ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:48 ರಿಂದ 05:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:03 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:13ರ ವರೆಗೆ.
ಸಿಂಹ ರಾಶಿ: ನಿಮ್ಮನ್ನು ಸ್ಥಾನದಿಂದ ಕೆಳಗೆ ದೂಡಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ನಿಮಗೆ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರದಿಂದ ಸಂಬಂಧಗಳು ಹಾಳಾಗಬಹುದು. ನೀವು ಕೆಲವು ಸಮಸ್ಯೆಯನ್ನು ಅನಿರೀಕ್ಷಿತವಾಗಿ ಎದುರಿಸಬೇಕಾಗುವುದು. ನಿಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟಕೊಳ್ಳಬೇಕಾಗುವುದು. ನಿಮ್ಮ ಬಗ್ಗೆ ಕುಟುಂಬದಿಂದ ಸಮಾಧಾನವು ಇರಲಿದೆ. ಇಷ್ಟದವರ ಭೇಟಿಯಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ.
ಕನ್ಯಾ ರಾಶಿ: ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಸಮಯವನ್ನೂ ಕೊಡಬೇಕಾದೀತು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸದಿಂದ ಬಿಡುವಿರಿ. ನಿಮಗೆ ಕಾರ್ಯದಿಂದ ಪಾಪಪ್ರಜ್ಞೆಯು ಕಾಡಬಹುದು. ಹಿರಿಯರ ಜೊತೆಗೆ ಹೆಚ್ಚು ಸಮಯವನ್ನು ಕಳೆಯುವಿರಿ. ಮನಸ್ಸನ್ನು ನಿರ್ಲಿಪ್ತಗೊಳಿಸಲು ಪ್ರಯತ್ನಿಸುವಿರಿ. ಬಂಧುಗಳ ವಿಚಾರದಲ್ಲಿ ಅಸಮಾಧಾನವು ಇರುವುದು.
ತುಲಾ ರಾಶಿ: ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯದಂತೆ ಇರುವುದು. ಅತಿಯಾದ ವಿಶ್ವಾಸದಿಂದ ನಿಮಗೆ ವಂಚನೆಯಾಗಲಿದೆ. ನಿಮಗೂ ಸರ್ಕಾರದ ನಡುವೆಯೂ ವಿವಾದಗಳು ನಡೆಯಬಹುದು. ವ್ಯಾಯಾಮದ ಮೂಲಕ ನೀವು ನಿಮ್ಮ ದುರ್ಬಲ ದೇಹವನ್ನು ಗಟ್ಟಿ ಮಾಡಿಕೊಳ್ಳುವಿರಿ. ಸಾಲದ ವಿಚಾರವು ನಿಮಗೆ ಇಷ್ಟವಿಲ್ಲದಿದ್ದರೂ ಅದನ್ನೇ ಮಾಡಬೇಕಾದೀತು. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿರುವ ಶೀತಲಸಮರವು ಸ್ಫೋಟವಾಗಬಹುದು. ಮಕ್ಕಳಿಗೆ ಬೇಕಾದ ತಿಳಿವಳಿಕೆಯನ್ನು ಕೊಡಲಿದ್ದೀರಿ.
ವೃಶ್ಚಿಕ ರಾಶಿ: ನಿಮಗೆ ಸ್ನೇಹಿತರಿಂದ ಧನಸಹಾಯವು ಸಿಗಲಿದೆ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲು ಕಷ್ಟವಾದೀತು. ಅದಕ್ಕೆ ಏನಾದರೂ ತೊಂದರೆಯಾದೀತು. ಪ್ರಯಾಣಕ್ಕೆ ಇಂದು ಅನುಕೂಲವಿಲ್ಲ. ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಹಣವನ್ನು ನೀಡಬೇಕಾದೀತು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಮುಗಿಸುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ ಆಗಬಹುದು. ಕಲಾವಿದರು ಹೆಚ್ಚಿನ ಆದಾಯವನ್ನು ಮಾಡಿಕೊಳ್ಳುವರು. ರಾಜಕೀಯಕ್ಕೆ ಹೋಗುವ ಮನಸ್ಸು ನಿಮಗೆ ಇರಲಿದೆ. ಹೊಸ ಜವಾಬ್ದಾರಿಗಳನ್ನು ಪಡೆಯಲು ನೀವು ಬಹಳ ಉತ್ಸುಕರಾಗಿ ಇರುವಿರಿ. ಪುಣ್ಯಕ್ಷೇತ್ರಕ್ಕೆ ನೀವು ಬಂಧುಗಳ ಜೊತೆಗೆ ಹೋಗುವಿರಿ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ