Rashi Bhavishya: ರಾಶಿಭವಿಷ್ಯ, ಈ ರಾಶಿಯವರ ವೃತ್ತಿ ಜೀವನವು ಹೊಸ ತಿರುವು ಪಡೆಯಬಹುದು

| Updated By: Rakesh Nayak Manchi

Updated on: Jan 21, 2024 | 12:45 AM

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಜನವರಿ 21 ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Rashi Bhavishya: ರಾಶಿಭವಿಷ್ಯ, ಈ ರಾಶಿಯವರ ವೃತ್ತಿ ಜೀವನವು ಹೊಸ ತಿರುವು ಪಡೆಯಬಹುದು
ದಿನಭವಿಷ್ಯ
Image Credit source: iStock Photo
Follow us on

ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಜನವರಿ 21) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಏಕಾದಾಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶುಕ್ಲ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 24 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:59 ರಿಂದ ಸಂಜೆ 06:25ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:44 ರಿಂದ 02:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:34 ರಿಂದ 04:59ರ ವರೆಗೆ.

ಧನು ರಾಶಿ: ಇಂದು ನೀವು ಸಕ್ರಿಯರಾಗಿ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಉದ್ಯೋಗಿಗಳಿಗೆ ಇದು ಶುಭ ದಿನವಾಗಿರುತ್ತದೆ. ನೀವು ದೀರ್ಘಕಾಲ ಆಶಿಸುತ್ತಿದ್ದ ಬಡ್ತಿಯು ನಿಮ್ಮ ಹಾದಿಗೆ ಬರಬಹುದು. ವ್ಯಾಪಾರಿಗಳಿಗೆ ಅಧಿಕ ಲಾಭವನ್ನು ಪಡೆಯಬಹುದು. ಹೇಗಾದರೂ, ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹಣಕಾಸಿನ ವಿಷಯದಲ್ಲಿ ಇಂದು ಉತ್ತಮ ದಿನವಾಗಲಿದೆ. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ ಧೈರ್ಯವು ಕುಂದಬಹುದು. ಸ್ವಂತ ಉದ್ಯಮದ ಕಾರಣಕ್ಕೆ ಹೊರಗೆ ಹೋಗಬೇಕಾಗುವುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಉದ್ಯೋಗದ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ.

ಮಕರ ರಾಶಿ: ಇಂದು ನಿಮ್ಮ ವೈಯಕ್ತಿಕ ಕಾರ್ಯಕ್ಕೆ ಮುಖ್ಯವಾದ ದಿನವಾಗಿರುತ್ತದೆ. ವಿಶೇಷವಾಗಿ ವ್ಯಾಪಾರಸ್ಥರು ಇಂದು ತಮ್ಮ ಸಂಪರ್ಕಗಳನ್ನು ಹೆಚ್ಚಿಸಲು ಅವಕಾಶವನ್ನು ಪಡೆಯಬಹುದು. ಕೆಲಸದಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ನಿಮ್ಮ ವೃತ್ತಿಜೀವನವು ಹೊಸ ತಿರುವು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಕುಟುಂಬ ಸದಸ್ಯರಿಂದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು. ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು.

ಕುಂಭ ರಾಶಿ: ಇಂದು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವರು. ಪರೀಕ್ಷೆಯನ್ನು ಏಕಾಗ್ರತೆಯಿಂದ ಎದುರಿಸಿ ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ. ಇಂದು ನೀವು ತುಂಬಾ ಭಾವನಾತ್ಮಕತೆಯನ್ನು ಅನುಭವಿಸುವಿರಿ. ಸಣ್ಣ ವಿಷಯವೂ ನೋಯಿಸಬಹುದು. ನೀವು ತುಂಬಾ ಅಸಮಾಧಾನಗೊಂಡಿದ್ದರೂ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನೀವು ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ.

ಮೀನ ರಾಶಿ: ಇಂದು ನಿಮ್ಮ ಮನಃಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಇಂದಿನ ಪ್ರಮುಖ ಕೆಲಸವನ್ನು ನಾಳೆ ಮುಂದೂಡುವುದು ನಿಮಗೆ ಸರಿಹೊಂದದು. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ವಿದ್ಯುತ್ ಉಪಕರಣಗಳ ಉದ್ಯಮದಿಂದ ಲಾಭವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದ ತೀರ್ಮಾನವು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಕಾರ್ಯದ ಆರಂಭವೇ ಸರಿಯಾಗಿ ಇರುವುದರಿಂದ ಗುರಿಯೂ ತಪ್ಪಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ