Rashi Bhavishya: ಇಂದಿನ ರಾಶಿ ಭವಿಷ್ಯ, ಮನೆಯಲ್ಲಿ ಈ ರಾಶಿಯವರ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದು

|

Updated on: May 08, 2023 | 6:00 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 8) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿ ಭವಿಷ್ಯ, ಮನೆಯಲ್ಲಿ ಈ ರಾಶಿಯವರ ವಿವಾಹಕ್ಕೆ ಗ್ರೀನ್ ಸಿಗ್ನಲ್ ಸಿಗಬಹುದು
ಇಂದಿನ ರಾಶಿ ಭವಿಷ್ಯ
Image Credit source: FREEPIK
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 8 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖಮ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಶಿವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ.

ಸಿಂಹ: ಸ್ನೇಹಿತರ ಮಾತು ನಿಮ್ಮನ್ನು ಕೆರಳಿಸೀತು. ಉದ್ವೇಗದಲ್ಲಿ ನೀವು ಮಾತನಾಡುವಿರಿ. ಇದು ನಿಮ್ಮನ್ನು ಅಪಹಾಸ್ಯಕ್ಕೆ ದಾರಿ ಮಾಡಿಕೊಟ್ಟೀತು. ನಿಮ್ಮ ಪ್ರೇಮಪ್ರಕರಣವು ಸುಖಾಂತ್ಯವಾಗಲಿದೆ. ಮನೆಯಲ್ಲಿ ವಿವಾಹಕ್ಕೆ ಒಪ್ಪಿಗೆ ಸಿಗಬಹುದು. ಕಛೇರಿಯಲ್ಲಿ ಕೆಲಸದ ಸಮಯದಲ್ಲಿ ಅಡ್ಡಾಡುತ್ತಿರುವುದನ್ನು ಕಂಡು ಸೂಚನೆ ಕೊಟ್ಟಾರು. ಪತಿಯಿಂದ ಕೆಲವು ವಿಷಯಗಳು ಮುಚ್ಚಿಡಲ್ಪಡುತ್ತವೆ. ಸಿಕ್ಕಿರುವುದನ್ನು ಪ್ರೀತಿಯಿಂದ ಸ್ವೀಕರಿಸಿ. ಕೊರಗುವ ಅವಶ್ಯಕತೆ ಇಲ್ಲ. ಬಂದ ಹಣವನ್ನು ಖಾಲಿ ಮಾಡದೇ ರಕ್ಷಣೆ ಮಾಡಿ. ಭವಿಷ್ಯದ ಸಂಪತ್ತಾಗಬಹುದು. ಯಾರನ್ನೂ ಅತಿಯಾಗಿ ಕಾಯಿಸಬೇಡಿ.

ಕನ್ಯಾ: ಎಲ್ಲ ಕೆಲಸ ಅಪೂರ್ಣವಾಗಲಿದ್ದು ಬಹಳ ಖೇದ ಉಂಟಗಬಹುದು. ಸಂಗಾತಿಯೂ ನಿಮ್ಮ ಮಾತನ್ನು ಕೇಳದೇ ಸ್ವತಂತ್ರವಾಗಿ ವರ್ತಿಸುವಳು. ಅನಾರೋಗ್ಯವು ಹೆಚ್ಚಾಗಿ ದಿನಚರ್ಯೆಯನ್ನೇ ಬದಲಿಸುವ ತೀರ್ಮಾನಕ್ಕೆ ಬರಬಹುದು. ಸಾಮರ್ಥ್ಯವಿದ್ದರೂ ಅವಕಾಶದ ಕೊರತೆ ಇರಲಿದೆ. ಹಿರಿಯರ‌ ಮಾತಿಗೆ ಗೌರವ ಕೊಡಿ. ತಂದೆಗೆ ಎದುರಾಡಬೇಕಾದ ಸ್ಥಿತಿಯನ್ನು ತಂದುಕೊಳ್ಳಬೇಡಿ. ತಾಯಿಯ ಕಡೆಯಿಂದ ಉದ್ಯೋಗಕ್ಕೆ ಬೇಕಾದ ಸಹಾಯ ಸಿಗಬಹುದು. ಒತ್ತಡ ನಿವಾರಣೆಗೆ ಧ್ಯಾನವನ್ನು ಮಾಡಿ. ಅಪರಿಚಿತರು ವೇಗವಾಗಿ ಆಪ್ತರಾದಾರು. ಅಂದುಕೊಂಡಿದ್ದು ಆಗಲಿಲ್ಲ ಎಂಬ ಬೇಸರವು ಉಂಟಾದೀತು.

ತುಲಾ: ಮನಸ್ಸಿಲ್ಲದ‌ ಮನಸ್ಸಿನಿಂದ ಇಂದು ನೀವು ಅಧ್ಯಾತ್ಮದ ಚಿಂತನೆಯಲ್ಲಿ ತೊಡಗಿಕೊಳ್ಳಬೇಕಾಗಬಹುದು. ಶುಭವಾರ್ತೆಯು ನಿಮ್ಮ ಕೆಲಸಕ್ಕೆ ಬೆಂಬಲವನ್ನು ಕೊಡುವುದು‌. ಜವಾಬ್ದಾರಿಯುತ ಸ್ಥಾನವು ನಿಮಗೆ ಬರಬಹುದು. ಜಾಗರೂಕತೆಯಿಂದ ಅದನ್ನು ನಿರ್ವಹಿಸಬೇಕಾಗಬಹುದು. ಮನಸ್ಸಿಗೆ ಕೆಲವು ಮಾತುಗಳು ಕಿರಿಕಿರಿಯನ್ನು ಉಂಟುಮಾಡಬಹುದು. ವಿನಮ್ರತೆಯು ನಿಮ್ಮ ಕೆಲಸಕ್ಕೆ ಜಯವನ್ನು ಕೊಟ್ಟೀತು. ಆದ್ಯತೆಯ ಮೇರೆಗೆ ಕೆಲಸವನ್ನು ಮಾಡಿ ಮುಗಿಸಿ. ಶಿಸ್ತಿನ ಸ್ವಭಾವವು ಇಷ್ಟವಾದೀತು. ಸತ್ಯವನ್ನು ಹೇಳಿ ತೊಂದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ಆಸ್ತಿ ಖರೀದಿಯನ್ನು ಮಾಡುವಿರಿ.

ವೃಶ್ಚಿಕ: ವೃತ್ತಿಯಲ್ಲಿ‌ ನೀವು ಜಾಣ್ಮೆಯಿಂದ ಕೆಲಸ ಮಾಡುವಿರಿ. ಅಪವಾದಗಳನ್ನು ಧೈರ್ಯದಿಂದ ಎದುರಿಸುವ ಛಾತಿಯನ್ನು ಹೊಂದಿರುವಿರಿ. ನಿಮ್ಮ ಜ್ಞಾನವನ್ನು ಕಂಡು ಅಚ್ಚರಿಗೊಳ್ಳಬಹುದು. ಸಂವೇದನಾಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ. ಚೌಕಟ್ಟಿನಲ್ಲಿ ಕೆಲಸ ಮಾಡುವುದು ನಿಮಗೆ ಬಹಳ ಕಷ್ಟವಾದೀತು. ನಿಮ್ಮ ಇಂದಿನ ಸಂಭ್ರಮಕ್ಕೆ ಕಾರಣ ಬೇಕಾಗಿರುವುದಿಲ್ಲ. ಆನಾರೋಗ್ಯದ ಸಮಸ್ಯೆಯನ್ನು ಬೇಗ ಪರಿಹರಿಸಿಕೊಳ್ಳುವಿರಿ. ದೂರದ ಬಂಧುಗಳ ಆಗಮನವಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟ ಮಾತುಕತೆ ನಡೆಯಬಹುದು. ಉದ್ಯೋಗಿಗಳಾಗಿದ್ದರೆ ವೃತ್ತಿಯನ್ನು ಬಿಡುವ ಆಲೋಚನೆಯಲ್ಲಿ ನೀವಿರುವಿರಿ.

-ಲೋಹಿತಶರ್ಮಾ ಇಡುವಾಣಿ