Daily Horoscope: ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ

ಇಂದಿನ (2023 ಜೂನ್ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 02, 2023 | 12:02 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಕಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 10:54 ರಿಂದ 12:30ರ ವರೆಗೆ, ಯಮಘಂಡ ಕಾಲ 03:44 ರಿಂದ 05:20ರ ವರೆಗೆ, ಗುಳಿಕ ಕಾಲ 07:20 ರಿಂದ 09:17ರ ವರೆಗೆ.

ಮೇಷ: ಅಲ್ಪ ಹಣವನ್ನೂ ನೀವು ಕೂಡಿಡುವ ಆಲೋಚನೆ ಬರಲಿದೆ. ಖರ್ಚುಗಳನ್ನು ಕಡಿಮೆ‌ ಮಾಡಲು ನೀವು ಸೋಲುವಿರಿ. ಕುಟುಂಬದ ಕುರಿತು ನಿಮ್ಮ ಅಭಿಪ್ರಾಯವು ಸರಿಯಾಗಿ ಇರಲಿ. ತಾಯಿಯು ನಿಮ್ಮ ಪರವಾಗಿ ಇರುವರು. ವಾಹನವನ್ನು ಖರೀದಿಸುವ ಯೋಚನೆ ಬರಬಹುದು. ಸಾಲ‌ ಮಾಡಲು ಸಲಹೆಯನ್ನೂ ಕೊಡಬಹುದು.‌ ನಿಮ್ಮ ಯೋಗ್ಯತೆಯನ್ನು ನೀವೇ ಅರಿತು ವ್ಯವಹರಿಸುವುದು ಸೂಕ್ತ. ನಿಮ್ನ ಯಶಸ್ಸಿನ ಮೇಲೆ ನಿಮಗೆ ನಂಬಿಕೆ ಇಲ್ಲವಾಗುವುದು. ಹೆಚ್ಚು ಚಿಂತಿಸಿದಷ್ಟು ನೀವು ಕೆಲಸದಲ್ಲಿ ಮಗ್ನರಾಗುವುದಿಲ್ಲ. ವಿವಾಹಕ್ಕೆ ನಿಮಗೆ ಸಾಮಾನ್ಯ ಸಂಬಂಧವು ದೊರೆಯಲಿದೆ.

ವೃಷಭ: ಅಸಾಮಾನ್ಯ ವಿಚಾರವನ್ನು ನೀವು ಸರಳವಾಗಿಸುವ ನೈಪುಣ್ಯತೆಯನ್ನು ಹೊಂದಿರುವಿರಿ. ಆಲಸ್ಯದಿಂದ ನಿಮಗೆ ಹೊರಬರಲು ಸಾಧ್ಯವಾಗದೇ ಹೋಗಬಹುದು. ಯಾರ ಜೊತೆಯೂ ನೀವು ಕಲಹವನ್ನು ಮಾಡಿಕೊಳ್ಳುವುದು ಬೇಡ. ಅನಂತರ ನಿಮ್ಮ ಮನಸ್ಸನು ಕ್ಷೋಭೆಗೊಳ್ಳಬಹುದು. ಸಂಗಾತಿಯ ಜೊತೆ ದೂರ ಪ್ರಯಾಣವನ್ನು ಮಾಡಿ ಬನ್ನಿ. ನಿಮ್ಮ ಅನನುಕೂಲತೆಯನ್ನು ಸ್ನೇಹಿತರಿಗೆ ಹೇಳಿ ಸಮಾಧಾನವನ್ನು ತಂದುಕೊಳ್ಳುವಿರಿ. ಹಿರಿಯರ‌ ಮಾತನನ್ನು ಅನಿಸರಿಸಲು ನೀವು ಹಿಂದೇಟು ಹಾಕಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾದಾರು.

ಮಿಥುನ: ಉದ್ಯೋಗವು ಸಾಕೆನಿಸುವ ಸ್ಥಿತಿಯು ಬರಬಹುದು.‌ ಅತಿಯಾದ ಒತ್ತಡದಿಂದ ಹೊರಬರಲು ಪ್ರಯತ್ನಿಸಿ.‌ ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನು ಬೀರಬಹುದು. ರತ್ನ ಮುಂತಾದ ವ್ಯಾಪರಿಗಳಿಗೆ ಅಧಿಕ ಲಾಭವು ಆಗಬಹುದು. ಏಕಾಗ್ರತೆಯ ಸ್ವಲ್ಪ ಓದೂ ನಿಮಗೆ ಹೆಚ್ಚು ಫಲವನ್ನು ಕೊಟ್ಟೀತು. ಅನಗತ್ಯ ತಿರುಗಾಟವು ನಿಮಗೆ ಬೇಸರವನ್ನು ಕೊಟ್ಟೀತು. ಸಂಗಾತಿಯನ್ನು ನೀವು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದಾಯದ ಒಂದಂಶವನ್ನು ಉಳಿತಾಯ ಮಾಡಲು ಬಳಸಿಕೊಳ್ಳುವಿರಿ. ನಿಮ್ಮವರು ನಿಮಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಇರುವಿರಿ.

ಕಟಕ: ನಿಮ್ಮ ವಿರುದ್ಧ ತಂತ್ರಗಾರಿಕೆಯನ್ನು ಮಾಡಿ ಉದ್ಯೋಗದಿಂದ ಕೈಬಿಡುವಂತೆ ಮಾಡುವರು. ಸಿಕ್ಕುದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ನಿಮ್ಮ ಕೈಮೀರಿದ ವಿಚಾರಕ್ಕೆ ಹೆಚ್ಚಿನ ಒತ್ತು ಬೇಡ. ವಿದ್ಯೆಯನ್ನು ಹೇಳಿಕೊಟ್ಟ ಗುರುವಿನ ಭೇಟಿಯಾದೀತು. ನೀವಿಂದು ನಾಜೂಕಾದ ಮಾತಿನಿಂದ ಕೆಲಸವನ್ನು ಮಾಡಿಕೊಳ್ಳುವಿರಿ. ಆಡಂಬರವನ್ನು ನೀವು ಹೆಚ್ಚು ಇಷ್ಟಪಡುವಿರಿ. ಭೋಗವಸ್ತುಗಳನ್ನು ಅಧಿಕವಾಗಿ ಖರೀದಿಸಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆಯಾಗಬಹುದು. ನೀವೇ ಅವರಿಗೆ ಸಮಯವನ್ನು ಕೊಟ್ಟಿ ಕಲಿಸಬೇಕಾಗುವುದು.

ಸಿಂಹ: ವಿವಾಹದ ಸುಖವನ್ನು ಅನುಭವಿಸುತ್ತ ಇರುವಿರಿ. ದಾಂಪತ್ಯದಲ್ಲಿ ಸಣ್ಣ ಕಲಹವೂ ಆಗಿ ಒಂದಾಗುವಿರಿ. ಮಕ್ಕಳು ಬೇಕೆನ್ನಿಸಬಹುದು. ವೈದ್ಯರ ಸಲಹೆಯನ್ನು ಪಡೆಯಿರಿ. ತಂದೆಯರ ಸೇವೆಯನ್ನು ಮಾಡುವಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ನಿಮ್ಮ ವರ್ತನೆಯನ್ನು ಅನುಕರಿಸಬಹುದು. ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಇರಲಿದೆ. ನಿಮ್ಮ ಗುಣಗಳ‌ ದುರುಪಯೋಗವೂ ಆಗಲಿದೆ. ಪ್ರೀತಿಯಿಂದ ಹೇಳಿ ಆಗಬೇಕಾದುದನ್ನು ಮಾಡಿಸಿಕೊಳ್ಳಿ. ಮಕ್ಕಳಲ್ಲಿ ಸಂತೋಷವನ್ನು ನೀವು ಕಾಣುವಿರಿ.

ಕನ್ಯಾ: ಸರಳ ಜೀವನವು ನಿಮಗೆ ಇಷ್ಟವಾಗಬಹುದು. ಸಂಪಾದನೆಗೆ ಹಲವು ಮಾರ್ಗಗಳು ಕಂಡರೂ ನಿಮಗೆ ಅದು ಇಷ್ಟವಾಗದೇ ಇದ್ದೀತು. ಪಾಲುದಾರಿಕೆಯಲ್ಲಿ ಸದ್ಯ ಉದ್ಯೋಗವನ್ನು ಪ್ರಾರಂಭಿಸಿ. ನಿಮ್ಮ ಒಬ್ಬರ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವು ದೊಡ್ಡದಾಗಬಹುದು. ನಿರ್ಮಾಣದ ಕೆಲಸವು ಬಹಳ ನಿಧಾನವಾಗಬಹುದು. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಬಹುದು. ಯಾರೋ ಮಾಡಿದ ತಪ್ಪಿಗೆ ಬೈಗುಳವನ್ನು ತಿನ್ನಬೇಕಾದೀತು. ಅಚಾತುರ್ಯದಿಂದ ಉದ್ಯೋಗದಲ್ಲಿ ನಷ್ಟವಾಗಬಹುದು. ಆಧಿಕಾರಿಗಳನ್ನೂ ಆಪ್ತರನ್ನೂ ನೀವು ಭೇಟಿಯಾಗಲಿದ್ದೀರಿ.

ತುಲಾ: ಎಲ್ಲವೂ ನಿಮ್ಮ ದೃಷ್ಟಿಯಿಂದ ಅಳೆಯುವುದು ಸರಿಯಲ್ಲ. ಕಛೇರಿಯ ಕೆಲಸಗಳು ನಿಮಗೆ ಅತಿಯಾಗಬಹುದು. ಮೇಲಧಿಕಾರಿಗಳಿಗೆ ವಾಸ್ತವವನ್ನು ತಿಳಿಸಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಬಹುದು. ನಿಮ್ಮ ಸಮಯವು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಆಲೋಚನೆ ಹಾಗೂ ಸಾಮರ್ಥ್ಯದಿಂದ ಉನ್ನತ ಹುದ್ದೆಗೆ ಹೋಗುವ ಸಾಧ್ಯತೆಗಳು ಬಹಳ ಇರಲಿವೆ. ಮುಂದಾಲೋಚನೆಯಿಲ್ಲದೇ ಏನನ್ನೂ ಮಾಡಲು ಹೋಗಬೇಡಿ. ಏಕಾಗ್ರತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಟನೆಗೆ ಅವಕಾಶಗಳು ಸಿಗಬಹುದು.

ವೃಶ್ಚಿಕ: ಸುಮ್ಮನೇ ಯಾರ ಮೇಲಾದರೂ ಸಂದೇಹಪಡುತ್ತಾ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ.‌ ವ್ಯವಹಾರವು ಅಷ್ಟಾಗಿ ಲಾಭವನ್ನು ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವುದು ಒಂದೇ ಬಾರಿಗೆ ಕಷ್ಟವಾದೀತು. ಧಾರ್ಮಿಕವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವುದು ಸರಿಯಲ್ಲ. ಕಾರಣಾಂತರಗಳಿಂದ ನೀವು ಹೋಗುವ ಪ್ರಯಾಣವು ಸ್ಥಗಿತಗೊಳ್ಳಬಹುದು. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸೀತು.‌ ಆಡಳಿತಾತ್ಮಕ ವಿಚಾರದಲ್ಲಿ ನೀವು ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ. ಬೃಹತ್ ವಾಹನದಿಂದ ನೀವು ದೂರವಿರಿ.

ಧನು: ಧನಾಗಮನದ ವಿಚಾರದಲ್ಲಿ ನೀವು ನಿರುಪಾಯರು. ಎಲ್ಲರನ್ನೂ ನಿಷ್ಕಾರಣವಾಗಿ ತೆಗಳುವುದು ಸರಿಯಲ್ಲ. ಮಾತುಗಳನ್ನು ವಿವೇಚನೆ ಇಲ್ಲದೇ ಮಾತನಾಡುವುದು ಬೇಡ. ನೀವಿಂದು ಪ್ರೀತಿಯ ಪಾಶದಲ್ಲಿ ಬೀಳಬಹುದು. ಮಾನಸಿಕವಾದ ನೋವನ್ನು ಹೊರಹಾಕಲು ಪ್ರಯತ್ನಿಸುವಿರಿ. ಬರಬೇಕಾದ ಸಂಪತ್ತಿನ ನಿರೀಕ್ಷೆಯಲ್ಲಿ ಇರುವಿರಿ. ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಬಿಡಬೇಕಾದೀತು. ಶಾಂತಯುವಾಗಿ ವ್ಯವಹರಿಸುವುದು ಉಚಿತ. ನಿಮ್ಮ ಮೇಲಿನ‌ ನಂಬಿಕೆಯನ್ನು ಘಾಸಿ ಮಾಡಿಕೊಳ್ಳಬೇಡಿ. ದೈವದ ಸ್ಮರಣೆಯನ್ನು ನೀವು ಅದಷ್ಟು ಮಾಡುವುದು ಒಳ್ಳೆಯದು.

ಮಕರ: ಪರರ ನೋವಿಗೆ ಸಂದಿಸುವುದು ನಿನಗೆ ಸ್ವಭಾವತಃ ಇದ್ದರೂ ಇಂದು ಅದನ್ನು ಮಾಡಲು ಹಿಂದೇಟು ಹಾಕುವಿರಿ. ನಿಮ್ಮ ಮನಸ್ಸನ್ನು ದುರ್ಬಲವಾಗಲು ಬಿಡಬೇಡಿ. ಏನಾದರೊಂದು ಕೆಲಸದಲ್ಲಿ ಇರುವಂತೆ ನೋಡಿಕೊಳ್ಳಿ. ಇಂದು ನಿಮ್ಮ ಸಂದರ್ಭೋಜಿತ ಉತ್ತರಗಳು ನಿಮ್ಮ ಗೌರವವನ್ನು ಹೆಚ್ಚಿಸುವುದು. ಹಿರಿಯರು ನಿಮ್ಮನ್ನು ಪ್ರಶಂಸಿಸಬಹುದು. ದೂರವಾಗಿದ್ದ ಸಂಬಂಧಗಳು ಹತ್ತಿರವಾಗಬಹುದು. ಶೀಘ್ರವಾಗಿ ಕೋಪಗೊಳ್ಳುವ ಸಾಧ್ಯತೆ ಇದ್ದರೂ ಮನಸ್ಸನ್ನು ನಿಯಂತ್ರಣವನ್ನು ಸಾಧಿಸಲು ನೀವು ಯಶಸ್ವಿಯಾಗಿದ್ದೀರಿ.

ಕುಂಭ: ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಂಡು ಕೆಲಸದ ಸಮಯವನ್ನು ವ್ಯರ್ಥಮಾಡಿಕೊಳ್ಳಬಹುದು. ನಿಮ್ಮ ಸಹಾಯದ ನಿರೀಕ್ಷೆಯಲ್ಲಿ ಇರುವವರಿಗೆ ಕಿಂಚಿತ್ ಸಹಾಯವನ್ನು ಮಾಡುವಿರಿ. ಕೆಲಸವಾಗಲು ಉನ್ನತ ಅಧಿಕಾರಿಗಳನ್ನು ಹೊಗಳಬೇಕಾದೀತು. ಮಕ್ಕಳು ನಿಮ್ಮನ್ನು ಹೆಚ್ಚು ಇಷ್ಟಪಡುವರು. ಅವರಿಗೆ ಬೇಕಾದಹಾಗೆ ನಡೆದುಕೊಳ್ಳಿ. ಒಳ್ಳೆಯ ವಿಚಾರಗಳು ನಿಮಗೆ ಅಸಹ್ಯವಾಗಬಹುದು. ಅನುಕೂಲವನ್ನು ಸೃಷ್ಟಿಸಿಕೊಳ್ಳಲು ನೀವು ಸಮಸರ್ಥರು. ಹಿರಿಯರಿಂದ ಅಪಮಾನವಾಗುವ ಸಂಭವವಿದೆ. ಸರಿಯಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ.

ಮೀನ: ಸ್ವಂತ ಉದ್ಯೋಗವನ್ನು ಮಾಡುತ್ತಿದ್ದರೆ ಕುಟುಂಬ ಸಮಸ್ಯೆಯಿಂದಾಗಿ ಉದ್ಯೋಗದ ಕಡೆಗೆ ಗಮನ ಕೊಡಲಾಗದು. ನಿಮ್ಮ ಸಮಸ್ಯೆಯನ್ನು ಶಾಂತಚಿತ್ತರಾಗಿ ಬಗೆಹರುಸಿಕೊಳ್ಳುವುದು ಉತ್ತಮ. ವಿರೋಧದ ನಡುವೆಯೂ ನಿಮ್ಮ ಹಠವನ್ನೇ ಸಾಧಿಸುವಿರಿ. ಮೌಖಕವಾಗಿ ಹೇಳಿದ್ದರಿಂದ ನಿಮ್ಮ ಯಾವ ಕೆಲಸವೂ ಆಗದು. ಲಿಖಿತರೂಪದಲ್ಲಿ ಬರಲಿ. ನಿಮ್ಮಲ್ಲಿರುವ ಭಯವನ್ನು ಮತ್ತೊಬ್ಬರಿಗೆ ಹೇಳಿ ಧೈರ್ಯವನ್ನು ತಂದುಕೊಳ್ಳುವಿರಿ. ಸಮರಕ್ಕೆ ಸಮಾನವಾಗಿ ಕೆಲಸವನ್ನು ಇಂದು ಮಾಡುವ ಉತ್ಸಾಹ ನಿಮ್ಮಲ್ಲಿರಲಿದೆ.

ಲೋಹಿತಶರ್ಮಾ – 8762924271 (what’s app only)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ