Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 2) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
|

Updated on: Jun 02, 2023 | 12:20 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 2 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಕಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 10:54 ರಿಂದ 12:30ರ ವರೆಗೆ, ಯಮಘಂಡ ಕಾಲ 03:44 ರಿಂದ 05:20ರ ವರೆಗೆ, ಗುಳಿಕ ಕಾಲ 07:20 ರಿಂದ 09:17ರ ವರೆಗೆ.

ಸಿಂಹ: ವಿವಾಹದ ಸುಖವನ್ನು ಅನುಭವಿಸುತ್ತ ಇರುವಿರಿ. ದಾಂಪತ್ಯದಲ್ಲಿ ಸಣ್ಣ ಕಲಹವೂ ಆಗಿ ಒಂದಾಗುವಿರಿ. ಮಕ್ಕಳು ಬೇಕೆನ್ನಿಸಬಹುದು. ವೈದ್ಯರ ಸಲಹೆಯನ್ನು ಪಡೆಯಿರಿ. ತಂದೆಯರ ಸೇವೆಯನ್ನು ಮಾಡುವಿರಿ. ನೂತನ ವಸ್ತುಗಳ ಖರೀದಿಯನ್ನು ನೀವು ಮಾಡಲಿದ್ದೀರಿ. ನಿಮ್ಮ ವರ್ತನೆಯನ್ನು ಅನುಕರಿಸಬಹುದು. ನಿಮ್ಮನ್ನು ಗುರುತಿಸಬೇಕು ಎನ್ನುವ ಹಂಬಲ ಇರಲಿದೆ. ನಿಮ್ಮ ಗುಣಗಳ‌ ದುರುಪಯೋಗವೂ ಆಗಲಿದೆ. ಪ್ರೀತಿಯಿಂದ ಹೇಳಿ ಆಗಬೇಕಾದುದನ್ನು ಮಾಡಿಸಿಕೊಳ್ಳಿ. ಮಕ್ಕಳಲ್ಲಿ ಸಂತೋಷವನ್ನು ನೀವು ಕಾಣುವಿರಿ.

ಕನ್ಯಾ: ಸರಳ ಜೀವನವು ನಿಮಗೆ ಇಷ್ಟವಾಗಬಹುದು. ಸಂಪಾದನೆಗೆ ಹಲವು ಮಾರ್ಗಗಳು ಕಂಡರೂ ನಿಮಗೆ ಅದು ಇಷ್ಟವಾಗದೇ ಇದ್ದೀತು. ಪಾಲುದಾರಿಕೆಯಲ್ಲಿ ಸದ್ಯ ಉದ್ಯೋಗವನ್ನು ಪ್ರಾರಂಭಿಸಿ. ನಿಮ್ಮ ಒಬ್ಬರ ಶ್ರಮವು ವ್ಯರ್ಥವಾಗಬಹುದು. ಸ್ನೇಹ ಬಳಗವು ದೊಡ್ಡದಾಗಬಹುದು. ನಿರ್ಮಾಣದ ಕೆಲಸವು ಬಹಳ ನಿಧಾನವಾಗಬಹುದು. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಬಹುದು. ಯಾರೋ ಮಾಡಿದ ತಪ್ಪಿಗೆ ಬೈಗುಳವನ್ನು ತಿನ್ನಬೇಕಾದೀತು. ಅಚಾತುರ್ಯದಿಂದ ಉದ್ಯೋಗದಲ್ಲಿ ನಷ್ಟವಾಗಬಹುದು. ಆಧಿಕಾರಿಗಳನ್ನೂ ಆಪ್ತರನ್ನೂ ನೀವು ಭೇಟಿಯಾಗಲಿದ್ದೀರಿ.

ತುಲಾ: ಎಲ್ಲವೂ ನಿಮ್ಮ ದೃಷ್ಟಿಯಿಂದ ಅಳೆಯುವುದು ಸರಿಯಲ್ಲ. ಕಛೇರಿಯ ಕೆಲಸಗಳು ನಿಮಗೆ ಅತಿಯಾಗಬಹುದು. ಮೇಲಧಿಕಾರಿಗಳಿಗೆ ವಾಸ್ತವವನ್ನು ತಿಳಿಸಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ಕಾಣಬಹುದು. ನಿಮ್ಮ ಸಮಯವು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಆಲೋಚನೆ ಹಾಗೂ ಸಾಮರ್ಥ್ಯದಿಂದ ಉನ್ನತ ಹುದ್ದೆಗೆ ಹೋಗುವ ಸಾಧ್ಯತೆಗಳು ಬಹಳ ಇರಲಿವೆ. ಮುಂದಾಲೋಚನೆಯಿಲ್ಲದೇ ಏನನ್ನೂ ಮಾಡಲು ಹೋಗಬೇಡಿ. ಏಕಾಗ್ರತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಟನೆಗೆ ಅವಕಾಶಗಳು ಸಿಗಬಹುದು.

ವೃಶ್ಚಿಕ: ಸುಮ್ಮನೇ ಯಾರ ಮೇಲಾದರೂ ಸಂದೇಹಪಡುತ್ತಾ ಇರುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳಬೇಕಾದಲ್ಲಿಗೆ ಹೇಳಿ.‌ ವ್ಯವಹಾರವು ಅಷ್ಟಾಗಿ ಲಾಭವನ್ನು ತಂದುಕೊಡದು. ಶಿಸ್ತನ್ನು ರೂಢಿಸಿಕೊಳ್ಳುವುದು ಒಂದೇ ಬಾರಿಗೆ ಕಷ್ಟವಾದೀತು. ಧಾರ್ಮಿಕವಿಚಾರದಲ್ಲಿ ನೀವು ನಂಬಿಕೆಯನ್ನು ಕಳೆದುಕೊಳ್ಳುವುದು ಸರಿಯಲ್ಲ. ಕಾರಣಾಂತರಗಳಿಂದ ನೀವು ಹೋಗುವ ಪ್ರಯಾಣವು ಸ್ಥಗಿತಗೊಳ್ಳಬಹುದು. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸೀತು.‌ ಆಡಳಿತಾತ್ಮಕ ವಿಚಾರದಲ್ಲಿ ನೀವು ಹಿನ್ನಡೆ ಸಾಧಿಸುವ ಸಾಧ್ಯತೆ ಇದೆ. ಬೃಹತ್ ವಾಹನದಿಂದ ನೀವು ದೂರವಿರಿ.

ತಾಜಾ ಸುದ್ದಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
ನ್ಯಾಯಾಲಯದಲ್ಲಿ ಕಾವೇರಿ ವಿವಾದ ನಾಳೆ ಪುನಃ ವಿಚಾರಣೆಗೆ ಬರಲಿದೆ:ಸಿದ್ದರಾಮಯ್ಯ
ನ್ಯಾಯಾಲಯದಲ್ಲಿ ಕಾವೇರಿ ವಿವಾದ ನಾಳೆ ಪುನಃ ವಿಚಾರಣೆಗೆ ಬರಲಿದೆ:ಸಿದ್ದರಾಮಯ್ಯ