ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ: ಶನಿ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವರೀಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03: 46 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:19 ರಿಂದ 07:54ರ ವರೆಗೆ.
ಸಿಂಹ ರಾಶಿ: ಇಂದು ನಿಮ್ಮ ಆರ್ಥಿಕತೆಯ ಮಟ್ಟವು ಗೊತ್ತಾಗಲಿದೆ. ಬರುವ ಹಣವನ್ನು ನಿಮ್ಮ ಭವಿಷ್ಯದ ಸಂಪತ್ತಾಗಿ ಕೂಡಿ ಇಡುವಿರಿ. ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಉತ್ತಮ ಅಭಿವೃದ್ಧಿಯನ್ನು ಪಡೆಯುವರು. ನಿಮ್ಮ ಮಾತುಗಳ ಮೇಲೆ ಹೆಚ್ಚು ನಿಯಂತ್ರಣದ ಅಗತ್ಯವಿದೆ. ಬರುವ ಸಮಸ್ಯೆಗಳನ್ನು ಊಹಿಸಿ ಕಾರ್ಯ ಮಾಡುವುದು ಶ್ರೇಯಸ್ಕರ. ನೀವು ಇತರರನ್ನು ಟೀಕಿಸುವುದನ್ನು ನಿಲ್ಲಿಸಿ, ಸಂಬಂಧಗಳಿಂದ ಪ್ರಯೋಜನವನ್ನು ಪಡೆಯಬಹುದು. ಉತ್ಸಾಹದಿಂದ ನೀವು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆದರೂ ಮತ್ತಷ್ಟು ಬೇಕು ಎನಿಸಬಹುದು.
ಕನ್ಯಾ ರಾಶಿ: ಭೂಮಿಯ ವ್ಯವಹಾರಸ್ಥರು ನಷ್ಟವನ್ನು ಅನುಭವಿಸಬೇಕಾದೀತು. ಅಥವಾ ಹೆಚ್ಚು ಶ್ರಮದ, ಓಡಾಟ, ಬೌದ್ಧಿಕ ಕಸರತ್ತುಗಳನ್ನು ಮಾಡಿ ಲಾಭವನ್ನು ಗಳಿಸುವ ಸಂದರ್ಭವಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಅಪಮಾನವನ್ನು ಅನುಭವಿಸಬೇಕಾದೀತು. ದುಸ್ಸಾಧ್ಯ ಎನಿಸಿದ್ದನ್ನು ಬಿಟ್ಟುಬಿಡಿವುದು ಒಳ್ಳೆಯದು. ಚಿಂತೆಗಳೇ ಇರುವ ಮನಸ್ಸನ್ನು ದೇವರ ಭಕ್ತಿಗೆ ಮೀಸಲಿಟ್ಟು ಸಮಾಧಾನಿಗಳಾಗಿ. ನೀವು ತೆಗೆದುಕೊಂಡ ದೃಢ ನಿರ್ಧಾರವು ನಿಮ್ಮ ಮಾನಸಿಕ ಧಾರ್ಷ್ಟ್ಯವನ್ನು ತೋರಿಸುವುದು. ವಿದ್ಯಾರ್ಥಿಗಳು ಪೋಷಕರ ನಿರ್ಲಕ್ಷ್ಯದಿಂದ ಕೆಡುವ ಸಾಧ್ಯತೆ ಇದೆ. ಅವರ ಮೇಲೆ ಪೋಷಕ ಕಣ್ಣು ಇರಬೇಕಾದೀತು. ಅಧ್ಯಾತ್ಮದ ವಿಚಾರಗಳು ನಿಮ್ಮ ಮನಸ್ಸಿಗೆ ಹಿತ ಎನಿಸಬಹುದು.
ತುಲಾ ರಾಶಿ: ಯಾರನ್ನೂ ಪೂರ್ತಿಯಾಗಿ ತಿಳಿಯದೇ ಒಳಗೆ ತೆಗೆದುಕೊಳ್ಳುವುದು ಬೇಡ. ಅಪರಿಚಿತರು ಕೊಟ್ಟ ವಸ್ತುಗಳಿಂದ ನಿಮಗೆ ತೊಂದರೆ ಸಂಭವಿಸಬಹುದು. ವೃತ್ತಿಕ್ಷೇತ್ರದಲ್ಲಿ ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಮೂಲಕ ನಿಮ್ಮ ಸಾಮರ್ಥ್ಯದ ಪರಿಚಯ ಆಗುವುದು. ಬಹಳ ಕಾಲದ ಹಿಂದೇ ಚಿಂತಿಸಿರುವ ಕೆಲಸವು ಇಂದು ಆರಂಭಿಸಲು ಚಿಂತಿಸುವಿರಿ. ಕಲಾಕ್ಷೇತ್ರದ ಜನರು ತಮ್ಮ ಜೀವನವನ್ನು ಒಂದಲ್ಲ ಒಂದು ರೀತಿಯಲ್ಲಿ ಸಂಪತ್ತಿನಿಂದ ತುಂಬಿಕೊಳ್ಳುವರು. ಒಂದಿಲ್ಲೊಂದು ಅವಕಾಶಗಳು ನಿಮ್ಮ ಪಾಲಿಗೆ ಸಿಗಲಿದೆ. ಲಕ್ಷ್ಮೀ ಕಟಾಕ್ಷವು ಯಥೇಚ್ಛವಾಗಿ ಸಿಗುವುದು.
ವೃಶ್ಚಿಕ ರಾಶಿ: ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಉದ್ಯಮದ ವಿಸ್ತರಣೆಗೆ ಕೆಲವು ಕ್ರಮವನ್ನು ಕೈಗೊಳ್ಳುವಿರಿ. ಒಂದೇ ವಿಷಯದಲ್ಲಿ ನಿಮ್ಮ ಗಮನವು ಅಧಿಕವಾಗಿ ಇರಲಿದೆ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಗಳ ಹೆಚ್ಚಾಗುವಂತೆ ಮಾಡುವುದು. ಎಷ್ಟೇ ಚತುರ ಮತಿಗಳಾದರೂ ಎಡವುವ ಸಾಧ್ಯತೆ ಇದೆ. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯಲು ಬಯಸುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮಾತು ಸಂತೋಷವನ್ನು ಇಮ್ಮಡಿಗೊಳಿಸಬಹುದು. ವಿದ್ಯಾರ್ಥಿಗಳಿಗೆ ನಿಮ್ಮಿಂದ ಮಾರ್ಗದರ್ಶನ ಸಿಕ್ಕೀತು. ನಗುವು ನಿಮ್ಮ ಅಸ್ತ್ರವಾಗಲಿದೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ