ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಬುಧವಾರ (ಜೂನ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ 12:34 ರಿಂದ 14:11ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:43ರಿಂದ ಬೆಳಿಗ್ಗೆ 09:20ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:57ರಿಂದ ಮಧ್ಯಾಹ್ನ 12:34ರ ವರೆಗೆ.
ಮೇಷ ರಾಶಿ :ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಇದಕ್ಕಾಗಿ ಅಪಮಾನೂ ಆಗಬಹುದು. ಆರ್ಥಿಕವಾಗಿ ನಿಮ್ಮನ್ನು ಯಾರಾದರೂ ಕೇಳಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣಬಹುದು. ದೀರ್ಘಕಾಲದ ಬಂಧಗಳು ಮುಕ್ತಾಯವಾಗುವುದು. ಸ್ತ್ರೀಯರಿಗೆ ಶುಭವಾರ್ತೆಯೊಂದು ಬರಲಿದೆ. ಅಂಜಿಕೆಯಿಲ್ಲದೇ ನೀವು ಮಾಡುವ ಕಾರ್ಯದಲ್ಲಿ ಮುನ್ನುಗ್ಗಿ. ಇನ್ನೊಬ್ಬರ ಕಲಹದಿಂದ ನೆಮ್ಮದಿಯನ್ನು ಕಾಣುವುದು ಬೇಡ. ಸಾಮಾಜಿಕವಾಗಿ ಮನ್ನಣೆ ಸಿಗುವ ಸಾಧ್ಯತೆ ಇದೆ. ಯಾರಾದರೂ ಹೊಗಳಿದರೆ ಹಿಗ್ಗಬೇಡಿ. ಕೊಡುಕೊಳ್ಳುವ ವ್ಯವಹಾರದಲ್ಲಿ ಬೇಸರವಾಗಬಹುದು. ವಿವಾಹದ ಮಾತುಕತೆ ನಡೆಯಬಹುದು. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಮನಸ್ಸಿದ್ದರೆ ಗೌರವಿಸಿ, ಇಲ್ಲವೇ ಸುಮ್ಮನಿರಿ.
ವೃಷಭ ರಾಶಿ :ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ಹಣಕಾಸನ್ನು ಹೊಂದಿಸುವುದು ಇಂದು ಕಷ್ಟವಾಗುವುದು. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ಯಾವುದರಲ್ಲಿಯೂ ಸಂತೃಪ್ತಿ ಇರದು. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ. ಸಾಲಬಾಧೆಯಿಂದ ಮುಕ್ತರಾಗಲು ಯೋಜನೆ ರೂಪಿಸುವಿರಿ. ಅತಿ ಬುದ್ಧಿವಂತಿಕೆಯು ಮುಳುವಾಗಬಹುದು. ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಅಹಂಕಾರವಾದೀತು.
ಮಿಥುನ ರಾಶಿ :ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ಏನೇ ಆದರೂ ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ನಷ್ಟವನ್ನು ಮರೆಮಾಚಲು ತಂತ್ರವನ್ನು ಹೂಡುವಿರಿ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ನೀವು ದೇವರ ಮೊರೆ ಹೊಗುವಿರಿ. ಪಿತ್ರಾರ್ಜಿತ ಚರಾಸ್ತಿಯನ್ನು ಸುತ್ತಿ ಬಳಸಿ ಕೇಳುವಿರಿ. ಭೂಮಿಯ ವ್ಯವಹಾರವನ್ನು ನೋಡಿಕೊಳ್ಳುವವರಿಗೆ ಅಧಿಕ ಲಾಭವಿದೆ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಅಳುಕುವ ಅವಶ್ಯಕತೆ ಇಲ್ಲ. ಎಲ್ಲವೂ ನಿಮಗೆ ತಿಳಿದೇ ಆಗಬೇಕು ಎನ್ನುವ ಹಠವಿರುವುದು. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.
ಕರ್ಕ ರಾಶಿ :ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಮನೆಯ ಕೆಲಸದಲ್ಲಿ ಆಸಕ್ತಿ ಹೆಚ್ಚಿರುವುದು. ಇದರಿಂದ ತುರ್ತು ಕೆಲಸಗಳನ್ನು ಮರೆಯಬಹುದು ಸಿಟ್ಟಿನಿಂದ ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬುದನ್ನು ಬಿಡಿ. ಪ್ರೀತಿಯಿಂ ಸರಿ ಮಾಡುವ ವಿಧಾನವನ್ನು ಕಂಡುಕೊಳ್ಳಿ. ನಿಮ್ಮಮೆಲೆಯೂ ಪ್ರೀತಿ ಬರಬಹುದು. ಎದುರಾಳಿಯ ಬಲವನ್ನು ಕಂಡು ಯುದ್ಧಸಾರಬೇಕು. ನಮ್ಮ ಬಳಿ ಇರುವ ವಸ್ತು, ವ್ಯಕ್ತಿಗಳ ಮೇಲಲ್ಲ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಯಾವುದರಿಂದಲೂ ಬಿಡುಗಡೆ ಸಿಗದೇ ನೀವು ಸ್ವತಂತ್ರರಾಗಲಾರಿರಿ. ಆತುರದ ನಿರ್ಧಾರಕ್ಕೆ ಹೋಗಬೇಡಿ. ಸಮಯಕ್ಕಾಗಿ ಕಾಯಿರಿ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಅದನ್ನು ಯೋಜನೆ ಗೊಳಿಸಿ. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು.
ಸಿಂಹ ರಾಶಿ :ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ನಿಮ್ಮ ಶ್ರಮಕ್ಕೆ ಕೂಡಲೇ ಫಲ ಸಿಗುತ್ತದೆ ಎನ್ನುವ ಧಾವಂತ ಬೇಡ. ತಾಳ್ಮೆಯ ಅವಶ್ಯಕತೆ ಇದೆ. ದಾಂಪತ್ಯದಲ್ಲಿ ಮಕ್ಕಳು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಆರ್ಥಿಕಸ್ಥಿಯನ್ನು ಬಲ ಮಾಡಿಕೊಳ್ಳಲು ನಿಮ್ಮ ಪ್ರಯತ್ನ ಎಂದಿನಂತೆ ಇರಲಿದೆ. ಮಾತುಗಳಿಂದಲೇ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ಮರೆತು, ತಾಳ್ಮೆ, ಮೌನದಿಂದ ಸಾಧ್ಯ ಎಂಬುದನ್ನು ನಂಬಿ. ಅವರ ಸಲಹೆಯನ್ನು ಸ್ವೀಕರಿಸಿ ಕ್ರಮಬದ್ಧವಾಗಿ ಆಚರಿಸಿ. ಪ್ರಯಾಣದಲ್ಲಿ ಪ್ರೇಮವಾಗುವ ಸಂಭವವಿದೆ. ಸಜ್ಜನರ ಸಹವಾಸ ಸಿಗುವುದು. ಅವರನ್ನು ಆಡಿಕೊಳ್ಳಬೇಡಿ. ಮಕ್ಕಳು ನಿಮ್ಮನ್ನು ಕಂಡು ಹಾಸ್ಯ ಮಾಡಿಯಾರು. ಅದಕ್ಕೆ ಏನನ್ನಾದರೂ ಹೇಳಬೇಡಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ನೀವು ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಬಯಸುವಿರಿ.
ಕನ್ಯಾ ರಾಶಿ :ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಸ್ಪಷ್ಟತೆಯ ಜೊತೆ ಮುಂದೆ ಸಾಗಿರಿ. ನೀವು ಕುಟುಂಬದ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿ ಗೊತ್ತಾಗುವುದು. ವಿವಾಹಕ್ಕೆ ಸಂಬಂಧಿಸಿದ ತೊಂದರೆಗಳು ದೂರಾಗಿ ಮಂಗಲಕಾರ್ಯವು ನಿರ್ವಿಘ್ನವಾಗಿ ಸಾಗುವುದು. ಸ್ನೇಹಿತರು ನಿಮಗೆ ಓಡಾಟಕ್ಕೆಂದು ಸ್ವಂತವಾಹನವನ್ನು ಕೊಟ್ಟಾರು. ಇನ್ನೊಬ್ಬರ ವ್ಯವಹಾರವನ್ನು ಕೆಡಿಸಲು ಹೋಗಬೇಡಿ. ಭೂ ವ್ಯವಹಾರವು ಇತ್ಯರ್ಥ ಆಗುವುದು ಕಷ್ಟ. ಚೆನ್ನಾಗಿ ಮಾತನಾಡುತ್ತೇನೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ನಗುಮುಖದಿಂದ ಇಂದು ಇದ್ದರು ನಿಮ್ಮ ಬಳಿ ಅನೇಕರು ಮಾತನಾಡಲು ಬರಬಹುದು. ವ್ಯಾಪರ ಸುಗಮವಾಗಿ ಸಾಗುವುದು. ಮನೆಯವರಿಂದ ದೂರವಿದ್ದೇನೆಂಬ ಭಾವವು ಕಾಡಬಹುದು. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ.
ತುಲಾ ರಾಶಿ :ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ನಿಮ್ಮ ಪ್ರಯತ್ನಗಳು ಬದಲಾಗಲಿ. ಕುಟುಂಬದಲ್ಲಿ ಮನಸ್ತಾಪವು ಸ್ಫೋಟವಾಗಲಿದೆ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಬೈಗುಳ ಸಿಗಬಹುದು. ಸ್ವಂತ ವಾಹನದಲ್ಲಿ ದೂರ ಪ್ರಯಾಣವನ್ನು ಇಂದು ಮಾಡುವಿರಿ. ಸ್ನೇಹಿತರ ಕೆಟ್ಟ ಕೆಲಸದಿಂದ ನಿಮಗೆ ಸಂಕಷ್ಟವಾಗಬಹುದು. ಗೊತ್ತಿಲ್ಲದೇ ದುರಭ್ಯಾಸಕ್ಕೆ ಶರಣಾಗುವಿರಿ. ಸ್ವಭಾವವನ್ನು ತಿದ್ದಿಕೊಳ್ಳಲಾಗದೇ ಎಲ್ಲರಿಂದ ನಿಂದನೆಗೆ ಒಳಗಾಗುವಿರಿ. ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. ನೀವು ನಿಮ್ಮ ನಿಲುವನ್ನು ಬದಲಾಯಿಸಬೇಡಿ. ನಿಮಗೆ ಖುಷಿ ಎನಿಸಿದ್ದನ್ನು ಬೇರೆಯವರಿಗೆ ನೋವಾಗದಂತೆ ಮಾಡಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ಹೊಣೆಗಾರಿಕೆ ತಪ್ಪಬಹುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ.
ವೃಶ್ಚಿಕ ರಾಶಿ :ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಸೌಂದರ್ಯದ ಸಾಧನಗಳನ್ನು ಸ್ತ್ರೀಯರು ಹೆಚ್ಚು ಬಳಸುವರು. ಮಕ್ಕಳ ಕಡೆ ಗಮನ ಹೆಚ್ಚು ಬೇಕಾಗುವುದು. ಮನಶ್ಚಾಂಚಲ್ಯದ ಮೇಲೆ ನಿಯಂತ್ರಣ ಬೇಕಾದರೆ ಧ್ಯಾನವನ್ನು ಮಾಡಿ. ನೂತನ ಸ್ಥಳವನ್ನು ಖರೀದಿಸುವ ಯೋಜನೆ ಮಾಡುವಿರಿ. ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ. ಇಂದು ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ಕಾರ್ಯದಲ್ಲಿ ವೇಗವಿಲ್ಲದೇ ನಿಧನಾವಾಗುವುದು. ಬಂಧುಗಳ ಸಹವಾಸದಿಂದ ನಿಮಗೆ ಉತ್ತಮ ಮಾರ್ಗವು ಸಿಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರುವುದು. ಬೇಸರವಾಗಿ ಎಲ್ಲವೂ ಅಶಾಶ್ವತ ಎಂದೆನಿಸಬಹುದು. ಗೆಳೆತನಕ್ಕೆ ಹೊಸ ವ್ಯಕ್ತಿಗಳು ಸಿಗುವರು. ಅವರವರ ಸಾಮರ್ಥ್ಯವನ್ನು ನೀವು ತಿಳಿದಿಲ್ಲ. ನಿಮ್ಮ ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು.
ಧನು ರಾಶಿ :ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ಮನೆಗೆ ಖರ್ಚು ಮಾಡುವಾಗ ನಿಮ್ಮ ಆರ್ಥಿಕಸ್ಥಿತಿಯನ್ನೂ ಗಮನಿಸಿ. ಇಂದು ನಿಮ್ಮ ಪರೀಕ್ಷೆಗೆಂದು ಕೆಲವು ಘಟನೆಗಳು ನಡೆಯಬಹುದು. ಅದನ್ನು ಸರಿಯಾಗಿ ನಿಭಾಯಿಸಿ. ಕಛೇರಿಯಲ್ಲಿ ನಿಮಗೆ ಉತ್ಸಾಹದ ಸ್ವಾಗತ ಸಿಗಲಿದೆ. ನಿಮ್ಮಿಂದ ದೂರಹೋದವರ ಬಗ್ಗೆ ಅತಿಯಾದ ಆಸಕ್ತಿ ಬೇಡ. ಮಕ್ಕಳು ನಿಮಗೆ ಸಂತೋಷವನ್ನು ಕೊಡುವರು. ಅವರ ಜೊತೆ ಸಮಯವನ್ನು ಕಳೆಯಿರಿ. ಅತಿಯಾದ ಆಸೆಬುರುಕುತನ ಒಳ್ಳೆಯದಲ್ಲ. ಮನಸ್ಸು ಹೇಳಿದಂತೆ ಕೇಳಬೇಡಿ, ಸಮಾಧಾನದಿಂದ ಇರಿ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಖರ್ಚಿನ ಬಗ್ಗೆ ಅಂದಾಜು ಇಲ್ಲದೇ ಕಾರ್ಯವನ್ನು ಒಪ್ಪಿಕೊಳ್ಳುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ನಿಮ್ಮ ಶ್ರಮವು ದುರುಪಯೋಗವಾಗುವುದು.
ಮಕರ ರಾಶಿ :ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಇನ್ನೊಬ್ಬರನ್ನು ನಿಂದಿಸುವುದು ಬೇಡ. ಅವರೇ ಕರ್ಮದ ಫಲವನ್ನು ಉಣ್ಣುವರು. ನೀವಾಡುವ ಮಾತುಗಳು ನಿಮಗೆ ಖುಷಿ ಕೊಡಬಹುದು. ಅದರೆ ಅದರಿಂದ ಇನ್ನೊಬ್ಬರಿಗೆ ನೋವಾಗುತ್ತದೆ ಎಂಬುದನ್ನೂ ಮರೆಯಬೇಡಿ. ಮನದಲ್ಲಿ ಅವ್ಯಕ್ತವಾದ ಭಯವು ಕಾಡವುದು. ದೇವರ ಸ್ತೋತ್ರಾದಿಗಳನ್ನು ಮಾಡಿ. ವಿದೇಶಕ್ಕೆ ಹೋಗುವ ಅವಕಾಶವು ತಪ್ಪಿಹೋಗುವುಸು. ಅಗತ್ಯವಿದ್ದಷ್ಟೇ ಖರ್ಚು ಮಾಡಿ. ಎಲ್ಲವೂ ಬೇಕೆನಿಸಬಹುದು. ಮನಸ್ಸನ್ನು ಕಡಿಮಾಣ ಹಾಕಿ ನಿಲ್ಲಿಸುವುದು ಉತ್ತಮ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ.
ಕುಂಭ ರಾಶಿ :ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ನಿಮ್ಮಲ್ಲಿ ದೃಢತೆ ಇದ್ದರೆ ಅದು ಸಾಧ್ಯವಿಲ್ಲ. ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಪುಣ್ಯ ಸ್ಥಳಗಳಿಗೆ ನೀವು ಹೋಗುವಿರಿ. ಇನ್ನೊಬ್ಬರು ನಿಮ್ಮ ಶ್ರೇಯಸ್ಸನ್ನು ಸಹಿಸದೇ ಅಸೂಯೆಪಡುವರು. ಮನಸ್ಸಿನಲ್ಲಿಯೇ ಸಂಕಟಪಡುವ ಬದಲು ಅದನ್ನು ಆಪ್ತರಿಗೆ ಹೇಳಿ ಹಗುರಾಗಿ. ಕೃಷಿಕರಿಗೆ ಲಾಭವಾಗುವ ಸಾಧ್ಯತೆ ಇದೆ. ಇಂದು ಸಹಾಯವನ್ನು ಕೇಳಿದವರಿಗೆ ಇಲ್ಲವೆನ್ನದೇ ಮಾಡಿ. ಆಯಾಸವಾದರೆ ವಿಶ್ರಾಂತಿಯ ಜೊತೆ ಕೆಲಸವನ್ನು ಮಾಡಿ. ಗುರಿಯೆಡಗೆ ಪ್ರಯತ್ನವು ನಿರಂತರವಾಗಿರಲಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು.
ಮೀನ ರಾಶಿ :ಚಿಂತಿಸಿದ ಕೆಲಸವನ್ನು ಪೂರ್ಣಗೊಳಿಸುವ ಸಂತೋಷವು ನಿಮ್ಮದಾಗಲಿದೆ. ಅನ್ಯರಿಗೆ ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಸ್ವಾಭಿಮಾನಿಗಳಾಗಿ ಇರುವಿರಿ. ತಾನು ಹೇಳಿದಂತೆ ನಡೆಯಬೇಕು ಎನ್ನುವ ಮಾನಸಿಕ ಸ್ಥಿತಿಯಿಂದ ಹೊರ ಬನ್ನಿ. ಯಾವುದನ್ನೂ ಹಠದ ಮೂಲಕ ಪಡೆದುಕೊಳ್ಳುವುದು ಬೇಡ. ಹೊಸದಾಗಿ ಸೇರಿದ ಕೆಲಸದಲ್ಲಿ ಗೊಂದಲಗಳಿದ್ದು ಅದನ್ನು ಸರಿಮಾಡಿಕೊಳ್ಳುವಿರಿ. ಇಂದು ನಿಮ್ಮ ಮಹತ್ತ್ವದ ಕಾರ್ಯವು ಕೈಗೂಡಬಹುದು. ಹಳೆಯ ಸಮಾಚಾರವನ್ನು ಪುನಃ ನೆನಪಿಸಿಕೊಳ್ಳುವಿರಿ. ಮಾತನ್ನು ಕಡಿಮೆ ಮಾಡಿ. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಶತ್ರುಗಳು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ.
-ಲೋಹಿತ ಹೆಬ್ಬಾರ್ – 8762924271 (what’s app only)