Daily Horoscope: ಈ ರಾಶಿಯವರಿಗೆ ಅಪರೂಪದ ಉಡುಗೊರೆ ದೊರೆಯಲಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರಿಗೆ ಅಪರೂಪದ ಉಡುಗೊರೆ ದೊರೆಯಲಿದೆ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 12, 2023 | 5:30 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ 10:53 ರಿಂದ 12:29ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 03:40 ರಿಂದ 05:15ರ ವರೆಗೆ, ಗುಳಿಕ ಕಾಲ 07:42 ರಿಂದ 09:18ರ ವರೆಗೆ.

ಮೇಷ: ಈ ದಿನ ಆಂತರಿಕ ಬಲದ ವೃದ್ಧಿಯಾಗುವುದು. ಪ್ರಮುಖ ವ್ಯಕ್ತಿಗಳ ಜೊತೆ ಸಂಬಂಧಗಳು ಹತ್ತಿರವಾಗಬಹುದು. ಸಂಪತ್ತಿನ ಮೂಲವು ಹೆಚ್ವಾಗಬಹುದು. ಸೃಷ್ಟಿಶೀಲತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರತಿಭೆಯಿಂದ ಬಹಳ ಲಾಭಗಳು ನಿಮಗಾಗುವುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ವಿಸ್ತರಿಸಬಹುದು. ಹಿರಿಯರ ಅನುಭವದಿಂದ ಪ್ರಯೋಜನವಾಗಲಿದೆ. ಅನಗತ್ಯ ವಾದಗಳಿಂದ ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಆಲಸ್ಯದಿಂದ ಸಮಯವನ್ನು ವ್ಯರ್ಥ ಮಾಡುವಿರಿ.‌ ನಿಮ್ಮ ಮನಸ್ಸು ಚಂಚಲವಾಗುವುದು. ಶಿಸ್ತಿಗೆ ಹೆಚ್ಚು ಒತ್ತನ್ನು ಇಂದು ಕೊಡುವಿರಿ. ಇದು ಸಹೋದ್ಯೋಗಿಗಳಿಗೆ ಕಿರಿಕಿರಿಯಾದೀತು.

ವೃಷಭ: ಈ ದಿನ ನಿಮ್ಮ ಕೆಲವು ಆಸೆಗಳನ್ನು ಈಡೇರಿಸಲು ದಾರಿ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭಗಳಿಸಲು ಹೊಸ ಅವಕಾಶಗಳು ಕಾಣಿಸಿಕೊಂಡೀತು.‌ ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ.‌ ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರನ ವರ್ತನೆಗಳು ನಿಮಗೆ ಅಸಮಾಧಾನವನ್ನು ತರಿಸಿ, ಮನಸ್ಸಿಗೆ ಬೇಸರವಾಗಬಹುದು. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡಬಹುದು. ವೇಗದಲ್ಲಿ ಮಾಡುವ ಕೆಲಸದಿಂದ ಅನಾಹುತವಾಗಬಹುದು. ಎಲ್ಲದಕ್ಕೂ ಒಂದು ಕಾರಣವಿರುತ್ತದೆ ಎಂಬುದನ್ನು ತಿಳಿದುಕೊಳ್ಳುವಿರಿ.

ಮಿಥುನ: ಕಲಾವಿದರಿಗೆ ಅವಕಾಶಗಳು ಸಿಗಲಿದೆ. ಕೆಲಸವನ್ನು ಬದಲಾಯಿಸುವಿರಿ. ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಕೊಡುವಿರಿ. ನಿಮ್ಮ ಸಹಾಯವನ್ನು ಅವರು ಬಯಸಬಹುದು. ದಾಂಪತ್ಯದಲ್ಲಿ ಮನಸ್ತಾಪವು ಅಧಿಕವಾಗಬಹುದು. ಆಸಕ್ತಿ ಕಡಿಮೆ ಇದ್ದರೂ ಕರ್ತವ್ಯವನ್ನು ಮಾಡಬೇಕಾದೀತು. ಕಛೇರಿಯಲ್ಲಿ ಒತ್ತಡವು ಹೆಚ್ಚಾಗಬಹುದು. ಕಾಲಿಗೆ ಸಂಬಂಧಪಟ್ಟಂತೆ ನೋವು ಅಥವಾ ಗಾಯಗಳು ಆಗಬಹುದು. ಪ್ರಯಾಣವನ್ನು ಮಾಡಬೇಕಾದೀತು. ತಂದೆಯ ಆರೋಗ್ಯವು ಸುಧಾರಿಸೀತು. ನಿಮ್ಮ ಕೆಲವು ಸಂಕೀರ್ಣ ಕೆಲಸಗಳು ಬೇಗ ಮುಕ್ತಾಯಗೊಳ್ಳಬಹುದು.

ಕಟಕ: ಉದ್ಯೋಗಕ್ಕೆ ಸಂಬಂಧಿಸಿದಂತೆ ಕುಟುಂಬದವರ ಸಹಕಾರ ಇರಲಿದೆ. ಇಂದು ನಿಮಗೆ ಸಂಪತ್ತು, ಗೌರವಗಳು ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬಹುದು. ಪ್ರೇಮಿಗಳಾಗಿದ್ದರೆ ನಿಮ್ಮ ನಡುವೆ ಅಹಂಕಾರದ ಘರ್ಷಣೆ ಇರಲಿದೆ. ಹೊಸ ಉದ್ಯೋಗದಲ್ಲಿ ಉತ್ಸಾಹವು ಹೆಚ್ಚಿರಲಿದೆ. ಕಿವಿಗೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ಹಳೆಯ ಘಟನೆಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಒಂಟಿಯಾಗಿ ಪ್ರಯಾಣವನ್ನು ಮಾಡುವುದು ಬೇಡ. ಯೋಗ್ಯ ಸ್ಥಾನಮಾನವು ಲಭಿಸಬಹುದು. ಅಪರೂಪದ ಉಡುಗೊರೆಯು ನಿಮಗೆ ಸಿಗಲಿದೆ.

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು