Numerology Prediction 2025: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 2ರ ದಿನಭವಿಷ್ಯ

ಡಿಸೆಂಬರ್ 2ರ ಜನ್ಮಸಂಖ್ಯೆ ಆಧಾರಿತ ದಿನ ಭವಿಷ್ಯ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆಯನ್ನು ಹೇಗೆ ತಿಳಿದುಕೊಳ್ಳಬೇಕು ಎಂಬ ಮಾಹಿತಿ ಸಹ ನೀಡಲಾಗಿದೆ. ಹಣಕಾಸು, ಕೌಟುಂಬಿಕ ಸಂಬಂಧ, ವೃತ್ತಿಜೀವನ ಮತ್ತು ಆರೋಗ್ಯದ ಬಗ್ಗೆ ಪ್ರತಿಯೊಂದು ಜನ್ಮಸಂಖ್ಯೆಗೂ ವಿವರವಾದ ಮುನ್ನೋಟವಿದೆ. ಜನ್ಮಸಂಖ್ಯೆ 1, 2, 3 ಮತ್ತು 4ರವರ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

Numerology Prediction 2025: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 2ರ ದಿನಭವಿಷ್ಯ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2025 | 12:30 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 2ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಜೀವನಶೈಲಿಯಲ್ಲಿ ಕೆಲವು ಧಾರ್ಮಿಕ ವಿಧಾನಗಳನ್ನು ಅಳವಡಿಸಿಕೊಳ್ಳಲಿದ್ದೀರಿ. ಯಾವುದೆಲ್ಲ ನಿಮಗೆ ಹಿಂಸೆ- ಕಿರಿಕಿರಿ ನೀಡುತ್ತಿತ್ತೋ ಅದಕ್ಕಾಗಿ ಇತರರನ್ನು ದೂರುವುದು ನಿಲ್ಲಿಸಲಿದ್ದೀರಿ. ವಾಸ್ತವ ನೆಲೆಗಟ್ಟಿನಲ್ಲಿ ಮುಂದೆ ಸಾಗುವುದಕ್ಕೆ ಆದ್ಯತೆ ಕೊಡುತ್ತೀರಿ. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಉದ್ದೇಶಗಳನ್ನು ಸ್ಪಷ್ಟಗೊಳಿಸುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ಹಣದ ಸಮಸ್ಯೆಯಲ್ಲಿ ಸಿಲುಕಿದವರಿಗೆ ಅದರಿಂದ ಹೊರಬರುವ ಮಾರ್ಗೋಪಾಯ ಗೋಚರ ಆಗಲಿದೆ. ಮುಖ್ಯವಾಗಿ ಸಾಂಸಾರಿಕ ಜೀವನ ಸಂತೃಪ್ತಿಯಿಂದ ಇರುತ್ತದೆ. ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿ- ಹಣ ಇದ್ದಲ್ಲಿ ಅದನ್ನು ಬೇರೆಯವರು ತೆಗೆದುಕೊಳ್ಳಿ ಎಂದು ಕಾನೂನುಬದ್ಧವಾಗಿ ಬರೆದುಕೊಡುವ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ನೆರವಿನ ಅಗತ್ಯ ಇದೆ ಎಂದು ಹುಡುಕಿಕೊಂಡು ಬರುವ ವಿದ್ಯಾರ್ಥಿಗಳು- ರೋಗಿಗಳು ಅಥವಾ ದೇಗುಲ ನಿರ್ಮಾಣ ಇತ್ಯಾದಿ ಕಾರ್ಯಗಳಿಗೆ ಹಣ ಸಹಾಯ ಮಾಡುವಿರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಇತರರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ನಿಮಗೆ ಆಹ್ವಾನ ಬಂದರೂ ಹೋಗಬೇಡಿ; ಅವರು ತಮ್ಮ ನಿರೀಕ್ಷೆಯನ್ನು ನಿಮ್ಮ ಮೇಲೆ ಹೇರಬಹುದು. ಹಣದ ವಿಷಯದಲ್ಲಿ ಜಾಣತನ ತೋರಿದರೆ ಬಾಕಿ ವ್ಯವಹಾರಗಳು ಸುಧಾರಣೆಯ ಹಾದಿಗೆ ಬರುತ್ತವೆ. ಪ್ರೀತಿಯಲ್ಲಿ ಇರುವವರು ಮನದ ಮಾತುಗಳನ್ನು ನೇರವಾಗಿ ಹೇಳಿದರೆ ವಿಶ್ವಾಸ ಗಟ್ಟಿಯಾಗುತ್ತದೆ. ಮದುವೆ ಬಗ್ಗೆ ಯೋಚಿಸುತ್ತಿರುವವರಿಗೆ ಕುಟುಂಬದ ಅನುಮೋದನೆ ಸಿಗುವ ಸೂಚನೆಗಳಿವೆ. ಕುಟುಂಬದಲ್ಲಿ ಉಂಟಾಗುವ ಸಣ್ಣ ಉದ್ವಿಗ್ನತೆಯು ಸಹನೆ ಮತ್ತು ಸಮತೋಲನದಿಂದ ಕಡಿಮೆಯಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಆರೋಗ್ಯದಲ್ಲಿ ಅಲ್ಪ ಪ್ರಮಾಣ ದಣಿವು ಕಂಡರೂ ವಿಶ್ರಾಂತಿ ಪಡೆದರೆ ಪುನಃ ಚೈತನ್ಯ ಬರುತ್ತದೆ. ಇಂದಿನ ದಿನ ಹೆಚ್ಚು ಆತ್ಮವಿಮರ್ಶೆಗೆ ಸೂಕ್ತವಾಗಿದ್ದು, ನೀವು ಕೈಗೊಂಡಿರುವ ಯೋಜನೆಗಳಿಗೆ ಹೊಸ ದಿಕ್ಕು ನೀಡಬಹುದು. ಸ್ನೇಹಿತರೊಂದಿಗೆ ನಡೆಸುವ ಸಂವಾದದಲ್ಲಿ ಉಪಯುಕ್ತ ಸಲಹೆಗಳು ದೊರೆಯಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಇರುವ ಅಂತರ ನಿಧಾನವಾಗಿ ಕಡಿಮೆಯಾಗುತ್ತದೆ; ನೀವು ತೋರಿಸುವ ಮೃದು ಧೋರಣೆ ಮನೆಯಲ್ಲಿಯ ವಾತಾವರಣವನ್ನೂ ಸುಧಾರಿಸುತ್ತದೆ. ಈ ಹಿಂದಿನ ಅಸಮಾಧಾನಗಳನ್ನು ಬಿಟ್ಟು ಸಂಭಾಷಣೆ ಪುನರ್‌ ಆರಂಭವಾಗುವುದು ಮನಸಿಗೆ ನೆಮ್ಮದಿ ನೀಡುತ್ತದೆ. ಹಣದ ಹರಿವು ಸಾಮಾನ್ಯವಾಗಿದ್ದರೂ ಲೆಕ್ಕಾಚಾರದಲ್ಲಿ ಜಾಗರೂಕತೆ ಅವಶ್ಯಕ. ಪ್ರೀತಿಯಲ್ಲಿ ಇರುವವರಿಗೆ ಇಂದು ಮನದ ಮಾತು ಹಂಚಿಕೊಳ್ಳಲು ಸೂಕ್ತ ಸಮಯ ಆಗಿರುತ್ತದೆ. ಮದುವೆಗೆ ಯೋಚಿಸುವವರಿಗೆ ಹೊಸ ಮಾತುಕತೆಗಳು ಶುಭ ಸೂಚನೆ ನೀಡುತ್ತವೆ. ಕೆಲಸದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮಹತ್ವ ಸಿಗುತ್ತದೆ. ಆರೋಗ್ಯದಲ್ಲಿ ಸಣ್ಣ ಮಟ್ಟಿನ ಏರುಪೇರು ಕಂಡರೂ ಸಣ್ಣದೊಂದು ಬಿಡುವು ಪಡೆದರೂ ಸಾಕು. ಮನಸ್ಸು ಹೊಸ ಕಲ್ಪನೆಗಳಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ, ದಿನನಿತ್ಯದ ಯೋಜನೆಗಳಲ್ಲಿ ಸ್ಪಷ್ಟತೆ ಮೂಡುತ್ತದೆ. ನಿಮಗೆ ಫಲಿತಾಂಶದ ಬಗ್ಗೆ ಖಾತ್ರಿ ಇರುವ ಕಡೆಗೆ ಯಾವುದೇ ಹಿಂಜರಿಕೆ ಬೇಡ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸಂಕೀರ್ಣ ವಿಷಯಗಳನ್ನು ಬಹಳ ಸರಳವಾಗಿ ವಿವರಿಸುವ ನಿಮ್ಮ ಕೌಶಲ ಇಂದು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಬೇಕಿದ್ದ ಪರಿಕರಗಳು ಅಥವಾ ಸಂಪನ್ಮೂಲಗಳು ದೊರೆಯುವುದರಿಂದ ಕೆಲಸದ ವೇಗ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ನಿಯಮಿತ ಸಂಗ್ರಹಕ್ಕೆ ಒತ್ತು ಕೊಡುತ್ತೀರಿ; ರೆಕರಿಂಗ್ ಡೆಪಾಸಿಟ್ ಅಥವಾ ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಬಗ್ಗೆ ಈಗ ತೆಗೆದುಕೊಳ್ಳುವ ನಿರ್ಧಾರ ಭವಿಷ್ಯಕ್ಕೆ ಬಲ ನೀಡುತ್ತದೆ. ಕುಟುಂಬದಲ್ಲಿ ಸಲಹೆ ಕೇಳುವವರು ಹೆಚ್ಚಾಗುತ್ತಾರೆ. ಪ್ರೀತಿ ಜೀವನದಲ್ಲಿ ನೇರವಂತಿಕೆ ವಿಶ್ವಾಸವನ್ನು ಗಟ್ಟಿ ಮಾಡುತ್ತದೆ. ಮದುವೆ ಬಗ್ಗೆ ಯೋಚಿಸುವವರಿಗೆ ಹಿರಿಯರಿಂದ ಒಪ್ಪಿಗೆ ಸಿಗುವ ಸೂಚನೆಗಳಿವೆ. ಆರೋಗ್ಯ ಉತ್ತಮವಾಗಿ ಇರಲಿದ್ದು, ನೀರಿನ ಸೇವನೆ ಹೆಚ್ಚಿಸುವುದು ಶ್ರೇಯಸ್ಕರ. ಮನಸ್ಸು ಸ್ಪಷ್ಟವಾಗಿ ಇರುವುದರಿಂದ ದಿನನಿತ್ಯದ ನಿರ್ಧಾರಗಳು ಸುಲಭವಾಗುತ್ತವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಇಂದು ಮನೆಗೆ ಬರುವ ಸಂಬಂಧಿಗಳು ಹರ್ಷ ತುಂಬಿದ ವಾತಾವರಣಕ್ಕೆ ಕಾರಣ ಆಗುತ್ತಾರೆ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದರಿಂದ ಪರೀಕ್ಷಾ ಸಿದ್ಧತೆ ಸರಿಯಾದ ದಾರಿಗೆ ಬರುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಕಾರ್ಯವಿಧಾನ ಬದಲಾವಣೆ ಹೊಸ ಅವಕಾಶ ತರುತ್ತದೆ, ಮೇಲಧಿಕಾರಿಗಳ ನಿರೀಕ್ಷೆ ಪೂರೈಸಲು ಸ್ಪಷ್ಟ ಸಂವಹನ ಅಗತ್ಯ. ವ್ಯವಹಾರ ನಡೆಸುವವರಿಗೆ ಗ್ರಾಹಕರಿಂದ ಬಂದ ಪ್ರತಿಕ್ರಿಯೆ ಮುಂದಿನ ಯೋಜನೆಗೆ ಮಾರ್ಗದರ್ಶಿ ಆಗುತ್ತದೆ. ಫ್ರೀಲಾನ್ಸರ್‌ಗಳಿಗೆ ಹೊಸ ಪ್ರಾಜೆಕ್ಟ್‌ಗಳ ವಿಚಾರಣೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಗೃಹಿಣಿಯರು ಮನೆಯ ವ್ಯವಸ್ಥೆಯಲ್ಲಿ ಹೊಸ ಪದ್ಧತಿಗಳನ್ನು ಅಳವಡಿಸುವ ಮೂಲಕ ದಿನ ಸುಗಮವಾಗುತ್ತದೆ. ಹಣಕಾಸಿನಲ್ಲಿ ಉಳಿತಾಯ–ಹೂಡಿಕೆ ಎರಡಕ್ಕೂ ಸಮತೋಲನ ಬೇಕಾಗುತ್ತದೆ. ಪ್ರೀತಿಯಲ್ಲಿ ಇರುವವರು ಪರಸ್ಪರ ಸಮಯ ನೀಡುವುದರಿಂದ ಗೊಂದಲ ಕಡಿಮೆ ಆಗುತ್ತದೆ. ಮದುವೆ ಯೋಚನೆ ಇರುವವರಿಗೆ ಪರಿಚಯ ವಲಯದಿಂದ ಉತ್ತಮ ಮಾಹಿತಿ ಸಿಗಲಿದೆ. ಉತ್ತಮ ಆರೋಗ್ಯಕ್ಕೆ ಒತ್ತಡ ನಿವಾರಿಸಿಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ದಿನ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಹೊಸ ಪ್ರಯತ್ನಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರಿಗೆ ಹೊಸ ಗ್ರಾಹಕರು ಹಾಗೂ ಒಪ್ಪಂದಗಳಿಂದ ಲಾಭ ಕಾಣಲಿದೆ. ವಿದ್ಯಾರ್ಥಿಗಳು ಹೊಸ ಪಾಠವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳಿಗೆ ಸೃಜನಾತ್ಮಕ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ, ಹಿರಿಯರ ಮಾರ್ಗದರ್ಶನ ಉಪಯುಕ್ತವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯಿಂದ ವಿಶ್ವಾಸವನ್ನು ಗಟ್ಟಿ ಆಗುತ್ತದೆ. ಮದುವೆ ಯೋಚನೆ ಇರುವರು ಆಪ್ತರಿಂದ ಮಾಹಿತಿ ಪಡೆಯಲಿದ್ದೀರಿ. ಹಣಕಾಸಿನಲ್ಲಿ ಲೆಕ್ಕ-ಜೋಡಣೆಗೆ ಗಮನಕೊಡಿ. ಆರೋಗ್ಯದ ಮೇಲೆ ಪರಿಣಾಮ ಬೀರುವ ಹೆಚ್ಚು ಶ್ರಮದ ಕೆಲಸವನ್ನು ತಪ್ಪಿಸಿ, ಸರಿಯಾದ ಆಹಾರ ಮತ್ತು ವಿಶ್ರಾಂತಿ ಅನುಸರಿಸಿ. ದಿನಾಂತ್ಯಕ್ಕೆ ಮನಸ್ಸು ಶಾಂತಿಯುತವಾಗಿ ಇರಲಿದ್ದು, ನಿರ್ಧಾರಗಳು ಸ್ಪಷ್ಟವಾಗುತ್ತವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ನಿಮ್ಮ ತೀಕ್ಷ್ಣ ಅಭಿಪ್ರಾಯ ಮತ್ತು ವಿಶ್ಲೇಷಣಾ ಶಕ್ತಿಯು ವಿವಿಧ ಕ್ಷೇತ್ರದಲ್ಲಿ ಪ್ರಮುಖ ಅವಕಾಶಗಳನ್ನು ತರುತ್ತದೆ. ಉದ್ಯೋಗಸ್ಥರು ಹೊಸ ಯೋಜನೆಗಳೊಂದಿಗೆ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರು ಹೊಸ ಒಪ್ಪಂದಗಳು ಮತ್ತು ಗ್ರಾಹಕರ ವಿಶ್ವಾಸದಿಂದ ಹೆಚ್ಚಿನ ಆದಾಯದ ಮೂಲ ಹಾಗೂ ಲಾಭ ಪಡೆಯುತ್ತಾರೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳು ಕಠಿಣ- ಸವಾಲು ಎನಿಸಿದ ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ಪಡೆಯುತ್ತಾರೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಸಮಸ್ಯೆಗಳು ಪರಿಹಾರವಾಗುತ್ತವೆ, ಸಂಗಾತಿ-ಮಿತ್ರರ ಜೊತೆಗಿನ ಸಂಬಂಧಗಳಲ್ಲಿ ವಿಶ್ವಾಸ ಬಲಗೊಳ್ಳುತ್ತದೆ. ಮದುವೆ ಯೋಚನೆ ಇರುವವರಿಗೆ ಒಪ್ಪಿಗೆಯ ಸೂಚನೆ ಇದೆ. ಹಣಕಾಸಿನಲ್ಲಿ ಜಾಗರೂಕತೆ ವಹಿಸಿ, ಅಗತ್ಯ ವ್ಯವಹಾರಗಳನ್ನು ಪೂರ್ಣಗೊಳಿಸಿ. ಆರೋಗ್ಯದ ಮೇಲೆ ಗಮನ ನೀಡಿ, ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಅನುಸರಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ನಿಮ್ಮ ಹೊಸ ಯೋಜನೆಗಳು ವೇಗವಾಗಿ ಬೆಳೆಯುತ್ತವೆ. ಉದ್ಯೋಗಸ್ಥರಿಗೆ ನಿರ್ದಿಷ್ಟ ಗುರಿ ತಲುಪಲು ನಿರೀಕ್ಷಿತ ಪ್ರಮಾಣದ ಸಹಾಯ ಸಿಗಲಿದೆ. ಅಂಗಡಿ ಮಾಲೀಕರು ಮತ್ತು ಬ್ಯೂಟಿ ಸಲೂನ್ ನಡೆಸುತ್ತಾ ಇರುವವರಿಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರಿಂದ ಸಂತೃಪ್ತ ಲಾಭ ದೊರೆಯಲಿದೆ. ರೈತರಿಗೆ ಹವಾಮಾನವು ಹಿತಕರವಾಗಿ ಪರಿಣಮಿಸಿ ಬೆಳೆ ಹಾಗೂ ಮಾರಾಟದಲ್ಲಿ ಸುಧಾರಣೆ ತರುತ್ತದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಹೊಸ ವಿಧಾನಗಳನ್ನು ಅಳವಡಿಸಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಕುಟುಂಬದಲ್ಲಿ ಸದಸ್ಯರೊಂದಿಗೆ ಸಂವಹನ ಸ್ಪಷ್ಟ ಆಗುವುದು ಸಂತೋಷ ಹೆಚ್ಚಿಸುತ್ತದೆ, ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳನ್ನು ಹಂಚಿಕೊಳ್ಳುವುದು ಸಂಬಂಧ ಬಲಪಡಿಸುತ್ತದೆ. ಹಣಕಾಸಿನ ಯೋಜನೆಗಳಲ್ಲಿ ಗೊಂದಲ ನಿವಾರಣೆ ಆಗುತ್ತದೆ, ಸಾಲ-ಖರ್ಚು ಸಮತೋಲನ ಸಾಧಿಸಲಿದ್ದೀರಿ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನೀವು ಹೆಸರು- ಕೀರ್ತಿ ಪಡೆಯುತ್ತೀರಿ.

ಇದನ್ನೂ ಓದಿ: ಮಿಥುನದಲ್ಲಿ ಗುರು; ನಿಮ್ಮ ರಾಶಿಗೆ ದೊಡ್ಡ ಟರ್ನಿಂಗ್ ಪಾಯಿಂಟ್!

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನಿಮ್ಮ ಮುಖ್ಯ ಕಾರ್ಯಗಳಲ್ಲಿ ಯಶಸ್ಸು ಕಾಣಲಿದೆ. ಪೊಲೀಸ್ ಮತ್ತು ಸೇನೆಯಲ್ಲಿ ಇರುವವರು ನಿಯೋಜನೆ ಆಗಿರುವ ಕೆಲಸಗಳಲ್ಲಿ ಶಿಸ್ತಿನಿಂದ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆಹಾರ ಸೇವೆ ಅಥವಾ ಕ್ಯಾಂಟೀನ್- ಕಾಂಟ್ರ್ಯಾಕ್ಟ್ ಕೆಲಸದವರು ಒಪ್ಪಂದ ನವೀಕರಣ ಆದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಮತ್ತು ಗ್ರಾಹಕರಿಂದ ಉತ್ತಮ ವಿಮರ್ಶೆ ಪಡೆಯುತ್ತೀರಿ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಬಂದರೂ ಸಹೋದ್ಯೋಗಿಗಳ ಸಹಕಾರದಿಂದ ಒತ್ತಡ ಕಡಿಮೆಯಾಗುತ್ತದೆ. ಕುಟುಂಬದೊಳಗಿನ ಸಮಸ್ಯೆಗಳಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುತ್ತೀರಿ, ಸಂಗಾತಿಯೊಂದಿಗೆ ವಿಚಾರ ವಿನಿಮಯ ಮತ್ತು ಪರಸ್ಪರ ಸಹಕಾರ ಬಾಂಧವ್ಯ ಬಲಪಡಿಸುತ್ತದೆ. ಹಣಕಾಸಿನಲ್ಲಿ ನಿಗದಿತ ಯೋಜನೆ ಮತ್ತು ಅತಿಯಾದ ಖರ್ಚು ತಡೆಯುವ ಜಾಗ್ರತೆ ಮುಖ್ಯ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಚಾತುರ್ಯದಿಂದ ಕಲಿಯುತ್ತಾರೆ. ಆರೋಗ್ಯಕ್ಕಾಗಿ ಬೆಳಗ್ಗೆ ನಡೆಯುವುದು, ಸಮತೋಲಿತ ಆಹಾರ ಮತ್ತು ವಿಶ್ರಾಂತಿ ಉಪಯುಕ್ತ. ದಿನಾಂತ್ಯಕ್ಕೆ ಸಣ್ಣ ಸಾಧನೆಗ ಸಹ ಸಂತೃಪ್ತಿ ತರುತ್ತದೆ.

ಲೇಖನ- ಎನ್‌.ಕೆ.ಸ್ವಾತಿ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ