Horoscope: ಮಕ್ಕಳ ಶ್ರಮವನ್ನು ಕಂಡು ಸಂತೋಷ ಪಡುವಿರಿ, ಅವರ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:12 ರಿಂದ 07:48 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:25 ರಿಂದ 11:01ರ ವರೆಗೆ.
ತುಲಾ: ಯಂತ್ರೋಪಕರಣ ಹಾಗೂ ವಾಹನದ ಕಾರಣಕ್ಕೆ ನಿಮ್ಮ ಹಣವು ಖರ್ಚಾಗಬಹುದು. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಹತಾಶೆಯು ಸ್ವಲ್ಪ ಸಮಯ ಕಾಡಬಹುದು. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಇನ್ನೊಬ್ಬರಿಗೆ ಹೇಳಲು ಅಂಜುವಿರಿ. ದಾಂಪತ್ಯದಲ್ಲಿ ಮಾತಿಗೆ ಮಾತು ಬೆಳೆದು ಅಣ್ಣ ಬಿರುಕು ಬಿಡಬಹುದು. ಪ್ರೇಮಿಯನ್ನು ನೀವು ಬಹಳ ಜತನದಿಂದ ನೋಡಿಕೊಳ್ಳಬೇಕಾದ ಅವಶ್ಯಕತೆ ಇರಲಿದೆ. ಹಿರಿಯರಿಗೆ ಎದುರುತ್ತರವನ್ನು ಕೊಡುವ ಅಭ್ಯಾಸ ಒಳ್ಳೆಯದಲ್ಲ. ಹೇಳಿದಂತೆ ಮಾಡಿ. ಲಕ್ಷ್ಮೀಕಟಾಕ್ಷವನ್ನು ಬಯಸಿ ಇಂದು ಮನೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡುವಿರಿ.
ವೃಶ್ಚಿಕ: ಮಾತಿನಿಂದ ದ್ವೇಷವನ್ನು ಕಟ್ಟಿಕೊಳ್ಳುವಿರಿ. ಉತ್ಸಾಹದಿಂದ ವಾಹನೆ ಚಾಲನೆ ಬೇಡ. ಅಪಾಯವನ್ನು ತಂದುಕೊಳ್ಳಬಹುದು. ಮೇಲಧಿಕಾರಿಗಳ ಜೊತೆ ಸಂಬಂಧವು ಚೆನ್ನಾಗಿರಲಿ. ಸ್ತ್ರೀಯರು ಎಚ್ಚರಿಕೆಯಿಂದ ಇರುವುದು ಮುಖ್ಯ. ಖಾಸಗಿ ಸಂಸ್ಥೆಯಲ್ಲಿ ಉನ್ನತಸ್ಥಾನವನ್ನು ಪಡೆಯುವಿರಿ. ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಕೂಡಿಬರಬಹುದದು. ಉದ್ಯೋಗವನ್ನು ಬದಲಿಸಿ ಉತ್ತಮ ಉದ್ಯೋಗವನ್ನು ಗಳಿಸುವಿರಿ. ವಿದ್ಯಾರ್ಥಿಗಳು ಓದಿನ ಕಡೆಗೆ ಲಕ್ಷ್ಯ ವಹಿಸದೇ ಧನಾರ್ಜನೆಯತ್ತ ಗಮನ ಹರಿಸುವಿರಿ. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ ಮಾಡುವ ಕೆಲಸದತ್ತ ಏಕಾಗ್ರತೆಯನ್ನು ಪ್ರಾರ್ಥಿಸಿ.
ಧನು: ಮಕ್ಕಳ ಶ್ರಮವನ್ನು ಕಂಡು ಪಾಲಕರಿಗೆ ಸಂತೋಷವಾಗಲಿದೆ. ನಿಮ್ಮವರ ಆರೋಗ್ಯದಲ್ಲಿ ಏರುಪೇರಾಗಿದ್ದ ತುರ್ತು ಚಿಕಿತ್ಸೆಯನ್ನು ಕೊಡಿಸಬೇಕಾದೀತು. ಹಲವು ದಿನಗಲಕ ಅನಂತರ ನೀವು ಋಣಮುಕ್ತರಾಗಿದ್ದೀರಿ. ವೃತ್ತಿಯಲ್ಲಿ ನಿಮಗೆ ಕಿರಿಕಿರಿ ಉಂಟಾಗಲಿದೆ. ಉನ್ನತ ಹುದ್ದೆಗೆ ಆಯ್ಕೆಯಾಗುವ ಸಂಭವವಿದೆ. ಮಕ್ಕಳ ಭವಿಷ್ಯವನ್ನು ನೀವು ಲಕ್ಷಿಸಿ ಕೆಲಸ ಮಾಡುವುದು ಉತ್ತಮ. ಸಮಯ ಮಿತಿಯನ್ನು ಅರಿತು ಕೆಲಸದಲ್ಲಿ ತೊಡಗಿಕೊಳ್ಳಿ. ನಿಮ್ಮ ಸ್ವಭಾವವನ್ನು ಬೇರೆಯವರು ದುರುಪಯೋಗಪಡಿಸಿಕೊಳ್ಳಬಹುದು. ನಿಮ್ಮ ಚಿಂತನಾಕ್ರಮವನ್ನು ಬದಲಿಸಿಕೊಳ್ಳಿ. ಸುಖವಾಗಿ ಇರಬಹುದು.
ಮಕರ: ನೀವು ಇಂದು ಉದ್ಯೋಗಕ್ಕೆ ಸೇರಿಕೊಂಡಿದ್ದು ಉದ್ವೇಗಕ್ಕೆ ಒಳಗಾಗುವಿರಿ. ಕೆಲಸಕ್ಕೆ ಧೈರ್ಯದ ಕೊರತೆ ಇರಲಿದ್ದು ಇನ್ನೊಬ್ಬರ ಸಹಾಯದ ಜೊತೆ ನಿಮಗೆ ಕೊಟ್ಟ ಕೆಲಸವನ್ನು ಮುಗಿಸುವಿರಿ. ಕುಟುಂಬದ ಜೊತೆ ಮಾತುಕತೆಯಲ್ಲಿ ಸಮಯವನ್ನು ಕಳೆಯುವಿರಿ. ಸಮಾಜದಿಂದ ಗೌರವದ ನಿರೀಕ್ಷೆಯಲ್ಲಿ ನೀವಿರುವಿರಿ. ತೀರ್ಥ ಕ್ಷೇತ್ರಗಳ ದರ್ಶನವನ್ನು ಮಕ್ಕಳ ಸಹಾಯದಿಂದ ಮಾಡುವಿರಿ. ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸುವಿರಿ. ಅನಾದರವನ್ನು ನೀವು ಲೆಕ್ಕಿಸದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಶಿವನ ಆರಾಧನೆಯು ಬಹಳ ಮುಖ್ಯವಾದುದು.
ಕುಂಭ: ಆಸ್ತಿಯ ವಿಚಾರದಲ್ಲಿ ಹಿನ್ನಡೆಯಾಗಲಿದ್ದು, ನಿಮ್ಮ ಮನಸ್ಸೂ ಉತ್ಸಾಹವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮಾತನ್ನು ನೀವು ಕೇಳಬೇಕಾದೀತು. ಸ್ನೇಹಿತರಿಗೋಸ್ಕರವಾದರೂ ನೀವು ಹಣವನ್ನು ವ್ಯಯಮಾಡುವಿರಿ. ತಂದೆಯ ಕಡೆಯಿಂದ ಆಸ್ತಿಯನ್ನು ಪಡೆಯಲು ಆಲೋಚಿಸುವಿರಿ. ಆರೋಗ್ಯವು ಸರಿಯಾಗುತ್ತಿದ್ದರೂ ಆಸಕ್ತಿಯು ಕಡಿಮೆ ಇರಲಿದೆ. ನಿಮ್ಮ ವಸ್ತುಗಳನ್ನು ಅತಿಯಾಗಿ ಬಳಸಿ ಹಾಳು ಮಾಡಿಕೊಳ್ಳುವಿರಿ. ನೀವು ಇನ್ನೊಬ್ಬರನ್ನು ಹೋಲಿಕೆ ಮಾಡಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ. ಶನಿಯ ಅನುಗ್ರಹವನ್ನು ಪಡೆಯಲು ಶನೈಶ್ಚರನಿಗೆ ಎಳ್ಳೆಣ್ಣೆಯ ನಂದಾದೀಪವನ್ನು ಸಂಕಲ್ಪದ ಜೊತೆ ಬೆಳಗಿ.
ಮೀನ: ಇಂದು ನಿಮಗೆ ಸಲ್ಲದ ಸಣ್ಣ ಅಪವಾದವೊಂದು ಬರಲಿದೆ. ಕಲಾವಿದರಿಗೆ ಉತ್ತಮ ಅವಕಾಶ ಹಾಗೂ ಪ್ರಶಂಸೆಯು ಸಿಗಲಿದೆ. ಇಂದು ನಿಮಗೆ ಕಾರ್ಯವು ಆಗಲೇಬೇಕಾಗಿದ್ದು ಪ್ರಯಾಣವು ಅನಿವಾರ್ಯ ವಾಗಬಹುದು. ಒಂದೇ ಬಾರಿಗೆ ಖರ್ಚಿನ ಎಲ್ಲ ಅವಕಾಶಗಳನ್ನು ಇಟ್ಟುಕೊಲ್ಳುವುದು ಬೇಡ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರಲಿದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚುನಲ್ಲಿ ಸ್ವಲ್ಪ ಕಡಿಮೆ ಆಗಿದ್ದು ನಿಮಗೆ ಖುಷಿಯ ವಿಚಾರವಾಗಿದೆ. ನಿಮ್ಮ ನೀರೀಕ್ಷೆಯ ಮಟ್ಟಕ್ಕೆ ವ್ಯಾಪಾರವು ತಲುಪದಿರುವುದು ನಿಮ್ಮನ್ನು ಹತಾಶೆಗೊಳಿಸಬಹುದು.