Horoscope: ರಾಶಿಭವಿಷ್ಯ, ಈ ರಾಶಿಯವರು ಶನೈಶ್ಚರನ ಪ್ರೀತ್ಯರ್ಥವಾಗಿ ಎಳ್ಳು ದಾನ ಮಾಡಿ ದೋಷ ಪರಿಹರಿಸಿಕೊಳ್ಳಿ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 12 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ: ಶನಿ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವರೀಯಾನ್, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03: 46 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:19 ರಿಂದ 07:54ರ ವರೆಗೆ.
ಧನು ರಾಶಿ: ನಿಮಗೆ ಇದಮಿತ್ಥಂ ಎಂದು ಸರಿಯಾದ ನಿರ್ಧಾರವನ್ನು ತೆಗದುಕೊಳ್ಳಲು ನಿಮಗೆ ಆಗದು. ಒಂದು ಕಾರ್ಯಕ್ಕೆ ಹತ್ತಾರು ಆಲೋಚನೆಗಳು ಒಟ್ಟಿಗೇ ಬರುವ ಕಾರಣ ಹೀಗಾಗುವುದು. ದೈವಲೀಲೆಯ ಬಗ್ಗೆ ನಿಮಗೆ ನಂಬಿಕೆ ಹೆಚ್ಚಿರುವುದು. ಹಠದ ಸ್ವಭಾವವನ್ನು ಮಕ್ಕಳೂ ಮುಂದುವರಿಸಬಹುದು. ಅವರೆದುರು ನಕಾರಾತ್ಮಕ ಗುಣಗಳು ಬೇಡ. ತಂದೆ ಮತ್ತು ಮಕ್ಕಳ ನಡುವೆ ಶೀತಲ ಸಮರವು ನಡೆಯುವುದು. ತಾಳ್ಮೆಯ ಮಟ್ಟವು ಮಿತಿಮೀರುವ ಸಂದರ್ಭವು ಬರಬಹುದು. ಹಿತವಾದ ಆಹಾರವನ್ನು ಸ್ವೀಕರಿಸಿ. ಹಣಕಾಸಿನ ವ್ಯವಹಾರದಲ್ಲಿ ವೈಮನಸ್ಯ ಉಂಟಾಗುವುದು. ಇಂದು ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು.
ಮಕರ ರಾಶಿ: ನಿಮ್ಮ ಆದಾಯದ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಆದಾಯಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಉದ್ಯೋಗದ ಆರಂಭದ ದಿನಗಳು ನಿಮಗೆ ಕಷ್ಟ ಎಂದು ಅನ್ನಿಸಬಹುದು. ಸಹೋದ್ಯೋಗಿಗಳ ಸಹಾಯವನ್ನು ನೀವು ಪಡೆಯಬೇಕಾಗಬಹುದು. ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಹದ ತಪ್ಪಬಹುದು. ಮಾಡಬೇಕಾದ ಕೆಲಸಗಳನ್ನು ಆಸಕ್ತಿಯಿಂದ ಮಾಡುವಿರಿ. ನಿಮ್ಮ ಗೌಣ ವಿಚಾರಗಳು ನಿಮ್ಮ ಹಿತಶತ್ರುಗಳಿಂದ ಎಲ್ಲರಿಗೂ ಗೊತ್ತಾದೀತು. ಮಹಾವಿಷ್ಣುವಿಗೆ ಪಾಯಸ ನೈವೇದ್ಯವನ್ನು ಮಾಡುವಿರಿ.
ಕುಂಭ ರಾಶಿ: ನಿಮ್ಮ ತೊಂದರೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ವಿರೋಧಿಗಳು ಸಹಜವಾಗಿ ಕಡಿಮೆಯಾಗುವರು. ನೀವು ನಿಯೋಜಿತ ಕಾರ್ಯಗಳನ್ನು ಒಂದೊಂದಾಗಿ ಮಾಡಿ ಮುಗಿಸುವುದು ಉತ್ತಮ. ದಾಂಪತ್ಯದಲ್ಲಿ ಉಂಟಾದ ಕಲಹವು ಮಧ್ಯಸ್ತಿಕೆಯಿಂದ ಪರಿಹಾರವಾಗುವುದು. ಮಾಡಿದ ತಪ್ಒನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ಕಲಿತ ವಿದ್ಯೆಗಳು ಬಳಕೆಗೆ ಬರಲಿದೆ. ನಿಮ್ಮದಾದ ವಾಹನವಿಲ್ಲದೇ ನೀವು ಬೇಸರಿಸುವಿರಿ. ದೂರದ ಊರಿಗೆ ಪ್ರವಾಸ ಹೋಗುವ ಇಚ್ಛೆ ಇದ್ದರೂ ಅದು ಆಗದು. ನಿಮ್ಮ ಬಗ್ಗೆ ತಪ್ಪು ತಿಳಿವಳಿಕೆಯು ಬರಬಹುದು. ಶನೈಶ್ಚರನ ಪ್ರೀತ್ಯರ್ಥವಾಗಿ ಎಳ್ಳನ್ನು ದಾನ ಮಾಡಿ ದೋಷಗಳನ್ನು ಪರಿಹರಿಸಿಕೊಳ್ಳಿ.
ಮೀನ ರಾಶಿ: ಕಾನೂನಿನ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಬೆಳವಣಿಗೆಯು ಇರಲಿದೆ. ಮಕ್ಕಳ ಜೊತೆ ವಾಗ್ವಾದ ಮಾಡುವ ಸಂದರ್ಭವು ಬರಬಹುದು. ಮನೆಯ ಬಗ್ಗೆ ಚಿಂತಿಸಿ ನೀವು ಸಮಸ್ಯೆಗಳನ್ನು ಬಗೆಹರಿಸಲಾಗದು. ಆಗಿಹೋದ ಘಟನೆಗಳು ನಿಮ್ಮ ಸ್ಮರಣೆಗೆ ಬರಲಿದ್ದು ಅದನ್ನು ಮರೆಯುವ ಪ್ರಯತ್ನ ಮಾಡಿದರೂ ಅಸಾಧ್ಯ ಎನಿಸಬಹುದು. ಮನಸ್ಸನ್ನು ಒಂದೇ ವಿಚಾರದಲ್ಲಿ ಮನಸ್ಸನ್ನು ನಿಲ್ಲಿಸಲು ಪ್ರಯತ್ನಿಸುವಿರಿ. ಕುಟುಂಬದ ವ್ಯವಸ್ಥೆಯನ್ನು ನಿಭಾಯಿಸಲು ನಿಮಗೆ ಕಷ್ಟವಾದೀತು. ಭವಿಷ್ಯದ ಬಗ್ಗೆ ಹತ್ತಾರು ಕನಸುಗಳು ಇರಲಿವೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ತೊಡಗುವುದು ಕಷ್ಟವಾದೀತು.