Daily Horoscope 21 June: ಇಂದಿನ ರಾಶಿಭವಿಷ್ಯ, ನಿಮಗೆ ಸಂಬಂಧಿಸದ ಕೆಲಸದಲ್ಲಿ ನೀವು ಮೂಗು ತೂರಿಸುವುದು ಬೇಡ
ಇಂದಿನ (2023 ಜೂನ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಗೆಳೆಯರೇ ನಮಸ್ತೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿಯುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪುಷ್ಯ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ.
ಮೇಷ: ಮಹಿಳೆಯರ ವಿರೋಧವನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಅನಿರೀಕ್ಷಿತ ಮಾತುಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಆಯಾಸದಿಂದ ಇಂದು ಸುಖವಾದ ನಿದ್ರೆಯನ್ನು ಮಾಡುವಿರಿ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಹೊರಗಿನವರ ಜೊತೆ ಬೆರೆಯಲು ಇಷ್ಟಪಡುವಿದಲ್ಲ. ಮಕ್ಕಳಿಂದ ಉಂಟಾದ ಲಾಭವನ್ನು ನೀವು ಕೆಟ್ಟ ಕೆಲಸಗಳಿಗೆ ಬಳಸಬಹುದು. ಊಹೆಯಲ್ಲಿ ದಿನ ಕಳೆಯುವುದನ್ನು ಕಡುಮೆ ಮಾಡಿ. ನೆಮ್ಮದಿಗೆ ಬೇರೆ ದಾರಿಯನ್ನು ಕಂಡುಕೊಳ್ಳಲಿದ್ದೀರಿ. ಅತಿಥಿಗಳಿಗೆ ಯೋಗ್ಯ ಸತ್ಕಾರವನ್ನು ಮಾಡಲಿದ್ದೀರಿ. ಅಶುಭವಾದ ಸಂಗತಿಯನ್ನು ಇಂದು ತರಲು ಹೋಗಬೇಡಿ.
ವೃಷಭ: ಹಣವನ್ನು ನೀವು ಎಂದಿನಂತೆ ಖರ್ಚು ಮಾಡಬಾರದು. ನಿಮ್ಮ ಬೆಂಬಲಕ್ಕೆ ನಿಲ್ಲುವವರು ಯಾರು ಎಂಬ ಕುತೂಹಲವಿದ್ದರೂ ಸಣ್ಣ ಸುಳಿವು ಸಿಗಲಿದೆ. ನಿಮ್ಮ ಮೇಲಿನ ಅಪವಾದವನ್ನು ನೀವು ಕಳೆದುಕೊಳ್ಳಲು ಹೆಚ್ಚು ಮಾತನಾಡುವಿರಿ. ಧಾರ್ಮಿಕ ನಾಯಕರ ಜೊತೆ ನೀವು ಮಾತನಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಉನ್ನತ ಸ್ಥಾನಕ್ಕೆ ಹೋಗಲು ಬೇಕಾದ ಅರ್ಹತೆ ಇದ್ದರೂ ನೀವು ಅದನ್ನು ಪಡೆಯಲು ಇಷ್ಟಪಡುವುದಿಲ್ಲ. ಸಂಗಾತಿಯ ಮನೋಭಾವವನ್ನು ತಿಳಿಯಲು ನೀವು ಕೆಲವು ತಂತ್ರವನ್ನು ಬಳಸುವಿರಿ. ಅಸಹಾಯಕತೆ ಎಂದು ಮನಸಿಗೆ ಅನ್ನಿಸಬಹುದು.
ಮಿಥುನ: ಮನೆಯವರ ಜೊತೆ ಭವಿಷ್ಯದ ಚಿಂತನೆಯನ್ನು ಮಾಡಬಹುದು. ಕೆಲವು ಕಾಲದ ಚಿಂತನೆಯು ಇಂದು ನಿಮ್ಮಿಂದ ದೂರವಾಗಬಹುದು. ರಾಜಕೀಯವಾಗಿ ನೀವು ಹೊಸದಾರಿಯನ್ನು ಪ್ರಸಿದ್ಧರಾಗಲು ಆಯ್ಕೆ ಮಾಡಿಕೊಳ್ಳಬಹುದು. ಸ್ನೇಹಿತರ ಜೊತೆಗಿನ ಓಡಾಟವು ಕೆಲವು ಅನುಮಾನವನ್ನು ಸೃಷ್ಟಿಸುವುದು. ನಿಮ್ಮ ಮಾತು ಜವಾಬ್ದಾರಿಯುತವಾದ ಸ್ಥಾನದ ಮಾತಾಗಿರಲಿ. ಸಣ್ಣ ವಿಚಾರಗಳಿಗೆ ಕೋಪವು ಸಹಜವಾಗಿ ಬಂದರೂ ಅದನ್ನು ಹಿಡಿದಿಟ್ಟುಕೊಳ್ಳಬೇಕಾದೀತು. ಕಳೆದು ಹೋದಮೇಲೆ ಅದನ್ನು ಚಿಂತಿಸಿ ಉಪಯೋಗವಿಲ್ಲ. ನಿಮಗೆ ಏನೂ ಗೊತ್ತಾಗದೇ ಎಲ್ಲವೂ ನಡೆಯುತ್ತದೆ ಎಂವ ಕೋಪ ಇರಬಹುದು.
ಕರ್ಕಾಟಕ: ಅಧಿಕವಾದ ಸಂಪತ್ತನ್ನು ಗಳಿಸಬೇಕು ಎನ್ನುವ ಹಂಬಲವಿದ್ದರೂ ಅದನ್ನು ಪಡೆಯಲು ದಾರಿ ಸುಲಭವಿಲ್ಲ ಎಂದು ಅನ್ನಿಸಬಹುದು. ನಿಮ್ಮ ಮನಸ್ಸನ್ನು ನಕಾರತ್ಮಕ ಚಿಂತನೆಯಿಂದ ಹೊರಗೆಳೆಯಲು ಬಹಳ ಕಷ್ಟವಾದೀತು. ಹಳೆಯ ಸ್ನೇಹಿತೆಯ ನೆನಪು ಮರುಕಳಿಸಬಹುದು. ಇಂದಿನ ಖರ್ಚು ನಿಮ್ಮಬಆದಾಯವನ್ನು ಹೆಚ್ಚು ಮಾಡಲು ಬೇಕಾದ ಫಲವನ್ನು ಕೊಟ್ಟೀತು. ಎಲ್ಲರ ಜೊತೆ ವಸ್ತುವನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನಿಮಗೆ ಬೇಕಾದ ವಸ್ತುವು ಸರಿಯಾದ ಸಮಯಕ್ಕೆ ಬಂದೊದಗದು. ತಾಳ್ಮೆಯನ್ನು ಕಳೆದುಕೊಳ್ಳಬಹುದು ಇಂದು.
ಸಿಂಹ: ಸಂಗಾತಿಗೆ ಪೂರಕವಾಗಿ ನಡೆಯಲು ನಿಮಗೆ ಕಷ್ಟವಾಗಿ ಅವರ ಜೊತೆ ಜಗಳ ಮಾಡುವಿರಿ. ಹಿರಿಯರಿಗೆ ಎದುರಾಡುವುದನ್ನು ಕಡಿಮೆ ಮಾಡಿ. ಮಾತಿನಿಂದ ನೀವು ಅನೇಕ ಉತ್ತಮವಾದ ವಿಷಯವನ್ನು ಕಳೆದುಕೊಳ್ಳುವಿರಿ. ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ. ಆ ಸಮಯಕ್ಕೆ ನಿಮಗೆ ಇಷ್ಟವಾದ ಸಂಗತಿಯನ್ನು ಮಾಡಿ. ಕೋಪವು ಕಡಿಮೆಯಾದೀತು. ಇಂದಿನ ಕೆಲವು ಸಂದಿಗ್ಧಪರಿಸ್ಥಿತಿಯನ್ನು ನೀವು ಸರಳವಾಗಿ ನಿಭಾಯಿಸಲು ಕಲಿಯಬೇಕಾದೀತು. ನೀವು ಇಂದು ಸೌಂದರ್ಯಕ್ಕೆ ಮನಸೋಲಬಹುದು. ಅನಪೇಕ್ಷಿತ ವಿಷಯವನ್ನು ಮರೆತುಬಿಡಿ.
ಕನ್ಯಾ: ನಿಮ್ಮ ಸಮಯವನ್ನು ಸ್ನೇಹಿತರು ವ್ಯರ್ಥಮಾಡಿಯಾರು. ಸ್ತ್ರೀಯರ ಜೊತೆ ಹರಟೆ ಹೊಡೆದರೂ ನಿಮಗೆ ಸಮಯ ವ್ಯರ್ಥವಾಗಿದ್ದು ನೆನಪಾಗದೇ ಇರುವುದು. ಬಾಲ್ಯ ಸ್ನೇಹಿತ ಏಳ್ಗೆಯನ್ನು ಕೇಳಿ ನಿಮಗೆ ಅಸೂಯೆ ಉಂಟಾಗಬಹುದು. ವಾಹನಖರೀದಿಯನ್ನು ನೀವು ಮುಂದೂಡುವಿರಿ. ಧನವನ್ನು ಕೇಳಿ ಬಂದವರಿಗೆ ನೀಡಲಿದ್ದೀರಿ. ಕಛೇರಿಯ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ನಿಮ್ಮ ಉತ್ಸಾಹಕ್ಕೆ ಕೆಲವು ಸಹೋದ್ಯೋಗಿಗಳು ಭಂಗ ತರಬಹುದು. ಸಣ್ಣಗೆ ಆರೋಗ್ಯವೂ ಹದಗೆಡುವ ಸಂಭವವಿದೆ.
ತುಲಾ: ಇತರರಿಗೆ ನೋವನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಲು ನೀವು ಇಷ್ಟಪಡುವುದಿಲ್ಲ. ಏಕಾಂಗಿಯಾಗಿ ನೀವು ಎಲ್ಲಿಗಾದರೂ ಹೋಗುವಿರಿ. ನಿಮ್ಮ ವಸ್ತುವನ್ನು ಸ್ನೇಹಿತರಿಗೆ ಕೊಟ್ಟಿದ್ದು ಅದನ್ನು ಪಡೆಯಲು ನೀವು ಕಷ್ಟ ಪಡುವಿರಿ. ಕಾನೂನಿಗೆ ಮೊರೆ ಹೋಗಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ದಿನದ ಆರಂಭದಲ್ಲಿ ಏನೋ ಚಿಂತೆ ಕಾಡಲಿದ್ದು ಸಮಯ ಸರಿದಂತೆ ಅದು ಮಾಯವಾಗಿ ನೆಮ್ಮದಿಯಿಂದ ಇರುವಿರಿ. ನಿಮ್ಮ ವಂಶಸ್ಥರ ಜೊತೆ ಸಮಯವನ್ನು ಕಳೆಯುವಿರಿ. ಮನೆಯಿಂದ ಇಂದು ಹೊರಗೆ ಇರಬೇಕಾದೀತು. ಆಹಾರವು ಅಲಭ್ಯವಾಗುವ ಸಾಧ್ಯತೆ ಇದೆ.
ವೃಶ್ಚಿಕ: ನಿಮ್ಮ ಇಚ್ಛಾಶಕ್ತಿಯು ನಿಮ್ಮ ಇಂದಿನ ಕೆಲಸವನ್ನು ಪೂರ್ಣಗೊಳ್ಳುವಂತೆ ಮಾಡಲಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೂ ಅದನ್ನು ಹೊರ ಹಾಕಲು ಸೂಕ್ತ ವೇದಿಕೆ ಸಿಗದೇಹೋದೀತು. ಸುಲಭದ ವಿಚಾರವನ್ನು ಬಹಳ ಸಂಕೀರ್ಣ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ತಟಸ್ಥರಾಗುವಿರಿ. ಸಮಯವನ್ನು ಉಳಿಸಲು ಹೋಗಿ ಹಣವನ್ನು ಖಾಲಿಮಾಡಿಕೊಳ್ಳಬೇಕಾಗಬಹುದು. ಕುಟುಂಬದಲ್ಲಿ ನಿಮ್ಮ ವಿಚಾರಕ್ಕೆ ಕಲಹವಾಗಬಹುದು. ಸರಿಯಾದ ಮಾಹಿತಿಯನ್ನು ಅವರಿಗೆ ನೀಡಿ. ಮಾನಸಿಕವಾಗಿ ನೀವು ದುರ್ಬಲರಾಗುವಿರಿ.
ಧನುಸ್ಸು: ಒತ್ತಡದ ಕಾರಣದಿಂದ ಅನಾರೋಗ್ಯ ತಲೆನೋವು ಬರಬಹುದು. ಕುಳಿತುಕೊಳ್ಳುವ ವ್ಯತ್ಯಾಸದಿಂದ ನಿಮಗೆ ಸೊಂಟ ನೋವು ಬರಬಹುದು. ಇಂದು ನೀವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡಬಹುದು. ಬೇಸರದ ಸಂಗತಿಗಳು ಇಂದು ನಡೆಯುವ ಸಾಧ್ಯತೆ ಇದೆ. ವಿರೋಧದ ನಡುವೆಯೂ ನಿಮ್ಮ ಹಣವನ್ನು ಸಾಧಿಸುವಿರಿ. ಅನ್ಯರ ಕೆಲಸದಲ್ಲಿ ನೀವು ಮಗ್ನರಾಗಿ ನಿಮ್ಮ ಕೆಲಸವನ್ನು ಕೈ ಬಿಡಬೇಕಾಗಬಹುದು. ಕಲಾವಿದರಿಗೆ ತೊಂದರೆಯಾಗಲಿದೆ. ನಿಮಗೆ ಸಂಬಂಧಿಸದ ಕೆಲಸದಲ್ಲಿ ನೀವು ಮೂಗು ತೂರಿಸುವುದು ಬೇಡ. ನಿಮ್ಮ ಮನಸ್ಸು ಎಷ್ಟೇ ಪ್ರಯತ್ನಿಸಿದರೂ ನಕಾರಾತ್ಮಕವಾಗಿ ಇರಲಿದೆ.
ಮಕರ: ನಿಮ್ಮ ಜವಾಬ್ದಾರಿಯುತ ನಡೆಗೆ ನಿಮಗೆ ಹೆಚ್ಚಿನ ಕೆಲಸಗಳು, ಜವಾಬ್ದಾರಿಗಳು ಬರಬಹುದು. ನೀವು ಅದನ್ನು ಕಲಿಯಲು ಇಚ್ಛಿಸುವಿರಿ. ಕಲಿಕೆ ನಿಮ್ಮದೇ ಆದ ವಿಧಾನವನ್ನು ಬಳಸಿಕೊಳ್ಳಲಿದ್ದೀರಿ. ಪ್ರೇಮದ ಸೆಳೆತಕ್ಕೆ ಸಿಲುಕುವಿರಿ. ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ. ಮನೆಯಲ್ಲಿ ಪ್ರಸ್ತಾಪ ಮಾಡಿ ನಿಮ್ಮ ಮಾರ್ಗವನ್ನು ಸರಿ ಮಾಡಿಕೊಳ್ಳಿ. ವ್ಯಾಪಾರದಲ್ಲಿ ಕೆಲವು ಕೊರತೆಗಳನ್ನು ನೀಗಿಸಿಕೊಂಡರೆ ನೀವು ಲಾಭವನ್ನು ಗಳಿಸಬಹುದು. ಗ್ರಾಹಕರ ಜೊತೆ ಸಂಬಂಧ ಚೆನ್ನಾಗಿರಲಿ. ಆರೋಗ್ಯದ ವಿಚಾರದಲ್ಲಿ ನೀವು ನಿರ್ಲಕ್ಷ್ಯ ಮಾಡದೇ ಇರುವುದು ಒಳ್ಳೆಯದು.
ಕುಂಭ: ಯುವಕರಿಗೆ ಇಂದು ಉತ್ಸಾಹದ ದಿನವಾಗಲಿದೆ. ಕಷ್ಟದ ಕೆಲಸವನ್ನು ನೀವು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಇಂದಿನ ನಿಮ್ಮ ಕೆಲಸವು ಪೂರ್ಣವಾಗಬಹುದು. ಧನದ ಆದಾಯವು ನಿಮ್ಮ ನಿರೀಕ್ಷೆಯನ್ನು ಪೂರ್ಣವಾಗಿ ತಲುಪುವುದು. ನಿಮ್ಮ ಪ್ರಯಾಣ ಇಂದು ಬಹಳ ಕಷ್ಟಕಾರವಾದೀತು. ಯಶಸ್ಸನ್ನು ಒಡೆದು ಜೀರ್ಣಿಸಿಕೊಳ್ಳಲಾಗದಷ್ಟು ನಿಶ್ಶಕ್ತರಾಗವಿರಿ. ಮನೆಯಿಂದ ಆಚೆ ಹೋಗಬೇಕು ಅನ್ನಿಸಬಹುದು. ಸಂಗಾತಿಯು ನಿಮ್ಮ ಯೋಚನೆಗೆ ಬೆಂಬಲವನ್ನು ಕೊಡುವಳು. ಮಾಧ್ಯಮದಲ್ಲಿ ನೀವು ಇಂದು ಕಾಣಿಸಿಕೊಳ್ಳಬಹುದು.
ಮೀನ: ಬಹಳ ದಿನಗಳ ಅನಂತರ ನಿಮ್ಮ ಮನೆಯಲ್ಲಿ ಸಂತೋಷದ ಸಂದರ್ಭವು ಇರುವುದು. ನಿತ್ಯ ಬಳಸುವ ವಸ್ತುವಿನಿಂದ ನಿಮಗೆ ಲಾಭವಿದೆ. ಬೆನ್ನಿಗೆ ಸಂಬಂಧಿಸಿದ ನೋವನ್ನು ಅನುಭವಿಸಬಹುದು. ನೀವು ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ನಿಮಗೆ ಒಮ್ಮೆಲೆ ಬಿಡಬೇಕಾದ ಸ್ಥಿತಿ ಬರಬಹುದು. ವ್ಯಾಪಾರವನ್ನು ನೀವು ಇಂದು ತಂತ್ರಗಾರಿಕೆಯ ಮೂಲಕ ಮಾಡಲಿದ್ದೀರಿ. ನೀವಿಂದು ತಂಡದ ನಾಯಕರಾಗಿ ಆಯ್ಕೆಯಾಗಿ ಅದನ್ನು ಮುನ್ನಡೆಸುವಿರಿ. ಎಲ್ಲರನ್ನೂ ಹತ್ತಿರದಿಂದ ತಿಳಿಯಲು ನೀವು ಇಷ್ಟಪಡುವಿರಿ.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್- 8762924271)