Horoscope: ಯಾರದೋ ಪ್ರಚೋದನೆಯಿಂದ ತಪ್ಪು ಹಾದಿಯಲ್ಲಿ ಹೋಗುವಿರಿ-ಎಚ್ಚರ

|

Updated on: Jan 05, 2024 | 9:52 PM

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 05) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ಯಾರದೋ ಪ್ರಚೋದನೆಯಿಂದ ತಪ್ಪು ಹಾದಿಯಲ್ಲಿ ಹೋಗುವಿರಿ-ಎಚ್ಚರ
ಪ್ರಾತಿನಿಧಿಕ ಚಿತ್ರ
Follow us on

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 05) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ನವಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಸುಕರ್ಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 15 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:13 ರಿಂದ 12:38ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:25 ರಿಂದ 09:49ರ ವರೆಗೆ.

ಸಿಂಹ ರಾಶಿ : ನ್ಯಾಯಾಲಯದಲ್ಲಿ ನಿಮ್ಮದಾದ ಕೆಲಸಗಳು ಅಪೂರ್ಣವಾಗಲಿದೆ. ನಿಮ್ಮದಲ್ಲದ ತಪ್ಪಿದ್ದರೂ ಅದನ್ನು ಒಪ್ಪಿಕೊಂಡು ಮುಂದುರಿಯುವಿರಿ. ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸುವಿರಿ. ಸುಲಭದ ತುತ್ತನ್ನೂ ಜೀರ್ಣಿಸಿಕೊಳ್ಳಲಾಗದೆ ಸ್ಥಿತಿ ಬರಬಬಹುದು.
ಅಸಹಜ ವರ್ತನೆಯ ಬಗ್ಗೆ ನೀವು ಏನನ್ನೂ ಹೇಳುವುದು ಬೇಡ. ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗುವುದು. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಉತ್ತಮ ಭೋಜನವನ್ನು ಮಾಡುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನೀವು ಇಂದು ವಿದ್ಯುತ್ ಉಪಕರಣದ ಮಾರಟಗಾರರಾಇದ್ದರೆ ಅಧಿಕ ಲಾಭವು ಸಿಗುವುದು. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದು ಗೌರವವು ಸಿಗಲಿದೆ. ಬೆಳವಣಿಗೆಗೆ ಅವಕಾಶಗಳು ಸಿಕ್ಕರೂ ಅದು ನಿಮಗೆ ಸರಿಯಾಗದು.

ಕನ್ಯಾ ರಾಶಿ : ಹಣದ ಕೊರತೆ ಇದ್ದರೂ ಅದನ್ನು ತೋರಿಸಿಕೊಳ್ಳಲು ಹೋಗದೇ ಎಲ್ಲರಂತೆ ಇರುವಿರಿ. ಪ್ರಭಾವಿ ವ್ಯಕ್ತಿಗಳ ಜೊತೆ ಕೆಲಸ ಮಾಡುವ ಅವಕಾಶವನ್ನು ಹೇಗೋ ಪಡೆಯುವಿರಿ. ಕುಟುಂಬದವರ ವಿರೋಧದ ನಡುವೆ ಸಾಮಾಜಿಕ ಕೆಲಸಕ್ಕೆ ತೆರಳುವಿರಿ. ಮಾತಿನಲ್ಲಿ ಹಿಡಿತಬೇಕು ಎನಿಸಬಹುದು. ನಿಮ್ಮ ಬಗ್ಗೆ ಯಾವುದನ್ನೂ ಹೇಳಿಕೊಳ್ಳದೇ ಮಾಡುವ ಕಾರ್ತದ ಕಡೆ ಗಮನ ಇರಲಿ. ಯಾರಿಗೂ ಹೇಳಿಕೊಳ್ಳದೇ ನೀವೊಬ್ಬರೇ ರೋಗವನ್ನು ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿವಾರಿಸಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಕೆಲವು ಭಾಗವನ್ನು ನೀವು ದಾನ ಮಾಡುವಿರಿ.

ತುಲಾ ರಾಶಿ : ಸಾಲದ ಹೊರೆಯು ಭಾರಕ್ಕಿಂತ ಕಿರಿಕಿರಿಯನ್ನು ಹೆಚ್ಚು ಮಾಡುವುದು. ವ್ಯವಹಾರದಲ್ಲಿ ಸಂಬಂಧವನ್ನು ಬೆಸೆದು ವ್ಯವಹಾರವನ್ನೂ ಸಂಬಂಧವನ್ನೂ ಎರಡನ್ನೂ ಹಾಳುಮಾಡಿಕೊಳ್ಳುವಿರಿ. ನಿಮಗೆ ಬೇಡದ ವಸ್ತುಗಳನ್ನು ನೀವು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ರಾಜಕೀಯದಲ್ಲಿ ವಿವಾದಸ್ಪದ ಮಾತುಗಳು ಆಡಿ ಎಲ್ಲರ ಕೆಂಗಣ್ಣಿಗೆ ಸಿಲುಕುವಿರಿ. ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಸೊಂಟದ ನೋವು ಅಧಿಕವಾಗಿ ಕಾಡಬಹುದು. ಸಂಗಾತಿಯ ಮೇಲೆ ಯಾರದೋ ಕಾರಣಕ್ಕೆ ಮುನಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ : ಔದಾರ್ಯದ ಪ್ರದರ್ಶನದಿಂದ ನಿಮ್ಮ ಸಂಪತ್ತಿಗೆ ಕುತ್ತು ಬಂದೀತು. ಮಾತಿಗಿಂತ ಮೌನವೇ ಸೂಕ್ತವೆನಿಸೀತು. ಯಾರದೋ ಪ್ರಚೋದನೆಯಿಂದ ತಪ್ಪು ಹಾದಿಯಲ್ಲಿ ಹೋಗುವಿರಿ. ಗೌರವವು ಸಿಗಬೇಕಾದ ಕಡೆ ಸಿಗದೇ ಬೇಸರವಾಗುವುದು. ನಿಮ್ಮ ವೃತ್ತಿಯಲ್ಲಿ ಭವಿಷ್ಯವನ್ನು ಹೆಚ್ಚಿಸಲು ನಿಮ್ಮ ಪರಿಣತಿಯನ್ನು ಬಳಸಿ. ಇಂದು ನಿಮ್ಮ ಮಾರ್ಗದರ್ಶನವನ್ನು ಕೇಳಿಕೊಂಡು ಬರಬಹುದು. ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುದು. ಮಕ್ಕಳ‌ ಜೊತೆ ಅನ್ಯೋನ್ಯ ಸಂಬಂಧವು ಕಾಣಿಸಿಕೊಂಡೀತು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಶಿಸ್ತಿನ ವ್ಯವಹಾರವನ್ನು ಬಿಡದೇ ಮುಂದುವರಿಸುವಿರಿ. ನಿಮ್ಮ ಬಳಿ ಇರುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ.

Published On - 12:30 am, Fri, 5 January 24