Horoscope: ರಾಶಿಭವಿಷ್ಯ, ಈ ರಾಶಿಯವರು ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 05, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 05)) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ
ರಾಶಿ ಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 18ಕ್ಕೆ, ರಾಹು ಕಾಲ ಮಧ್ಯಾಹ್ನ 01:50 – 03:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:24 – 07:53ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 – 10:52ರ ವರೆಗೆ.

ಸಿಂಹ ರಾಶಿ : ವೈದ್ಯ ವೃತ್ತಿಯವರು ಇಂದು ಒತ್ತಡದಲ್ಲಿ ಇರುವರು. ನಿಮ್ಮನ್ನು ಅನಾದರ ಮಾಡಿದಂತೆ ಕಂಡುಬಂದೀತು. ಸುಮ್ಮನೇ ವಾದಕ್ಕೆ ಇಳಿಯುವುದು ಬೇಡ. ಕಲಾವಿದರು ಹೆಚ್ಚಿನ ಅವಕಾಶಕ್ಕೆ ಪ್ರಯತ್ನ ಮಾಡುವರು. ಹೊಸ ಮನೆಯ ಖರೀದಿಯ ಯೋಚನೆ ಮಾಡುವಿರಿ. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ದಿನದಂತೆ ಇರದು. ನಿಮ್ಮದಾದ ಕಾರ್ಯದಲ್ಲಿ ನೀವು ಮಗ್ನರಾಗುವುದು ಉತ್ತಮ. ಯಾರ ಬಗ್ಗೆಯೂ ಸುಮ್ಮನೇ ಮಾತನಾಡುವುದು ಬೇಡ. ಹೊಸ ವಸ್ತುವಿನ ಬಳಕೆಯಿಂದ ನಿಮಗೆ ಸಂತೋಷವು ಸಿಗುವುದು. ನಿಮಗೆ ಹೂಡಿಕೆಯ ಬಗ್ಗೆ ಹೇಳಿ ಆಪ್ತರು ನಿಮ್ಮ ತಲೆಯನ್ನು ಕೆಡಿಸಬಹುದು. ಮರಣದ ಭೀತಿಯು ನಿಮ್ಮನ್ನು ಕಾಡುವುದು. ಮಕ್ಕಳನ್ನು ಪಡೆಯುವ ಬಯಕೆ ಉಂಟಾಗುವುದು. ಆದಿತ್ಯಹೃದಯವನ್ನು ಪಠಿಸಿ.

ಕನ್ಯಾ ರಾಶಿ : ವಿವಾಹದ ವಿಚಾರಕ್ಕೆ ಮನೆಯಲ್ಲಿ ಶಾಂತಿಯು ಕದಡಬಹುದು. ಎಲ್ಲ ಚರಾಸ್ತಿಯನ್ನೂ ನೀವೇ ಪಡೆಯುವ ಹುನ್ನಾರ ನಡೆಸಬಹುದು. ಧಾರ್ಮಿಕ ಆಚರಣೆಯನ್ನು ವಿವೇಚನಾರಹಿತವಾಗಿ ಮಾಡುವಿರಿ. ನಿಮ್ಮ ಆದಾಯವನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಕಛೇರಿಯಲ್ಲಿ ಆದ ತಪ್ಪಿನಿಂದ ಮೇಲಧಿಕಾರಿಗಳು ಎಚ್ಚರಿಕೆ ಕೊಡುವರು. ಸರ್ಕಾರಿ ಕಾರ್ಯವು ವಿಳಂಬವಾಗಬಹುದು. ‌ಒರಟು ಸ್ವಭಾವವನ್ನು ನೀವು ಕಡಿಮೆ ಮಾಡಿಕೊಳ್ಳಿ. ಬೇಡವೆಂದು ಬಿಟ್ಟರೂ ಕೆಲಸವು ಮಾತ್ರ ನಿಮ್ಮನ್ನು ಬಿಡದು. ಪ್ರೀತಿಯನ್ನು ಗೌಪ್ಯವಾಗಿ ಇಡುವಿರಿ. ಆಲಸ್ಯದಿಂದ ಹಿರಿಯರು ನಿಮ್ಮ ಬಗ್ಗೆ ಹೇಳಿಯಾರು. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.

ತುಲಾ ರಾಶಿ : ಭೂಮಿಯ ಖರೀದಿಯಲ್ಲಿ ಗೊಂದಲವು ಹೆಚ್ಚಿರಬಹುದು. ನಿಮ್ಮ ಭಾವನೆಗಳನ್ನು ನೀವೇ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಹಳೆಯ ನೋವುಗಳು ಮತ್ತೆ ಕಾಣಿಸಿಕೊಳ್ಳುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಇಚ್ಛೆ ಇರುವುದು. ಇಂದಿನ ನಿಮ್ಮ ಕಾರ್ಯದಿಂದ ಮೆಚ್ಚುಗೆ ಸಿಗುವುದು. ಸಾಕಷ್ಟು ಕಿರಿಕಿರಿ ಇದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕರ್ತವ್ಯದಲ್ಲಿ ನೀವು ನಿರತರಾಗುವಿರಿ. ಪ್ರಭಾವೀ ವ್ಯಕ್ತಿಗಳ ಸಹಕಾರದಿಂದ ನಿಮಗೆ ಜೀವನದ ಉತ್ತಮ‌ ಮಾರ್ಗವು ಕಾಣಿಸುವುದು. ಇಂದು ಯಾರನ್ನೂ ನೋಯಿಸಲು ಮನಸ್ಸಾಗದು. ಭವಿಷ್ಯದ ಕನಸು ಕಾಣುವಿರಿ. ಭೋಗವಸ್ತುಗಳ ಮಾರಾಟದಿಂದ ನಿಮಗೆ ಲಾಭವಾಗುವುದು. ಮಕ್ಕಳ ಆರೋಗ್ಯದ ಚಿಂತೆ ಇರಲಿದೆ.

ವೃಶ್ಚಿಕ ರಾಶಿ : ಉದ್ಯಮದಲ್ಲಿ ನೀವು ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಇಂದು ವಿವಾಹದ ಮಾತುಕತೆಯನ್ನು ಮನೆಯಲ್ಲಿ ಆಡುವಿರಿ. ನಿಮ್ಮ ಪ್ರೇಮದ ವಿಚಾರವನ್ನು ತಾಯಿಯ ಬಳಿ ಹೇಳಿಕೊಳ್ಳುವಿರಿ. ನಿಮಗೆ ಇಂದು ಸಮಯವು ವ್ಯರ್ಥವಾದಂತೆ ತೋರುವುದು. ಆಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಬೇಕಾಗಬಹುದು. ಹಿಂದೆ ಮುಂದೆ ಆಲೋಚಿಸದೇ ಧೈರ್ಯವನ್ನು ಮಾಡುವುದು ಬೇಡ. ಪ್ರಯಾಣದ ವಿಚಾರದಲ್ಲಿ ಇಂದು ಮನೆಯವರ ಮಾತಿನಂತೆ ನಡೆದುಕೊಳ್ಳಿ. ನಿಮ್ಮ ಜೊತೆ ವೃತ್ತಿಯನ್ನು ನಿರ್ವಹಿಸುವವರು ನಿಮ್ಮ ಮಾತನ್ನು ಸಹಿಸಲಾರರು. ಸಂಗಾತಿಯು ದೂರ ಪ್ರಯಾಣ ಹೋಗಲು ಆಹ್ವಾನಿಸಬಹುದು. ಮೊದಲು‌ ಮಾಡಿದ ತಪ್ಪನ್ನೇ ಪುನಃ ಮಾಡಲು ಹೋಗುವಿರಿ.‌ ನಿಮ್ಮ ವಸ್ತುಗಳನ್ನು ಯಾರಾದರೂ ಕಳ್ಳತನ ಮಾಡಬಹುದು. ದೇವಸೇನಾ ನಾಯಕನಾದ ಸುಬ್ರಹ್ಮಣ್ಯನ ಸಂಪ್ರಾರ್ಥನೆಯನ್ನು ಮಾಡಿ.