ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ ಸಂಜೆ 04:40 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:49ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:45 ರವರೆಗೆ.
ಸಿಂಹ ರಾಶಿ: ಜಡಕನ್ನು ಬಿಡಿಸಲು ತಾಳ್ಮೆ ಬೇಕು, ಇಲ್ಲವೋ ಅದನ್ನು ಬಿಡುವುದೇ ಒಳ್ಳೆಯದು. ವಾಹನವನ್ನು ಚಲಿಸುವಾಗ ಯಾವದೇ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಯಾರಾದರೂ ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸಿ ಮಾಡುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳುವಿರಿ. ಸಾಲವಾಗಿ ನೀಡಿದ ಹಣವನ್ನು ಹಿಂಪಡೆಯಲು ಕಷ್ಟವಾದೀತು. ಸಂಗಾತಿಯನ್ನು ನೀವು ಅಲಕ್ಷಿಸುವಿರಿ. ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಲಾಗದು. ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳಳ್ಳುವಿರಿ. ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ. ಹಣವನ್ನು ಗಳಿಸಬೇಕು ಎಂಬ ಹಂಬಲವು ಅಧಿಕವಾಗಿರುವುದು. ನಿಮ್ಮ ಮಾತು ನಡೆಯದ ಕಡೆ ಮೌನದಿಂದ ಇರುವುದು ಒಳ್ಳೆಯದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲವನ್ನೂ ಪ್ರಾರಬ್ಧ ಎಂದು ಸುಮ್ಮನಾಗುವುದಕ್ಕಿಂತ ಭಿನ್ನವಾಗಿ ಯೋಚಿಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಬೇಕೆನಿಸುತ್ತದೆ.
ಕನ್ಯಾ ರಾಶಿ: ನಿಮ್ಮ ಸಮಯಪಾಲನೆಗೆ ಪ್ರಶಂಸೆ ಸಿಗುವುದು. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ನಿಮ್ಮ ಉದ್ಯಮದ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಲಿದೆ. ಸಮಾಜಮುಖೀ ಕಾರ್ಯಗಳನ್ನು ಯಾವದೇ ಫಲಾಪೇಕ್ಷೆ ಇಲ್ಲದೆ ಮಾಡುವಿರಿ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಕುಟ್ಟಲಾಗದು. ನಿಮ್ಮ ತಾಳ್ಮೆಯು ಕಡಿಮೆ ಆದಂತೆ ತೋರುವುದು. ನಿಮ್ಮ ಗುಣಗಳನ್ನು ದುರುಪಯೋಗ ಮಾಡಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ಅವರು ಬೇಸರಿಸುವರು. ನಿಮ್ಮ ಹೊಸ ಉದ್ಯೋಗದಕ್ಕೆ ಎದುರಾಗುವ ಸವಾಲುಗಳನ್ನು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುವಿರಿ. ಸೋಮಾರಿ ತನವು ನಿಮ್ಮ ಶತ್ರುವಾಗಬಹುದು. ಸರ್ಕಾರಿ ಉದ್ಯೋಗಿಗಳ ಆದಾಯವು ಹೆಚ್ಚಾಗಲಿದೆ. ನಿರಾಧಾರವಾದ ನಿಮ್ಮ ದೂರು ಬಿದ್ದು ಹೋಗುವುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ. ಇಂದು ನೀವು ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.
ತುಲಾ ರಾಶಿ: ಸ್ವಾವಲಂಬನೆಯು ಮನಸ್ಸಿನಲ್ಲಿ ಎಣಿಸಿದಕೂಡಲೇ ಬರುವುದಲ್ಲ. ಹಂತಹಂತವಾಗಿ ಅತ್ತ ಸಾಗಬೇಕು. ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಮಾನಸಿಕ ಸ್ಥಿತಿಯು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಮನೆಯಲ್ಲಿ ಹಿರಿಯರಾದ ಕಾರಣ ನೀವು ಹೆಚ್ಚು ಬೈಗಳುಕ್ಕೆ ಸಿಲುಕುವಿರಿ. ಹೋದ ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಪ್ರೇಮವನ್ನು ನಿಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ನೀವು ಕರ್ತವ್ಯವನ್ನು ಬಿಡದೇ ಕೈಯ್ಯಲ್ಲಿ ಆಗುವ ಕೆಲಸವನ್ನು ಮಾಡಿ. ಎಲ್ಲವೂ ಅನುಕೂಲಕರವಾಗಿದೆ ಎಂದು ಅನ್ನಿಸಬಹುದು. ಹಿರಿಯರ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರಿಂದ ಭೀತಿಯು ನಿಮಗೆ ಆಗುವುದು. ವಾಹನ ಸಂಚಾರಕ್ಕೆ ತಡೆಯಾಗಬಹುದು.
ವೃಶ್ಚಿಕ ರಾಶಿ: ಬೇರೆಯವರ ಮುಖಾಂತರ ಪುಣ್ಯಸ್ಥಳಗಳಿಗೆ ಹೋಗಿಬರುವಿರಿ. ನೀವು ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಕುಟುಂಬದಲ್ಲಿ ಪರಸ್ಪರ ಸಹಬಾಳ್ವೆಯು ಎದ್ದು ತೋರುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿಯು ಇರುವುದು. ವಿದೇಶದ ವ್ಯಾಪಾರವು ಹದತಪ್ಪುವ ಸಾಧ್ಯತೆ ಇದೆ. ಸಂಸ್ಥೆಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವರು. ಹಣದ ಉಳಿಕೆಗೆ ಸಂಬಂಧಿಸಿದಂತೆ ನೀವು ಕಾನೂನು ರೀತಿಯ ಕ್ರಮವನ್ನು ಅನುಸರಿಸಬೇಕಾಗಬಹುದು. ಹಣದ ಕಾರಣಕ್ಕೆ ವಂಚನೆಯಲ್ಲಿ ಬೀಳುವಿರಿ. ಕ್ರಯ ಹಾಗೂ ವಿಕ್ರಯಗಳ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳಿಗೆ ಸಿಗುವ ಯಶಸ್ಸನ್ನು ಹೃದಯದಲ್ಲಿ ಧರಿಸಲು ಯತ್ನಿಸಿ. ತಲೆಗೇರಿದರೆ ಅಪಾಯ.