ಅಶ್ವಿನಿಯಿಂದ ಸ್ವಾತಿ ತನಕ ಹದಿನೈದು ನಕ್ಷತ್ರಗಳ ಗುಣ- ಸ್ವಭಾವ, ನಕ್ಷತ್ರಾಧಿಪತಿಯ ವಿವರ ಇಲ್ಲಿದೆ

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಇಪ್ಪತ್ತೇಳು ನಕ್ಷತ್ರಗಳಿವೆ. ಯಾವ ನಕ್ಷತ್ರದ ಗುಣ- ಸ್ವಭಾವ ಹೇಗೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಇದರ ಜತೆಗೆ ಆ ನಕ್ಷತ್ರದ ಅಧಿಪತಿ ಗ್ರಹ ಯಾವುದು ಅಂತಲೂ ತಿಳಿಸಲಾಗಿದೆ.  

ಅಶ್ವಿನಿಯಿಂದ ಸ್ವಾತಿ ತನಕ ಹದಿನೈದು ನಕ್ಷತ್ರಗಳ ಗುಣ- ಸ್ವಭಾವ, ನಕ್ಷತ್ರಾಧಿಪತಿಯ ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Aug 12, 2023 | 9:14 PM

ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಇಪ್ಪತ್ತೇಳು ನಕ್ಷತ್ರ (Nakshatras) ಗಳಿವೆ. ಆದರೆ ಈ ಲೇಖನದಲ್ಲಿ ಅಶ್ವಿನಿಯಿಂದ ಆರಂಭವಾಗಿ ಸ್ವಾತಿ ತನಕ ನೀಡಲಾಗಿದೆ. ಈ ಲೇಖನದಲ್ಲಿ ಯಾವ ನಕ್ಷತ್ರದ ಗುಣ- ಸ್ವಭಾವ ಹೇಗೆ ಎಂಬುದನ್ನು ವಿವರಿಸಲಾಗಿದೆ. ಇದರ ಜತೆಗೆ ಆ ನಕ್ಷತ್ರದ ಅಧಿಪತಿ ಗ್ರಹ ಯಾವುದು ಅಂತಲೂ ತಿಳಿಸಲಾಗಿದೆ.

ಅಶ್ವಿನಿ: ಈ ನಕ್ಷತ್ರದ ಅಧಿಪತಿ ಕೇತು. ಇದರಲ್ಲಿ ಜನಿಸಿದ ಸ್ತ್ರೀಯರೇ ಆಗಲಿ, ಪುರುಷರೇ ಆಗಲೀ ಇವರಿಗೆ ಅಲಂಕಾರ ಮಾಡಿಕೊಳ್ಳುವುದರಲ್ಲಿ ಬಹಳ ಆಸಕ್ತಿ ಇರುತ್ತದೆ. ಒಪ್ಪ- ಓರಣವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವ ಮಂದಿ ಇವರು. ಇತರರು ಹಾಗೇ ಇರಬೇಕು ಎಂದು ನಿರೀಕ್ಷೆಯನ್ನು ಸಹ ಮಾಡುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ಪುರುಷರು ಸ್ಫುರದ್ರೂಪಿಗಳು ಎಂಬ ಅಭಿಪ್ರಾಯ ಶಾಸ್ತ್ರಕಾರರಲ್ಲಿದೆ. ಶ್ರೀಮಂತಿಕೆ ಇರುತ್ತದೆ. ವಾದವೋ- ಜಗಳವೋ ಮಾಡುತ್ತಿದ್ದಾರೆಂದರೆ ತಮಗೆ ಗೆಲುವು ಸಿಗುವವರೆಗೆ ಬಿಡದ ಜನ ಇವರು. ಜನರನ್ನು ಇವರ ಮಾತುಗಳಿಂದ ಆಕರ್ಷಿಸುತ್ತಾರೆ. ತಮ್ಮನ್ನೇ ಅನುಸರಿಸುವಂತೆ ಮಾಡುತ್ತಾರೆ. ತಾವು ಹೇಳಬೇಕಾದ ಸಂಗತಿಯನ್ನು ಯಾವುದೇ ಮುಲಾಜು ನೋಡದೆ ನಿಷ್ಠುರವಾಗಿ ಹೇಳುತ್ತಾರೆ.

ಭರಣಿ: ಈ ನಕ್ಷತ್ರದ ಅಧಿಪತಿ ಶುಕ್ರ. ಇದರಲ್ಲಿ ಜನಿಸಿದವರು ಅಂದುಕೊಂಡ ಕೆಲಸವನ್ನು ಪಟ್ಟು ಬಿಡದೆ ಮಾಡುವಂಥವರು. ಅಂದರೆ, ದೃಢವಾದ ಮನಸ್ಸಿರುತ್ತದೆ. ಸತ್ಯವನ್ನು ಮಾತನಾಡುವುದಕ್ಕೆ ಇಷ್ಟ ಪಡುವಂಥವರು. ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಸುಖ ಪಡುವಂಥ ಯೋಗ ಇರುತ್ತದೆ. ಆದರೆ ಇವರು ತಂದೆ- ತಾಯಿಯಿಂದ ದೂರ ಇರಬೇಕಾದ ಸನ್ನಿವೇಶ ಎದುರಾಗುತ್ತದೆ. ಪುರುಷರಾದಲ್ಲಿ ಸ್ತ್ರೀಯರ ಬಗ್ಗೆ ಆಸಕ್ತಿ ಜಾಸ್ತಿ ಇರುತ್ತದೆ. ಅದೇನು ಮರೆವೋ ಅಥವಾ ಧೋರಣೆಯೋ ಇವರಿಗೆ ಉಪಕಾರ ಸ್ಮರಣೆ ಕಡಿಮೆ ಎಂಬುದು ಶಾಸ್ತ್ರಕಾರರ ಅಭಿಮತ.

ಕೃತ್ತಿಕಾ: ಈ ನಕ್ಷತ್ರದ ಅಧಿಪತಿ ರವಿ. ಇದರಲ್ಲಿ ಜನಿಸಿದವರಿಗೆ ಭೋಜನಾಸಕ್ತಿ ಜಾಸ್ತಿ. ಅಂದರೆ ಅಳತೆ ಮೀರಿ ಊಟ- ತಿಂಡಿ ಮಾಡುವಂಥವರು. ಇವರಿಗೆ ವಿವಾಹಕ್ಕೆ ಹೊರತಾದ ಸ್ತ್ರೀ ಸಂಗವನ್ನು ಸೂಚಿಸುತ್ತದೆ. ಪಾಪ ಕರ್ಮಾಸಕ್ತಿ, ಕೆಟ್ಟ ಮಾತುಗಳನ್ನು ಆಡುವವರು. ಇವರು ಸಾರ್ವಜನಿಕ ಜೀವನದಲ್ಲಿ ಇದ್ದರೆ ಪ್ರಭಾವಿಗಳಾಗಿರುತ್ತಾರೆ. ಸಣ್ಣ ಮಟ್ಟದಲ್ಲಾದರೂ ಸುಳ್ಳಾಡುವವರು ಇವರು. ಹಣಕಾಸಿನ ಅಗತ್ಯ ಇರುವಾಗ ಹೇಗಾದರೂ ಅದನ್ನು ಹೊಂದಿಸಿಕೊಳ್ಳಬಲ್ಲ ಚಾಕಚಾಕ್ಯತೆ ಇವರಲ್ಲಿ ಇರುತ್ತದೆ.

ಇದನ್ನೂ ಓದಿ: ವಿಶಾಖದಿಂದ ರೇವತಿಯ ತನಕ ಹನ್ನೆರಡು ನಕ್ಷತ್ರಗಳ ಗುಣ- ಸ್ವಭಾವ, ನಕ್ಷತ್ರಾಧಿಪತಿಯ ವಿವರ ಇಲ್ಲಿದೆ

ರೋಹಿಣಿ: ಈ ನಕ್ಷತ್ರದ ಅಧಿಪತಿ ಚಂದ್ರ. ಇದರಲ್ಲಿ ಹುಟ್ಟಿದವರಿಗೆ ಶುಚಿ- ಸ್ವಚ್ಛತೆಗೆ ಹೆಚ್ಚು ಆದ್ಯತೆ. ಮಾತುಗಳು ಸುಮಧುರವಾಗಿರುತ್ತವೆ. ಪ್ರಾಣಿಗಳ ಬಗ್ಗೆ ಭಾರೀ ಪ್ರೀತಿ ಇರುತ್ತದೆ. ಯಾವುದೇ ವಿಚಾರವನ್ನು ಒಮ್ಮೆ ನಿರ್ಧರಿಸಿಕೊಂಡ ಮೇಲೆ ಪದೇ ಪದೇ ಬದಲಾವಣೆ ಮಾಡದಂಥ ಸ್ವಭಾವದವರು. ಅಂದರೆ ಸ್ಥಿರವಾದ ಬುದ್ಧಿ ಇರುತ್ತದೆ. ಆದರೆ ಬೇರೆಯವರು ತಪ್ಪನ್ನು ಮಾಡಿದಾಗ ಕಾಲ, ಸ್ಳಳ ಮತ್ಯಾವುದೇ ಪರಾಮರ್ಶೆ ಮಾಡದೆ ನೇರವಾಗಿ ಹೇಳುವಂಥವರು.

ಮೃಗಶಿರಾ: ಈ ನಕ್ಷತ್ರದವರ ಅಧಿಪತಿ ಕುಜ. ಇದರಲ್ಲಿ ಜನಿಸಿದವರಿಗೆ ಚಂಚಲ ಚಿತ್ತ ಇರುತ್ತದೆ. ಯಾವುದೇ ಕಷ್ಟದ ಕೆಲಸ ವಹಿಸಿದರೂ ಅದೆಂಥ ಸವಾಲಿನದೇ ಆದರೂ ಕೆಲಸ ಪೂರ್ಣ ಮಾಡಿಕೊಂಡು ಬರುವಂಥ ಚಾತುರ್ಯ ಇವರಿಗೆ ಇರುತ್ತದೆ. ಲೈಂಗಿಕ ಆಸಕ್ತಿ ಜಾಸ್ತಿ ಇರುತ್ತದೆ. ಇದರರ್ಥ ನಕಾರಾತ್ಮಕವಾಗಿ ತೆಗೆದುಕೊಳ್ಳುವುದಲ್ಲ. ಯಾವುದಾದರೂ ವಿಷಯದಲ್ಲಿ ಪರಿಣತಿಯನ್ನು ಪಡೆಯುತ್ತಾರೆ. ಸಂಚಾರದಲ್ಲಿ ಸಂತೋಷವನ್ನು ಕಾಣುವಂಥವರು. ಆಗಿಂದಾಗ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಮೂರನೇ ವ್ಯಕ್ತಿಗೆ ತಲುಪದಂತೆ ವಿಷಯವನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವುದರಲ್ಲಿ ಚಾಣಾಕ್ಷರು. ಇವರಿಗೆ ತಮ್ಮ ಬಗ್ಗೆಯೇ ಒಂದು ರೀತಿ ಅಹಂಕಾರ ಇರುತ್ತದೆ.

ಆರಿದ್ರಾ: ಈ ನಕ್ಷತ್ರದ ಅಧಿಪತಿ ರಾಹು. ಇದರಲ್ಲಿ ಜನಿಸಿದವರು ಮನಸ್ಸಿನಲ್ಲಿ ಒಂದನ್ನು ಎಣಿಸುತ್ತಾರೆ, ಮಾತಿನಲ್ಲಿ ಇನ್ನೊಂದನ್ನು ಆಡುತ್ತಾರೆ ಹಾಗೂ ಅನುಷ್ಠಾನಕ್ಕೆ ತರುವುದು ಇನ್ನೇನೋ ಆಗಿರುತ್ತದೆ. ಇದರರ್ಥ ಈ ಪೈಕಿ ಯಾವುದಾದರೂ ಸರಿಯಾಗಿರಬಹುದು, ಅಥವಾ ಯಾವುದಾದರೂ ತಪ್ಪಾಗಬಹುದು. ವಸ್ತುಗಳ ಖರೀದಿ- ಮಾರಾಟದ ವಿಚಾರದಲ್ಲಿ ಇವರು ನಿಪುಣರು.ಆರೋಗ್ಯ ಇವರಿಗೆ ಆಗಾಗ ಕೈ ಕೊಡುತ್ತದೆ. ವಿನಾಕಾರಣ ಆದರೂ ಶೋಕ ಪಡುವಂಥ ಜನರಿವರು. ಈ ನಕ್ಷತ್ರದಲ್ಲಿ ಹುಟ್ಟಿದವರು ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.

ಪುನರ್ವಸು: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಗುರು. ಇವರು ಎಂಥ ಅನುಕೂಲಸ್ಥರೇ ಅಗಿದ್ದರೂ ಕಷ್ಟಗಳನ್ನು ಸಹಿಸಿಕೊಳ್ಳುವಂಥ ಸಹಿಷ್ಣುತೆ ಇರುತ್ತದೆ. ನೈತಿಕವಾಗಿ ಬದುಕುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂಥ ಜನರು ಇವರು. ಎಷ್ಟು ಕಡಿಮೆ ಆದಾಯ ಇದ್ದರೂ ಅದರಲ್ಲೇ ತೃಪ್ತಿ ಕಾಣುವಂಥವರು. ಕವಿ ಮನಸ್ಸಿನವರು. ಸಂಗಾತಿಯನ್ನು ಅದ್ಭುತವಾಗಿ ರಮಿಸುವಂಥವರು. ಶಾಸ್ತ್ರಗಳಲ್ಲಿ ನಂಬಿಕೆ ಇರುವಂಥವರು. ಭೂಮಿಯ ಮೂಲಕ ಧನವನ್ನು ಸಂಪಾದಿಸುವಂಥವರು. ತುಂಬ ದೊಡ್ಡ ಸಂಸಾರ ಅಥವಾ ಕೂಡು ಕುಟುಂಬದಲ್ಲಿ ಇರುವಂಥವರು.

ಪುಷ್ಯ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಶನಿ. ಇದರಲ್ಲಿ ಜನಿಸಿದವರು ಶಾಂತ ಚಿತ್ತದವರಾಗಿರುತ್ತಾರೆ.ಗುಣ ಸಂಪನ್ನರಾಗಿರುತ್ತಾರೆ. ವಿವಿಧ ಶಾಸ್ತ್ರಗಳ ಪ್ರವೇಶ, ಪರಿಚಯ ಇವರಿಗೆ ಇರುತ್ತದೆ. ಉಚ್ಚಾರಣೆ ಸ್ವಷ್ಟವಾಗಿ ಇರುತ್ತದೆ. ಮಕ್ಕಳಿಂದ ಸಂತೋಷ ಪಡುವ ಯೋಗ ಇವರದಾಗಿರುತ್ತದೆ. ದೇವತಾ ಆರಾಧನೆಯಲ್ಲಿ ಬಹಳ ಭಕ್ತಿಯಿಂದ ತೊಡಗಿಕೊಳ್ಳುವಂಥವರು. ಧರ್ಮಾಚರಣೆಯಲ್ಲಿ ನಂಬಿಕೆ, ಶ್ರದ್ಧೆ ಇರುವಂಥವರು. ಪ್ರಮುಖ ರಾಜಕೀಯ ಹುದ್ದೆಗಳಲ್ಲಿ ಇರುವಂಥವರಿಗೆ ಆಪ್ತರಾಗಿರುತ್ತಾರೆ.

ಇದನ್ನೂ ಓದಿ: Zodiac Sign: ಶುಚಿಗೊಳಿಸುವಿಕೆಯನ್ನು ಇಷ್ಟಪಡುವ ಟಾಪ್ 5 ರಾಶಿಯವರು

ಆಶ್ಲೇಷಾ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಬುಧ. ನಿಷ್ಠುರವಾದಿಗಳಾಗಿರುತ್ತಾರೆ. ತಮಗೆ ಅನಿಸಿದ್ದನ್ನು ಹೇಳಿಬಿಡುವ ಇವರು, ಅದರ ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ಮಟ್ಟಿಗೆ ಸ್ವಾರ್ಥಿಗಳಾಗಿ ಇರುತ್ತಾರೆ, ಇತರರ ಬಗ್ಗೆ ಆಲೋಚನೆ ಮಾಡುವಂಥವರಲ್ಲ. ಏನೂ ಉಪಯೋಗ ಅಂತಿಲ್ಲದಿದ್ದರೂ ಸಂಚಾರ ಮಾಡುವಂಥವರು, ಖರ್ಚಿನ ಮೇಲೆ ಹಿಡಿತ ಇಲ್ಲದಂಥವರು. ಸಮಾಜದ ದೃಷ್ಟಿಯಿಂದ ಯಾವ ಕೆಲಸ ಕೆಟ್ಟದ್ದು ಎಂದಿರುತ್ತದೋ ಅದನ್ನು ಮಾಡುವುದಕ್ಕೆ ಹಿಂಜರಿಕೆ ಇಲ್ಲದವರು.

ಮಖಾ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಕೇತು ಎಂಥ ಶತ್ರುವಿನ ಸಿಟ್ಟನ್ನಾದರೂ ಸಮಾಧಾನ ಪಡಿಸುವಂಥ ಸಾಮರ್ಥ್ಯ ಇರುವಂಥವರು. ಇವರ ಜೀವಿತ ಕಾಲಾವಧಿಯಲ್ಲಿ ನಾನಾ ಬಗೆಯ ಭೋಗಗಳನ್ನು ಅನುಭವಿಸುತ್ತಾರೆ. ಸೇವಕರಿಂದ ಸೇವೆಗಳನ್ನು ಪಡೆಯುವ ಯೋಗ ಇವರ ಪಾಲಿಗೆ ಇರುತ್ತದೆ. ಸಂಗಾತಿಯ ಮಾತಿಗೆ ಮನ್ನಣೆ ನೀಡುವಂಥವರು. ಸರ್ಕಾರ ಮಟ್ಟದಲ್ಲಿ ಇವರ ಮಾತಿಗೆ, ಶಿಫಾರಸಿಗೆ ಗೌರವ ಇರುವಂಥ ಹುದ್ದೆಯನ್ನು ಪಡೆಯುವಂಥವರು. ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸುತ್ತಾರೆ. ಮಾತಾ- ಪಿತೃ ಭಕ್ತಿ, ದೈವ ಭಕ್ತಿ ಹೆಚ್ಚಾಗಿ ಇರುತ್ತದೆ.

ಪುಬ್ಬಾ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಶುಕ್ರ. ಸೊಗಸಾದ ಮಾತುಗಾರರು. ಶ್ರೀಮಂತರಿಗೆ ಅಗತ್ಯ ಇರುವ ಕೆಲಸಗಳನ್ನು ಮಾಡಿಕೊಡುತ್ತಾ ಆ ಮೂಲಕವಾಗಿ ಸಮಪಾದನೆ ಮಾರ್ಗ ಮಾಡಿಕೊಳ್ಳುವಂಥವರು. ಇವರಿಗೆ ಸಮಯಕ್ಕೆ ಸರಿಯಾಗಿ ಆಡಬೇಕಾದ ಮಾತು, ನಡವಳಿಕೆ ತುಂಬ ಚೆನ್ನಾಗಿ ಗೊತ್ತಿರುತ್ತದೆ. ಈ ನಕ್ಷತ್ರದ ಪುರುಷರು ಬಹಳ ಆಕರ್ಣೀಯವಾಗಿ ಇರುತ್ತಾರೆ. ವಿಷಯ ಪರಿಣತರಿಂದ ಮಾನ್ಯತೆಯನ್ನು ಪಡೆಯುತ್ತಾರೆ.

ಉತ್ತರಾ ಫಲ್ಗುಣಿ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ರವಿ. ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ವಿದ್ಯೆಗೆ ತುಂಬ ಪ್ರಾಮುಖ್ಯ ನೀಡುತ್ತಾರೆ. ಸ್ವತಃ ಇವರಿಗೆ ವಿವಿಧ ವಿಷಯಗಳ ಬಗ್ಗೆ ಆಳವಾದ ಜ್ಞಾನ, ಮಾಹಿತಿ ಇರುತ್ತದೆ. ವಾಹನ, ಸಕಲ ಸವಲತ್ತುಗಳಿಂದ ಕೂಡಿರುವ ಮನೆ, ನೆಮ್ಮದಿವಂತ ಕುಟುಂಬದ ಹಿನ್ನೆಲೆ ಇವರಿಗಿರುತ್ತದೆ. ಯಾರಾದರೂ ಇವರಿಗೆ ಸಹಾಯ ಮಾಡಿದಲ್ಲಿ ಉಪಕಾರ ಸ್ಮರಣೆ ಇರುತ್ತದೆ. ಇತರರನ್ನು ಸಂತೋಷ ಪಡಿಸುವುದನ್ನು ಇಷ್ಟ ಪಡುವಂಥವರು ಇವರು.

ಹಸ್ತಾ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಚಂದ್ರ. ಸದಾ ಉತ್ಸಾಹದಿಂದ ಕಂಡು ಬರುತ್ತಾರೆ. ಆಗಾಗ ಏನಾದರೂ ತಿನ್ನುತ್ತಲೇ ಇರುವ, ಪಾನೀಯಗಳನ್ನು ಸೇವಿಸುವುದಕ್ಕೆ ಬಯಸುವಂಥ ಜನ ಇವರು. ಇತರರ ತಪ್ಪುಗಳನ್ನು ಮರೆಯದ, ಕ್ಷಮಿಸದ ಸ್ವಭಾವದವರು. ಹಣ ಕೈಯಲ್ಲಿ ಇರಬೇಕು, ಅಂದರೆ ಹೂಡಿಕೆಗೆ ಎಷ್ಟು ಪ್ರಾಶಸ್ತ್ಯ ನೀಡುತ್ತಾರೋ ಇಲ್ಲವೋ ಅಗತ್ಯ ಬಂದಾಗ ತಕ್ಷಣವೇ ಹಣ ಒದಗಿಬರಬೇಕು ಎಂದು ಯೋಜನೆ ರೂಪಿಸುತ್ತಾರೆ. ಹೊಸ ಹಾಗೂ ಸವಾಲಿನ ಕೆಲಸಗಳನ್ನು ಮಾಡುವುದರಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಸಮಸ್ಯೆಗಳು ಬಂದಾಗ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದರಲ್ಲಿ ನಿಸ್ಸೀಮರು.

ಚಿತ್ತಾ: ಈ ನಕ್ಷತ್ರದವರ ಅಧಿಪತಿ ಕುಜ. ಅಂತರಂಗ ಹೀಗೇ ಎಂದು ಅಂದಾಜಿಸುವುದೇ ಕಷ್ಟ. ಚಿತ್ರ ವಿಚಿತ್ರವಾದ ಉಡುಗೆ- ತೊಡುಗೆಗಳು, ಆಭರಣಗಳನ್ನು ಧರಿಸುವುದಕ್ಕೆ ಇಷ್ಟ ಪಡುವಂಥ ಜನರಿವರು. ಯಾವುದೇ ಕಾರಣಕ್ಕೂ ಎಷ್ಟೇ ಹತ್ತಿರದವರಿಗೂ ಗುಟ್ಟನ್ನು ಬಿಟ್ಟುಕೊಡದ ಸ್ವಭಾವದವರು. ದೈಹಿಕವಾಗಿ ಸ್ವಲ್ಪ ಮಟ್ಟಿಗೆ ಬಲ ಕಡಿಮೆ ಇರುತ್ತದೆ. ಮಾತನಾಡುವ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಂಥವರು. ಇವರಿಗೆ ದೈವ ಭಕ್ತಿ ಹೆಚ್ಚಾಗಿರುತ್ತದೆ.

ಸ್ವಾತಿ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ರಾಹು ಅಧಿಪತಿ. ಎಷ್ಟು ಸಮಯವಾದರೂ ಕಾದು ತಮ್ಮ ಕೆಲಸವನ್ನು ಮುಗಿಸಿಕೊಳ್ಳುವಂಥ ಸಂಯಮ, ತಾಳ್ಮೆ ಇರುತ್ತದೆ. ಒಮ್ಮೆ ಬೇಡ ಅಂದುಕೊಂಡಿದ್ದರ ಕಡೆಗೆ ಮತ್ತೆ ತಲೆ ಹಾಕಿಯೂ ಮಲಗದಂಥ ಕಾಠಿಣ್ಯ ಇವರಲ್ಲಿ ಕಾಣಬಹುದು. ತಮ್ಮ ಪ್ರಿಯವಾದ ಮಾತುಗಳ ಮೂಲಕ ಎಲ್ಲ ಸ್ತರ, ವರ್ಗದ ಸ್ನೇಹಿತರನ್ನು ಹೊಂದಿರುತ್ತಾರೆ. ಯಜ್ಞ- ಯಾಗ, ದೊಡ್ಡ ದೊಡ್ಡ ದೇವತಾ ಆರಾಧನೆಯಲ್ಲಿ ಇವರು ಭಾಗೀ ಆಗುತ್ತಾರೆ. ಧರ್ಮಾಕರ್ಮಗಳ ವಿವೇಚನೆ ಇವರಲ್ಲಿ ಹೆಚ್ಚಾಗಿರುತ್ತದೆ.

Published On - 9:41 pm, Fri, 11 August 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು