Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 13ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 13ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 13ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Sep 13, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 13ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಒಂದೇ ವಿಚಾರಕ್ಕೆ, ಕೆಲಸಕ್ಕೆ ಬಹಳ ಸಲ ಪ್ರಯತ್ನ ಪಡಬೇಕಾಗುತ್ತದೆ. ನಿಮ್ಮ ಏಕಾಗ್ರತೆ, ಶ್ರಮಕ್ಕೆ ಸವಾಲು ಎನಿಸುವಂಥ ಅಡೆ-ತಡೆಗಳು ಎದುರಾಗಲಿವೆ. ನೀವು ತುಂಬ ಗೌರವಿಸುವಂಥ ವ್ಯಕ್ತಿಯ ನೆರವಿನಿಂದಾಗಿ ಅಲ್ಪ ಪ್ರಮಾಣದಲ್ಲಿ ಮಾನಸಿಕವಾಗಿ ನೆಮ್ಮದಿ ಸಿಗಬಹುದು. ಕುಟುಂಬದಲ್ಲಿ ನಿಮಗೆ ಪ್ರೀತಿ- ವಾತ್ಸಲ್ಯದ ವಿಚಾರವನ್ನೇ ಮುಂದಿಟ್ಟುಕೊಂಡು, ಉತ್ತರಿಸುವುದಕ್ಕೆ ಸಾಧ್ಯವಿಲ್ಲದಂಥ ಪ್ರಶ್ನೆಗಳನ್ನು ಕೇಳಬಹುದು. ಸಿಟ್ಟಾಗದಂತೆ ಉತ್ತರಿಸುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸೋದರ ಸಂಬಂಧಿಗಳ ಮನೆಗೆ ತೆರಳುವಂಥ ಯೋಗ ಇದೆ. ಶುಭ ಕಾರ್ಯಗಳಲ್ಲಿ ಭಾಗೀ ಆಗಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸಿ ಯಾವುದಾದರೂ ಖರ್ಚು ಮಾಡುತ್ತಿದ್ದೀರಿ ಎಂದಾದಲ್ಲಿ ವಿವೇಚನೆ ಇಟ್ಟುಕೊಂಡು ವೆಚ್ಚ ಮಾಡಿ. ಭಾವನಾತ್ಮಕವಾಗಿ ಯಾವುದೇ ಮಾತನ್ನು ನೀಡುವುದಕ್ಕೆ ಹೋಗಬೇಡಿ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಫಲಿತಾಂಶ ನೀಡುವುದು ಕಷ್ಟ ಆಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಬ್ಯಾಂಕಿಂಗ್ ವ್ಯವಹಾರಗಳು ಸರಾಗವಾಗಿ ಮಾಡುವುದಕ್ಕೆ ಸಾಧ್ಯವಾಗಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಬಹುದು. ನೀವೇ ಆ ಕೆಲಸಕ್ಕೆ ತೆರಳುವುದಕ್ಕೆ ಮೀನ- ಮೇಷ ಎಣಿಸುವಂತೆ ಆಗಲಿದೆ. ನಿಮಗಿಂತ ಅನುಭವಿಗಳು ಹೇಳುವ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ನೀರು ಸೇವನೆ ಮಾಡುವಾಗ ಸ್ವಚ್ಛತೆ ಕಡೆಗೆ ಜಾಸ್ತಿ ಲಕ್ಷ್ಯವನ್ನು ನೀಡಿ. ಇಲ್ಲದಿದ್ದರೆ ಅಲರ್ಜಿ ಆಗಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಧಾನವಾಗಿ ಕೆಲಸ ಆಗಲಿ, ಪರವಾಗಿಲ್ಲ ಎಂದವರು ಏಕಾಏಕಿ ಆತುರ ಮಾಡುವುದಕ್ಕೆ ಆರಂಭಿಸಲಿದ್ದಾರೆ. ನಿಮಗೆ ಒತ್ತಡ ಹೆಚ್ಚಾಗಲಿದೆ. ಸಾಲ ನೀಡಿದವರು ಸಹ ಈಗಲೇ ಬೇಕು ಎಂದು ನಿಮ್ಮ ಬಳಿ ಕೇಳಬಹುದು. ಯಾರಿಂದ ದೂರ ಇರಬೇಕು ಎಂದು ಅಂದುಕೊಂಡಿರುತ್ತೀರೋ ಅವರ ಜತೆಗೆ ಪ್ರಯಾಣ ಮಾಡಬೇಕಾದ, ಒಟ್ಟಾಗಿ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಈ ದಿನ ತುಂಬ ಧೈರ್ಯ ಮಾಡಿ, ತೆಗೆದುಕೊಂಡ ನಿರ್ಧಾರದಿಂದ ಒಳ್ಳೆ ಫಲಿತಾಂಶ ಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಪ್ರೀತಿಪಾತ್ರರ ಜತೆಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಹಳೇ ಪ್ರೇಮ ಪ್ರಕರಣಗಳು ನೆನಪಾಗಬಹುದು ಅಥವಾ ಪ್ರೀತಿಸಿದವರನ್ನು ಭೇಟಿ ಆಗುವಂಥ ಸಾಧ್ಯತೆಗಳು ಸಹ ಇವೆ. ಇತರರಿಗೆ ಕ್ಲಿಷ್ಟ ಎನಿಸಿದ ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸಲಿದ್ದೀರಿ. ಕ್ರೀಡಾಪಟುಗಳಿಗೆ ಪ್ರಾಯೋಜಕರು ದೊರೆಯಬಹುದು. ಅಥವಾ ಪ್ರತಿಷ್ಠಿತ ಸಂಸ್ಥೆಗಳು ಉದ್ಯೋಗವನ್ನು ನೀಡುವ ಮೂಲಕ ಪ್ರೋತ್ಸಾಹಿಸುವುದಾಗಿ ಭರವಸೆ ನೀಡಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹಣಕಾಸಿನ ವಿಚಾರಗಳು ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ಎಫ್ ಡಿ ಮಾಡಿದಲ್ಲಿ ಅದನ್ನು ಮುರಿಸಬೇಕಾಗಬಹುದು. ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದ್ದು, ಅಡುಗೆ ಕಾಂಟ್ರಾಕ್ಟ್ ಮಾಡಿಸುವಂಥವರಿಗೆ ದೊಡ್ಡ ಆರ್ಡರ್ ದೊರೆಯುವಂಥ ಯೋಗ ಇದೆ. ಸಂಕಟ ಹೇಳಿಕೊಂಡು ಸಂಬಂಧಿಕರು ಬರುವಂಥ ಸಾಧ್ಯತೆ ಇದೆ. ನಿಮ್ಮಿಂದ ಸಾಧ್ಯವಾದಲ್ಲಿ ಅವರಿಗೆ ಸಹಾಯ ಮಾಡಿ, ಭವಿಷ್ಯದಲ್ಲಿ ನಿಮಗೆ ಅವರಿಂದ ಉಪಕಾರ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಾನಷ್ಟೇ ಯಾಕೆ ಹೀಗೆ ಆಲೋಚನೆ ಮಾಡುತ್ತಿದ್ದೀನಿ ಎಂಬಂಥ ಸ್ಥಿತಿ ಈ ದಿನ ನಿಮ್ಮದಾಗಿರಲಿದೆ. ಮಿಶ್ರ ಭಾವನೆಗಳಿಂದ ಕೂಡಿರುತ್ತದೆ. ನೇರಾನೇರ ಮಾತನಾಡಿ ಬಿಡೋಣ ಎಂದೆನಿಸುವುದು ಒಂದು ಕಡೆಯಾದರೆ, ಬೇಡ ಸಮಾಧಾನದಿಂದ ಉತ್ತರಿಸುವುದಕ್ಕೆ ಪ್ರಯತ್ನಿಸೋಣ ಎಂದು ಮತ್ತೊಂದು ಸಲ ಅನಿಸಲಿದೆ. ನಿಮ್ಮೊಳಗೆ ಸಂಶಯ ಮೂಡಿಸುತ್ತಿದ್ದಲ್ಲಿ ಹಿರಿಯರು, ಅನುಭವಿಗಳ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನವ ದಂಪತಿಗೆ ಉತ್ತಮವಾದ ಸಮಯವಿದು. ಇನ್ನು ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿಯನ್ನು ಕೇಳುವ ಯೋಗ ಇದೆ. ನೀವು ಈ ಹಿಂದೆ ಬಂಡವಾಳ ತರುವುದಕ್ಕೆ ಪ್ರಯತ್ನ ಮಾಡಿದ್ದಲ್ಲಿ ಈ ದಿನ ಅದಕ್ಕೆ ಉತ್ತರ ಬರಬಹುದು. ಹಳೇ ಸ್ನೇಹಿತರು- ಸ್ನೇಹಿತೆಯರ ಭೇಟಿಯಿಂದ ಹೊಸ ಉತ್ಸಾಹ ಮೂಡಲಿದೆ. ಸಣ್ಣ ಮಟ್ಟದ ಆದಾಯ ಅಷ್ಟೇ ಬರಬಹುದು ಎಂದುಕೊಂಡಿದ್ದರಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮೊತ್ತ ಸಿಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಉದ್ಯೋಗ, ವೃತ್ತಿಗೆ ಸಂಬಂಧಿಸಿದ ಸ್ಥಳದಲ್ಲಿ ನಿಮ್ಮ ಪ್ರಾಮುಖ್ಯ ಹೆಚ್ಚಾಗಲಿದೆ. ಒಂದೇ ಸಲಕ್ಕೆ ಹೊಸ ಕೆಲಸಗಳಲ್ಲಿ ಇತರರಿಗಿಂತ ತುಂಬ ಚೆನ್ನಾಗಿ ನೀವು ಹೊಂದಿಕೊಳ್ಳಲಿದ್ದೀರಿ. ನಿಮ್ಮ ಈ ಹೊಂದಿನ ಶ್ರಮವನ್ನು ಗುರುತಿಸಿ, ಒಂದೋ ಸಂಬಳ ಹೆಚ್ಚು ಮಾಡಬಹುದು. ಅಥವಾ ಉನ್ನತ ಹುದ್ದೆಗೆ ನಿಮ್ಮ ಹೆಸರನ್ನು ಸೂಚಿಸುವಂಥ ಸಾಧ್ಯತೆ ಸಹ ಇದೆ. ಏನೇ ನಿರ್ಧಾರ ಮಾಡುವ ಮುನ್ನ ಸಾವಧಾನವಾಗಿ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ.