ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯ ನಕ್ಷತ್ರ: ಮೃಗಶಿರಾ, ಯೋಗ: ವ್ಯತಿಪಾತ್, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 26 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:25 ರಿಂದ ಸಂಜೆ 04:56, ಯಮಘಂಡ ಕಾಲ ಬೆಳಿಗ್ಗೆ 09:24ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:24 ರಿಂದ 01:55 ರ ವರೆಗೆ.
ಸಿಂಹ ರಾಶಿ: ಆತ್ಮವಿಶ್ವಾಸವು ನಿಮ್ಮ ಹಲವು ಮುಖಗಳನ್ನು ತೋರಿಸುವುದು. ನಿಮ್ಮ ಮಾತಿನಿಂದ ಕೆಲವರು ಪ್ರಭಾವಿತರಾಗಬಹುದು. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಉದ್ಯೋಗದಲ್ಲಿ ಬಡ್ತಿಯು ಸಿಗುವ ನಿರೀಕ್ಷೆಯಲ್ಲಿ ಇರುವಿರಿ. ನೀವು ನೆಚ್ಚಿದವರ ಜೊತೆಗೆ ಇಂದು ಕೆಲವು ಸಮಯ ಇರುವಿರಿ. ಭಾಷೆಯಲ್ಲಿ ನಿಮಗೆ ತೊಂದರೆ ಕಾಣಿಸುವುದು. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವಿರಿ. ಕಾರ್ಯಸಾಧನೆಗೆ ಹೆಚ್ಚು ಓಡಾಟವನ್ನು ಮಾಡಬೇಕಾಗುವುದು. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಶೋಭೆ ತರದು. ಸಮಾರಂಭಗಳಲ್ಲಿ ಅನಿರೀಕ್ಷಿತವಾಗಿ ಆಪ್ತರ ಭೇಟಿಯಾಗಲಿದೆ. ಹಿರಿಯರ ಕಿವಿಮಾತಿನ ಮೇಲೆ ಲಕ್ಷ್ಯವಿರಲಿ. ನಿಮ್ಮ ವಸ್ತುಗಳ ಮೇಲೆ ಅಧಿಕ ಮೋಹವು ಉಂಟಾಗಬಹುದು. ಸಮಯಕ್ಕೆ ಆಗಬೇಕಾದುದು ಆಗುವುದು. ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ಹೊಂದಿಕೊಳ್ಳುವುದು ಗೊತ್ತಿದ್ದರೂ ಅದು ನಿಮಗೆ ಕೀಳರಿಮೆಯನ್ನು ತರಬಹುದು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು.
ಕನ್ಯಾ ರಾಶಿ: ನಿಮ್ಮ ಅನಗತ್ಯ ಮೊಂಡುತನ ನಿಮ್ಮನ್ನೇ ಕುರುಡುಮಾಡಬಹುದು. ಗೌರವಕ್ಕಾಗಿ ಕಾರ್ಯವನ್ನು ಮಾಡದೇ ಕರ್ತವ್ಯದ ದೃಷ್ಟಿಯಿಂದ ಮಾಡಿ. ಪ್ರಶಂಸೆಯು ಸಹಜವಾಗಿ ಸಿಗುವುದು. ಮಕ್ಕಳಿಗೆ ಆಸ್ತಿ ಮಾಡುವ ಯೋಚನೆ ಬರುವುದು. ದ್ವೇಷವನ್ನು ಬೆಳೆಸಿಕೊಳ್ಳುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ನಿಮ್ಮ ಚಿಂತನೆಗಳು ಬರಬಹುದು. ಕುಟುಂಬದಲ್ಲಿ ಆಗುವ ಕಲಹವನ್ನು ನೀವು ನಿಭಾಯಿಸಬೇಕಾದೀತು. ಸಂಗಾತಿಯ ಬಗ್ಗೆ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ದೃಶ್ಯಮಾಧ್ಯಮದವರು ಹೆಚ್ಚಿನ ಆದಾಯ ಬರುವಲ್ಲಿಗೆ ಹೋಗುವ ಯೋಚನೆ ಮಾಡುವರು. ಮಕ್ಕಳು ನಿಮ್ಮ ಮಾತಿಗೆ ಅನಾದರ ತೋರಿಸಬಹುದು. ಬಹಳ ಕೋಪ ಬರಬಹುದು, ಅದನ್ನು ನಿಮ್ಮೊಳಗೆ ಇಟ್ಟುಕೊಳ್ಳುವಿರಿ. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು.
ತುಲಾ ರಾಶಿ: ನಿಮ್ಮ ಚರಾಸ್ತಿಯನ್ನು ಯಾರಾದರೂ ಬಳಸಿಯಾರು. ನಿಮ್ಮ ಮೇಲೆ ನಿಮಗೆ ಪೂರ್ಣ ನಂಬಿಕೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡುವಿರಿ. ಇಂದು ನೀವು ದೈಹಿಕವಾಗಿ ಬರುವ ನೋವನ್ನು ಸಹಿಸುವ ಶಕ್ತಿಯನ್ನು ತಂದುಕೊಳ್ಳುವಿರಿ. ಮನೆಯಲ್ಲಿ ನಿಮ್ಮ ಕೆಲಸಗಳಿಗೆ ವಿರೋಧ ಬರಬಹುದು. ಮನೆಯವರ ಆರೋಗ್ಯವನ್ನೂ ನೋಡುಕೊಳ್ಳುವ ಜವಾಬ್ದಾರಿ ಇರಲಿದೆ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗುವಿರಿ. ಅದು ನಿಮಗೆ ಅನೇಕ ಅನುಕೂಲತೆಗಳನ್ನು ಮಾಡಿಕೊಡುವುದು. ಸಿಕ್ಕ ಅವಕಾಶಗಳನ್ನು ಬಿಟ್ಟುಕೊಡುವ ಮೊದಲು ಯೋಚಿಸಿ. ಸಂತೋಷಕ್ಕಾಗಿ ಕಾರಣಗಳು ಹಲವು ಇರಬಹುದು. ಆದರೆ ಅದನ್ನು ಪಡೆಯುವ ಆಸಕ್ತಿ ಇರದು. ಸಾಧ್ಯವಾದಷ್ಟು ಇಂದು ನಿಮ್ಮ ಸಮಯವು ವ್ಯರ್ಥವಾಗದಂತೆ ನೋಡಿಕೊಳ್ಳಿ. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ.
ವೃಶ್ಚಿಕ ರಾಶಿ: ಇಂದು ಯಾರ ಬಳಿಯೂ ಏನ್ನೂ ಹೇಳಿಸಿಕೊಳ್ಳದೇ ಕೆಲಸವನ್ನು ಮಾಡುವಿರಿ. ಇಂದು ನೀವು ಅನನೂಕುಲ ಸ್ಥಿತಿಯಿಂದ ಹೊರ ಬರುವಿರಿ. ಪ್ರತ್ಯೇಕತೆಯನ್ನು ನೀವು ಬಯಸುವಿರಿ. ಏಕಾಂತವು ನಿಮಗೆ ಇಂದು ಬಹಳ ಪ್ರಿಯವಾಗುವುದು. ಆರ್ಥಿಕ ಅಭಿವೃದ್ಧಿಯಿಂದ ನಿಮಗೆ ಸಂತೋಷವಾಗುವುದು. ಆದಾಯವನ್ನು ಸರಿಯಾದಕಡೆಗೆ ವಿನಿಯೋಗ ಮಾಡುವಿರಿ. ದಾಂಪತ್ಯ ಜೀವನವನ್ನು ಆನಂದಿಸುವಿರಿ. ಸ್ನೇಹಿತ ಜೊತೆ ಆಪ್ತವಾಗಿ ಕಾಲವನ್ನು ಕಳೆಯಲಿದಗದೀರಿ. ಗೌರವಕ್ಕೆ ಚ್ಯುತಿ ಬರುವ ಕೆಲಸಗಳತ್ತ ನಿಮ್ಮ ಗಮನ ಕಡಿಮೆ ಇರಲಿ. ಖರ್ಚುಗಳಿಗೆ ನಿರ್ದಿಷ್ಟತೆ ಇರಲಿ. ಚಂಚಲವಾದ ಮನಸ್ಸಿನಿಂದ ಏನನ್ನೂ ಮಾಡಲು ಹೋಗುವುದು ಬೇಡ. ನಿಮ್ಮನ್ನು ಬಿಟ್ಟು ಇನ್ನೊಬ್ಬರಿಂದ ಸಹಾಯವನ್ನು ನಿಮ್ಮವರು ಕೇಳುವರು. ಇನ್ನೊಬ್ಬರ ಟೀಕೆಯನ್ನು ಸಮಾನ ಮನಃಸ್ಥಿತಿಯಿಂದ ಪಡೆಯುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಬಿರುಸು ನುಡಿಯಿಂದ ನಿಮಗೆ ಆಗಬೇಕಾದ ಕಾರ್ಯವು ಆಗದು. ಮಾತಿನಿಂದ ಕೆಲವರನ್ನು ನೀವು ಕಳೆದುಕೊಳ್ಳುವಿರಿ.