AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nitya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ದೂರದ ಪ್ರಯಾಣ ಆದಷ್ಟು ನಿಲ್ಲಿಸುವುದು ಒಳ್ಳೆಯದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 3) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರು ದೂರದ ಪ್ರಯಾಣ ಆದಷ್ಟು ನಿಲ್ಲಿಸುವುದು ಒಳ್ಳೆಯದು
ಮೇ 3 ರ ರಾಶಿಭವಿಷ್ಯ
Rakesh Nayak Manchi
|

Updated on: Jun 03, 2023 | 12:45 AM

Share

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ.

ಧನುಸ್ಸು: ನಿಮಗೆ ಇಷ್ಟವಾದುದನ್ನು ನೀವು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಮನೆಯ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ಆಯಾಸವೂ ನಿಮ್ಮನ್ನು ಬಾಧಿಸೀತು.‌ ವಿಶ್ರಾಂತಿಯ ಕಡೆ ಹೆಚ್ಚು ಗಮನ ಹರಿಸುವಿರಿ. ನಿಮ್ಮ ಬಗ್ಗೆ ನಿಮಗೆ ಕೀಳು ಯೋಚನೆಗಳು ಬರಬಹುದು.‌ ಬೇಕಾದುದನ್ನು ನೀವು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ‌ಕನಸನ್ನು ಕಂಡಿದ್ದು ಸತ್ಯವಾಗಬಹುದು ಎಂಬ ಆತಂಕವೂ ಉಂಟಾಗಬಹುದು. ಯಾರನ್ನೂ ಸಂದೇಹದಲ್ಲಿ ನೋಡುವುದು ಬೇಡ. ಇನ್ನೊಬ್ಬರ ಬದುಕಿನ ಬಗ್ಗೆ ನೀವು ಆಡಿಕೊಳ್ಳುವುದು ಸರಿ ಎನಿಸದು. ಉದ್ಯೋಗವೇ ನಿಮಗೆ ಸದ್ಯದ ನೆಮ್ಮದಿಯ ಸ್ಥಳವಾಗಿದೆ.

ಮಕರ: ನಿಮ್ಮವರೇ ಆಗಿದ್ದು ನಿಮಗೆ ಅವರ ಪರಿಚಯ ಸಿಗದೇ ಹೋಗಬಹುದು. ಆದರೆ ಅವರಿಂದ ಬಹಳ ಉಪಕಾರವನ್ನು ಪಡೆದಿರುವುದು ಇಂದು ತಿಳಿಯಬಹುದು.‌ ನೀವು ಇಂದು ಸಂಸ್ಥೆಯ ಮುಖ್ಯಸ್ಥಾನವನ್ನು ಅಲಂಕರಿಸಬಹುದು. ತಂದೆಯ ಆನಾರೋಗ್ಯದ ನಿಮಿತ್ತ ನೀವು ಮನೆಗೆ ಬರಬಹುದು.‌ ಮನಸ್ಸಿನಲ್ಲಿ ಸಾವಧಾನತೆ ಇರುವುದು ಬಹಳ ಮುಖ್ಯ. ನಿಮ್ಮಲ್ಲಿ ಹೇಳುವಷ್ಟು ಅಹಂ ಇಲ್ಲದಿದ್ದರೂ ನೀಮ್ಮನ್ನು ಅಹಂಕಾರಿ ಎನ್ನುವರು. ನೀವು ಕಲಿತ ವಿದ್ಯೆಗೆ ಗೌರವವು ಸಿಗಬಹುದು. ಆಕಸ್ಮಿಕ ತಿರುವುಗಳು ನಿಮ್ಮನ್ನು ವಿಚಲಿತಗೊಳಿಸಬಹುದು. ಹಳೆಯದನ್ನು ಮರೆತು ಹೊಸತನ್ನು ತಂದುಕೊಳ್ಳುವಿರಿ.

ಕುಂಭ: ಯಾವ ಕೆಲಸವೂ ಕೈಗೂಡದು ಎಂದು ನಿಮಗೆ ಜುಗುಪ್ಸೆ ಉಂಟಾಗಬಹುದು. ಆಧಿಕಾರಕ್ಕೆ ಸಂಬಂಧಿಸಿದಂತೆ ನಿಮಗೆ ವಂಚನೆ ಆಗಬಹುದು. ಇಂದಿನ‌ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಏಕಾಂತವನ್ನು ಬಯಸಬಹುದು. ಸ್ನೇಹಿತರು ನಿಮಗೆ ತಪ್ಪು ದಾರಿಯನ್ನು ತೋರಿಸಬಹುದು. ಹೇಳಿಕೊಟ್ಟ ತಿಳಿವಳಿಕೆಯು ನಿಮಗೆ ಸಮಯಕ್ಕೆ ಬಾರದೇ ಹೋಗುವುದು. ಪ್ರಶಾಂತರಾಗಿರಲು ಯತ್ನಿಸಿದರೂ ಕೆಲವು ಸಂದರ್ಭಗಳಲ್ಲಿ ಉದ್ವೇಗವು ಪ್ರಕಡವಾಗಬಹುದು. ನಿಮ್ಮ ಮನಸ್ಸು ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಅಣಿಗೊಳಿಸುವುದು ಒಳ್ಳೆಯದು.

ಮೀನ: ಕುಟುಂಬದ ಕಲಹದಲ್ಲಿ ನೀವು ಮೌನವಹಿಸುವಿರಿ. ಕಳೆದುದರ ಬಗ್ಗೆ ಅತಿಯಾದ ಚಿಂತೆ ಬೇಡ. ಆಪ್ತರ ನಡುವೆ ನಿಮ್ಮ ಸಮಾಲೋಚನೆಗಳು ನಡೆದು ನೀವು ಒಂದು ತೀರ್ಮಾನಕ್ಕೆ ಬರಬಹುದಾಗಿದೆ. ನೀವು ಪಾಲುದಾರಿಕೆಯಲ್ಲಿ ಯಾರನ್ನೋ ಜೊತೆ ಮಾಡಿಕೊಂಡು ಹೋಗಬಹುದು. ನಿಮಗೆ ಇಂದು ಧೈರ್ಯದ ಕೊರತೆ ಕಾಣಬಹುದು. ದೂರಪ್ರಯಾಣವನ್ನು ನೀವು ಆದಷ್ಟು ನಿಲ್ಲಿಸುವುದು ಒಳ್ಳೆಯದು. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಸನ್ನಿವೇಶಗಳು ಬರಬಹುದು. ನಿಮ್ಮ ನಿಯಮಗಳೇ ನಿಮಗೆ ತೊಂದರೆಯನ್ನು ತಂದೀತು. ಕುಲದೇವರ ಸ್ಮರಣೆಯನ್ನು ನೀವು ಮಾಡಬೇಕಾದೀತು.

-ಲೋಹಿತಶರ್ಮಾ ಇಡುವಾಣಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ