Daily Horoscope 22 October 2024: ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳ್ಳುವಿರಿ

Daily Horoscope 22 October 2024: ಅಕ್ಟೋಬರ್ 22,​ 2024ರ​​ ನಿಮ್ಮ ಭವಿಷ್ಯ ಹೇಗಿದೆ?: ಮಂಗಳವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಎಂಬುವುದನ್ನು ತಿಳಿಯಿರಿ.

Daily Horoscope 22 October 2024: ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳ್ಳುವಿರಿ
ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳ್ಳುವಿರಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 22, 2024 | 12:00 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಪರಿಘ​​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 26 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ ಸಂಜೆ 04:40 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:22 ರಿಂದ 10:49ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:17 ರಿಂದ 01:45 ರವರೆಗೆ.

ಮೇಷ ರಾಶಿ: ಇನ್ನೊನ್ಬರ ಮಾತಿಗೆ ಮಣಿದು ಏನನ್ನಾದರೂ ಮಾಡಿ ತೊಂದರೆಪಡುವುದು ಬೇಡ. ಸರಿ ಎನಿಸಿದರೆ ಒಪ್ಪಿ, ಇಲ್ಲವಾದರೆ ಮುನ್ನಡೆಯಿರಿ. ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ನಿಮಗೆ ಇಂದು ನೀವು ಮಾಡುವ ಕೆಲಸದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯೂ ನಿಮಗೆ ಲಭ್ಯವಾಗುವುದು. ಅಮೂಲ್ಯ ಸಂಪತ್ತನ್ನು ಪ್ರದರ್ಶಿಸುವುದು ಬೇಡ. ನೀವು ಅಧ್ಯಾತ್ಮದಿಂದ ಹೆಚ್ಚು ಪ್ರಭಾವಿತರಾಗಲಿದ್ದೀರಿ. ನಿಮ್ಮ ಚಂಚಲ ಮನಸ್ಸಿನಿಂದ ಮಾಡಿದ ನಿರ್ಧಾರವು ಕುಟುಂಬಕ್ಕೆ ಸಮಸ್ಯೆಯಾಗಿ ಪರಿಣಮಿಸಬಹುದು. ಅತಿಯಾದ ಭೋಜನವು ನಿಮಗೆ ಸಂಕಟ ಕೊಟ್ಟೀತು. ತಾಯಿಯ ಕಡೆಯ ಬಂಧುಗಳ ಸಹಾಯದಿಂದ ನೀವು ಸ್ವಂತ ವಾಹನವನ್ನು ಖರೀದಿಸುವಿರಿ. ಗಂಭೀರ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುವುದು ಬೇಡ. ಉದ್ಯೋಗಕ್ಕೆ ಸೇರಿ ನಿಮಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಹೃದಯದ ದೌರ್ಬಲ್ಯವು ನಿಮ್ಮನ್ನು ಎಲ್ಲ ರೀತಿಯಿಂದ ಕಟ್ಟಿಹಾಕಬಹುದು.

ವೃಷಭ ರಾಶಿ; ನಿಮ್ಮ ತಾಳ್ಮೆಯು ದೌರ್ಬಲ್ಯದ ಸಂಕೇತವಾಗಬಹುದು. ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ನೀವಾಡುವ ಮಾತುಗಳಿಗೆ ಕುಟುಂಬವು ಉತ್ತರಿಸಬೇಕಾದೀತು. ಕೆಲವು ತೀರ್ಮಾನಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನೀವು ಇಂದು ನಿಮ್ಮ ಬಳಿ ಇರುವ ಸಂಪತ್ತನ್ನು ತೋರಿಸುವುದು ಬೇಡ. ದೇಹವನ್ನು ಹೆಚ್ಚು ದಂಡಿಸಬೇಕಾಗುವುದು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ. ಕಛೇರಿಯ ವ್ಯವಹಾರವನ್ನು ಅಲ್ಲಿಯೇ ಬಿಟ್ಟು ಬನ್ನಿ. ಸ್ನೇಹಿತರಿಗಾಗಿ ಧನವು ನಷ್ಟವಾಗುವುದು.‌ ಯಾರನ್ನೂ ಸಣ್ಣವರನ್ನಾಗಿ ತಿಳಿಯುವುದು ಬೇಡ. ಯಾರದೋ ಮೇಲಿನ ಭಯದಿಂದ ಗೌಪ್ಯ ವಿಚಾರವನ್ನು ಹೇಳುವಿರಿ. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಿಮ್ಮ ಸ್ವೇಚ್ಛೆಗೆ ಭಂಗವಾಗುವುದನ್ನು ನೀವು ಸಹಿಸಲಾರಿರಿ.

ಮಿಥುನ ರಾಶಿ: ಕೆಲವು ಅವಕಾಶಗಳು ನಿಮ್ಮನ್ನು ಪರೀಕ್ಷಿಸಲು ಬರಬಹುದು. ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ಆರ್ಥಿಕತೆಯ ಕಾರಣಕ್ಕಾಗಿ ನೀವು ಹೆಚ್ಚು ಆತಂಕ ಪಡುವಿರಿ. ಯಂತ್ರೋಪಕರಣಗಳ ದುರಸ್ತಿಯನ್ನು ಮಾಡಿಸುವಿರಿ. ದಾಯದಿದಗಳ ಕಲಹವೂ ನಿಮ್ಮ ಅನಾರೋಗ್ಯಕ್ಕೆ ಪೂರಕವಾಗಿರುವುದು. ನಿಮ್ಮ ಉತ್ಸಾಹಕ್ಕೆ ಭಂಗವಾಗುವ ಸನ್ನಿವೇಶವು ನಿಮ್ಮ ಕಣ್ಣೆದುರಿಗೆ ನಡೆಯುವುದು. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ತೆಗೆಯಬೇಕಾದೀತು. ಮುಖಂಡರ ಬಗ್ಗೆ ನಿಮಗೆ ಪೂರ್ಣತೃಪ್ತಿ ಇರದು. ದೃಷ್ಟಿಯಲ್ಲಿ ದೋಷವು ಕಾಣಿಸಿಕೊವಲಳ್ಳಬಹುದು‌. ನಿಮ್ಮ ಅರೋಗ್ಯ ಸಮಸ್ಯೆಯನ್ನು ಆಪ್ತರ ಜೊತೆ ಹೇಳಿಕೊಳ್ಳಿ. ನಿಮ್ಮದೇ ಆದ ಯೋಜನೆಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ದಾಂಪತ್ಯದ ಸುಖದಲ್ಲಿ ಮಕ್ಕಳನ್ನು ಮರೆಯದಿರಿ. ಬೇಕಾದ ವಸ್ತುಗಳನ್ನು ಮುಚ್ಚುಮರೆಯಿಲ್ಲದೇ ಪಡೆಯುವಿರಿ.

ಕರ್ಕಾಟಕ ರಾಶಿ; ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆಯು ನಿಮಗೆ ಧೈರ್ಯವನ್ನು ಕೊಡುವುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ‌. ದುರಭ್ಯಾಸದ ಕಾರಣದಿಂದ ಎಲ್ಲರ ಎದುರು ಮಾನವನ್ನು ಕಳೆದುಕೊಳ್ಳಬೇಕಾಗುವುದು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದವು ಬರಬಹುದು. ನಿಮ್ಮ ನಿರುದ್ಯೋಗದ ಸಮಸ್ಯೆಯನ್ನು ಸರಿ ಮಾಡಿಕೊಳ್ಳುವಿರಿ. ಈಗಾಗಲೇ ವೃತ್ತಿಯಲ್ಲಿ ತೊಡಗಿದವರು ಬಡ್ತಿಯನ್ನು ನೀಡುವಂತೆ ಒತ್ತಾಯಿಸಬಹುದು. ನಿಮ್ಮದೇ ಆದ ವ್ಯಕ್ತಿತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ನಿಮ್ಮ ಬಳಿ ಇಲ್ಲದಿರುವುದನ್ನು ಇನ್ನೊಬ್ಬರಿಂದ ಕೇಳಿ, ಕೊಟ್ಟರೆ ಮಾತ್ರ ಪಡೆಯಿರಿ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ಆಸ್ಥೆಯು ಅಧಿಕವಾಗಿದ್ದು ಮಾರ್ಗವನ್ನು ನೀವು ನಿರೀಕ್ಷಿಸುವಿರಿ. ಯಾವುದನ್ನೂ ಅತಿಯಾಗಿ ಮಾಡಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ಬಲಾತ್ಕಾರದಿಂದ ಯಾವುದನ್ನೂ ಸರಿಮಾಡಿ ಇಡಲಾಗದು.

ಸಿಂಹ ರಾಶಿ; ಜಡಕನ್ನು ಬಿಡಿಸಲು ತಾಳ್ಮೆ ಬೇಕು, ಇಲ್ಲವೋ ಅದನ್ನು ಬಿಡುವುದೇ ಒಳ್ಳೆಯದು. ವಾಹನವನ್ನು ಚಲಿಸುವಾಗ ಯಾವದೇ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಯಾರಾದರೂ ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸಿ ಮಾಡುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳುವಿರಿ. ಸಾಲವಾಗಿ ನೀಡಿದ ಹಣವನ್ನು ಹಿಂಪಡೆಯಲು ಕಷ್ಟವಾದೀತು. ಸಂಗಾತಿಯನ್ನು ನೀವು ಅಲಕ್ಷಿಸುವಿರಿ. ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಲಾಗದು. ನಿಮ್ಮಿಂದ ಆಗದ ಕೆಲಸಕ್ಕೆ ನೀವು ಹೋಗಿ ಕೈ ಸುಟ್ಟುಕೊಳಳ್ಳುವಿರಿ. ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ. ಹಣವನ್ನು ಗಳಿಸಬೇಕು ಎಂಬ ಹಂಬಲವು ಅಧಿಕವಾಗಿರುವುದು. ನಿಮ್ಮ ಮಾತು ನಡೆಯದ ಕಡೆ ಮೌನದಿಂದ ಇರುವುದು ಒಳ್ಳೆಯದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲವನ್ನೂ ಪ್ರಾರಬ್ಧ ಎಂದು ಸುಮ್ಮನಾಗುವುದಕ್ಕಿಂತ ಭಿನ್ನವಾಗಿ ಯೋಚಿಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಬೇಕೆನಿಸುತ್ತದೆ.

ಕನ್ಯಾ ರಾಶಿ: ನಿಮ್ಮ ಸಮಯಪಾಲನೆಗೆ ಪ್ರಶಂಸೆ ಸಿಗುವುದು. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ನಿಮ್ಮ ಉದ್ಯಮದ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಲಿದೆ. ಸಮಾಜಮುಖೀ ಕಾರ್ಯಗಳನ್ನು ಯಾವದೇ ಫಲಾಪೇಕ್ಷೆ ಇಲ್ಲದೆ ಮಾಡುವಿರಿ. ತಲೆ ಗಟ್ಟಿ ಇದೆ ಎಂದು ಬಂಡೆಗೆ ಕುಟ್ಟಲಾಗದು. ನಿಮ್ಮ ತಾಳ್ಮೆಯು ಕಡಿಮೆ ಆದಂತೆ ತೋರುವುದು. ನಿಮ್ಮ ಗುಣಗಳನ್ನು ದುರುಪಯೋಗ‌ ಮಾಡಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ಅವರು ಬೇಸರಿಸುವರು. ನಿಮ್ಮ ಹೊಸ ಉದ್ಯೋಗದಕ್ಕೆ ಎದುರಾಗುವ ಸವಾಲುಗಳನ್ನು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುವಿರಿ. ಸೋಮಾರಿ ತನವು ನಿಮ್ಮ ಶತ್ರುವಾಗಬಹುದು. ಸರ್ಕಾರಿ ಉದ್ಯೋಗಿಗಳ ಆದಾಯವು ಹೆಚ್ಚಾಗಲಿದೆ. ನಿರಾಧಾರವಾದ ನಿಮ್ಮ ದೂರು ಬಿದ್ದು ಹೋಗುವುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ. ಇಂದು ನೀವು ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ.

ತುಲಾ ರಾಶಿ: ಸ್ವಾವಲಂಬನೆಯು ಮನಸ್ಸಿನಲ್ಲಿ ಎಣಿಸಿದಕೂಡಲೇ ಬರುವುದಲ್ಲ. ಹಂತಹಂತವಾಗಿ ಅತ್ತ ಸಾಗಬೇಕು. ಸ್ಥಾನಮಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಮಾನಸಿಕ ಸ್ಥಿತಿಯು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯು ನಿಮಗೆ ಸಿಗಲಿದೆ. ಮನೆಯಲ್ಲಿ ಹಿರಿಯರಾದ ಕಾರಣ ನೀವು ಹೆಚ್ಚು ಬೈಗಳುಕ್ಕೆ ಸಿಲುಕುವಿರಿ. ಹೋದ ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಪ್ರೇಮವನ್ನು ನಿಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ನೀವು ಕರ್ತವ್ಯವನ್ನು ಬಿಡದೇ ಕೈಯ್ಯಲ್ಲಿ ಆಗುವ ಕೆಲಸವನ್ನು ಮಾಡಿ. ಎಲ್ಲವೂ ಅನುಕೂಲಕರವಾಗಿದೆ ಎಂದು ಅನ್ನಿಸಬಹುದು. ಹಿರಿಯರ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರಿಂದ ಭೀತಿಯು ನಿಮಗೆ ಆಗುವುದು. ವಾಹನ ಸಂಚಾರಕ್ಕೆ ತಡೆಯಾಗಬಹುದು.

ವೃಶ್ಚಿಕ ರಾಶಿ: ಬೇರೆಯವರ ಮುಖಾಂತರ ಪುಣ್ಯಸ್ಥಳಗಳಿಗೆ ಹೋಗಿಬರುವಿರಿ. ನೀವು ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಕುಟುಂಬದಲ್ಲಿ ಪರಸ್ಪರ ಸಹಬಾಳ್ವೆಯು ಎದ್ದು ತೋರುವುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿಯು ಇರುವುದು. ವಿದೇಶದ ವ್ಯಾಪಾರವು ಹದತಪ್ಪುವ ಸಾಧ್ಯತೆ ಇದೆ. ಸಂಸ್ಥೆಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವರು. ಹಣದ ಉಳಿಕೆಗೆ ಸಂಬಂಧಿಸಿದಂತೆ ನೀವು ಕಾನೂನು ರೀತಿಯ ಕ್ರಮವನ್ನು ಅನುಸರಿಸಬೇಕಾಗಬಹುದು. ಹಣದ ಕಾರಣಕ್ಕೆ ವಂಚನೆಯಲ್ಲಿ ಬೀಳುವಿರಿ. ಕ್ರಯ ಹಾಗೂ ವಿಕ್ರಯಗಳ ವಿಚಾರದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳಿಗೆ ಸಿಗುವ ಯಶಸ್ಸನ್ನು ಹೃದಯದಲ್ಲಿ ಧರಿಸಲು ಯತ್ನಿಸಿ. ತಲೆಗೇರಿದರೆ ಅಪಾಯ.

ಧನು ರಾಶಿ: ಸಾಲವನ್ನು ವಸೂಲಿ ಮಾಡಲು ಯಾರನ್ನಾದರೂ ಸಾಲ ಕೊಟ್ಟವರು ಕಳುಹಿಸಬಹುದು. ಯಾವದೂ ನೀವಂದುಕೊಂಡಷ್ಟು ಸುಲಭವಾಗಿ ಆಗದು ಎಂಬುದರ ಮನವರಿಕೆ ಆಗುವುದು. ಬೇರೆಯವರ ಮೇಲೆ ದೋಷಗಳ ಪಟ್ಟಿಯನ್ನೇ ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಪುನಃ ಬರಲಿದೆ. ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಮನೆಯ ಬಾಗಿಲಿಗೆ ಅಪರಿಚಿತರ ಹಾವಳಿ ಹೆಚ್ಚಾಗುವುದು. ಸಂಗಾತಿಯ ಮಾತು ನಿಮ್ಮೊಳಗೆ ನಾಟಬಹುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಂದೆಯಿಂದ ಸಹಾಯವನ್ನು ಪಡೆಯುವಿರಿ. ಸಾಲದ ವಿಚಾರದಲ್ಲಿ ಹೆಚ್ಚಿನ ತಿಳಿವಳಿಕೆ ಅಗತ್ಯ. ದೂರ‌ಪ್ರಯಾಣವು ಸುಖ ಎನಿಸಬಹುದು. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ನಿಮಗೆ ಬೇಕಾದವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ನೀವು ವಹಿಸಿಕೊಂಡ ಕಾಮಗಾರಿಯ ಬಗ್ಗೆ ಪೂರ್ಣ ವಿಶ್ವಾಸ ಬರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.

ಮಕರ ರಾಶಿ: ನಿಮ್ಮ‌ದೇಹದ ಸೂಕ್ಷ್ಮಪ್ರದೇಶಗಳ ಬಗ್ಗೆ ಎಚ್ವರಿಕೆ ಇರಲಿ.‌ ಶಸ್ತ್ರಗಳಿಂದ ಘಾಸಿಯಾಗುವ ಸಾಧ್ಯತೆ ಇರಲಿದೆ. ಪ್ರೇಮಕ್ಕೆ ಮಿತ್ರರಿಂದ‌ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳಿಂದಲೂ ಸಾಲಾವನ್ನು ಪಡೆಯಬೇಕಾಗಬಹುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತವಾಗಸಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗಬಹುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ತಂದೆ ತಾಯಿಯರನ್ನು ಇಂದು ಸಂತೋಷಪಡುಸುವಿರಿ. ಏಕಾಂಗಿ ಇರುವುದು ನಿಮಗೆ ಇಷ್ಟವಾಗದೇ ಇರಬಹುದು. ಸಮಾರಂಭಗಳಿಗೆ ಭಾಗವಹಿಸುವಿರಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡಲ್ಲಿಗೆ ಹೋಗಬಹುದು.

ಕುಂಭ ರಾಶಿ: ಎಲ್ಲೇ ಇದ್ದರೂ ಕಾರ್ಯದ ಪ್ರಗತಿಯನ್ನು ಪಡೆದುಕೊಳ್ಳಿ.‌ ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಕಛೇರಿಯ ಕೆಲಸವು ನಿಮಗೆ ಸಾಕೆನಿಸಬಹುದು. ಸಮಾಧಾನದ ಚಿತ್ತವು‌ ಅನೇಕ ಸಂಗತಿಗಳಿಗೆ ಪೂರಕವಾಗಲಿದೆ. ಆರೋಗ್ಯದ ವಿಚಾರದಲ್ಲಿ‌ ನಿರ್ಲಕ್ಷಿಸುವುದು ಸೂಕ್ರವಲ್ಲ. ನಿಮ್ಮ‌ ಬಲದ ಪ್ರದರ್ಶನವನ್ನು ಮಾಡಬೇಕಾದೀತು. ಕಾರ್ಯಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಸಡಿಲಿಕೆ ಬೇಡ. ನಿಮ್ಮ ಗುರಿಯು ಬದಲಾಗಬಹುದು. ‌ಪ್ರಾಣಿಗಳಿಂದ ನಿಮಗೆ ಭೀತಿಯು ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬೇಕಾಗಬಹುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು. ಅಚ್ಚುಕಟ್ಟಾದ ಕಾರ್ಯದಿಂದ ಅಧಿಕಾರಿಗಳ ಮನಸ್ಸನ್ನು ಗೆಲ್ಲುವಿರಿ.

ಮೀನ ರಾಶಿ: ನಿಮ್ಮನ್ನು ಕಂಡರೆ ಆಗದವರ ಎದುರೇ ನೀವು ಗರ್ವದಿಂದ ಇರುವಿರಿ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಉನ್ನತ ಶಿಕ್ಷಣಕ್ಕಾಗಿ ಮನೆಯಿಂದ ಹೊರಗೆ ಇರಬೇಕಾಗುವುದು. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಸೃಷ್ಟಿಸುವರು. ಸೌಂದರ್ಯಕ್ಕೆ ಇಂದು ಬೆಲೆಕೊಡಲಿದ್ದೀರಿ. ನಿಮ್ಮಿಂದ ಉಪಕಾರವನ್ನು ಪಡೆದು ಶತ್ರಗಳಾಗುವರು. ನಿಮ್ಮ ಕಾರ್ಯಕ್ಕೆ‌ ಅಡ್ಡಿಬಂದರೆ ಆ ಕಾರ್ಯವನ್ನು ಮುಂದೂಡಿ. ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಸಂಗತಿಗಳು ಬರಬಹುದು. ಸ್ವಂತ ವಾಹನದಿಂದ ದೂರ ಪ್ರಯಾಣವನ್ನು ಮಾಡುವಿರಿ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಇಷ್ಟವಾಗದು. ಮಾತು ನೇರವಾಗಿದ್ದರೂ ಮೃದುವಾಗಿರಲಿ. ಹಿರಿತನದ ಆಧಾರದ ಮೇಲೆ ಅಧಿಕಾರ ಪ್ರಾಪ್ತಿಯಾಗುವುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?