ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೇವತೀ, ಯೋಗ: ಧ್ರುವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 22ಕ್ಕೆ, ರಾಹು ಕಾಲ ಬೆಳಗ್ಗೆ 09:23 – 10:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:52 – 03:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:23 – 07:53ರ ವರೆಗೆ.
ಸಿಂಹ ರಾಶಿ: ಬೇಗ ಶಮನವಾಗುವ ಗಾಯವನ್ನು ಮತ್ತೆ ಮತ್ತೆ ಕೆರೆದು ಗಾಯ ಮಾಡಿಕೊಳ್ಳುವುದು ಸರಿಯಾಗದು. ತಾತ್ಕಾಲಿಕ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಸ್ತ್ರೀಯರಿಂದ ನಿಮಗೆ ಸಂತೋಷವು ಸಿಗುವುದು. ಉಡುಗೊರೆಯನ್ನು ಪಡೆಯಲು ನೀವು ನಿರಾಕರಿಸುವಿರಿ. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡಬಹುದು. ವಿವಾಹ ವಿಚಾರವನ್ನು ನೀವು ಏನಾದರೂ ಹೇಳಬಹುದು. ಇಂದು ನಿಮಗೆ ಮಕ್ಕಳ ಮೇಲೆ ಮೋಹವು ಅಧಿಕವಾಗಲಿದೆ.
ಕನ್ಯಾ ರಾಶಿ: ಪ್ರಯತ್ನಿಸಿದ ಕಾರ್ಯದಲ್ಲಿ ಪೂರ್ಣ ಜಯವು ಸಿಗದೇ ಹೋಗುವುದು. ಬುದ್ಧಿವಂತಿಕೆ ವ್ಯವಹಾರದಿಂದ ಲಾಭವು ಸ್ವಲ್ಪ ಆಗಬಹುದು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಇರುವುದು. ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ. ಆದಷ್ಟು ಒಬ್ಬರಾದರೂ ಸುಮ್ಮನಿದ್ದರೆ ಕಲಹವು ಶಾಂತವಾಗುವುದು. ಉತ್ತಮ ವಸ್ತುಗಳು ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ. ಮನೆಯ ಶುಭ ಕಾರ್ಯಗಳಿಗೆ ನಿಮ್ಮಿಂದ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳ ಕಾರ್ಯದ ವೇಗವನ್ನು ನೀವು ಹೆಚ್ಚಿಸುವಿರಿ. ನಿಮ್ಮ ಮೇಲೆ ಯಾರದ್ದಾದರೂ ಪ್ರಭಾವವು ಉಂಡಾಗುವುದು. ಕೆಲವು ಕಹಿಯಾದ ಘಟನೆಗಳನ್ನು ಮರೆತು ಮುಂದೆಹೋಗುವುದು ಉತ್ತಮ. ತಪ್ಪಿಗೆ ಕ್ಷಮೆ ಕೇಳಿ ದೊಡ್ಡವರಾಗುವಿರಿ.
ತುಲಾ ರಾಶಿ: ನಿಮ್ಮ ಬಗ್ಗೆಯೇ ನೀವು ಕೊಚ್ಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಇಂದು ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ಕಲೆಗೆ ಸಂಬಂಧಿಸಿದಂತೆ ನೀವು ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಮತ್ತೋಬ್ಬರಿಗೆ ಹೇರುವುದು ಬೇಡ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಮನೆಯಲ್ಲಿ ನಿಮಗೆ ಕಳ್ಳತನದ ಭಯವು ಇರುವುದು. ಕೃಷಿಯಲ್ಲಿ ನೀವು ಅಂದುಕೊಂಡಷ್ಟು ಆದಾಯ ಸಿಗದೇ ಸ್ವಲ್ಪಮಟ್ಟಿಗೆ ನಷ್ಟವಾಗುವುದು. ಅನುಭವಿಗಳ ಮಾರ್ಗದರ್ಶನವು ನಿಮಗೆ ಇಂದು ಸಿಗುವುದು. ಹೊಸ ವ್ಯಕ್ತಿಗಳ ಪರಿಚಯವು ನಿಮಗೆ ಹೊಸ ಉತ್ಸಾಹವನ್ನು ಕೊಡುವುದು.
ವೃಶ್ಚಿಕ ರಾಶಿ: ಶತ್ರುಗಳಿಗೆ ಕಡಿವಾಣ ಹಾಕಲು ನೀವು ಹಣವನ್ನು ಖರ್ಚು ಮಾಡುವಿರಿ. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ಅಪರಿಚಿತರ ಜೊತೆ ಸಿಕ್ಕಿ ಮಾನಸಿಕ ಹಿಂಸೆಯನ್ನು ಪಡುವಿರಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಸ್ನೇಹಿತರು ನಿಮ್ಮ ಬಳಿ ಆರ್ಥಿಕ ಸಹಾಯವನ್ನು ಕೇಳುವರು. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು. ಇನ್ನೊಬ್ಬರ ಆದಾಯಕ್ಕೆ ಕುತ್ತು ತರುವುದು ಸರಿಯಲ್ಲ. ಎಂದೋ ಮಾಡಿದ ಉಪಕಾರವು ನಿಮಗೆ ಇಂದು ವರವಾಗಿ ಬರಬಹುದು. ನಾಚಿಕೆಯ ಸ್ವಭಾವವು ನಿಮ್ಮ ಅವಕಾಶಗಳನ್ನು ಹಾಳುಮಾಡಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ