AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಸಿಗಬೇಕಾದ್ದು ಕೈ ತಪ್ಪಿ ಹೋಗಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 10) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರಿಗೆ ಸಿಗಬೇಕಾದ್ದು ಕೈ ತಪ್ಪಿ ಹೋಗಬಹುದು
ಇಂದಿನ ರಾಶಿ ಭವಿಷ್ಯImage Credit source: freepik
Rakesh Nayak Manchi
|

Updated on: May 10, 2023 | 6:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 10 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ಸಾಧ್ಯ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ಗಂಟೆ 02:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:43 ಗಂಟೆ 09:18ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:54 ಗಂಟೆ ಮಧ್ಯಾಹ್ನ 12:29ರ ವರೆಗೆ.

ಧನು: ಸಂಗಾತಿಯ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದರ ಪ್ರಭಾವವು ಕಛೇರಿಯ ಕೆಲಸದಲ್ಲಿಯೂ ಕಾಣಬಹುದು. ಕೆಲಸಗಳು ಅಸ್ತವ್ಯಸ್ತವಾಗಿ ದಿಕ್ಕು ತೋಚದಾದೀತು. ಮಕ್ಕಳು ನಿಮ್ಮನ್ನು ಹಾಸ್ಯ ಮಾಡಿಯಾರು. ಅನ್ಯರ ಸಂಬಂಧವು ನಿಮಗೆ ಅಪರಕೀರ್ತಿಯನ್ನು ತರಬಹುದು. ಎಲ್ಲ ಆಗು ಹೋಗುಗಳಿಗೂ ವಿಧಿಯನ್ನು ತೋರಿಸಿ ಸಮಾಧಾನ ಮಾಡಿಕೊಳ್ಳಬಹುದು. ಪ್ರಯತ್ನಕ್ಕೆ ತಕ್ಕ ಫಲವನ್ನು ನಿರೀಕ್ಷಿಸದೇ ಕೆಲಸ ಮಾಡಿ. ಸಂತೋಷವಾಗಿ ಇರಬಹುದು. ಅತಿ ಆಸೆಯಿಂದ ಇರುವುದನ್ನೂ ಕಳೆದುಕೊಳ್ಳಬೇಕಾದೀತು.

ಮಕರ: ನಿಮ್ಮ ಕೆಲಸದಲ್ಲಿ ನಿಷ್ಠೆ ಇರಲಿದೆ. ಯಂತ್ರೋಪಕರಣಗಳ ಮೇಲೆ ಅಧಿಕ ಮೋಹವಿರಲಿದೆ. ಇಂದು ಕೆಲಸದಲ್ಲಿ ಹೆಚ್ಚು ಆಯಾಸವಾಗಲಿದೆ. ಸಿಗಬೇಕಾದುದ್ದು ಕೈ ತಪ್ಪಿ ಹೋಗಬಹುದು. ಮೊದಲು ನಿಮ್ಮ ನಿರ್ಧಾರವನ್ನು ನೀವು ಮಾಡಿಕೊಳ್ಳಿ. ಇಲ್ಲವಾದರೆ ಇತರರ ತೀರ್ಮಾನಕ್ಕೆ ಶರಣಾಗಬೇಕಾದೀತು. ದ್ವಿಚಕ್ರ ವಾಹನ ಸವಾರರು ನಿಮ್ಮ ರಕ್ಷಣೆಯಲ್ಲಿ ನೀವು ಇರುವುದು ಒಳ್ಳೆಯದು. ಕುಟುಂಬದ ಕೆಲಸದಲ್ಲಿ ಭಾಗವಹಿಸುವಿರಿ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಮಾಡಬಹುದು ಎಂದು ತೋರಿಸುವಿರಿ. ಕೃಷಿಯ ಚಟುವಟಿಕೆ ಹೆಚ್ಚು ಆಸಕ್ತಿಯಿಂದ ತೊಡಗುವಿರಿ.

ಕುಂಭ: ನಿರುದ್ಯೋಗದಿಂದ ನಿಮಗೆ ಬಹಳ ಬೇಸರವಾದೀತು. ಎಲ್ಲರೂ ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹೊಸ ಉದ್ಯಮವನ್ನು ಆರಂಭಿಸಲು ಹೋಗುವುದು ಬೇಡ. ಸಾಮಾನ್ಯರು ಬಹಳ ಕಷ್ಟವನ್ನು ಅನುಭವಿಸುವರು. ಹಣದ ಹರಿವೂ ಸದ್ಯಕ್ಕೆ ಅಷ್ಟಕ್ಕೆಷ್ಟೇ ಇರಲಿದೆ. ಸಣ್ಣ ವಾಗ್ವಾದವು ಅನ್ಯರ ಜೊತೆ ನಡೆಯಲಿದೆ. ಮಾತಿನ ಮೇಲೆ ಹಿಡಿತವಿರಲಿ. ಇಲ್ಲವಾದರೆ ಕಷ್ಟವಾದೀತು. ಸಮಾರಂಭಗಳಿಗೆ ನೀವು ಹೋಗಲಿದ್ದೀರಿ. ನಿಮ್ಮ ಜವಾಬ್ದಾರಿಯ ಕೆಲಸವನ್ನು ಬೇಗ ಮುಗಿಸಿ ಇನ್ನೊಬ್ಬರಿಗೆ ಸಹಾಯ ಮಾಡಲಿರುವಿರಿ. ಅಕಸ್ಮಾತ್ ಬಂದ ಸುದ್ದಿಯು ನಿಮಗೆ ಆತಂಕವನ್ನು ಉಂಟುಮಾಡೀತು.

ಮೀನ: ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ಎಷ್ಟೋ ಕಾಲದ ಅನಂತರ ನಿಮ್ಮ ನಡುವೆ ಆಪ್ತತೆ ಇರಲಿದೆ. ಖರ್ಚಿನ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅವಶ್ಯಕ. ಅಧಿಕಾರಿ ವರ್ಗದಿಂದ ಕಿರಿಕಿರಿ ಆಗಬಹುದು. ಇದೇ ಕಾರಣಕ್ಕೆ ಎಲ್ಲರ ಮೇಲೂ ಕೋಪಗೊಳ್ಳುವ ಸಾಧ್ಯತೆ ಇದೆ. ಮಾನಸಿಕವಾಗಿ ಬೇರೆಯವರಿಗೆ ಹಿಂಸೆಯನ್ನು ಕೊಡಬಹುದು. ಲಾಭವಿಲ್ಲದೇ ಇಂದು ನೀವು ಯಾವ ಕೆಲಸವನ್ನೂ ಮಾಡಲಾರಿರಿ. ನಿಮಗೆ ಪ್ರಶಂಸೆಯು ಸಿಗಬಹುದು.

-ಲೋಹಿತಶರ್ಮಾ ಇಡುವಾಣಿ