Daily Horoscope 01 October 2024: ಎಲ್ಲದಕ್ಕೂ ಮೌನವೇ ಉತ್ತರವಲ್ಲ, ನಿಮ್ಮ ಅಭಿಪ್ರಾಯವನ್ನು ತಿಳಿಸಿ

ಅಕ್ಟೋಬರ್ 01,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಸಂತೋಷವನ್ನು ಕೆಲವರಿಗೆ ಸಹಿಸುವುದು ಕಷ್ಟವಾದೀತು. ಎಷ್ಟೋ ವರ್ಷದ ಹಳೆಯ ಗೆಳೆಯರು ಒಂದಾಗುವ ಸಾಧ್ಯತೆ ಇದೆ. ಕಳೆದುಕೊಂಡಿದ್ದರ ಬಗ್ಗೆ ಲೆಕ್ಕ ಹಾಕುವುದು ಬೇಡ. ಮಾರಾಟದಲ್ಲಿ ಏನಾದರೂ ಹೊಸ ಯೋಚನೆಗಳು ಹುಟ್ಟಿಕೊಳ್ಳುವುದು. ಹಾಗಾದರೆ ಇಂದಿನ (2024 ಅಕ್ಟೋಬರ್ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 01 October 2024: ಎಲ್ಲದಕ್ಕೂ ಮೌನವೇ ಉತ್ತರವಲ್ಲ, ನಿಮ್ಮ ಅಭಿಪ್ರಾಯವನ್ನು ತಿಳಿಸಿ
ಎಲ್ಲದಕ್ಕೂ ಮೌನವೇ ಉತ್ತರವಲ್ಲ, ನಿಮ್ಮ ಅಭಿಪ್ರಾಯವನ್ನು ತಿಳಿಸಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 20 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:21 ರಿಂದ ಸಂಜೆ 04:51, ಯಮಘಂಡ ಕಾಲ ಬೆಳಿಗ್ಗೆ 09:23ರಿಂದ 10:52ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:22 ರಿಂದ 01:52 ರವರೆಗೆ.

ಮೇಷ ರಾಶಿ: ನೋವಿಗೆ ನೋವು ಕೊಡುವುದು ಸರಿಯಲ್ಲ. ನೀವು ಆಡಿದ ಮಾತುಗಳು ಎಲ್ಲವೂ ಸತ್ಯವಾಗುವಂತೆ ನಿಮಗೆ ಅನ್ನಿಸುವುದು.‌ ಕುಟುಂಬಕ್ಕೆ ಧಕ್ಕೆಯಾಗದಂತೆ ನೀವು ನೋಡಿಕೊಳ್ಳ ಬೇಕಾಗಬಹುದು. ಪ್ರೇಮಜೀವನಕ್ಕೆ ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಸಲಹೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಸಂತೋಷವನ್ನು ಕೆಲವರಿಗೆ ಸಹಿಸುವುದು ಕಷ್ಟವಾದೀತು. ಎಷ್ಟೋ ವರ್ಷದ ಹಳೆಯ ಗೆಳೆಯರು ಒಂದಾಗುವ ಸಾಧ್ಯತೆ ಇದೆ. ಕಳೆದುಕೊಂಡಿದ್ದರ ಬಗ್ಗೆ ಲೆಕ್ಕ ಹಾಕುವುದು ಬೇಡ. ಮಾರಾಟದಲ್ಲಿ ಏನಾದರೂ ಹೊಸ ಯೋಚನೆಗಳು ಹುಟ್ಟಿಕೊಳ್ಳುವುದು. ಆತ್ಮವಿಶ್ವಾಸ ಕೊರತೆ ಎದ್ದು ಕಾಣಬಹುದು. ಸುಲಭವಾಗಿ ಸಿಕ್ಕುವುದನ್ನು ನೀವು ಕಷ್ಟದಿಂದ ಪಡೆದುಕೊಳ್ಳಲಿದ್ದೀರಿ. ನೆನಪಿನ ಶಕ್ತಿಯು ಕಡಿಮೆ ಆಗಲಿದೆ. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಉತ್ತಮ.

ವೃಷಭ ರಾಶಿ: ಒಮ್ಮೊಮ್ಮೆ ನಿಮಗೇ ದಾರಿ ತಪ್ಪಿದಹಾಗೆ ಅನ್ನಿಸುವುದು. ಇಂದು ಬಹಳ ಸುಖವಾಗಿರುವ ದಿನ. ನೀವೇ ಶ್ರೇಷ್ಠ ಎಂಬ ಭಾವನೆ ನಿಮಗೆ ಬರಲಿದೆ. ಕಾಲದಿಂದ ನೀವು ಮುಕ್ತರಾಗಿ ಸಂತೋಷಪಡುವಿರಿ. ಮನೆಯಲ್ಲಿ ಮಂಗಲಕಾರ್ಯಕ್ಕೆ ಆಸಕ್ತಿಯನ್ನು ತೋರುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ತರುವರು. ನಿಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡುವರು. ಪಾಲುದಾರಿಕೆಯನ್ನು ಸುಲಭಕ್ಕೆ ಬಿಟ್ಟುಕೊಡಲಾರಿರಿ. ಕಛೇರಿಯ ಕೆಲಸಗಳನ್ನು ನೀವು ಅನಾಯಾಸವಾಗಿ ಮಾಡುವಿರಿ. ಅನಾರೋಗ್ಯದ ಕಾರಣದಿಂದ ನೀವು ಹಣವನ್ನು ಖರ್ಚು ಮಾಡಬೇಕಾಗಬಹುದು. ವಿಶ್ರಾಂತಿಯಿಂದ ಇಂದಿನ ಕಾರ್ಯವು ಪೂರ್ಣವಾಗದು. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಕ್ಕೆ ಯಾರಾದರೂ ಸಿಕ್ಕಾರು. ನಿಮ್ಮ ಮೌನವನ್ನು ಮುರಿದು ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಉತ್ತಮ. ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಉತ್ತಮ. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು.

ಮಿಥುನ ರಾಶಿ: ನಿಮಗೆ ಖರೀದಿಯಲ್ಲಿ ಮೋಸವಾಗಲಿದೆ. ನೀವು ಇಂದು ಹೊಸ ಪಾಲುದಾರಿಕೆಯಲ್ಲಿ ಕೆಲಸವನ್ನು ಆರಂಭಿಸಲು ಯೋಚಿಸುವಿರಿ. ಸಂಗಾತಿಗಳ ನಡುವೆ ಸ್ವಪ್ರತಿಷ್ಠೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಸಂಕಷ್ಟಕ್ಕೆ ನೆರವಾಗಬಹುದು. ನಿಮ್ಮ‌ ಪ್ರಯಾಣವನ್ನು ಮುಂದಕ್ಕೆ ಹಾಕಲಿದ್ದೀರಿ. ಹೊಸ ಪರಿಚಯದ ನಡುವೆ ಆತ್ಮೀಯತೆ ಬೆಳೆಯಬಹುದು. ನೇರ ಮಾತುಗಳು ನಿಮಗೇ ಮುಜುಗರ ತರಬಹುದು. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಇಷ್ಟವಾದೀತು. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಕಾಣಿಸಿಕೊಳ್ಳುವುದು. ಯಾರ ಜೊತೆಗೂ ಮಾತನಾಡಲು ನಿಮಗೆ ಇಷ್ಟವಾಗದು. ಇಂದಿನ‌ ಕೆಲಸಗಳು ವಿಳಂಬವಾಗಬಹುದು. ಕೇಳಿದಷ್ಟು ಹಣವನ್ನು ಕೊಟ್ಟು ಹೊಸ ವಸ್ತುವನ್ನು ಖರೀದಿಸುವಿರಿ. ಶ್ರಮದಿಂದ ದೇಹ ಮನಸ್ಸುಗಳು ಭಾರವಾಗುವುವು. ಏಕಾಂತವಾಗಿ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಬರಬಹುದು.

ಕರ್ಕಾಟಕ ರಾಶಿ: ಪುಣ್ಯ ಪ್ರದೇಶದ ಸಂಚಾರದಿಂದಲೇ ನಿಮ್ಮ ನಕಾರಾತ್ಮಕ ಅಂಶಗಳು ದೂರಾಗುವುವು. ನಿಮ್ಮ ಆತುರವು ಕೆಲಸವನ್ನು ಹಾಳುಮಾಡಿಕೊಳ್ಳಲು ಸಾಕು. ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪವನ್ನು ಮಾಡುವುದು ಇಷ್ಟವಾಗದು. ಹಳೆಯ ನೆನಪುಗಳು ನಿಮ್ಮ ಕಾಡಬಹುದು. ಎಲ್ಲ ರೀತಿಯಿಂದ ಹೊಂದಿಕೆ ಆಗುವವರ ಜೊತೆ ಸ್ನೇಹವನ್ನು ಮಾಡುವಿರಿ. ಕೃಷಿಯ ಕೆಲಸದಲ್ಲಿ ನಿಮಗೆ ಉತ್ಸಾಹ ಕಡಿಮೆ ಆಗಬಹುದು. ಸಾಲವನ್ನು ಮಾಡವ ಸ್ಥಿತಿ ಬರಬಹುದು. ಕುಶಲ ಕರ್ಮಗಳನ್ನು ಮಾಡಲು ಕಲಿಯುವಿರಿ. ಸಂಶೋಧನೆಗೆ ಹೆಚ್ಚಿನ‌ ಒತ್ತು ಸಿಗಬಹುದು. ಕೆಲವರು ನಿಮ್ಮ ನಂಬಿಕೆಗೆ ಘಾಸಿಯನ್ನು ಉಂಟುಮಾಡಬಹುದು. ಮಿತ್ರರಂತೆ ಇರುವವರನ್ನು ನೀವು ತಿಳಿದುಕೊಳ್ಳುವಿರಿ. ಒತ್ತಡದಿಂದ ನಿಮಗೆ ಯಾವುದೇ ಕ್ರಿಯಾತ್ಮಕ ವಿಚಾರಗಳು ಸೂಚಿಸದೇ ಹೋಗಬಹುದು. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸವು ನಿಮಗೆ ಗೊತ್ತಿಲ್ಲದೇ ಆಗುತ್ತದೆ.

ಸಿಂಹ ರಾಶಿ: ರಾಜಕೀಯ ತಂತ್ರದಿಂದ ನಿಮ್ಮ ಉದ್ಯಮಕ್ಕೆ ತೊಂದರೆಯಾಗುವುದು. ಇಂದು ನಿಮ್ಮವರು ಯಾರು ಮತ್ತು ನಿಮ್ಮವರಂತೆ ಕಾಣುವವರು ಯಾರು ಎಂಬುದರ ಸ್ಪಷ್ಟ ನಿಲುವು ಇರಲಿದೆ. ಸರ್ಕಾರದ ಉದ್ಯೋಗಿಗಳು ನಿಮಗೆ ಅನುಕೂಲಕರವಾದುದನ್ನು ಸೃಷ್ಟಿಮಾಡಿಕೊಳ್ಳುವಿರಿ. ಯಾರಿಗೂ ಹೇಳದೇ ಎಲ್ಲಿಗಾದರೂ ಹೋಗಲಿದ್ದೀರಿ. ಸಂಬಂಧಗಳಲ್ಲಿ ಒಡಕು ಬರಬಹುದು. ಹೊಸ ಉದ್ಯೋಗಕ್ಕೆ ನೀವು ಹೊಂದಿಕೊಳ್ಳಲು ಕಷ್ಟವಾದೀತು. ಶತ್ರುಗಳ ಗಾಳಕ್ಕೆ ಸಿಕ್ಕಿಬೀಳುವ ಸಾಧ್ಯತೆ ಇದೆ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಂಡು ಸಮಾಧಾನಪಡುವಿರಿ. ಇನ್ನೊಬ್ಬರ‌ ವಿಚಾರಗಳನ್ನು ಕೇಳಲು ನಿಮಗೆ ಕುತೂಹಲವು ಅಧಿಕವಾಗಿರುವುದು. ಏನನ್ನಾದರೂ ಸಾಧಿಸಬೇಕು ಎಂದೆನಿಸಬಹುದು. ನಿಮ್ಮ ನಿರ್ಧಾರಗಳು ಅಸ್ಪಷ್ಟವಾಗಿ ಇರಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಸಂಗಾತಿಯಾಗುವವರ ಜೊತೆ ಮುಕ್ತವಾಗಿ ಮಾತನಾಡಿಕೊಳ್ಳಿ. ಮನೋರಂಜನೆಯಲ್ಲಿ ನೀವು ಪಾಲ್ಗೊಳ್ಳುವಿರಿ.

ಕನ್ಯಾ ರಾಶಿ: ವಿಳಂಬವಾಗುವ ಕಾರ್ಯಕ್ಕೆ ಹಣವನ್ನು ಕೊಟ್ಟು ವೇಗವರ್ಧನೆಯನ್ನು ಮಾಡುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುತ್ತದೆ. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸಿ ಸಮಯವನ್ನು ವ್ಯರ್ಥಮಾಡುವಿರಿ. ಉದ್ಯಮದಲ್ಲಿ ಎಂದಿಗಿಂತ ಕಡಿಮೆ ಲಾಭವಾಗುವುದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ನಮಗೆ ಗೊತ್ತಾಗದೇ ಒದ್ದಾಡುವಿರಿ. ಅಧಿಕಾರಿಗಳು ನಿಮ್ಮ ಕಾರ್ಯವನ್ನು ಪರೀಕ್ಷಿಸಬಹುದು. ಸಂಗಾತಿಗಾಗಿ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗವನ್ನು ಪಡೆಯಲು ನೀವು ಹಣವನ್ನು ನೀಡಬೇಕಾದೀತು. ಹೊರಗೆ ಭೋಜನವನ್ನು ಮಾಡುವಿರಿ. ನಿಮ್ಮ‌ ಸಹಜತೆಯು ನಾಟಕೀಯದಂತೆ ತೋರೀತು. ಬಂಗಾರವನ್ನು ಖರೀದಿಸಲಿದ್ದೀರಿ. ನಿಮ್ಮ ಚಿಂತನೆಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ಒಟ್ಟಿಗೇ ಹತ್ತಾರು ಕೆಲಸಗಳಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ಉದ್ಯೋಗವನ್ನು ಅನಿವಾರ್ಯಕ್ಕಾಗಿ ಮೆಚ್ಚಿಕೊಳ್ಳುವಿರಿ.

ತುಲಾ ರಾಶಿ: ಇಂದು ನಿಂತಿರುವ ಕಾರ್ಯಗಳಿಗೆ ಸರಿಯಾದ ಕಾಯಕಲ್ಪವನ್ನು ಕೊಡುವಿರಿ. ನಿಮ್ಮ ಹೊಸ ಒಪ್ಪಂದಗಳು ಕೈಗೂಡದೇ ಹೋಗಬಹುದು. ನೀವು ಮಾಡಿದ ತಪ್ಪಿಗೆ ಇನ್ನೊಬ್ಬರನ್ನು ತೋರಿಸುವುದು ಸರಿಯಲ್ಲ. ಮಿತ್ರರನ್ನು ಅನುಮಾನದಿಂದ ಕಾಣುವಿರಿ. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆಗಳು ಬೇಡ. ವಿವಾಹಯೋಗವು ಯಾರಿಂದಲಾದರೂ ತಪ್ಪಬಹುದು. ಕುಟುಂಬಕ್ಕೆ ನಿಮ್ಮಿಂದ ಅಲ್ಪ ಧನಸಹಾಯವಾಗಬಹುದು. ಎಲ್ಲ ಸಂಗತಿಗಳನ್ನು ನೀವು ಲಘುವಾಗಿ ಕಾಣುವಿರಿ. ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ನಿಮಗೆ ಕಷ್ಟವಾದೀತು. ಮನೋರಂಜನೆಯಲ್ಲಿ ನೀವು ಮೈಮೆರೆಯುವ ಸಾಧ್ಯತೆ ಇದೆ. ಸೂಕ್ತ ಚಿಕಿತ್ಸೆಯನ್ನು ಮಾಡಿಸಿ. ನಿಮ್ಮ ಬಗೆಗಿನ ಪೊಳ್ಳು ಹೇಳಿಕೆಗಳು ನಿಲ್ಲದೇ ಹೋಗಬಹುದು. ನಿರ್ಮಾಣ ವ್ಯವಸ್ಥೆಯಲ್ಲಿ ಇರುವವರಿಗೆ ಸ್ವಲ್ಪ ಹಿನ್ನಡೆಯಾಗಲಿದೆ. ನಿಮ್ಮ ಆಪತ್ತಿಗೆ ಸಹಾಯ ಮಾಡುವವರನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ; ಮನೆಯಲ್ಲಿ ಆಗುವ ಸಂತಸಕ್ಕೆ ನೀವು ಪಾಲುದಾರರಾಗಿರುವಿರಿ. ಇಂದು ನಿಮ್ಮ ಹಲವು ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ. ತೆಗಳಿಕೆಗಳನ್ನು ನೀವು ಸ್ವೀಕರಿಸಲು ಸಿದ್ಧರಿರುವುದಿಲ್ಲ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿ ಕೆಲಸವನ್ನು ಮಾಡುವಿರಿ. ಇದರಿಂದ ಸಿಟ್ಟಾಗಬಹುದು. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯು ನಿಮ್ಮನ್ನು ಮತ್ತೆ ಕಾಡಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ಕೇಳುವ ಧೈರ್ಯ ಮಾಡುವಿರಿ. ಆಪ್ತರನ್ನು ನೀವು ದೂರ ಮಾಡಿಕೊಳ್ಳಬಹುದು. ಸೌಂದರ್ಯ ವರ್ಧನೆಗೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ. ಬಡ್ಡಿಯ ಹಣದಲ್ಲಿ ನೀವು ಇಂದಿನ ಖರೀದಿಯನ್ನು ಮಾಡುವಿರಿ. ನಿಮ್ಮ ಮಾತು ಮಿತಿಮೀರಬಹುದು ಎಚ್ಚರವಿರಲಿ. ಪೂರ್ವಸಿದ್ಧತೆಯನ್ನು ಮಾಡಿಕೊಂಡು ಯಾವ ಕೆಲಸಕ್ಕಾದರೂ ಇಳಿಯಿರಿ. ಎಲ್ಲರೂ ನಿಮಗೆ ಹೊಸಬರಂತೆ ಕಾಣುವರು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ಯಾವುದೇ ಆಟವನ್ನು ಸ್ಪರ್ಧಾಮನೋಭಾವದಿಂದ ಆಡಿದರೆ ಕ್ಷೇಮ.

ಧನು ರಾಶಿ: ಇಂದು ನಿಮ್ಮ ಕಾರ್ಯದಲ್ಲಿ ಅಪಯಶಸ್ಸು ಬಾರದಂತೆ ಕ್ರಮವನ್ನು ತೆಗೆದುಕೊಳ್ಳಿ. ಇಂದು ಯಂತ್ರೋಪಕರಣಗಳನ್ನು ಉಪಯೋಗಿಸುವಾಗ ಜಾಗರೂಕರಾಗಿರಬೇಕು. ಒಂದೇ ತರದ ಜೀವನವು ನಿಮಗೆ ಬೇಸರವನ್ನು ತಂದೀತು. ಏನನ್ನಾದರೂ ಹೊಸತನ್ನು ಮಾಡಲು ಬಯಸುವಿರಿ. ಅಧಿಕ ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ಸಹೋದ್ಯೋಗಿಗಳಿಂದ ಕಿರಿಯಾಗಲಿದೆ. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಅಂದುಕೊಂಡಿದ್ದು ಯಾರದೋ ಮೂಲಕ ಆಗುತ್ತದೆ ಎಂದು ಖುಷಿಪಡಿ. ಹಿರಿಯರ ಮಾತಿಗೆ ಎದುರಾಡುವುದು ಸರಿಯಾಗದು. ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳಿ‌. ನೌಕರರ ಪ್ರಾಮಾಣಿಕತೆಗೆ ಬೆಲೆ ಸಿಗುವುದು. ಸ್ನೇಹಿತರಿಂದ ನಿಮ್ಮ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ಸಂಗಾತಿಯ ಬಗ್ಗೆ ಅನುಕಂಪ ಬರಬಹುದು. ಆಧಿಕ ಖರ್ಚನ್ನು ಮಾಡಿಕೊಳ್ಳುವುದು ಬೇಡ.

ಮಕರ ರಾಶಿ: ನೀವು ಆದಾಯಕ್ಕೆ ಸರಿಯಾಗಿ ಅಥವಾ ಅದಕ್ಕಿಂತ ಕಡಿಮೆ ಖರ್ಚನ್ನು ಮಾತ್ರ ಯೋಜಿಸಿ. ಇಂದು ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳು ಪ್ರಯತ್ನಗಳು ಸಫಲವಾಗಲಿದೆ. ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸಂಗಾತಿಗಳು ದೂರಾಗಬಹುದು. ನಿಮ್ಮ ಖಾತೆಯಲ್ಲಿ ಹಣವು ಕಡಿಮೆ ಆಗಿ ಆತಂಕ ಸೃಷ್ಟಿಯಾಗಬಹುದು. ಸಹೋದ್ಯೋಗದಲ್ಲಿ ವೈರತ್ವ ಹುಟ್ಟಿಕೊಳ್ಳಬಹುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ‌ ಮೇಲೆ ಅನುಮಾನ‌ಪಡಲಿದ್ದೀರಿ. ಸಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ. ಸ್ತ್ರೀಯರ ಮೇಲೆ ನಿಮಗೆ ದಯೆಯು ಉಂಟಾಗಬಹುದು. ಸಹೋದರನಿಗೆ ಧನದ ಸಹಾಯವನ್ನು ಮಾಡುವಿರಿ. ನಿಮ್ಮ ದೂರು ತರ್ಕಬದ್ಧವೂ ನ್ಯಾಯಬದ್ಧವೂ ಆಗಿರಲಿ. ಅನಿರೀಕ್ಷಿತವಾಗಿ ಬರವ ಕೆಲವು ಸುದ್ದಿಗಳು ನಿಮಗೆ ದುಃಖವನ್ನು ಕೊಡಬಹುದು. ನೂತನ ವಾಹನವನ್ನು ಖರೀದಿಸಲು ಹುಮ್ಮಿಸ್ಸಿನಿಂದ ಇರುವಿರಿ. ಉದ್ಯೋಗದಲ್ಲಿ ನಿಮ್ಮ ನಡೆಯು ಸರಿಯಾಗಿರಲಿ.

ಕುಂಭ ರಾಶಿ; ಸಾಲದ ಮರುಪಾವತಿಯಾದರೂ ಮತ್ತೆ ಸಾಲದ ಭಯವು ಕಾಡುವುದು. ಬಹಳ ದಿನಗಳಿಂದ ಮರೆತುಹೋದ ಸ್ನೇಹಿತರನ್ನು ಅನಿರೀಕ್ಷೀತ ಭೇಟಿಯಾಗುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡುವುದು. ನಿಮ್ಮನ್ನು ಹಾಸ್ಯ ಮಾಡಬಹುದು. ಯಾರೋ ಆಡಿದ ಮಾತಿನಿಂದ ನಿಮಗೆ ಬೇಸರವಾಗಬಹುದು. ಒಂದಿಲ್ಲೊಂದು ನೆನಪಗಳನ್ನು ಹೇಳಿ ಉದ್ಯೋಗಕ್ಕೆ ವಿರಾಮವನ್ನು ಹಾಕುವಿರಿ. ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ಮಹಿಳೆಯರು ತಮ್ಮ ಉದ್ಯಮವನ್ನು ಬಹಳ ನಾಜೂಕಿನಿಂದ ಮಾಡುವರು. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕುವಿರಿ. ಉಪಾಕರದ ಸ್ಮರಣೀಯನ್ನು ಇಟ್ಟಕೊಂಡು ಮುಂದುವರಿಯಿರಿ. ಸಿಟ್ಟು ಮಾಡುವ ಸಂದರ್ಭದಲ್ಲಿ ಸಿಟ್ಟ ನಿಮ್ಮ ಹಿಡಿತದಲ್ಲಿ ಇರಲಿ. ಸುತ್ತಾಡುವ ಮನಸ್ಸಾದೀತು. ಮೇಲಧಿಕಾರಿಗಳ ಪ್ರಶ್ನೆಗೆ ಉತ್ತರಿಸಬೇಕು. ಏಕಾಂತವನ್ನು ನೀವು ಇಷ್ಟಪಡಲಾರಿರಿ. ನಿಮ್ಮ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಸುಳ್ಳನ್ನು ಯಾರಾದರೂ ನಂಬಬಹುದು. ಆಕಸ್ಮಿಕ ಧನಲಾಭದಿಂದ ಸಂತಸವು ಇರಲಿದೆ.

ಮೀನ ರಾಶಿ: ಇಂದು ಅನಗತ್ಯವಾಗಿ ಯಾರದೋ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ಆದಾಯಕ್ಕೆ ಇರುವ ಸುಲಭ ಮಾರ್ಗವನ್ನು ಅನ್ವೇಷಣೆ ಮಾಡುವಿರಿ. ಬಹಳಷ್ಟು ಮಾಡಬೇಕಾದ ಕೆಲಸಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ನಿಮ್ಮದಾದ ನಿಯಮಗಳನ್ನು ನೀವು ಬದಲಿಸಿಕೊಳ್ಳಲಾರಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕುಕೊಂಡು ಸಂತೋಷೊಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರವು ವಿಳಂಬವಾದರೂ ಸ್ಪಷ್ಟವಾಗಿ ಇರಲಿದೆ. ಬೇಕಾದಷ್ಟನ್ನೇ ಮಾತನಾಡಿ. ಮನಸ್ಸಿನಲ್ಲಿ ಆತಂಕವು ಹೆಚ್ಚಿರಲಿದೆ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬರಬಹುದು. ಆದಾಯದಲ್ಲಿ ಅತಿಯಾದ ನಿರೀಕ್ಷೆಯನ್ನು ಬಿಡುವುದು ಉತ್ತಮ. ಬರುವಷ್ಟನ್ನು ಸರಿಯಾಗಿ ಬಳಸಿಕೊಳ್ಳಿ.‌ ಇಂದು ನೀವು ಮಾಡುವ ಲೆಕ್ಕಾಚಾರದಿಂದ ಕಳೆದುಕೊಂಡಿದ್ದು ಎಷ್ಟು ಎಂಬ ಮಾಹಿತಿ ಸಿಗಲಿದೆ. ಅನಿರೀಕ್ಷಿತ ಲಾಭವಾಗಲಿದೆ. ಸಂತಾನ ಸುದ್ದಿಯು ನಿಮಗೆ ಖುಷಿ ಕೊಟ್ಟೀತು. ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಯ ಹೊರಗೆ ಇಂದು ಹೆಚ್ಚು ಸುತ್ತಾಡುವಿರಿ. ಆಯಾಸವು ಅಧಿಕವಾಗುವುದು. ಸಂತೋಷ ಇರುತ್ತದೆ. ಭೂಮಿ ಮತ್ತು ವಸತಿಗೆ ಸಮಸ್ಯೆಯಾಗಬಹುದು.

ಲೋಹಿತ ಹೆಬ್ಬಾರ್-8762924271 (what’s app only)

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?