Nitya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಆದಾಯದ ಮೂಲಕ್ಕೆ ತೊಂದರೆ ಬರಬಹುದು.
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 1) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ 03:43ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ.
ಧನು: ಯಂತ್ರೋಪಕರಣವು ನಿಮಗೆ ಲಾಭವನ್ನು ತಂದೀತು. ನಿಮಗಾಗದ್ದನ್ನು ನೀವು ಎಂದಿನಂತೆ ವಿರೋಧಿಸುವಿರಿ. ಕಛೇರಿಯಲ್ಲಿ ಕೆಲಸವು ಬಹಳ ಒತ್ತಡವಿದ್ದರೂ ಕೆಲಸವನ್ನು ಬದಲಾಯಿಸುವ ಬಗ್ಗೆ ಆಲೋಚನೆ ಬೇಡ. ನೀವು ಏನನ್ನಾದರೂ ಸಾಧಿಸಬೇಕು ಎಂಬ ಫಲವನ್ನು ಇಟ್ಟುಕೊಂಡೇ ಕೆಲಸಕ್ಕೆ ಸೇರಿರುವಿರಿ. ನಿಮಗಾದ ಅವಮಾನವು ನಿಮ್ಮನ್ನು ಹಠವಾದಿಯನ್ನಾಗಿ ಮಾಡಿದೆ. ವಿವಾಹಕ್ಕೆ ಸಂಬಂಧಿಸಿದ ಮಾತುಗಳನ್ನು ನೀವು ಕೇಳಿದರೂ ಯಾವ ಪ್ರತಿಕ್ರಿಯೆಯು ನಿಮ್ಮಿಂದ ಬಾರದು. ಹಣಕಾಸಿನ ವಿಚಾರದಲ್ಲಿ ಆದಾಯ ಮತ್ತು ಖರ್ಚುಗಳು ಸಮವಾಗಿರಲಿದೆ.
ಮಕರ: ಹೊಸಬರನ್ನು ಪರಿಚಯ ಮಾಡಿಕೊಳ್ಳುವ ಉತ್ಸಾಹವು ನಿಮಗೆ ಇರಲಿದೆ. ಸ್ತ್ರೀಯರ ಜೊತೆ ಹೆಚ್ಚು ಮಾತನಾಡುವಿರಿ. ಹಿರಿಯರು ನಿಮಗೆ ಕಾಲಕ್ಕೆ ಬೇಕಾದುದನ್ನು ಹೇಳಿಕೊಟ್ಟಾರು. ಸರಳತೆಯನ್ನು ರೂಢಿಸಿಕೊಳ್ಳಲು ನಿಮಗೆ ಇಷ್ಟವಿದ್ದರೂ ನಿಮ್ಮವರು ಅದನ್ನು ಬಿಡರು. ನೀವು ನಿಮ್ಮ ಸಮಯವನ್ನು ಇತರರಿಗೆ ನೀಡಲಿದ್ದೀರಿ. ನಿಮ್ಮ ಹಾಸ್ಯ ಪ್ರವೃತ್ತಿಯು ಬೇಸರವನ್ನು ತರಿಸೀತು. ಒಳ್ಳೆಯದನ್ನು ನೀವು ಎದುರುನೋಡುತ್ತಿರಬಹುದು. ಅಕಾರಣ ಸಂತೋಷವು ನಿಮಗೆ ಆತಂಕವನ್ನು ತಂದುಕೊಟ್ಟೀತು. ಪ್ರೇಮಿಗಳು ಇಂದು ಒಟ್ಟಿಗೇ ಹೆಚ್ಚು ಕಾಲ ಕಳೆಯುವರು.
ಕುಂಭ: ಪ್ರಭಾವೀ ವ್ಯಕ್ತಿಗಳ ಜೊತೆ ಮಾತನಾಡುವಾಗ ಎಚ್ಚರಿಕೆ ಅಗತ್ಯ. ನಿಮ್ಮ ಎಂದಿನ ವರಸೆಯನ್ನು ಅವರ ಮುಂದೆ ತೆರೆಯಬೇಡಿ. ಸಾಹಸಪ್ರವೃತ್ತಿಯು ಹುಟ್ಟಿಕೊಳ್ಳಬಹುದು. ನಿಮ್ಮ ತಲೆಯಲ್ಲಿ ನೂರಾರು ಆಲೋಚನೆಗಳು ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಸಮಯವು ಹಿಡಿಯಬಹುದು. ಕಛೇರಿಯಲ್ಲಿ ನಿಮಗೆ ಸಹಾಯವನ್ನು ಮಾಡಲು ಬರಬಹುದು. ಸ್ತ್ರೀಯರು ತಮ್ಮ ಅನುಕೂಲತೆಗಳನ್ನು ಕೆಲಸಮಾಡುವರು. ಸಮಯಕ್ಕೆ ಗೌರವವನ್ನು ಕೊಡಿ. ನಿಮ್ಮನ್ನು ದ್ವೇಷಿಸುವವರು ನಿಮ್ಮೆದುರೇ ಬರಬಹುದು. ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಉತ್ತಮ.
ಮೀನ: ನಿಮ್ಮ ಸ್ನೇಹಿತರ ಮೇಲಿನ ವಿಶ್ವಾಸದಿಂದ ಯಾರಿಗೋ ನಿಮ್ಮ ಹಣವನ್ನು ಕೊಟ್ಟರೆ ಮತ್ತೆ ಬಾರದೇ ಇದ್ದೀತು. ಅಮೂಲ್ಯವಾದ ನಿಮ್ಮ ವಸ್ತುವು ಕಾಣಿಸದೇ ಇದ್ದೀತು ಅಥವಾ ಕಳ್ಳತನವೂ ಆಗಬಹುದು. ಮಕ್ಕಳಿಂದ ನಿಮಗೆ ಪ್ರಶಂಸೆಯು ಸಿಗಬಹುದು. ವ್ಯವಹಾರವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅದಕ್ಕಾಗಿ ಬಿಡುವ ಯೋಚನೆಯನ್ನು ಮಾಡುವಿರಿ. ಆದಾಯದ ಮೂಲಕ್ಕೇ ತೊಂದರೆ ಬರಬಹುದು. ಅತಿಯಾದ ಆತ್ಮವಿಶ್ವಾಸವು ನಿಮಗೆ ಕಂಟಕವಾದೀತು. ಮಾನಸಿಕ ಒತ್ತಡವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದು ಉತ್ತಮ.
-ಲೋಹಿತಶರ್ಮಾ ಇಡುವಾಣಿ