
ನಿಮಗೆ ಸಾಧ್ಯವಿರುವ ಕಾರ್ಯಗಳನ್ನು ಮಾತ್ರ ಮಾಡಿ. ಪಾಲುದಾರಿಕೆಯಲ್ಲಿ ಉಂಟಾದ ಗೊದಲ್ಲವನ್ನು ಬಗೆಹರಿಸಿಕೊಂಡು ಮೈತ್ರಿ ಮಾಡಿಕೊಂಡರೆ ಇಬ್ಬರಿಗೂ ಅನುಕೂಲವಾಗುವುದು. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಮಾಡಿಕೊಳ್ಳುವುದು ಉತ್ತಮ. ಬೋಧನೆಯ ಕೌಶಲಕ್ಕೆ ಪ್ರಶಂಸೆ. ಹಿರಿಯರ ಮಾರ್ಗದರ್ಶನವನ್ನು ಪಡೆಯುವ ಅವಶ್ಯಕತೆ ಇರಲಿದೆ. ಸೌಲಭ್ಯಗಳ ದುರ್ಬಳಕೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು.
ನಿಮ್ಮ ಬಗ್ಗೆ ತಿಳಿಯದೇ ಸುಮ್ಮನೇ ಕುಖ್ಯಾತಿ ಬರುವುದು. ಆಸ್ತಿಯ ವಿಚಾರಕ್ಕೆ ಕುಟುಂಬದಲ್ಲಿ ಪರಸ್ಪರ ಜಗಳವಾಗುವ ಸಾಧ್ಯತೆ ಇದೆ. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಮಾಡುವುದು ಉತ್ತಮ. ಕಡಿಮೆ ಖರ್ಚಿನಲ್ಲಿ ನಿಮ್ಮ ಕೆಲಸವು ಮುಗಿಯುವಂತೆ ನೋಡಿಕೊಳ್ಳುವಿರಿ. ಆರೋಗ್ಯದ ಸುಧಾರಣೆಗೆ ಶುದ್ಧ ವಾತಾವರಣಕ್ಕೆ ಹೋಗಬೇಕಾಗುವುದು. ಅಪರಿಚಿಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆದು ಮುನ್ನಡೆಯುವುದು ಶ್ರೇಯಸ್ಕರ. ಹಣವಿದ್ದ ಮಾತ್ರಕ್ಕೆ ಎಲ್ಲವೂ ಸಾಧ್ಯವಾಗದು ಎಂಬ ಸತ್ಯವು ಗೊತ್ತಾಗುವುದು.
ನಿಮಗೆ ಇಂದು ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ನಿಮಗೆ ನಿಮ್ಮವರ ಮಾತಿನಿಂದ ಇರುಸು ಮುರುಸಾದೀತು. ರಾಜಕೀಯ ವ್ಯಕ್ತಿಗಳಿಂದ ಕೆಲಸವಾಗಲು ಅವರಿಗೆ ಹಣವನ್ನು ಕೊಡುವಿರಿ. ಸ್ನೇಹಿತ ಸಹವಾಸದಿಂದ ದುರಭ್ಯಾಸವನ್ನು ಕಲಿಯುವ ಸಾಧ್ಯತೆ ಇದೆ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ಆಪ್ತರ ಅಗಲಿಕೆಯಿಂದ ನೋವಾಗುವುದು. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು.
ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ದೂರದ ಬಂಧುಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ನಡವಳಿಕೆಯು ಅಹಂಕಾರದಂತೆ ತೋರೀತು. ವರ್ತನೆಯನ್ನು ಆದಷ್ಟು ಸಂದರ್ಭಕ್ಕೆ ತಕ್ಕಂತೆ ಇಟ್ಟುಕೊಳ್ಳುವುದು ಉತ್ತಮ. ದಿನಗೂಲಿಯವರಿಗೆ ಕಷ್ಟವು ಬರುವುದು. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಮುಖ್ಯವಾದೀತು. ಮಾಡುತ್ತಿರುವ ಉದ್ಯೋಗವು ನಿಮಗೆ ಸರಿಯೆನಿಸದು. ನಿಮ್ಮ ಭವಿಷ್ಯದ ಕನಸನ್ನು ಮಿತ್ರರ ಜೊತೆ ಹಂಚಿಕೊಳ್ಳುವಿರಿ.
ಇಂದು ಉದ್ಯೋಗವನ್ನು ಅರಸುತ್ತ ಇದ್ದರೆ ಇಂದು ಉತ್ತಮ ಉದ್ಯೋಗವು ಸುಳಿವು ಸಿಗಲಿದೆ. ಸ್ವಂತ ಆರೋಗ್ಯದ ಸುಧಾರಣೆಗೆ ಖರ್ಚು ಮಾಡುವಿರಿ. ಅಸಭ್ಯ ಮಾತುಗಳು ನಿಮಗೆ ಶೋಭೆಯನ್ನು ತರದು. ಎಲ್ಲರ ಜೊತೆ ಬೆರೆತು ಮಾತನಾಡುವುದನ್ನು ಇಷ್ಟಪಡುವಿರಿ. ಮಾನಸಿಕ ಒತ್ತಡದಿಂದ ಇಂದಿನ ಕೆಲಸವು ಬೇಗನೆ ಸಾಕೆನಿಸಬಹುದು. ನೀವು ಎಲ್ಲದರಲ್ಲಿಯೂ ಪ್ರತ್ಯೇಕತೆಯನ್ನು ಬಯಸುವಿರಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ.
ಇಂದು ಹಲವಾರು ದಿನಗಳ ವಾಹನ ಖರೀದಿಯ ಆಸೆಯು ಪೂರ್ಣಗೊಳ್ಳುವುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದವರಿಗೆ ಸಂಕಷ್ಟ ಬರಬಹುದು. ಭೂಮಿಯನ್ನು ವಿಸ್ತರಿಸುವ ಯೋಜನೆ ಮಾಡುವಿರಿ. ಹಿರಿಯರಿಂದ ಬೈಗುಳವು ಸಿಗುವುದು. ತಪ್ಪನ್ನು ತಿದ್ದಿಕೊಂಡು ಮುಂದೆ ಸರಿಯಾಗಲು ಬಯಸುವಿರಿ. ನೆಮ್ಮದಿಯನ್ನು ಬಹಳ ಶ್ರಮದಿಂದ ಪಡೆಯಬೇಕಾಗುವುದು. ವಾಹನದಲ್ಲಿ ಓಡಾಟವನ್ನು ಕಡಿಮೆಗೊಳಿಸಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಆತಂಕ ಇರಲಿದೆ. ಪರೀಕ್ಷೆಯ ಭಯವು ನಿಮ್ಮ ಅಧ್ಯಯನ ದಿಕ್ಕನ್ನೇ ತಪ್ಪಿಸಬಹುದು. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇಲವ ಓಡಾಟ, ಮಾತು ಕತೆಗಳಲ್ಲಿಯೇ ಮುಕ್ತಾಯವಾಗಲಿದೆ. ಜವಾಬ್ದಾರಿ ಇಲ್ಲದ ಕಡೆ ನೀವು ಹೋಗುವುದು ಬೇಡ. ಕೆಲವು ಅಂಶವಾದರೂ ಸಹಾಯ ಮಾಡುವ ಗುಣವಿದ್ದರೆ ಒಳ್ಳೆಯದು. ನಿರುಪಯುಕ್ತ ವಸ್ತುಗಳನ್ನು ಮಾತ್ರ ನೀವು ದಾನ ಮಾಡುವಿರಿ. ನಿಮಗೆ ಬೇಕಾದುದು ಇದ್ದಲ್ಲಿಗೆ ಬರುವುದು.
ಉದ್ಯೋಗದ ಸ್ಥಳವು ನಿಮಗೆ ಖುಷಿಯ ಸ್ಥಾನವಾಗಲಿದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಲಿದ್ದೀರಿ. ಆರ್ಥಿಕತೆಯ ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯನ್ನು ನೀವು ಇಷ್ಟಪಡಲಾರಿರಿ. ಅಸಮಯದಲ್ಲಿ ಭೂಮಿಯ ಮಾರಾಟದಿಂದ ನೆಲೆ ಸಿಗುವುದು ಕಷ್ಟ. ಹೊರಗಿನ ವಸ್ತುವನ್ನು ಹೆಚ್ಚು ಸೇವಿಸುವಿರಿ. ನೂತನ ಉದ್ಯೋಗವನ್ನು ಆರಂಭಿಸಲು ಭಯವಿರುವುದು. ಇನ್ನೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ.
ವಿದ್ಯಾರ್ಥಿಗಳಿಗೆ ತಾಯಿಯಿಂದ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವರು. ಗಂಡಾಂತರದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಮನೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಹೆಚ್ಚಿನ ಆತಂಕ ಇರಲಿದೆ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗುವಿರಿ. ದಾನ ಮಾಡಲು ಮನಸ್ಸು ಹಿಂಜರಿಯಲಿದೆ. ಮಾನಸಿಕ ಅಸಮತೋಲನವು ನಿಮ್ಮನ್ನು ಭ್ರಾಂತಗೊಳಿಸುವುದು.
ನೀವು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳಾಗುವುದು. ಹೊಸ ಉದ್ಯಮವನ್ನು ಆರಂಭಿಸಲು ಧೈರ್ಯವು ಸಾಲದು. ಇನ್ನೊಬ್ಬರ ಜೊತೆ ಸೇರಿ ಮುಂದುವರಿಸುವುದು ನಿಮ್ಮ ಉತ್ತಮ ಆಯ್ಕೆ ಆಗಬಹುದು. ಮಕ್ಕಳಿಂದ ನಿಮ್ಮ ಉದ್ಯಮಕ್ಕೆ ಸಹಾಯವು ಸಿಗಬಹುದು. ನಿಮ್ಮ ಮೌನವು ಭಯ ತರಿಸುವುದು. ಹಣವನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುವಿರಿ. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ.
ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ನೋವನ್ನು ನುಂಗಿ ಬದುಕುವ ಕಲೆಯನ್ನು ನೀವು ಅರ್ಥಮಾಡಿಕೊಂಡಿರುವಿರಿ. ಸ್ವಂತ ಉದ್ಯಮವನ್ನು ನಡೆಸುವವರು ಪ್ರಸಾರದ ಕಡೆಗೆ ಗಮನ ಕೊಡುವಿರಿ. ಯಾರನ್ನೂ ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಪಡೆಯಲಿದ್ದೀರಿ. ಬಲವಂತದಿಂದ ನೀವು ಯಾರಬಳಿಯೂ ಕೆಲಸವನ್ನು ಮಾಡಿಸಲು ಹೋಗಬೇಡಿ, ಅದು ಆಗದು.
ನಿಮಗೆ ಎಲ್ಲ ಕಾರ್ಯದಲ್ಲಿಯೂ ಉತ್ಸಾಹವು ಕಡಿಮೆ ಇರುವುದು. ನಿಮ್ಮ ಚರ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ಸ್ನೇಹಿತರಿಂದ ಲಾಭವು ನಿಮಗೆ ಸಿಗಲಿದೆ. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ವಿದ್ಯಾಭ್ಯಾಸ ಕ್ಷೇತ್ರವನ್ನು ಬದಲಿಸಿಕೊಳ್ಳಬಹುದು. ಆರಾಮಾಗಿ ಇರಲು ಹೆಚ್ಚು ಇಷ್ಟಪಡುವಿರಿ. ಆರ್ಥಿಕತೆಯ ವಿಚಾರವು ನಿಮಗೆ ಪೂರ್ಣವಾಗಿ ತಿಳಿಯದು. ನಿಮ್ಮ ಅಜ್ಞಾನವನ್ನು ಪ್ರದರ್ಶಿಸುವುದು ಬೇಡ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ರೇವತಿ, ಯೋಗ : ವೃದ್ಧಿ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 11 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:41 – 18:11, ಯಮಗಂಡ ಕಾಲ 12:11 – 13:41, ಗುಳಿಕ ಕಾಲ 15:11 – 16:41
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 am, Sun, 27 September 26