Nitya Bhavishya: ಇಂದಿನ ರಾಶಿ ಭವಿಷ್ಯ, ನೀವು ಈ ರಾಶಿಯರೇ? ಸಂಗಾತಿಯ ಜೊತೆ ವಾಗ್ವಾದ ನಡೆದೀತು, ಎಚ್ಚರ..
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ, ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಕ್ಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಹೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:18ರ ವರೆಗೆ.
ಧನುಸ್ಸು: ಸ್ವಂತ ಉದ್ಯಮದಲ್ಲಿ ಹೆಚ್ಚು ಪರಿಶ್ರಮ ಇರಬೇಕಾಗಿ ಬರಬಹುದು. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಸಂಸಾರದಲ್ಲಿ ಆಸಕ್ತಿ ಕಡಿಮೆಯಾಗಬಹುದು. ನೀವು ಇಂದು ನಿಮಗೆ ಪ್ರಿಯವಾದುದ್ದನ್ನು ಪಡೆಯಬಹುದು. ಸಣ್ಣ ಪುಟ್ಟ ಅವಮಾನವಾಗುವ ಸಾಧ್ಯತೆ ಇದೆ. ಅಮೂಲ್ಯವಾದ ವಸ್ತುವು ಕಣ್ಮರೆಯಾಗಿ ಅನಂತರ ಸಿಗಲಿದೆ. ಇಂದು ನೀವು ಬಹಳ ಎಚ್ಚರಿಕೆಯಿಂದ ಇರಿ. ಕೆಡುಕಿಗೆ ಮೊದಲೇ ಮುನ್ಸೂಚನೆಯು ಬರಬಹುದು. ಮಕ್ಕಳಿಗೆ ಆಗಬೇಕಾದ ವಿವಾಹದ ಕುರಿತು ಮನೆಯಲ್ಲಿ ಕುಳಿತು ಎಲ್ಲರ ಜೊತೆ ಮಾತನಾಡುವಿರಿ.
ಮಕರ: ಎಷ್ಟೋ ವರ್ಷದ ಸಾಲವು ಇಂದು ಮುಕ್ತಾಯವಾಗಲಿದೆ. ಕೆಲಸದ ಒತ್ತಡವು ಅಧಿಕವಿದ್ದರೂ ಇಂದಿನ ಕೆಲಸವನ್ನು ಇಂದೇ ಮುಗಿಸುವುದು ಉತ್ತಮ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ಅನಿರೀಕ್ಷಿತವಾದ ಆರ್ಥಿಕಸಂಕಷ್ಟವು ನಿಮ್ಮನ್ನು ಹತಾಶೆಗೊಳಿಸಬಹುದು. ತಾಳ್ಮೆಯಿಂದ ಇದ್ದರೆ ಸಂಬಂಧವನ್ನು ಬಲಪಡಿಸಲು ನಿಮಗೆ ಸಾಧ್ಯವಾಗಬಹುದು. ಕುಟುಂಬದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಹುದು. ನ್ಯಾಯಾಲಯದ ವಿಚಾರದಲ್ಲಿ ಜಯವಾಗುವ ಸಾಧ್ಯತೆ ಇದೆ. ತಾಯಿಯ ಸಂಬಂಧದಿಂದ ಧನಾಗಮನವನ್ನು ನಿರೀಕ್ಷಿಸಬಹುದು. ಗೃಹಕ್ಕೆ ಅವಶ್ಯಕತೆ ಇರುವ ವಸ್ತುಗಳನ್ನು ಖರೀದಿಸುವಿರಿ.
ಕುಂಭ: ನಿಮ್ಮ ಯೋಚನೆಗಳು ಬಹಳ ಬಾಲಿಶವೆಂದು ಅರ್ಥವಾಗುವ ದಿನ ಇಂದು. ಉದ್ಯೋಗದಲ್ಲಿ ನಿಧಾನಗತಿ ಇರಲಿದೆ. ಸಹೋದ್ಯೋಗಿಗಳು ನಿಮಗೆ ತೊಂದರೆ ಕೊಡಬಹುದು. ನಿಮ್ಮ ಕೆಲಸವು ಸಮಯಕ್ಕೆ ಸರಿಯಾಗಿ ಮುಗಿಯದು. ಅಧಿಕ ಖರ್ಚಿನಲ್ಲಿ ನಿಮ್ಮ ಗುರಿಯನ್ನು ಸಾಧಿಸಬಹುದಾಗಿದೆ. ನಿಮ್ಮ ದುರಭ್ಯಾಸವು ನಿಮಗೇ ಆಪತ್ತನ್ನು ತರಬಹುದು. ಸರ್ಕಾರಿ ಅಧಿಕಾರಿಗಳು ನಿಮಗೆ ಬೇಕಾದ ಸಹಾಯವನ್ನು ಮಾಡಬಹುದು. ಹೂಡಿಕೆ ವಿಚಾರಕ್ಕೆ ಸದ್ಯ ತಲೆ ಹಾಕುವುದು ಬೇಡ. ಗೃಹನಿರ್ಮಾಣಕ್ಕೆ ಒಳ್ಳೆಯ ದಿನವಾಗಲಿದೆ. ಧನಾಗಮವು ಕಡಿಮೆಯಾಗಲಿದೆ.
ಮೀನ: ಸುಕೃತವು ನಿಮ್ಮ ಪಾಲಿಗೆ ಅನುಕೂಲತೆಯನ್ನು ಒದಗಿಸಿಕೊಟ್ಟೀತು. ಸಹೋದ್ಯೋಗಿಗಳಿಂದ ನೀವು ಕಛೇರಿಯಲ್ಲಿ ಸಹಾಯ ಪಡೆಯುವ ಸಾಧ್ಯತೆ ಇದೆ. ಯಾವ ಸಂದರ್ಭದಲ್ಲಿಯೂ ಹೆದರಬೇಕಾದ ಅವಶ್ಯಕತೆ ಇಲ್ಲ. ನೀವು ಸುಲಭವಾಗಿ ಎದುರಿಸಬಲ್ಲಿರಿ. ನೀವು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹೊರಗಿನ ವ್ಯಕ್ತಿತ್ವವನ್ನು ನೋಡಿ ನಿಮ್ಮ ತೀರ್ಮಾನವು ಅಸತ್ಯವಾದೀತು. ಹಣಕಾಸಿನ ವಿಚಾರವು ನಿಮಗೆ ಸಂಪೂರ್ಣ ಅರ್ಥವಾಗದೇ ಹೋದೀತು. ಸಂಗಾತಿಯ ಜೊತೆ ವಾಗ್ವಾದ ನಡೆದೀತು. ಸ್ನೇಹ ಸಂಬಂಧವು ಕಡಿಮೆ ಅದೀತು.