ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 12 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಹೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ.
ಸಿಂಹ: ಪ್ರಯಾಣಕ್ಕೆ ಸಂಬಂಧಿಸದಂತೆ ತೊಂದರೆ ಬರಬಹುದು. ಅಪರಿಚಿತರ ಸಹಾಯವು ನಿಮಗೆ ದೊರೆಯಬಹದು. ನಂಬಿಕಸ್ಥರನ್ನು ವಿನಾಕಾರಣ ಕಳೆದುಕೊಳ್ಳುವಿರಿ. ಸಜ್ಜನರಿಗೆ ಅಪಮಾನ ಮಾಡಲು ಹೋಗಬೇಡಿ. ನಿಮಗೆ ಇಂದು ಸಿಗುವ ಸೂಚನೆಗಳು ಸಮೃದ್ಧಯ ಸಂಕೇತವಾಗಿರಬಹುದು. ಸಂತೋಷವನ್ನು ಅನುಭವಿಸಲು ಕಷ್ಟಪಡಬೇಕಾದೀತು. ಅನುಭವಿಗಳ ಮಾತಿನ ಮೇಲೆ ನಂಬಿಕೆ ಇರಲಿ. ಬಂಧುಗಳ ಆಗಮನದಿಂದ ಸಂತೋಷವು ಮನೆಯಲ್ಲಿ ಇರಲಿದೆ. ಆರೋಗ್ಯದ ವಿಚಾರದಲ್ಲಿ ಹಿನ್ನಡೆಯಾಗಬಹುದು. ಕೆಲಸದಲ್ಲಿ ಆಸಕ್ತಿಯ ಕೊರತೆ ಕಾಣಿಸುವುದು.
ಕನ್ಯಾ: ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಮಿತ್ರರ ಜೊತೆ ಮಾಡಿದ ವಿವಾದವು ಮನಸ್ತಾಪವನ್ನು ಕೊಟ್ಟೀತು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯು ಇರಲಿದೆ. ನೀವು ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಚಿಸಲಿದ್ದೀರಿ. ವಿದ್ಯುತ್ ಉಪಕರಣಗಳು ನಿಮ್ಮ ಧನವನ್ನು ಖಾಲಿ ಮಾಡಿಸಿಯಾವು. ಸರ್ಕಾರಕ್ಕೆ ಸಂಬಂಧಿಸಿದ ನಿಮ್ಮ ಕಾರ್ಯಗಳು ಪ್ರಗತಿ ಇಲ್ಲದೇ ಮಂದಗತಿಯಲ್ಲಿ ಸಾಗಬಹುದು. ಧಾರ್ಮಿಕ ಶ್ರದ್ಧೆಯು ಕಡಿಮೆಯಾಗಲಿದೆ. ಇದರಿಂದ ಮಾನಸಿಕ ಅಸಮತೋಲನವು ಕಾಣಿಸುವುದು.
ತುಲಾ: ಮಿತ್ರರು ನಿಮಗೆ ಅವಶ್ಯಕತೆ ಇರುವ ಸಹಾಯ ಮಾಡುವರು. ಪ್ರೇಮಪಾಶದಲ್ಲಿ ಬಂಧಿಯಾಗಿದ್ದರೆ ದುಃಖಪಡಬೇಕಾದ ಸನ್ನಿವೇಶವು ಬರಬಹುದು. ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿಗೆ ನೀವು ಹೊಸ ರೂಪವನ್ನು ಕೊಡಬಹುದು. ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ದಂಪತಿಗಳಿಗೆ ಚಿಂತೆಯಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಚಿಂತೆ ಉಂಟಾಗಬಹುದು. ಕ್ಷಣ ಕ್ಷಣದ ಬದಲಾವಣೆಗಳು ನಿಮಗೆ ಕಿರಿಕಿರಿಯನ್ನು ತರಿಸುವುದು. ದಿನದ ಆರಂಭದಲ್ಲಿ ಉತ್ಸಾಹವು ಕಡಿಮೆಯಿರಲಿದೆ. ಮನಸ್ಸು ಸಹಜತೆಗೆ ಮರಳಲು ಸಮಯವನ್ನು ತೆಗದುಕೊಳ್ಳಬಹುದು.
ವೃಶ್ಚಿಕ: ಇಂದು ನಿಮ್ಮ ಸಮಯ ವ್ಯರ್ಥವಾಗಿ ಸುಮ್ಮನೇ ಅಲೆದಾಡವಾಗಬಹುದು. ಸಾಲ ಮಾಡಬೇಕಾದ ಸ್ಥಿತಿಯು ಬರಬಹುದು. ತಾಯಿಯ ಜೊತೆ ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬರಬಹುದು. ಸಂಶೋಧಕರು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಳ್ಳುವರು. ಪ್ರೀತಿಪಾತ್ರರೊಂದಿಗೆ ಮುಜುಗರ ಇಟ್ಟಕೊಳ್ಳಬೇಕಾಗಬಹುದು. ಪರಸ್ಪರ ತಪ್ಪು ಗ್ರಹಿಕೆಯಿಂದ ಸಂಬಂಧದಲ್ಲಿ ಒಡಕಾಗಬಹುದು. ತುಂಬ ಹಳೆಯ ರೋಗವು ಇಂದು ಹೆಚ್ಚಾಗುವ ಸಂಭವವಿದೆ. ಕೆಟ್ಟ ಕನಸಿನಿಂದ ನೀವು ಖಿನ್ನರಾಗಬಹುದು. ಇಂದಿನಪ್ರಯಾಣವು ನಿಮಗೆ ಅಧಿಕವೆನಿಸಬಹುದು.
-ಲೋಹಿತಶರ್ಮಾ ಇಡುವಾಣಿ