Horoscope 12 August: ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವಿರಿ, ಒಬ್ಬಂಟಿ ತನದಿಂದ ಹೊರಬರಲು ಕಷ್ಟಪಡುವಿರಿ

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 12 August: ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವಿರಿ, ಒಬ್ಬಂಟಿ ತನದಿಂದ ಹೊರಬರಲು ಕಷ್ಟಪಡುವಿರಿ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2023 | 12:02 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ : ಆಶ್ಲೇಷಾ, ಮಾಸ : ಅಧಿಕ ಶ್ರಾವಣ, ಪಕ್ಷ : ಕೃಷ್ಣ, ವಾರ: ಶನಿ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವರೀಯಾನ್​​, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03: 46 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:19 ರಿಂದ 07:54ರ ವರೆಗೆ.

ಮೇಷ ರಾಶಿ: ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಒಪ್ಪಿಕೊಳ್ಳಿ. ಕಾರ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಇದೆ. ಮೂರನೇ ವ್ಯಕ್ತಿಗಳ ಮೂಲ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ದೂರವಾಣಿ ಕರೆಗಳನ್ನು ಆದಷ್ಟು ಕಡಿಮೆ‌ಮಾಡಿ. ನಿಮ್ಮದಲ್ಲದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಲು ಹೋಗುವುದು ಬೇಡ. ಸಂಕಷ್ಟದ ಸನ್ನಿವೇಶಗಳನ್ನು ಬುದ್ಧಿವಂತಿಕೆಯಿಂದ ದಾಟಬೇಕಾಗುವುದು. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸುವುದು ನಿಮಗೆ ಇಷ್ಟವಾಗದು. ಪ್ರಯಾಣ ಮಾಡುವುದು ನಿಮಗೆ ಇಷ್ಟವಾಗದು. ಒತ್ತಡದಲ್ಲಿ ಇಂದಿನ ಕಾರ್ಯವನ್ನು ಮಾಡುವಿರಿ.

ವೃಷಭ ರಾಶಿ: ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರೂ ಅದು ಕೃತಕದಂತೆ ಅನ್ನಿಸಬಹುದು. ಒಂದೇ ವಿಷಯವು ಅನೇಕ ಬಾರಿ ಕೇಳಿ ಹಿಂಸೆಯಾಗುವುದು. ಶೀತಲ ಸಂಘರ್ಷವು ಸ್ಫೋಟವಾಗಬಹುದು. ಹಳೆಯದನ್ನು ಮರೆತು ಹೊಸತನದಲ್ಲಿ ಮುನ್ನಡೆಯುವುದು ಉತ್ತಮ. ಯಾರ ಮಾತನ್ನೂ ಕೇಳದೇ ಉದ್ಧಟತನ ತೋರುವುದು ಸರಿಯಾಗದು. ಆರ್ಥಿಕ ಅಭಿವೃದ್ದಿಗೆ ನಾನಾ ಯೋಚನೆಯನ್ನು ಮಾಡುವಿರಿ. ನಿಮ್ಮ ಸತ್ಯವನ್ನು ನಿಮ್ಮವರು ನಂಬುವುದು ಕಷ್ಟವಾದೀತು. ಆರೋಗ್ಯದಲ್ಲಿ ಆಗುವ ಸಣ್ಣ ಸಣ್ಣ ವ್ಯತ್ಯಾಸವು ನಿಮಗೆ ಕಿರಿಕಿರಿ ಆಗಬಹುದು. ಆದಿತ್ಯ ಹೃದಯ ಸ್ತೋತ್ರವನ್ನು ಪ್ರಾತಃಕಾಲದಲ್ಲಿ ಶುದ್ಧ ಮನಸ್ಸಿನಿಂದ ಪಠಿಸಿ.

ಮಿಥುನ ರಾಶಿ: ಮಕ್ಕಳ ವಿಚಾರದಲ್ಲಿ ನಿಮ್ಮ ಧೋರಣೆಯು ಬದಲಾಗುವುದು. ಮನೆಯಲ್ಲಿ ಯಾರ ಮೇಲೂ ಪಕ್ಷಪಾತ ಮಾಡುವುದು ಬೇಡ. ಪ್ರಯಾಣವು ನಿಮಗೆ ಸಂಕಟವನ್ನು ತರಬಹುದು. ಅನಿರೀಕ್ಷಿತ ಸಂಪತ್ತು ತಂದೆಯ ಕಡೆಯಿಂದ ಬರಬಹುದು. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸುವಿರಿ. ನಿಮ್ಮ ಅನನುಕೂಲದ ಸ್ಥಿತಿಗೆ ದೈವವು ಯಾರದೋ ಮೂಲಕ ಸಹಾಯವನ್ನು ಮಾಡಿಸುವುದು. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮುಂದುವರಿದು ಉತ್ತಮ. ವ್ಯಾಪಾರದಲ್ಲಿ ನೀವು ಹೆಚ್ಚು ಲಾಭವನ್ನು ಗಳಿಸಲು ತಂತ್ರಗಳನ್ನು ರೂಪಿಸುವರಿ. ಬೇರೆಯವರು ನಿಮ್ಮ ಮೇಲೆ ಇಟ್ಟ ನಂಬಿಕೆಯು ನಿಮಗೇ ಅಚ್ಚರಿ ಆಗುವಂತೆ ಇರುವುದು.

ಕಟಕ ರಾಶಿ: ಇಂದು ನೀವು ಸಮಯವನ್ನು ಕಳೆಯಲು ಬೇರೆ ಬೇರೆ ದಾರಿಗಳನ್ನು ಹುಡುಕುವಿರಿ. ಒಂಟಿಯಾಗಿ ಇರುವುದು ನಿಮಗೆ ಕಷ್ಟವೆನಿಸುವುದು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಹೆಚ್ಚು ಒಳ್ಳೆಯದು. ಹೊಸತನ್ನು ಕಲಿಯಬೇಕು ಎನ್ನುವ ಆಸೆಯು ಬೇಡವೆನಿಸಬಹುದು. ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಹಿಂದೇಟು ಹಾಕುವಿರಿ. ಸ್ನೇಹಿತರ ನಡುವೆ ಹಣಕಾಸಿನ ವ್ಯವಹಾರಕ್ಕೆ ಜಗಳವಾಗಬಹುದು. ಸ್ಥಿರಾಸ್ತಿಯನ್ನು ಪಡೆಯುವ ಮನಸ್ಸು ಇನ್ನೊಬ್ಬರಿಂದ ಪ್ರೇರಿತವಾಗಿ ಬರಬಹುದು. ಅನಿರೀಕ್ಷಿತವಾಗಿ ಆರೋಗ್ಯದಲ್ಲಿ ವ್ಯತ್ಯಾಸವು ಆಗಿದ್ದು ನೀವು ಇದರಿಂದ ವಿಚಲಿತಗೊಳ್ಳುವಿರಿ. ನಿಮಗೆ ಸಿಕ್ಕ ಸಂಪತ್ತನ್ನು ಸದುಪಯೋಗ ಮಾಡುವತ್ತ ಗಮನವಿರಲಿ.

ಸಿಂಹ ರಾಶಿ: ಇಂದು ನಿಮ್ಮ ಆರ್ಥಿಕತೆಯ ಮಟ್ಟವು ಗೊತ್ತಾಗಲಿದೆ. ಬರುವ ಹಣವನ್ನು ನಿಮ್ಮ ಭವಿಷ್ಯದ ಸಂಪತ್ತಾಗಿ ಕೂಡಿ ಇಡುವಿರಿ. ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಉತ್ತಮ ಅಭಿವೃದ್ಧಿಯನ್ನು ಪಡೆಯುವರು. ನಿಮ್ಮ ಮಾತುಗಳ ಮೇಲೆ ಹೆಚ್ಚು ನಿಯಂತ್ರಣದ ಅಗತ್ಯವಿದೆ. ಬರುವ ಸಮಸ್ಯೆಗಳನ್ನು ಊಹಿಸಿ ಕಾರ್ಯ ಮಾಡುವುದು ಶ್ರೇಯಸ್ಕರ. ನೀವು ಇತರರನ್ನು ಟೀಕಿಸುವುದನ್ನು ನಿಲ್ಲಿಸಿ, ಸಂಬಂಧಗಳಿಂದ ಪ್ರಯೋಜನವನ್ನು ಪಡೆಯಬಹುದು. ಉತ್ಸಾಹದಿಂದ ನೀವು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆದರೂ ಮತ್ತಷ್ಟು ಬೇಕು ಎನಿಸಬಹುದು.

ಕನ್ಯಾ ರಾಶಿ: ಭೂಮಿಯ ವ್ಯವಹಾರಸ್ಥರು ನಷ್ಟವನ್ನು ಅನುಭವಿಸಬೇಕಾದೀತು. ಅಥವಾ ಹೆಚ್ಚು ಶ್ರಮದ, ಓಡಾಟ, ಬೌದ್ಧಿಕ ಕಸರತ್ತುಗಳನ್ನು‌ ಮಾಡಿ ಲಾಭವನ್ನು ಗಳಿಸುವ ಸಂದರ್ಭವಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಅಪಮಾನವನ್ನು ಅನುಭವಿಸಬೇಕಾದೀತು. ದುಸ್ಸಾಧ್ಯ ಎನಿಸಿದ್ದನ್ನು ಬಿಟ್ಟುಬಿಡಿವುದು ಒಳ್ಳೆಯದು. ಚಿಂತೆಗಳೇ ಇರುವ ಮನಸ್ಸನ್ನು ದೇವರ ಭಕ್ತಿಗೆ ಮೀಸಲಿಟ್ಟು ಸಮಾಧಾನಿಗಳಾಗಿ. ನೀವು ತೆಗೆದುಕೊಂಡ ದೃಢ ನಿರ್ಧಾರವು ನಿಮ್ಮ ಮಾನಸಿಕ ಧಾರ್ಷ್ಟ್ಯವನ್ನು ತೋರಿಸುವುದು. ವಿದ್ಯಾರ್ಥಿಗಳು ಪೋಷಕರ ನಿರ್ಲಕ್ಷ್ಯದಿಂದ ಕೆಡುವ ಸಾಧ್ಯತೆ ಇದೆ. ಅವರ ಮೇಲೆ ಪೋಷಕ ಕಣ್ಣು ಇರಬೇಕಾದೀತು. ಅಧ್ಯಾತ್ಮದ ವಿಚಾರಗಳು ನಿಮ್ಮ ಮನಸ್ಸಿಗೆ ಹಿತ ಎನಿಸಬಹುದು.

ತುಲಾ ರಾಶಿ: ಯಾರನ್ನೂ ಪೂರ್ತಿಯಾಗಿ ತಿಳಿಯದೇ ಒಳಗೆ ತೆಗೆದುಕೊಳ್ಳುವುದು ಬೇಡ. ಅಪರಿಚಿತರು ಕೊಟ್ಟ ವಸ್ತುಗಳಿಂದ ನಿಮಗೆ ತೊಂದರೆ ಸಂಭವಿಸಬಹುದು. ವೃತ್ತಿಕ್ಷೇತ್ರದಲ್ಲಿ ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಮೂಲಕ ನಿಮ್ಮ ಸಾಮರ್ಥ್ಯದ ಪರಿಚಯ ಆಗುವುದು. ಬಹಳ ಕಾಲದ ಹಿಂದೇ ಚಿಂತಿಸಿರುವ ಕೆಲಸವು ಇಂದು ಆರಂಭಿಸಲು ಚಿಂತಿಸುವಿರಿ. ಕಲಾಕ್ಷೇತ್ರದ ಜನರು ತಮ್ಮ ಜೀವನವನ್ನು ಒಂದಲ್ಲ‌ ಒಂದು ರೀತಿಯಲ್ಲಿ ಸಂಪತ್ತಿನಿಂದ ತುಂಬಿಕೊಳ್ಳುವರು. ಒಂದಿಲ್ಲೊಂದು ಅವಕಾಶಗಳು ನಿಮ್ಮ ಪಾಲಿಗೆ ಸಿಗಲಿದೆ. ಲಕ್ಷ್ಮೀ ಕಟಾಕ್ಷವು ಯಥೇಚ್ಛವಾಗಿ ಸಿಗುವುದು.

ವೃಶ್ಚಿಕ ರಾಶಿ: ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಉದ್ಯಮದ ವಿಸ್ತರಣೆಗೆ ಕೆಲವು ಕ್ರಮವನ್ನು ಕೈಗೊಳ್ಳುವಿರಿ. ಒಂದೇ ವಿಷಯದಲ್ಲಿ ನಿಮ್ಮ ಗಮನವು ಅಧಿಕವಾಗಿ ಇರಲಿದೆ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಗಳ ಹೆಚ್ಚಾಗುವಂತೆ ಮಾಡುವುದು. ಎಷ್ಟೇ ಚತುರ ಮತಿಗಳಾದರೂ ಎಡವುವ ಸಾಧ್ಯತೆ ಇದೆ. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯಲು ಬಯಸುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ‌ ಮಾತು ಸಂತೋಷವನ್ನು ಇಮ್ಮಡಿಗೊಳಿಸಬಹುದು. ವಿದ್ಯಾರ್ಥಿಗಳಿಗೆ ನಿಮ್ಮಿಂದ ಮಾರ್ಗದರ್ಶನ ಸಿಕ್ಕೀತು. ನಗುವು ನಿಮ್ಮ ಅಸ್ತ್ರವಾಗಲಿದೆ.

ಧನು ರಾಶಿ: ನಿಮಗೆ ಇದಮಿತ್ಥಂ ಎಂದು ಸರಿಯಾದ ನಿರ್ಧಾರವನ್ನು ತೆಗದುಕೊಳ್ಳಲು ನಿಮಗೆ ಆಗದು. ಒಂದು ಕಾರ್ಯಕ್ಕೆ ಹತ್ತಾರು ಆಲೋಚನೆಗಳು ಒಟ್ಟಿಗೇ ಬರುವ ಕಾರಣ ಹೀಗಾಗುವುದು. ದೈವಲೀಲೆಯ ಬಗ್ಗೆ ನಿಮಗೆ ನಂಬಿಕೆ ಹೆಚ್ಚಿರುವುದು. ಹಠದ ಸ್ವಭಾವವನ್ನು ಮಕ್ಕಳೂ ಮುಂದುವರಿಸಬಹುದು. ಅವರೆದುರು ನಕಾರಾತ್ಮಕ ಗುಣಗಳು ಬೇಡ. ತಂದೆ ಮತ್ತು ಮಕ್ಕಳ ನಡುವೆ ಶೀತಲ ಸಮರವು ನಡೆಯುವುದು. ತಾಳ್ಮೆಯ ಮಟ್ಟವು ಮಿತಿಮೀರುವ ಸಂದರ್ಭವು ಬರಬಹುದು. ಹಿತವಾದ ಆಹಾರವನ್ನು ಸ್ವೀಕರಿಸಿ. ಹಣಕಾಸಿನ‌ ವ್ಯವಹಾರದಲ್ಲಿ ವೈಮನಸ್ಯ ಉಂಟಾಗುವುದು. ಇಂದು ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು.

ಮಕರ ರಾಶಿ: ನಿಮ್ಮ ಆದಾಯದ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಆದಾಯಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ಉದ್ಯೋಗದ ಆರಂಭದ ದಿನಗಳು ನಿಮಗೆ ಕಷ್ಟ ಎಂದು ಅನ್ನಿಸಬಹುದು. ಸಹೋದ್ಯೋಗಿಗಳ ಸಹಾಯವನ್ನು ನೀವು ಪಡೆಯಬೇಕಾಗಬಹುದು. ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಹದ ತಪ್ಪಬಹುದು. ಮಾಡಬೇಕಾದ ಕೆಲಸಗಳನ್ನು ಆಸಕ್ತಿಯಿಂದ ಮಾಡುವಿರಿ. ನಿಮ್ಮ ಗೌಣ ವಿಚಾರಗಳು ನಿಮ್ಮ ಹಿತಶತ್ರುಗಳಿಂದ ಎಲ್ಲರಿಗೂ ಗೊತ್ತಾದೀತು. ಮಹಾವಿಷ್ಣುವಿಗೆ ಪಾಯಸ ನೈವೇದ್ಯವನ್ನು ಮಾಡುವಿರಿ.

ಕುಂಭ ರಾಶಿ: ನಿಮ್ಮ ತೊಂದರೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ವಿರೋಧಿಗಳು ಸಹಜವಾಗಿ ಕಡಿಮೆಯಾಗುವರು. ನೀವು ನಿಯೋಜಿತ ಕಾರ್ಯಗಳನ್ನು ಒಂದೊಂದಾಗಿ ಮಾಡಿ ಮುಗಿಸುವುದು ಉತ್ತಮ. ದಾಂಪತ್ಯದಲ್ಲಿ ಉಂಟಾದ ಕಲಹವು ಮಧ್ಯಸ್ತಿಕೆಯಿಂದ ಪರಿಹಾರವಾಗುವುದು. ಮಾಡಿದ ತಪ್ಒನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ಕಲಿತ ವಿದ್ಯೆಗಳು ಬಳಕೆಗೆ ಬರಲಿದೆ. ನಿಮ್ಮದಾದ ವಾಹನವಿಲ್ಲದೇ ನೀವು ಬೇಸರಿಸುವಿರಿ. ದೂರದ ಊರಿಗೆ ಪ್ರವಾಸ ಹೋಗುವ ಇಚ್ಛೆ ಇದ್ದರೂ ಅದು ಆಗದು. ನಿಮ್ಮ ಬಗ್ಗೆ ತಪ್ಪು ತಿಳಿವಳಿಕೆಯು ಬರಬಹುದು. ಶನೈಶ್ಚರನ ಪ್ರೀತ್ಯರ್ಥವಾಗಿ ಎಳ್ಳನ್ನು ದಾನ ಮಾಡಿ ದೋಷಗಳನ್ನು ಪರಿಹರಿಸಿಕೊಳ್ಳಿ.

ಮೀನ ರಾಶಿ: ಕಾನೂನಿನ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಬೆಳವಣಿಗೆಯು ಇರಲಿದೆ. ಮಕ್ಕಳ‌ ಜೊತೆ ವಾಗ್ವಾದ ಮಾಡುವ ಸಂದರ್ಭವು ಬರಬಹುದು. ಮನೆಯ ಬಗ್ಗೆ ಚಿಂತಿಸಿ ನೀವು ಸಮಸ್ಯೆಗಳನ್ನು ಬಗೆಹರಿಸಲಾಗದು. ಆಗಿಹೋದ ಘಟನೆಗಳು ನಿಮ್ಮ ಸ್ಮರಣೆಗೆ ಬರಲಿದ್ದು ಅದನ್ನು ಮರೆಯುವ ಪ್ರಯತ್ನ ಮಾಡಿದರೂ ಅಸಾಧ್ಯ ಎನಿಸಬಹುದು. ಮನಸ್ಸನ್ನು ಒಂದೇ ವಿಚಾರದಲ್ಲಿ ಮನಸ್ಸನ್ನು ನಿಲ್ಲಿಸಲು ಪ್ರಯತ್ನಿಸುವಿರಿ. ಕುಟುಂಬದ ವ್ಯವಸ್ಥೆಯನ್ನು ನಿಭಾಯಿಸಲು ನಿಮಗೆ ಕಷ್ಟವಾದೀತು. ಭವಿಷ್ಯದ ಬಗ್ಗೆ ಹತ್ತಾರು ಕನಸುಗಳು ಇರಲಿವೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ತೊಡಗುವುದು ಕಷ್ಟವಾದೀತು.

-ಲೋಹಿತಶರ್ಮಾ – 8762924271 (what’s app only)

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ