ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 14 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:19 ರಿಂದ 01:48ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:51 ರಿಂದ ಮಧ್ಯಾಹ್ನ 12:19ರ ವರೆಗೆ.
ಸಿಂಹ ರಾಶಿ : ನಿಮ್ಮದೆಂದುಕೊಂಡವು ವಸ್ತುವು ನಿಮ್ಮಿಂದ ದೂರವಾಗಬಹುದು. ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಇಂದುಬಅತಿಯಾದ ನಿದ್ರೆಯಿಂದ ಜಾಡ್ಯವು ಬರುವುದು. ದೈಹಿಕ ಶ್ರಮವು ಇಂದು ಹೆಚ್ಚಿರುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಯಾವ ಆರೋಪವನ್ನೂ ನೀವು ಸಹಿಸಿಕೊಳ್ಳದೇ ಎಲ್ಲವನ್ನೂ ಹೊರಹಾಕುವಿರಿ. ಉತ್ಸಾಹದಿಂದ ನೀವು ಇಂದಿನ ಕೆಲಸವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಕೆಟ್ಟ ಮಾತುಗಳು ಬರಬಹುದು. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಸಹೋದರನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ಸಂಗಾತಿಗೆ ಕಿರಿಕಿರಿ ಎನಿಸಬಹುದು. ಹೊಸ ಆದಾಯದ ಮೂಲಗಳಿಂದ ಖುಷಿ ಇರಲಿದೆ. ರಾಜಕಾರಣಿಗಳು ಸ್ಥಾನಕ್ಕಾಗಿ ಏನಾದರೂ ತಂತ್ರವನ್ನು ಮಾಡುವರು.
ಕನ್ಯಾ ರಾಶಿ : ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ವಿರುದ್ಧ ಬೀಳಬಹುದು. ಬದುಕಿಗೆ ತಿರುವು ಬರುವ ಸಾಧ್ಯತೆ ಇದೆ. ಇಂದಿನ ಕಾರ್ಯವು ನಿಮಗೆ ಸಮಾಧಾನ ಕೊಡದೇ ಇರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ನಿಮ್ಮ ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಏನಾದರೂ ಮಾಡುತ್ತ ನಿಮ್ಮ ಮನಸ್ಸಿಗೆ ಕೆಲಸವನ್ನು ಕೊಡುವಿರಿ. ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ವೃತ್ತಿಯಲ್ಲಿ ಕೆಲವು ಸಂತೋಷದ ಕ್ಷಣಗಳು ನಿಮ್ಮದಾಗಲಿವೆ. ಪ್ರಭಾವೀ ಜನರ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುವಿರಿ. ಆಹಾರದಿಂದ ಆರೋಗ್ಯವು ಹಾಳಾಗಬಹುದು. ಯಾರ ಮಾತನ್ನೂ ಕೇಳಿಸಿಕೊಳ್ಳುವಷ್ಟು ವ್ಯವಧಾನ ಇರದು.
ತುಲಾ ರಾಶಿ : ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆಯುವಿರಿ. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಹಿರಿಯರಲ್ಲಿ ಭಕ್ತಿಯನ್ನು ತೋರಿಸುವಿರಿ. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಇರಿ. ಬಹಳ ದಿನಗಳಿಂದ ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಲಿದೆ. ಅದನ್ನು ಗಂಭಿರವಾಗಿ ತೆಗೆದುಕೊಳ್ಳುವುದು ಬೇಡ. ನೆರೆಯವರ ವರ್ತನೆಯಿಂದ ನಿಮಗೆ ಸಿಟ್ಟಿಗೆ ಬರಬಹುದು. ಹೊಸ ಉದ್ಯೋಗವನ್ನು ಆರಂಭಿಸಬೇಕು ಎನಿಸಬಹುದು. ಪ್ರೇಮ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ. ಸಹೋದರನ ಪ್ರಗತಿಯಿಂದ ನಿಮಗೆ ಸಂತೋಷ ಆಗಲಿದೆ. ಇಂದು ಸಹೋದರಿಯ ಮಾತಿಗೆ ನೀವು ಸ್ಪಂದಿಸುವಿರಿ.
ವೃಶ್ಚಿಕ ರಾಶಿ : ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಯಾರ ಬಗ್ಗೆಯೂ ಅನಗತ್ಯ ಟೀಕೆಗಳು ಬೇಡ. ಆಧ್ಯಾತ್ಮದ ಕಡೆ ಮನಸ್ಸು ಇರಬಹುದು. ಇನ್ನೊಬ್ಬರಿಗೆ ಹೋಲಿಸಿಕೊಂಡು ಸಂಕಟಪಡುವಿರಿ. ಇಂದು ನೀವು ಸಂತೋಷ ಆಗದೇಹೋಗಬಹುದು. ನಿಮ್ಮ ಪ್ರತಿಭೆಯನ್ನು ಪ್ರಕಟಿಸಲು ಉತ್ತಮ ಅವಕಾಶವಿರುವುದು. ಅವಕಾಶವನ್ನು ಮಾಡಿಕೊಂಡರೆ ಉತ್ತಮ ಭವಿಷ್ಯವು ಸಿಗುವುದು. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ತಪ್ಪಿಸಲು ಅಸಂಬದ್ಧ ಸಲಹೆಗಳನ್ನು ಕೊಡಬಹುದು.