ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದಶಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಸೌಭಾಗ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 03:46 ರಿಂದ 05:23ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:32 ರಿಂದ 02:09ರ ವರೆಗೆ.
ಧನುಸ್ಸು: ಈ ದಿನ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗಬಹುದು. ಆನಾರೋಗ್ಯವೂ ಒತ್ತಡವೂ ನಿಮ್ಮ ಮಾನಸಿಕ ಸ್ಥಿತಿಯನ್ನು ಕುಗ್ಗಿಸಬಹುದು. ಕುಟುಂಬ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರ ಜೊತೆ ನಿಮ್ಮ ವ್ಯವಹಾರವನ್ನು ಇಟ್ಟುಕೊಳ್ಳಿ. ಮನೆಯ ಹಿರಿಯ ಆರೋಗ್ಯವು ದುರ್ಬಲವಾಗಿದ್ದು ನಿಮಗೆ ಚಿಂತೆಯುಂಟುಮಾಡಬಹುದು. ತಪ್ಪು ಲೆಕ್ಕಾಚಾರದಿಂದ ನಷ್ಟವಾಗಬಹುದು. ಅನಗತ್ಯ ಟೀಕೆಗಳನ್ನು ಯಾರ ಮೇಲೂ ಮಾಡಲು ಹೋಗಬೇಡಿ. ಅಹಂಕಾರವನ್ನು ತಗ್ಗಿಸಿಕೊಂಡು ಎಲ್ಲರ ಜೊತೆ ಇಂದು ಬೆರೆಯಿರಿ.
ಮಕರ: ರಾಜಕೀಯದಲ್ಲಿ ಸಕ್ರಿಯರಾಗಿದ್ದರೆ ನಿಮ್ಮ ವರ್ಚಸ್ಸು ಅಧಿಕವಾಗುವುದು. ಅಸಹಜವಾಗಿ ಎದ್ದ ವೈಮನಸ್ಯವನ್ನು ನೀವು ಶಾಂತಗೊಳಿಸಲು ಬಹಳ ಶ್ರಮಪಡಬೇಕಾದೀತು. ಕಚೇರಿಯಲ್ಲಿ ಕೆಲಸದ ಒತ್ತಡ ಇಂದು ಅಧಿಕವಾಗಿರಲಿದೆ. ಅಧಿಕ ಲಾಭವನ್ನು ಪಡೆದುಕೊಳ್ಳುವ ಕೆಲವನ್ನು ಅನ್ವೇಷಣೆ ಮಾಡುವಿರಿ. ನೂತನ ಗೃಹದ ನಿರ್ಮಾಣದ ಬಗ್ಗೆ ನಿಮಗೆ ಅತ್ಯಂತ ಬಲವಾದ ಬಯಕೆ ಇರಲಿದೆ. ಬಹುನಿರೀಕ್ಷಿತ ಕೆಲಸದ ಯೋಗದಿಂದ ಯಶಸ್ಸಿದೆ. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮಿತ್ರರ ಬೆಂಬಲವನ್ನು ಪಡೆಯುವಿರಿ. ಮಾತಿನಲ್ಲಿ ಕಠಿಣ್ಯವನ್ನು ನೀವು ಬೆಳೆಸಿಕೊಳ್ಳುವಿರಿ. ವಿವೇಚನೆಯಿಂದ ನಿಮಗೆ ಬರುವ ಆಪತ್ತಿನಿಂದ ಹೊರ ಬನ್ನಿ.
ಕುಂಭ: ಈ ದಿನವನ್ನು ನೀವು ಆರಾಮವಾಗಿ ಕಳೆಯುವುರಿ. ವೃತ್ತಿಜೀವನದಲ್ಲಿ ನಿಮ್ಮ ಪ್ರಯತ್ನವು ಫಲಕೊಡುವುದು. ನಿಮ್ಮ ನಾಯಕನಿಂದ ನಿಮಗೆ ಬೇಕಾದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸ ಮಾಡುವ ವಿಧಾನವು ಸರಿ ಇದೆಯೇ ಎಂದು ತಿಳಿದುಕೊಳ್ಳಿ. ಅಮೂಲ್ಯವಾದ ವಸ್ತುವನ್ನು ಪಡೆದು ನೀವು ಸಂತೋಷಿಸುವಿರಿ. ವೃತ್ತಿಜೀವನದಲ್ಲಿ ಪ್ರಭಾವ ಎಷ್ಟಿದೆ ಎಂದು ಇಂದು ತಿಳಿಯುವುದು. ನೀವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಇಂದು ತೆಗೆದುಕೊಳ್ಳುವ ಸೂಕ್ತ ನಿರ್ಧಾರವು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ದೈನಂದಿನ ಚಟುವಟಿಕೆಗಳ ಬಗ್ಗೆ ನಿಮಗೆ ನಿರಾಸಕ್ತಿ ಇರಲಿದೆ. ಏಕಾಂತವನ್ನು ಇಂದು ಹೆಚ್ಚು ಇಷ್ಟಪಡುವಿರಿ.
ಮೀನ: ಅನುಭವಿ ಜನರಿಂದ ನೀವು ಸಹಕಾರ ಪಡೆಯುವಿರಿ. ವೃತ್ತಿಜೀವನದಲ್ಲಿ ಪರಿಣಾಮ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಮಧ್ಯಮವಾಗಿರುತ್ತದೆ. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಬಹುದು. ವೃತ್ತಿಕ್ಷೇತ್ರದಲ್ಲಿ ಇಂದು ಅತಿಯಾದ ಉತ್ಸಾಹ ಬೇಡ. ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಬಹುದು. ಹೆಚ್ಚು ಕುತೂಹಲ ಬೇಡ. ಪ್ರಯಾಣದಲ್ಲಿ ಜಾಗರೂಕರಾಗಿರಿ. ಅವಘಡಗಳು ಸಂಭವಿಸಬಹುದು. ಆರ್ಥಿಕ ಅಪಾಯವನ್ನು ತೆಗೆದುಕೊಳ್ಳಬೇಡಿ. ಮೃದು ಮಾತು ನಿಮಗೆ ಪ್ರಯೋಜನವನ್ನು ನೀಡುವುದು. ಕುಟುಂಬದಲ್ಲಿನ ಕಿರಿಕಿರಿ ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಶುದ್ಧ ಮನಸ್ಸಿನಿಂದ ಇಷ್ಟದೇವರನ್ನು ಧ್ಯಾನಿಸಿ.
-ಲೋಹಿತಶರ್ಮಾ ಇಡುವಾಣಿ