Daily Horoscope: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 08) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 8) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖಮ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಶಿವ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಬೆಳಗ್ಗೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ.
ಮೇಷ: ನಿಮ್ಮ ದುಡಿಮೆಯ ದಾರಿಯನ್ನು ಬಹಿರಂಗ ಮಾಡಬೇಡಿ. ಅಸೂಯೆ ಪಟ್ಟಾರು. ಅದು ನಿಮಗೆ ನಕಾರಾತ್ಮಕ ಪ್ರಭಾವವನ್ನು ಬೀರಬಹುದು. ಸಹೋದರನ ಭೇಟಿಯಿಂದ ಖುಷಿ ಸಿಗಲಿದೆ. ವ್ಯಾಪರವು ಅಲ್ಪ ಲಾಭವನ್ನು ತಂದೀತು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿಡಿತವಿರಲಿ. ಯಥೇಚ್ಛವಾದ ಖರ್ಚು ಬೇಡ. ವಾಹನ ಓಡಾಟವನ್ನು ಕಡಿಮೆ ಮಾಡುವುದು ಒಳ್ಳೆಯದು. ಕಛೇರಿಯಲ್ಲಿ ನಿಮ್ಮ ಹಂತದಲ್ಲಿ ಬಗೆ ಹರಿಯುವ ಸಮಸ್ಯೆಗಳನ್ನು ಮೇಲಕ್ಕೆ ಒಯ್ಯವುದು ಬೇಡ. ಅದು ಇನ್ನೊಂದು ಮುಖವನ್ನೂ ತೋರಿಸೀತು. ಎಚ್ಚರಿಕೆಯಿಂದ ಇರಿ.
ವೃಷಭ: ನಿಮಗೆ ಅನಾರೋಗ್ಯವಿದ್ದರೆ ವಿಶ್ರಾಂತಿ ಪಡೆಯುವುದು ಉತ್ತಮ. ಮನೆಯ ಕೆಲಸವನ್ನು ಎಲ್ಲರ ಸಹಾಯದಿಂದ ಬೇಗ ಮುಗಿಸುವಿರಿ. ಯೋಗ್ಯತೆ ಇದ್ದರು ಯೋಗದ ಬಲ ಅಲ್ಪವಿದೆ. ಹಾಗಾಗಿ ಹೆಚ್ಚು ಪ್ರಯತ್ನದ ಅವಶ್ಯಕತೆ ಇದೆ. ಫಲವನ್ನೂ ಅತಿಯಾಗಿ ನಿರೀಕ್ಷಿಸಬೇಡಿ. ಒತ್ತಾಯದಿಂದ ನೀವಿಂದು ಪ್ರಯಾಣ ಮಾಡಲಿದ್ದೀರಿ. ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆಯನ್ನು ಬಿಡಿ. ನಿಮಗೆ ಬೇಕಾದ ಹಾಗೆ ಎಲ್ಲವೂ ಲಭ್ಯವಾಗದು. ಸಿಕ್ಕಿದ್ದನ್ನು ಸದುಪಯೋಗ ಮಾಡಿಕೊಳ್ಳುವುದು ಜಾಣ್ಮೆ. ಅತಿಯಾದ ನಿದ್ರೆಯಿಂದ ಜಾಡ್ಯ ಉಂಟಾಗಬಹುದು. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಮಿಥುನ: ಎಲ್ಲರನ್ನೂ ಒಗ್ಗೂಡಿಸಲು ನೀವು ಶ್ರಮಪಡಬೇಕಾದೀತು. ಆವರಣವನ್ನು ಖರೀದಿಸುವ ಮನಸ್ಸು ಉಂಟಾಗಬಹುದು. ಉಳಿಸಿದ ಹಣವು ನಿಮ್ಮ ಆಪತ್ತಿಗೆ ನೆರವಾಗುವುದು. ಕಷ್ಟವಾದರೂ ಕಛೇರಿಯಲ್ಲಿ ಕೆಲಸವನ್ನು ಮಾಡಬೇಕಾದೀತು. ಸರ್ಕಾರಿ ನೌಕರರು ಬಡ್ತಿ ಪಡೆಯಬಹುದು. ಸಂದರ್ಭಕ್ಕೆ ಅನುಸಾರವಾಗಿ ನಿಮ್ಮ ಮಾತುಗಳಿರಲಿ. ಏನನ್ನಾದರೂ ಕೇಳಿ ಬಂದರೆ ಇಲ್ಲ ಎನದೇ ಏನನ್ನಾದರೂ ಕೊಟ್ಟು ಕಳುಹಿಸಿ. ಕೆಲಸದಿಂದ ಹೆಚ್ಚು ದಣಿವಾದೀತು. ಕುಟುಂಬ ಜೊತೆ ಆರೋಗ್ಯದ ಬಗ್ಗೆ ಹಂಚಿಕೊಳ್ಳಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡಬೇಡಿ.
ಕಟಕ: ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡಿ. ಮಕ್ಕಳ ಜೊತೆ ಶಾಂತ ರೀತಿಯಿಂದ ವರ್ತಿಸಿ. ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ. ಸ್ತ್ರೀಯರು ಆಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಕುಟುಂಬದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡು ವಾದಗಳನ್ನು ಮಾಡಬಹುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲಿದ್ದೀರಿ. ಧ್ಯಾನ, ಭಜನೆಗಳಿಗೆ ಹೆಚ್ಚು ಸಮಯವನ್ನು ಕೊಡುವಿರಿ. ಬೆಳಗಿನ ಉತ್ಸಾಹವು ಸಂಜೆಯ ತನಕ ಇರಲಿದೆ. ಸ್ನೇಹಿತರಿಂದ ಅಮೂಲ್ಯವಾದ ಉಡುಗೊರೆ ಸಿಗಲಿದೆ.