಕ್ಕಾಗಿ ಮೆಚ್ಚಿಕೊಳ್ಳುವಿರಿ.
ತುಲಾ ರಾಶಿ: ಇಂದು ನಿಂತಿರುವ ಕಾರ್ಯಗಳಿಗೆ ಸರಿಯಾದ ಕಾಯಕಲ್ಪವನ್ನು ಕೊಡುವಿರಿ. ನಿಮ್ಮ ಹೊಸ ಒಪ್ಪಂದಗಳು ಕೈಗೂಡದೇ ಹೋಗಬಹುದು. ನೀವು ಮಾಡಿದ ತಪ್ಪಿಗೆ ಇನ್ನೊಬ್ಬರನ್ನು ತೋರಿಸುವುದು ಸರಿಯಲ್ಲ. ಮಿತ್ರರನ್ನು ಅನುಮಾನದಿಂದ ಕಾಣುವಿರಿ. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆಗಳು ಬೇಡ. ವಿವಾಹಯೋಗವು ಯಾರಿಂದಲಾದರೂ ತಪ್ಪಬಹುದು. ಕುಟುಂಬಕ್ಕೆ ನಿಮ್ಮಿಂದ ಅಲ್ಪ ಧನಸಹಾಯವಾಗಬಹುದು. ಎಲ್ಲ ಸಂಗತಿಗಳನ್ನು ನೀವು ಲಘುವಾಗಿ ಕಾಣುವಿರಿ. ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಿಮಗೆ ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಮೈಮೆರೆಯುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆಯನ್ನು ಮಾಡಿಸಿ. ನಿಮ್ಮ ಬಗೆಗಿನ ಪೊಳ್ಳು ಹೇಳಿಕೆಗಳು ನಿಲ್ಲದೇ ಹೋಗಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ನಿಮ್ಮ ಆಪತ್ತಿಗೆ ಸಹಾಯ ಮಾಡುವವರನ್ನು ಕಳೆದುಕೊಳ್ಳುವಿರಿ.
ವೃಶ್ಚಿಕ ರಾಶಿ; ಮನೆಯಲ್ಲಿ ಆಗುವ ಸಂತಸಕ್ಕೆ ನೀವು ಪಾಲುದಾರರಾಗಿರುವಿರಿ. ಇಂದು ನಿಮ್ಮ ಹಲವು ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ. ತೆಗಳಿಕೆಗಳನ್ನು ನೀವು ಸ್ವೀಕರಿಸಲು ಸಿದ್ಧರಿರುವುದಿಲ್ಲ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿ ಕೆಲಸವನ್ನು ಮಾಡುವಿರಿ. ಇದರಿಂದ ಸಿಟ್ಟಾಗಬಹುದು. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯು ನಿಮ್ಮನ್ನು ಮತ್ತೆ ಕಾಡಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಧೈರ್ಯ ಮಾಡುವಿರಿ. ಆಪ್ತರನ್ನು ನೀವು ದೂರ ಮಾಡಿಕೊಳ್ಳಬಹುದು. ಸೌಂದರ್ಯ ವರ್ಧನೆಗೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ. ಬಡ್ಡಿಯ ಹಣದಲ್ಲಿ ನೀವು ಇಂದಿನ ಖರೀದಿಯನ್ನು ಮಾಡುವಿರಿ. ನಿಮ್ಮ ಮಾತು ಮಿತಿಮೀರಬಹುದು ಎಚ್ಚರವಿರಲಿ. ಪೂರ್ವಸಿದ್ಧತೆಯನ್ನು ಮಾಡಿಕೊಂಡು ಯಾವ ಕೆಲಸಕ್ಕಾದರೂ ಇಳಿಯಿರಿ. ಎಲ್ಲರೂ ನಿಮಗೆ ಹೊಸಬರಂತೆ ಕಾಣುವರು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ಯಾವುದೇ ಆಟವನ್ನು ಸ್ಪರ್ಧಾಮನೋಭಾವದಿಂದ ಆಡಿದರೆ ಕ್ಷೇಮ.