Daily Horoscope: ಇಂದಿನ ರಾಶಿ ಭವಿಷ್ಯ, ಒಳ್ಳೆಯ ಭೋಜನ ಮಾಡುವ ಅವಕಾಶ ಈ ರಾಶಿಯವರಿಗೆ ತಪ್ಪಿ ಹೋಗಬಹುದು
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 11) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:07 ರಿಂದ 07:43ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ 10:53ರ ವರೆಗೆ.
ಮೇಷ: ನೂತನ ಸ್ನೇಹಿತರನ್ನು ಮಾಡಿಕೊಳ್ಳುವಾಗ ಎಚ್ಚರಿಕೆ ಇರಲಿ. ಶುಭ ಸಮಾಚಾರವು ನಿಮಗೆ ಗೊತ್ತಾಗಬಹುದು. ಮನೆಯಿಂದ ಸಮೀಪದ ದೇವರ ದರ್ಶನಕ್ಕೆ ನೀವು ಹೋಗಲಿದ್ದೀರಿ. ಗೋವುಗಳ ಸಹವಾಸ ನಿಮಗೆ ಹಿತವೆನಿಸೀತು. ಸಂಗಾತಿಯನ್ನು ನಿಮ್ಮ ಹಿಡಿತಕ್ಕೆ ತಂದುಕೊಳ್ಳಲು ಪ್ರಯತ್ನಿಸಬಹುದು. ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆರ್ಥಿಕವಾಗಿ ಲಾಭವೂ ನಷ್ಟವೂ ಅಷ್ಟಾಗಿ ಇರದು. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಂಡೀತು. ನೀವು ಊಹಿಸದಂತೆ ಆಯಿತೆಂಬ ಸಂತೋಷವು ಆಗಬಹುದು. ಇಂದು ಆಗುವ ಬದಲಾವಣೆಯನ್ನು ಸಂತೋಷದಿಂದ ಸ್ವಾಗತಿಸಿ.
ವೃಷಭ: ಮಕ್ಕಳಲ್ಲಿ ಯಾವ ಪ್ರಗತಿಯನ್ನು ಕಾಣದೇ ಅವರಿಗೆ ವೃಥಾ ಖರ್ಚು ಮಾಡುವುದು ಎಂಬ ಭಾವ ಪೋಷಕರಿಗೆ ಉಂಟಾಗಬಹುದು. ಕುಟುಂಬದಲ್ಲಿ ಶಾಂತತೆ ಇದ್ದರೂ ಒಳಗೆ ಜ್ವಾಲಾಮುಖಿಯು ಸ್ಫೋಟಿಸಲು ಕಾಯುತ್ತಿರಬಹುದು. ಎಂದೋ ಮಾಡಿದ ಸಹಾಯಕ್ಕೆ ಇಂದು ಪ್ರತಿಫಲ ಸಿಗುವ ಸಾಧ್ಯತೆ ಇದೆ. ಎಂದೂ ಊಹಿಸದ ಘಟನೆಯೊಂದು ಇಂದು ನಡೆಯಬಹುದು. ಸಂದರ್ಭಗಳನ್ನು ನಿಭಾಯಿಸಲು ಕಲಿಯುವ ಅನಿವಾರ್ಯತೆ ಬರಬಹುದು. ಅನಗತ್ಯ ಅಲೆದಾಟವು ನಿಮಗೆ ಕಷ್ಟವಾದೀತು.
ಮಿಥುನ: ಹೊಸ ಪ್ರದೇಶಗಳ ಭೇಟಿಯಿಂದ ನಿಮ್ಮ ಉತ್ಸಾಹವು ಹೆಚ್ಚಾಗಲಿದೆ. ನಿಮ್ಮ ಕೆಲಸವು ಬೇರೆಯವರಿಗೆ ಪ್ರೇರಣೆಯಾದೀತು. ಕುಟುಂಬದಲ್ಲಿ ಕೆಲಸಗಳು ಹೆಚ್ಚಿರಬಹುದು. ಪ್ರಯಾಣದಿಂದ ಆಯಾಸವಾಗಬಹುದು. ವಿಶ್ರಾಂತಿಯನ್ನು ಪಡೆಯಬೇಕಾಗಬಹುದು. ವಿದೇಶ ಪ್ರಯಾಣಕ್ಕೆ ತಯಾರಾಗಿ ನಿಂತಿರುವಿರಿ. ಹೊಸ ಆದಾಯಗಳು ನಿಮಗೆ ವಿದೇಶದಿಂದ ಬರಲಿದೆ. ನಿಮ್ಮ ಶಾಂತಸ್ವಭಾವವನ್ನು ದುರುಪಯೋಗ ಮಾಡಿಕೊಂಡಾರು. ತಂತ್ರಜ್ಞಾನಕ್ಷೇತ್ರದವರಿಗೆ ಸ್ವಲ್ಪ ಹಿನ್ನಡೆಯಾದೀತು. ನಿಮ್ಮ ಸರ್ಜನ ಶೀಲತೆಯನ್ನು ತೋರಿಸಬೇಕಾದೀತು.
ಕಟಕ: ಶಿಸ್ತುಬದ್ಧ ಜೀವನದಿಂದ ಹೊರಬರುವುದು ನಿಮಗೆ ಕಷ್ಟವಾದೀತು. ಹೊಸ ಬದುಕಿಗೆ ಒಗ್ಗಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮವರ ಜೊತೆ ಸಂತೋಷದ ಕ್ಷಣವನ್ನು ಕಳೆಯುವಿರಿ. ಧಾರ್ಮಿಕ ಸ್ಥಳಗಳ ದರ್ಶನವನ್ನು ಮಾಡಿ ಬರುವಿರಿ. ಇಂದೇ ಮುಗಿಸುವ ಕೆಲಸಗಳನ್ನು ನಾಳೆಗೆ ಇಟ್ಟುಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡದವರು ನಿಮ್ಮನ್ನು ಅಪಹಾಸ್ಯ ಮಾಡಿಯಾರು. ಒಬ್ಬರೇ ವಾಹನದಲ್ಲಿ ಸವಾರಿಮಾಡಬೇಡಿ. ತಾಯಿಯ ಕಡೆಯವರಿಂದ ಸಹಾಯವು ಸಿಗಬಹುದು. ಒಳ್ಳೆಯ ಭೋಜನವನ್ನು ಮಾಡುವ ಅವಕಾಶ ತಪ್ಪಿ ಹೋಗಬಹುದು.
-ಲೋಹಿತಶರ್ಮಾ ಇಡುವಾಣಿ