Horoscope: ದಿನಭವಿಷ್ಯ, ಬಹಳ ಪ್ರಯತ್ನದ ಫಲವಾಗಿ ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಬರಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 13, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಬಹಳ ಪ್ರಯತ್ನದ ಫಲವಾಗಿ ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಬರಲಿದೆ
ಜ್ಯೋತಿಷ್ಯ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ ಸಂಜೆ 02:00 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:57 ರಿಂದ 12:29ರ ವರೆಗೆ.

ಸಿಂಹ ರಾಶಿ : ನಿಮ್ಮ ಉತ್ಪಾದನೆಯು ಆದಾಯಕ್ಕಿಂತ ನೆಮ್ಮದಿಯನ್ನು ಹೆಚ್ಚು ಕೊಡುವುದು. ಪ್ರಭಾವಿ ಜನರ ಸಂಸರ್ಗದಿಂದ ಹೊಸ ಆಯಾಮವು ತೆರೆದುಕೊಳ್ಳುವುದು. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ನಿಮ್ಮದು ಉದ್ದೇಶಪೂರ್ವಕ ಆಡಿದ ಮಾತಾಗಿದ್ದು ಸಮಸ್ಯೆಗಳನ್ನು ಎದುರಿಸಬೇಕಾದೀತು. ಇರುವ ಕಾರ್ಯವನ್ನೇ ಸರಿಯಾಗಿ ಮಾಡಿ ಆದಾಯವು ಹೆಚ್ಚಾಗುವಂತೆ ಮಾಡಿಕೊಳ್ಳಿ. ಕೋಪವು ಬಂದರೂ ವ್ಯಕ್ತಪಡಿಸದೇ ಸುಮ್ಮನಿದ್ದು ನುಂಗಿಕೊಳ್ಳುವಿರಿ. ನಾಲಿಗೆ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಕೆಲವು ಸಮಯವನ್ನು ಕಳೆಯುವ ಮನಸ್ಸಾಗುವುದು. ದೂರಪ್ರಯಾಣವನ್ನು ಇಂದು ರದ್ದು ಮಾಡಿರಿ.

ಕನ್ಯಾ ರಾಶಿ : ಕೃಷಿಗೆ ಸಂಬಂಧಿಸಿದ ನೂತನ ಅನ್ವೇಷಣೆಯನ್ನು ಮಾಡುವ ಹೊಸ ಆಲೋಚನೆಯನ್ನು ಮಾಡುವಿರಿ. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ನಿಮ್ಮ ದುರಾಲೋಚನೆಗೆ ಸ್ನೇಹಿತರು ಅಡ್ಡಿ ಮಾಡುವರು. ಶತ್ರುವಿನ ಬಲವನ್ನು ನಿಯಂತ್ರಿಸಲು ಸಿದ್ಧತೆ ನಡೆಸುವಿರಿ. ನಿಮ್ಮ ದುಃಖಕ್ಕೆ ಬಂಧುಗಳಿಂದ ಸಾಂತ್ವನವು ಸಿಗುವುದು. ಸಿಕ್ಕಿದ್ದರಲ್ಲಿ ಸುಖ ಪಡುವುದನ್ನು ಬೆಳೆಸಿಕೊಳ್ಳುವಿರಿ. ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಬೇಡ. ಸ್ನೇಹಿತರು ನೆಚ್ಚುವ ಕಾರ್ಯವನ್ನು ಮಾಡುವಿರಿ.

ತುಲಾ ರಾಶಿ : ಚರಾಸ್ತಿಯು ಅನ್ಯರ ಪಾಲಾಗಬಹುದು. ಅವಶ್ಯಕ ವಸ್ತುಗಳನ್ನು ನೀವು ಕಳೆದುಕೊಳ್ಳುವಿರಿ‌. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಹೇಳಬೇಕಾದ್ದನ್ನು ಹೇಳದೇ ‌ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಪ್ರೇಮಿಯನ್ನು ನೀವು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಾಗುವುದು. ಸಣ್ಣ ವಿರಸವೂ ದೂರಾಗಲು ಕಾರಣವಾಗಬಹುದು. ದುಃಸ್ವಪ್ನವು ನಿಮ್ಮನ್ನು ಕಾಡಬಹುದು. ಸಮಾರಂಭಗಳಿಗೆ ಭೇಟಿ ಕೊಡುವಿರಿ.

ವೃಶ್ಚಿಕ ರಾಶಿ : ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಹೋದ್ಯೋಗಿಗಳ‌ ಸಹಕಾರವು ನಿಮಗೆ ಸಿಗಲಿದೆ. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು. ವಾಹನ ಚಾಲನೆಗೆ ಅತ್ಯುತ್ಸಾಹವಿದ್ದರೂ ಎಚ್ಚರಿಕೆಯನ್ನು ಹೆಚ್ಚು ಇಟ್ಟುಕೊಳ್ಳುವುದು ಮುಖ್ಯ. ಖಾಸಗಿ ಸಂಸ್ಥೆಯು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸಬಹುದು‌. ಬಹಳ ಪ್ರಯತ್ನದ ಫಲವಾಗಿ ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಬರಲಿದೆ. ಅತಿಯಾದ ಉದ್ಯೋಗದ ಬದಲಾವಣೆಯನ್ನು ಮಾಡುವುದು ಬೇಡ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನವಿರದೇ ಸಂಪಾದನೆಯ ಕಡೆ ಅಧಿಕ ಗಮನವಿರುವುದು.