ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 6 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:45 ರಿಂದ 05:21ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 02:08ರ ವರೆಗೆ.
ಸಿಂಹ: ನೀವು ಇಂದು ಸಂಬಂಧಗಳ ಬೆಲೆಯನ್ನು ಅರ್ಥಮಾಡಿಕೊಳ್ಳುವಿರಿ. ವಿರೋಧದ ನಡುವೆಯೂ ನಿಮ್ಮ ಕೆಲಸವನ್ನು ನೀವು ಮಾಡಿಯೇ ತೀರುವಿರಿ. ಅಧಿಕ ಖರ್ಚು ನಿಮ್ಮನ್ನು ಚಿಂತೆಗೆ ತಳ್ಳಬಹುದು. ದೂರ ಪ್ರಯಾಣವನ್ನು ನೀವು ಇಷ್ಟಪಡುವಿರಿ. ದೈವದ ಸ್ಮರಣೆಯನ್ನು ಮಾಡಿ ನೀವು ಮುಂದುವರಿಯುವುದು ಒಳ್ಳೆಯದು. ಮೇಲಧಿಕಾರಳಿಂದ ಉದ್ಯೋಗದ ವರದಿ ನೀಡಲು ಆದೇಶ ಬರಬಹುದು. ಉದ್ಯೋಗದಲ್ಲಿ ನಿಶ್ಚಿಂತೆಯಿಂದ ಇದ್ದ ನಿಮಗೆ ಆತಂಕವು ಆರಂಭವಾಗಬಹುದು. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ.
ಕನ್ಯಾ: ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಬಹುದು. ಮನೆಯ ನಿರ್ಮಾಣವೂ ನಿಧಾನವಾಗಿ ನಿಮಗೆ ಬೇಸರವಾದೀತು. ನಿಮ್ಮ ಮಾತಿಗೆ ಬೆಲೆ ಇಲ್ಲದೇ ನೀವು ಸುಮ್ಮನಿರುವಿರಿ. ನೀವು ನಡೆಸುವ ಉದ್ಯಮವೂ ಸದ್ಯ ವೇಗವನ್ನು ಕಳೆದುಕೊಳ್ಳಬಹುದು. ನೀವು ಮನೆಯಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಯಾರದೋ ಅನುಕಂಪವನ್ನು ಪಡೆಯಲು ನೀವು ಪ್ರಯತ್ನಿಸುವಿರಿ. ನಿಮ್ಮದಾದ ಕೆಲವು ಆಚರಣೆಗಳನ್ನು ನೀವು ಬಿಡದೇ ಮಾಡುವಿರಿ. ವಿದೇಶದ ಪ್ರಯಾಣ ನಿಮಗೆ ಖುಷಿ ಇದ್ದರೂ ಸಂದರ್ಭವು ಅದಕ್ಕೆ ಅನುಕೂಲವಾಗಿಲ್ಲ. ಪಕ್ಷಪಾತ ಧೋರಣೆಯನ್ನು ನೀವು ಬಿಟ್ಟರೆ ಮಾತ್ರ ಒಳ್ಳೆಯದು.
ತುಲಾ: ನಿಮಗೆ ದಂಪತಿಯ ಜೊತೆ ಪುಣ್ಯಸ್ಥಳಗಳ ಭೇಟಿ ಮಾಡುವ ಬಯಕೆ ಇರಲಿದೆ. ಪತ್ನಿಗಾಗಿ ಅಚ್ಚರಿಯ ಉಡುಗೊರೆಯೊಂದನ್ನು ನೀವು ಕೊಡುವಿರಿ. ನೀವಿಂದು ಖರ್ಚಿನ ವಿಚಾರಕ್ಕೆ ಯಾವ ಹಿಂಜರಿಕೆಯನ್ನೂ ಇಟ್ಟಕೊಂಡಿರುವುದಿಲ್ಲ. ಮನೆಯಲ್ಲಿ ದೊಡ್ಡ ಧಾರ್ಮಿಕ ಕಾರ್ಯವನ್ನು ಮಾಡುವ ಯೋಚನೆ ಮಾಡುವಿರಿ. ಮಕ್ಕಳ ಜೊತೆ ಹರಟೆ ಹೊಡೆಯುತ್ತ ನಿಮ್ಮ ಕಾಲವನ್ನು ಸಂತೋಷದಿಂದ ಕಳೆಯುವಿರಿ. ನಿಮ್ಮಲ್ಲಿ ಒಂದು ರೀತಿ ನೆಮ್ಮದಿಯು ಸಹಜವಾಗಿ ಉತ್ಪತ್ತಿಯಾಗಲಿದೆ. ನಿಮ್ಮ ವರ್ತನೆಯನ್ನು ಗಮನಿಸುತ್ತಿರಬಹುದು. ಮಾತಿನಲ್ಲಿ ಸ್ಪಷ್ಟತೆ, ಮಂದಹಾಸವಿರಲಿ. ನೀವಂದುಕೊಂಡ ಕಾರ್ಯವು ಆಗಬಹುದು.
ವೃಶ್ಚಿಕ: ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ ಮೇಲೆ ಪರಿಣಾಮ ಬೀರೀತು. ಹೊಸ ಉದ್ಯಮಗಳಿಗೆ ಸದ್ಯ ಮುಂದುವರಿಯಿರಿಯುವುದು ಬೇಡ. ನ್ಯಾಯಾಲಯದ ಮೆಟ್ಟಲೇರುವ ಸಂದರ್ಭವನ್ನು ನೀವು ತಂದುಕೊಳ್ಳುವುದು ಬೇಡ. ಬೆಟ್ಟ ಗುಡ್ಡಗಳನ್ನು ಸುತ್ತುವುದು ನಿಮಗೆ ಪ್ರಿಯವಾದ ಸಂಗತಿಯಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆಯ ಕೊರತೆ ಹೆಚ್ಚು ಕಾಣುವುದು. ಇನ್ನೊಬ್ಬರ ಮೇಲೆ ನಿಮಗೆ ಬಹಳ ಅಕ್ಕರೆ ಉಂಟಾಗಬಹುದು. ಸಹೋದರಿಯ ಆನಾರೋಗ್ಯದಲ್ಲಿ ನೀವು ಬಹಳ ಶ್ರಮವಿಸುವಿರಿ. ಒತ್ತಡಗಳಿಗೆ ಸಿಲುಕಿ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಬೇಡ.
-ಲೋಹಿತಶರ್ಮಾ ಇಡುವಾಣಿ