AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಮಾನಸಿಕ ಸ್ಥಿತಿಯು ಎಂದಿನಂತೆ ಇರದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಮಾನಸಿಕ ಸ್ಥಿತಿಯು ಎಂದಿನಂತೆ ಇರದು
ಇಂದಿನ ರಾಶಿಭವಿಷ್ಯImage Credit source: freepik
Rakesh Nayak Manchi
|

Updated on: Jun 20, 2023 | 12:45 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 20 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಸುಕರ್ಮ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:48 ರಿಂದ 05:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:57ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ.

ಧನುಸ್ಸು: ಅನಾಮಧೇಯ ಕರೆಗಳು ನಿಮ್ಮನ್ನು ಹೂಡಿಕೆಗೆ ಪ್ರೇರಿಸಬಹುದು. ನಿಮ್ಮ ನಗವಿನಲ್ಲಿ ಅಸಹಜತೆ ಹೆಚ್ಚು ಇರಲಿದೆ. ವಿವಾಹ ಮಾತುಕತೆ ಮುಂದಕ್ಕೆ ಹೋಗಬಹುದು. ನಿಮ್ಮ ಆಪ್ತರನ್ನು ನೀವು ದೂರ ಮಾಡುವಿರಿ. ನಿಮ್ಮ ಸೌಂದರ್ಯವು ಇಂದು ಆಕರ್ಷಕವಾಗಿರುವುದು. ಎಂದಿನಂತೆ ನಿಮ್ಮ ಮಾನಸಿಕ ಸ್ಥಿತಿಯು ಇರದು. ವಿದ್ಯಾರ್ಥಿಗಳು ತಕ್ಕಮಟ್ಟಿನ ಪ್ರದರ್ಶನವನ್ನು ತೋರುವರು. ಸರ್ಕಾರಿ ಉದ್ಯೋಗಿಗಳು ಒತ್ತಡದಲ್ಲಿ ಇರುವರು. ನಿಮ್ಮ ಆಡಳಿತವು ಬೇಸರ ತರಿಸೀತು. ಮನೆಯ ಜವಾಬ್ದಾರಿಯು ಬರುವ ಸಾಧ್ಯತೆ ಇದೆ. ಕೆಲವು ವಿಚಾರಗಳು ಬಹಳ ವಿಳಂಬವಾಗಿ ನಿಮ್ಮ ಗಮನಕ್ಕೆ ಬರಬಹುದು. ಇದು ಬೇಸರವನ್ನು ಉಂಟುಮಾಡೀತು.

ಮಕರ: ಗುರುದರ್ಶನವು ನಿಮ್ಮ ಈ ದಿನಕ್ಕೆ ಶುಭವನ್ನು ತರುವುದು. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸಬಹುದು. ಬದ್ಧತೆಯ ಕೊರತೆಯಿಂದ ಕಾರ್ಯಗಳು ಸರಿಯಾಗಿ ಆಗದು. ಕಾಲವು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬಹುದು. ಹೊಸ ಸುದ್ದಿಯು ನಿರೀಕ್ಷೆಯಲ್ಲಿ ನೀವು ಇರುವಿರಿ. ಎಲ್ಲರ‌ ನಡುವೆ ಇದ್ದರೂ ಒಂಟಿತನವು ನಿಮ್ಮನ್ನು ಕಾಡಬಹುದು. ಅನವಶ್ಯಕ ವಸ್ತುಗಳನ್ನು ನೀವು ಪಡೆಯಲು ಹಣವನ್ನು ಖರ್ಚುಮಾಡಬಹುದು. ಯಾರದೋ ಮಾತಿನ ಮೇಲೆ‌ ಹಣವನ್ನು ಹೂಡುವಿರಿ. ಅಲಭ್ಯ ವಸ್ತುವಿಗೆ ದುಃಖಿಸುವ ಅವಶ್ಯಕತೆ ಇಲ್ಲ. ಸಮಾಜದ ಕಾರ್ಯಗಳಲ್ಲಿ ನೀವು ತೊಡಗಿಕೊಳ್ಳುವವರಿದ್ದೀರಿ.

ಕುಂಭ: ನಿಮ್ಮ ವಸ್ತುಗಳು ಕಾಣಿಸದೇ ಹೋದೀತು. ನೋವು ಇಂದು ಇದ್ದುದರಲ್ಲಿ ತೃಪ್ತಿಪಡಬೇಕಾದೀತು. ನೀವು ಇಂದು ಸೋಲನ್ನು ಒಪ್ಪಿಕೊಳ್ಳಲು ಹಿಂಜರಿಯುವಿರಿ. ಎದುರು ಮಾತನಾಡುವುದು ನಿಮಗೆ ಇಂದು ಸರಿ‌ಕಾಣದು. ಗಳಿಕೆ ಸ್ವಲ್ಪ‌ಭಾಗವನ್ನು ನೀವು ಉಳಿತಾಯ ಮಾಡಲು ಉಪಯೋಗಿಸುವಿರಿ. ಪೂರ್ತಿ ತಿಳಿಯದೇ ಯಾವುದನ್ನೂ ಹೇಳಲು ಹೋಗಬೇಡಿ. ನಿಮ್ಮೆದುರೇ ನಿಮ್ಮವರನ್ನು ಅಲ್ಲಗಳೆಯಬಹುದು. ನಿಮ್ಮ ವರ್ತನೆಗಳು ಸ್ವಲ್ಪ ಮಾರ್ಗವನ್ನು ಬಿಡಬಹುದು. ಕೆಲವು ವಿಚಾರವನ್ನು ನಿಮ್ಮ ತಲೆಯಿಂದ ತೆಗೆದುಹಾಕಬೇಕಾಗಬಹುದು.

ಮೀನ: ವ್ಯಾಪರವು ಇಂದು ಅಲ್ಪಪ್ರಮಾಣದ ಲಾಭವನ್ನು ಕೊಡಬಹುದು. ಅಶಿಸ್ತಿನಿಂದ ನೀವು ಇರಲಿದ್ದೀರಿ. ಯೋಜನೆಯನ್ನು ಸಿದ್ಧಪಡಿಸಲು ನೀವು ಅಧಿಕ ಶ್ರಮವನ್ನು ವಹಿಸಬೇಕಾದೀತು. ಉದ್ಯೋಗದ ಸ್ಥಳವು ಸ್ವಲ್ಪ ಕಿರಿಕಿರಿಯಿಂದ ಇರಲಿದೆ. ನಿಮ್ಮ ಆದಾಯದ ಮೂಲವನ್ನು ನೀವು ಯಾರಿಗೂ ಹೇಳಬೇಡಿ.‌ ನಿಮ್ಮನ್ನು ಅಪಹಾಸ್ಯ ಮಾಡಬಹುದು. ಸುಂದರವಾದ ಪ್ರದೇಶಗಳಿಗೆ ನೀವು ಹೋಗುವವರಿದ್ದೀರಿ. ಸಾಮಾನ್ಯ ವಿಚಾರವನ್ನು ದೊಡ್ಡದಾಗಿ ಬಿಂಬಿಸುವ ಅವಶ್ಯಕತೆ ಇಲ್ಲ. ಸರಿಯಾದುದನ್ನು ನೀವು ಆಯ್ಕೆ ಮಾಡಿಕೊಳ್ಳಲು ಕಷ್ಟವಾದೀತು.

-ಲೋಹಿತಶರ್ಮಾ ಇಡುವಾಣಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..