Daily Horoscope: ಅತೀ ವೇಗದ ಯಾವುದೇ ಕಾರ್ಯವು ಅನಾಹುತಕ್ಕೀಡಾಗಬಹುದು ಎಚ್ಚರ!
ಇಂದಿನ (2023 ಮೇ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ 10:53 ರಿಂದ 12:29ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 03:40 ರಿಂದ 05:15ರ ವರೆಗೆ, ಗುಳಿಕ ಕಾಲ 07:42 ರಿಂದ 09:18ರ ವರೆಗೆ.
ಮೇಷ: ಈ ದಿನ ಆಂತರಿಕ ಬಲದ ವೃದ್ಧಿಯಾಗುವುದು. ಪ್ರಮುಖ ವ್ಯಕ್ತಿಗಳ ಜೊತೆ ಸಂಬಂಧಗಳು ಹತ್ತಿರವಾಗಬಹುದು. ಸಂಪತ್ತಿನ ಮೂಲವು ಹೆಚ್ವಾಗಬಹುದು. ಸೃಷ್ಟಿಶೀಲತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರತಿಭೆಯಿಂದ ಬಹಳ ಲಾಭಗಳು ನಿಮಗಾಗುವುದು. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ವಿಸ್ತರಿಸಬಹುದು. ಹಿರಿಯರ ಅನುಭವದಿಂದ ಪ್ರಯೋಜನವಾಗಲಿದೆ. ಅನಗತ್ಯ ವಾದಗಳಿಂದ ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಆಲಸ್ಯದಿಂದ ಸಮಯವನ್ನು ವ್ಯರ್ಥ ಮಾಡುವಿರಿ. ನಿಮ್ಮ ಮನಸ್ಸು ಚಂಚಲವಾಗುವುದು. ಶಿಸ್ತಿಗೆ ಹೆಚ್ಚು ಒತ್ತನ್ನು ಇಂದು ಕೊಡುವಿರಿ. ಇದು ಸಹೋದ್ಯೋಗಿಗಳಿಗೆ ಕಿರಿಕಿರಿಯಾದೀತು.
ವೃಷಭ: ಈ ದಿನ ನಿಮ್ಮ ಕೆಲವು ಆಸೆಗಳನ್ನು ಈಡೇರಿಸಲು ದಾರಿ ಮಾಡಿಕೊಳ್ಳುವಿರಿ. ವ್ಯಾಪಾರದಲ್ಲಿ ಲಾಭಗಳಿಸಲು ಹೊಸ ಅವಕಾಶಗಳು ಕಾಣಿಸಿಕೊಂಡೀತು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹೋದರನ ವರ್ತನೆಗಳು ನಿಮಗೆ ಅಸಮಾಧಾನವನ್ನು ತರಿಸಿ, ಮನಸ್ಸಿಗೆ ಬೇಸರವಾಗಬಹುದು. ಅನಿರೀಕ್ಷಿತ ಧನಾಗಮನವು ಸಂತೋಷವನ್ನು ಕೊಡಬಹುದು. ವೇಗದಲ್ಲಿ ಮಾಡುವ ಕೆಲಸದಿಂದ ಅನಾಹುತವಾಗಬಹುದು. ಎಲ್ಲದಕ್ಕೂ ಒಂದು ಕಾರಣವಿರುತ್ತದೆ ಎಂಬುದನ್ನು ತಿಳಿದುಕೊಳ್ಳುವಿರಿ.
ಮಿಥುನ: ಕಲಾವಿದರಿಗೆ ಅವಕಾಶಗಳು ಸಿಗಲಿದೆ. ಕೆಲಸವನ್ನು ಬದಲಾಯಿಸುವಿರಿ. ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಕೊಡುವಿರಿ. ನಿಮ್ಮ ಸಹಾಯವನ್ನು ಅವರು ಬಯಸಬಹುದು. ದಾಂಪತ್ಯದಲ್ಲಿ ಮನಸ್ತಾಪವು ಅಧಿಕವಾಗಬಹುದು. ಆಸಕ್ತಿ ಕಡಿಮೆ ಇದ್ದರೂ ಕರ್ತವ್ಯವನ್ನು ಮಾಡಬೇಕಾದೀತು. ಕಛೇರಿಯಲ್ಲಿ ಒತ್ತಡವು ಹೆಚ್ಚಾಗಬಹುದು. ಕಾಲಿಗೆ ಸಂಬಂಧಪಟ್ಟಂತೆ ನೋವು ಅಥವಾ ಗಾಯಗಳು ಆಗಬಹುದು. ಪ್ರಯಾಣವನ್ನು ಮಾಡಬೇಕಾದೀತು. ತಂದೆಯ ಆರೋಗ್ಯವು ಸುಧಾರಿಸೀತು. ನಿಮ್ಮ ಕೆಲವು ಸಂಕೀರ್ಣ ಕೆಲಸಗಳು ಬೇಗ ಮುಕ್ತಾಯಗೊಳ್ಳಬಹುದು.
ಕಟಕ: ಉದ್ಯೋಗಕ್ಕೆ ಸಂಬಂಧಿಸಿದಂತೆ ಕುಟುಂಬದವರ ಸಹಕಾರ ಇರಲಿದೆ. ಇಂದು ನಿಮಗೆ ಸಂಪತ್ತು, ಗೌರವಗಳು ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗಬಹುದು. ಪ್ರೇಮಿಗಳಾಗಿದ್ದರೆ ನಿಮ್ಮ ನಡುವೆ ಅಹಂಕಾರದ ಘರ್ಷಣೆ ಇರಲಿದೆ. ಹೊಸ ಉದ್ಯೋಗದಲ್ಲಿ ಉತ್ಸಾಹವು ಹೆಚ್ಚಿರಲಿದೆ. ಕಿವಿಗೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ಹಳೆಯ ಘಟನೆಗಳು ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಒಂಟಿಯಾಗಿ ಪ್ರಯಾಣವನ್ನು ಮಾಡುವುದು ಬೇಡ. ಯೋಗ್ಯ ಸ್ಥಾನಮಾನವು ಲಭಿಸಬಹುದು. ಅಪರೂಪದ ಉಡುಗೊರೆಯು ನಿಮಗೆ ಸಿಗಲಿದೆ.
ಸಿಂಹ: ಪ್ರಯಾಣಕ್ಕೆ ಸಂಬಂಧಿಸದಂತೆ ತೊಂದರೆ ಬರಬಹುದು. ಅಪರಿಚಿತರ ಸಹಾಯವು ನಿಮಗೆ ದೊರೆಯಬಹದು. ನಂಬಿಕಸ್ಥರನ್ನು ವಿನಾಕಾರಣ ಕಳೆದುಕೊಳ್ಳುವಿರಿ. ಸಜ್ಜನರಿಗೆ ಅಪಮಾನ ಮಾಡಲು ಹೋಗಬೇಡಿ. ನಿಮಗೆ ಇಂದು ಸಿಗುಬ ಸೂಚನೆಗಳು ಸಮೃದ್ಧಯ ಸಂಕೇತವಾಗಿರಬಹುದು. ಸಂತೋಷವನ್ನು ಅನುಭವಿಸಲು ಕಷ್ಟಪಡಬೇಕಾದೀತು. ಅನುಭವಿಗಳ ಮಾತಿನ ಮೇಲೆ ನಂಬಿಕೆ ಇರಲಿ. ಬಂಧುಗಳ ಆಗಮನದಿಂದ ಸಂತೋಷವು ಮನೆಯಲ್ಲಿ ಇರಲಿದೆ. ಆರೋಗ್ಯದ ವಿಚಾರದಲ್ಲಿ ಹಿನ್ನಡೆಯಾಗಬಹುದು. ಕೆಲಸದಲ್ಲಿ ಆಸಕ್ತಿಯ ಕೊರತೆ ಕಾಣಿಸುವುದು.
ಕನ್ಯಾ: ಸ್ಥಿರಾಸ್ತಿಯಿಂದ ನಿಮಗೆ ಸಾಲವು ದೊರೆಯಬಹುದು. ಮಿತ್ರರ ಜೊತೆ ಮಾಡಿದ ವಿವಾದವು ಮನಸ್ತಾಪವನ್ನು ಕೊಟ್ಟೀತು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯು ಇರಲಿದೆ. ನೀವು ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಚಿಸಲಿದ್ದೀರಿ. ವಿದ್ಯುತ್ ಉಪಕರಣಗಳು ನಿಮ್ಮ ಧನವನ್ನು ಖಾಲಿ ಮಾಡಿಸಿಯಾವು. ಸರ್ಕಾರಕ್ಕೆ ಸಂಬಂಧಿಸಿದ ನಿಮ್ಮ ಕಾರ್ಯಗಳು ಪ್ರಗತಿ ಇಲ್ಲದೇ ಮಂದಗತಿಯಲ್ಲಿ ಸಾಗಬಹುದು. ಧಾರ್ಮಿಕ ಶ್ರದ್ಧೆಯು ಕಡಿಮೆಯಾಗಲಿದೆ. ಇದರಿಂದ ಮಾನಸಿಕ ಅಸಮತೋಲನವು ಕಾಣಿಸುವುದು.
ತುಲಾ: ಮಿತ್ರರು ನಿಮಗೆ ಅವಶ್ಯಕತೆ ಇರುವ ಸಹಾಯ ಮಾಡುವರು. ಪ್ರೇಮಪಾಶದಲ್ಲಿ ಬಂಧಿಯಾಗಿದ್ದರೆ ದುಃಖಪಡಬೇಕಾದ ಸನ್ನಿವೇಶವು ಬರಬಹುದು. ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿಗೆ ನೀವು ಹೊಸ ರೂಪವನ್ನು ಕೊಡಬಹುದು. ಮಕ್ಕಳಿಗೆ ಸಂಬಂಧಿಸಿದ ವಿಚಾರದಲ್ಲಿ ದಂಪತಿಗಳಿಗೆ ಚಿಂತೆಯಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಚಿಂತೆ ಉಂಟಾಗಬಹುದು. ಕ್ಷಣ ಕ್ಷಣದ ಬದಲಾವಣೆಗಳು ನಿಮಗೆ ಕಿರಿಕಿರಿಯನ್ನು ತರಿಸುವುದು. ದಿನದ ಆರಂಭದಲ್ಲಿ ಉತ್ಸಾಹವು ಕಡಿಮೆಯಿರಲಿದೆ. ಮನಸ್ಸು ಸಹಜತೆಗೆ ಮರಳಲು ಸಮಯವನ್ನು ತೆಗದುಕೊಳ್ಳಬಹುದು.
ವೃಶ್ಚಿಕ: ಇಂದು ನಿಮ್ಮ ಸಮಯ ವ್ಯರ್ಥವಾಗಿ ಸುಮ್ಮನೇ ಅಲೆದಾಡವಾಗಬಹುದು. ಸಾಲ ಮಾಡಬೇಕಾದ ಸ್ಥಿತಿಯು ಬರಬಹುದು. ತಾಯಿಯ ಜೊತೆ ಸಿಟ್ಟು ಮಾಡಿಕೊಳ್ಳುವ ಸಂದರ್ಭ ಬರಬಹುದು. ಸಂಶೋಧಕರು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಕೊಳ್ಳುವರು. ಪ್ರೀತಿಪಾತ್ರರೊಂದಿಗೆ ಮುಜುಗರ ಇಟ್ಟಕೊಳ್ಳಬೇಕಾಗಬಹುದು. ಪರಸ್ಪರ ತಪ್ಪು ಗ್ರಹಿಕೆಯಿಂದ ಸಂಬಂಧದಲ್ಲಿ ಒಡಕಾಗಬಹುದು. ತುಂಬ ಹಳೆಯ ರೋಗವು ಇಂದು ಹೆಚ್ಚಾಗುವ ಸಂಭವವಿದೆ. ಕೆಟ್ಟ ಕನಸಿನಿಂದ ನೀವು ಖಿನ್ನರಾಗಬಹುದು. ಇಂದಿನಪ್ರಯಾಣವು ನಿಮಗೆ ಅಧಿಕವೆನಿಸಬಹುದು.
ಧನುಸ್ಸು: ಸ್ವಂತ ಉದ್ಯಮದಲ್ಲಿ ಹೆಚ್ಚು ಪರಿಶ್ರಮ ಇರಬೇಕಾಗಿ ಬರಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಂಸಾರದಲ್ಲಿ ಆಸಕ್ತಿ ಕಡಿಮೆಯಾಗಬಹುದು. ನೀವು ಇಂದು ನಿಮಗೆ ಪ್ರಿಯವಾದುದ್ದನ್ನು ಪಡೆಯಬಹುದು. ಸಣ್ಣ ಪುಟ್ಟ ಅವಮಾನವಾಗುವ ಸಾಧ್ಯತೆ ಇದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಅನಂತರ ಸಿಗಲಿದೆ. ಇಂದು ನೀವು ಬಹಳ ಎಚ್ಚರಿಕೆಯಿಂದ ಇರಿ. ಕೆಡುಕಿಗೆ ಮೊದಲೇ ಮುನ್ಸೂಚನೆಯು ಬರಬಹುದು. ಮಕ್ಕಳಿಗೆ ಆಗಬೇಕಾದ ವಿವಾಹದ ಕುರಿತು ಮನೆಯಲ್ಲಿ ಕುಳಿತು ಎಲ್ಲರ ಜೊತೆ ಮಾತನಾಡುವಿರಿ.
ಮಕರ: ಎಷ್ಟೋ ವರ್ಷದ ಸಾಲವು ಇಂದು ಮುಕ್ತಾಯವಾಗಲಿದೆ. ಕೆಲಸದ ಒತ್ತಡವು ಅಧಿಕವಿದ್ದರೂ ಇಂದಿನ ಕೆಲಸವನ್ನು ಇಂದೇ ಮುಗಿಸುವುದು ಉತ್ತಮ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ಅನಿರೀಕ್ಷಿತವಾದ ಆರ್ಥಿಕಸಂಕಷ್ಟವು ನಿಮ್ಮನ್ನು ಹತಾಶೆಗೊಳಿಸಬಹುದು. ತಾಳ್ಮೆಯಿಂದ ಇದ್ದರೆ ಸಂಬಂಧವನ್ನು ಬಲಪಡಿಸಲು ನಿಮಗೆ ಸಾಧ್ಯವಾಗಬಹುದು. ಕುಟುಂಬದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಹುದು. ನ್ಯಾಯಾಲಯದ ವಿಚಾರದಲ್ಲಿ ಜಯವಾಗುವ ಸಾಧ್ಯತೆ ಇದೆ. ತಾಯಿಯ ಸಂಬಂಧದಿಂದ ಧನಾಗಮನವನ್ನು ನಿರೀಕ್ಷಿಸಬಹುದು. ಗೃಹಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವಿರಿ.
ಕುಂಭ: ನಿಮ್ಮ ಯೋಚನೆಗಳು ಬಹಳ ಬಾಲಿಶವೆಂದು ಅರ್ಥವಾಗುವ ದಿನ ಇಂದು. ಉದ್ಯೋಗದಲ್ಲಿ ನಿಧಾನಗತಿ ಇರಲಿದೆ. ಸಹೋದ್ಯೋಗಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಕೆಲಸವು ಸಮಯಕ್ಕೆ ಸರಿಯಾಗಿ ಮುಗಿಯದು. ಅಧಿಕ ಖರ್ಚಿನಲ್ಲಿ ನಿಮ್ಮ ಗುರಿಯನ್ನು ಸಾಧಿಸಬಹುದಾಗಿದೆ. ನಿಮ್ಮ ದುರಭ್ಯಾಸವು ನಿಮಗೇ ಆಪತ್ತನ್ನು ತರಬಹುದು. ಸರ್ಕಾರಿ ಅಧಿಕಾರಿಗಳು ನಿಮಗೆ ಬೇಕಾದ ಸಹಾಯವನ್ನು ಮಾಡಬಹುದು. ಹೂಡಿಕೆ ವಿಚಾರಕ್ಕೆ ಸದ್ಯ ತಲೆ ಹಾಕುವುದು ಬೇಡ. ಗೃಹನಿರ್ಮಾಣಕ್ಕೆ ಒಳ್ಳೆಯ ದಿನವಾಗಲಿದೆ. ಧನಾಗಮವು ಕಡಿಮೆಯಾಗಲಿದೆ.
ಮೀನ: ಸುಕೃತವು ನಿಮ್ಮ ಪಾಲಿಗೆ ಅನುಕೂಲತೆಯನ್ನು ಒದಗಿಸಿಕೊಟ್ಟೀತು. ಸಹೋದ್ಯೋಗಿಗಳಿಂದ ನೀವು ಕಛೇರಿಯಲ್ಲಿ ಸಹಾಯ ಪಡೆಯುವ ಸಾಧ್ಯತೆ ಇದೆ. ಯಾವ ಸಂದರ್ಭದಲ್ಲಿಯೂ ಹೆದರಬೇಕಾದ ಅವಶ್ಯಕತೆ ಇಲ್ಲ. ನೀವು ಸುಲಭವಾಗಿ ಎದುರಿಸಬಲ್ಲಿರಿ. ನೀವು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹೊರಗಿನ ವ್ಯಕ್ತಿತ್ವವನ್ನು ನೋಡಿ ನಿಮ್ಮ ತೀರ್ಮಾನವು ಅಸತ್ಯವಾದೀತು. ಹಣಕಾಸಿನ ವಿಚಾರವು ನಿಮಗೆ ಸಂಪೂರ್ಣ ಅರ್ಥವಾಗದೇ ಹೋದೀತು. ಸಂಗಾತಿಯ ಜೊತೆ ವಾಗ್ವಾದ ನಡೆದೀತು. ಸ್ನೇಹ ಸಂಬಂಧವು ಕಡಿಮೆ ಅದೀತು.
ಲೋಹಿತಶರ್ಮಾ – 8762924271 (what’s app only)