Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಸ್ತ್ರೀಯರಿಗೆ ಸಂಬಂಧಿಸಿದಂತೆ ಖರ್ಚುಗಳನ್ನು ಅಧಿಕ ಮಾಡಲಿದ್ದಾರೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ಸ್ತ್ರೀಯರಿಗೆ ಸಂಬಂಧಿಸಿದಂತೆ ಖರ್ಚುಗಳನ್ನು ಅಧಿಕ ಮಾಡಲಿದ್ದಾರೆ
ಇಂದಿನ ರಾಶಿ ಭವಿಷ್ಯImage Credit source: istock
Follow us
Rakesh Nayak Manchi
|

Updated on: May 11, 2023 | 6:25 AM

ಶುಭೋದಯ ಓದುಗರೇ, ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:07 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ.

ಧನುಸ್ಸು: ಅಪರಿಚಿತರ ವಾಹನದಲ್ಲಿ ಪ್ರಯಾಣ ಮಾಡುವಿರಿ.‌ ಅಪಘಾತವಾಗುವ ಸಾಧ್ಯತೆ ಇದೆ. ಭಯದ ಮನಸ್ಸು ನಿಮ್ಮನ್ನು ಕೆಲಸದಲ್ಲಿ ಹಿಂದೇಟು ಹಾಕುವಂತೆ ಮಾಡಬಹುದು. ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ. ಸಜ್ಜನರ ಅಥವಾ ಸಾಧುಗಳ ದರ್ಶನವಾಗಬಹುದು. ಅವರ ಮಾತುಗಳು ನಿಮಗೆ ಹಿತವೆನಿಸಬಹುದು. ಸ್ನೇಹಿತರ ಇಂದು ನಿಮ್ಮ ಮನೆಗೆ ಬರಬಹುದು. ಒಳ್ಳೆಯ ಆತಿಥ್ಯವನ್ನು ಮಾಡಿ. ಮಧುರವಾದ ಆಹಾರವನ್ನು ಇಂದು ಹೆಚ್ಚು ಸೇವಿಸುವಿರಿ. ಮನೆಯವರ ಅತಿಯಾದ ಪ್ರೀತಿಯಿಂದ ಬಂಧಿತರಾಗಬಹುದು. ಗುರು ರಾಯರ ದರ್ಶನವನ್ನು ಮಾಡಿ ಬನ್ನಿ.

ಮಕರ: ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವುದು ಉಚಿತ. ನಿಮ್ಮ ಆದ್ಯತೆಗಳನ್ನು ಬದಲಿಸಿಕೊಳ್ಳಿ. ಹಣ ಹೂಡಿಕೆಯ ವಿಚಾರದಲ್ಲಿ ಗೊಂದಲವಿರಬಹುದು. ಜೀವನ ಸಂಗಾತಿಯಾಗುವವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನೀವು ಹೆಸರನ್ನು ಬಯಸುವಿರಿ. ಕಣ್ಣಿನ ದೋಷವು ಅಧಿಕವಾಗಬಹುದು. ಸ್ತ್ರೀಯರಿಗೆ ಸಂಬಂಧಿಸಿದಂತೆ ಖರ್ಚುಗಳನ್ನು ಅಧಿಕ ಮಾಡುವಿರಿ. ಮನಸ್ಸು ನಿಮ್ಮ ಹಿಡಿತದಲ್ಲಿ ಇರದಿದ್ದರೆ ಸ್ವಲ್ಪ ಕಾಲ ಧ್ಯಾನವನ್ನು ಮಾಡಿ. ಕರಕುಶಲದಲ್ಲಿ ಆಸಕ್ತಿಯನ್ನು ತೋರಿಸುವಿರಿ. ಕ್ಷುಲ್ಲಕ ಕಾರಣಕ್ಕೆ ದುಃಖಿಸುವ ಅವಶ್ಯಕತೆ ಇಲ್ಲ.

ಕುಂಭ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುವ ಸಂಭವವಿದೆ. ಪ್ರಯಾಣವು ಕಷ್ಟವಾದರೂ ಹೋಗಲಿದ್ದೀರಿ. ಇದರಿಂದ ನಿಮಗೆ ಸಂತೋಷವಾಗಲಿದೆ. ಹೆಚ್ಚು ಅನನುಕೂಲದ ಸ್ಥಿತಿಯು ನಿಮಗೆ ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಸಾಮರ್ಥ್ಯವನ್ನು ಯಾರೂ ತಿಳಿಯರು. ನೀವೇ ಖುದ್ದಾಗಿ ತಿಲಕಿಸಬೇಕಾದ ಪರಿಸ್ಥಿತಿಯೂ ಇರಬಹುದು. ಸ್ವತಂತ್ರವಾದ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಲು ಹೋಗಬೇಡಿ. ವಿವಾಹ ಜೀವನವು ಡೋಲಾಯಮಾನವಾಗಿ ಸಾಗಲಿದೆ. ನಂಬಿಕೆಯನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು, ಜಾಗರೂಕತೆಯಿಂದ ಅದನ್ನು ನಿಭಾಯಿಸಬೇಕಾಗಬಹುದು.

ಮೀನ: ಇಂದು ಧನ ವ್ಯವಹಾರದಲ್ಲಿ ಸರಿಯಾದ ತಿಳಿವಳಿಕೆ ಇಟ್ಟಕೊಳ್ಳಿ. ಉನ್ನತ ಸ್ಥಾನ, ಮಾನಗಳು ಪ್ರಭಾವದಿಂದ ಸಿಗಲಿದೆ. ನಿಮ್ಮ ಅಭಿಪ್ರಾಯವು ದೃಢವಾಗಿರಲಿ. ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು. ಹೆಚ್ಚು ಅನುಕೂಲತೆಗಳ ಇರುವ ಕಡೆ ನೀವು ಸೇರಿಕೊಳ್ಳಿ. ಹೆಚ್ಚಿನ ಆದಾಯದ ಜೊತೆ ಖರ್ಚೂ ಅಧಿಕವಾಗಿದೆ. ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬವು ನಿಮ್ಮ ಜೊತೆಗಿದ್ದು ನಿಮಗೆ ಧೈರ್ಯವನ್ನು ತುಂಬಬಹುದು. ಸಾಮಾನ್ಯ ಜ್ಞಾನದ ಕೊರತೆ ಕಾಣಬಹುದು. ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುವಿರಿ.

-ಲೋಹಿತಶರ್ಮಾ ಇಡುವಾಣಿ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್