Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 28ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 28ರ ದಿನಭವಿಷ್ಯ
December 28 Sunday Numerology
Edited By:

Updated on: Dec 28, 2025 | 12:01 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಪರ್ಸನಾಲಿಟಿ ಡೆವಲಪ್ ಮೆಂಟ್ ಸೆಷನ್ ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡುತ್ತೀರಿ. ನಿಮ್ಮ ಉದ್ಯೋಗ- ವೃತ್ತಿ ಜೀವನದಲ್ಲಿನ ಬದಲಾವಣೆಗಳು ನಿಧಾನವಾದರೂ ಸ್ಥಿರವಾಗಿ ಆಗಲಿದೆ. ಮನಸ್ಸಿನಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿನ ತಾಕಲಾಟಗಳಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗಲಿದೆ. ಹಳೆಯ ವಿಚಾರಗಳು ಮತ್ತೆ ನೆನಪಾಗಲಿವೆ, ಆದರೆ ಅವುಗಳಿಂದ ಪಾಠ ಕಲಿಯುವ ಸಮಯ ಇದು. ಕೆಲಸದ ವಿಷಯದಲ್ಲಿ ಅತಿಯಾದ ಆತುರ ಬೇಡ; ತಾಳ್ಮೆ ಮತ್ತು ಕ್ರಮಬದ್ಧ ಪ್ರಯತ್ನದಿಂದ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ. ಕುಟುಂಬದ ಒಳಗೆ ಖರ್ಚಿನ ವಿಚಾರದಲ್ಲಿ ಸಣ್ಣ- ಪುಟ್ಟ ಮಾತುಕತೆಗಳು ಆದರೂ ಸಂಯಮದಿಂದ ವರ್ತಿಸಿದರೆ ಸಮಸ್ಯೆಗಳು ಪರಿಹಾರ ಆಗುತ್ತವೆ. ಆರ್ಥಿಕವಾಗಿ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ. ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಈ ದಿನ ನಿಮ್ಮ ಶಕ್ತಿಯಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕುಟುಂಬದೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದೆ. ನಿಮ್ಮ ಆಲೋಚನೆಗಳು ಹೆಚ್ಚು ಗಹನವಾಗಿ ಇರುತ್ತವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಎರಡು ಬಾರಿ ಯೋಚಿಸುವ ನಿಮ್ಮ ಗುಣ ನಿಮಗೆ ಲಾಭ ತರುತ್ತದೆ. ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಗಮನಿಸಿ, ಪ್ರಮುಖ ಜವಾಬ್ದಾರಿ ವಹಿಸುವಂಥ ಸೂಚನೆ ಸಿಗಲಿದೆ. ಆದರೆ ನಿಮ್ಮ ಎದುರಿಗೆ ಪ್ರಶಂಸೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮೈ ಮರೆಯಬೇಡಿ. ಕಾಲು ನೆಲದ ಮೇಲೆ ಇರಲಿ. ಪ್ರಮುಖವಾದ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಕುಟುಂಬದ ಹಿರಿಯರ ನೀಡುವಂಥ ಸಲಹೆ ಮಹತ್ವದ ದಾರಿ ದೀಪ ಆಗುತ್ತದೆ. ಹಣಕಾಸಿನ ವಿಷಯದಲ್ಲಿ ಅಗತ್ಯವಿಲ್ಲದ ಖರ್ಚು ತಪ್ಪಿಸುವುದು ಒಳಿತು. ಭುಜದ ನೋವು, ಬೆನ್ನಿನ ನೋವು ಇರುವಂಥವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ವಿಶ್ರಾಂತಿ ಅಗತ್ಯ ಇದೆ ಎನಿಸಿದಾಗ ಪಡೆದುಕೊಳ್ಳಿ. ನಿಮ್ಮ ಸಹನೆ ಮತ್ತು ಶಾಂತ ಸ್ವಭಾವ ಸಂತೋಷ ಹಾಗೂ ಯಶಸ್ಸಿನ ದಾರಿ ಮಾಡಿಕೊಡುತ್ತವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮ ಒಳಗಿನ ಆತ್ಮವಿಶ್ವಾಸ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಈ ಹಿಂದೆ ನಿಮಗೆ ಅಸಾಧ್ಯ ಎಂದು ಕಂಡಿದ್ದ ಕೆಲಸ- ಕಾರ್ಯಗಳು ಈಗ ಸಲೀಸಾಗಿ ಮಾಡಿ ಮುಗಿಸುವಂಥ ವಿಶ್ವಾಸ ಮೂಡಲಿದೆ. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ ಇಂಥವುಗಳಿಗೆ ನಿಮ್ಮಲ್ಲಿ ಕೆಲವರಿಗೆ ಆಹ್ವಾನ ಬರಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಜವಾಬ್ದಾರಿಗಳು ಹುಡುಕಿಬರುವ ಸೂಚನೆ ಸಿಗಲಿದೆ. ಅವುಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಸ್ವೀಕರಿಸಿದರೆ ಉತ್ತಮ ಫಲ ಸಿಗುತ್ತದೆ. ಕುಟುಂಬದಲ್ಲಿ ಸಣ್ಣಮಟ್ಟದ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದರೆ ನಿಮ್ಮ ಸಮಯೋಚಿತ ಮಾತಿನ ಮೂಲಕವೇ ಸಮಸ್ಯೆಗೆ ಪರಿಹಾರ ನೀಡುತ್ತೀರಿ. ಹಣಕಾಸಿನ ವಿಷಯದಲ್ಲಿ ಆಮೇಲೆ ಮಾಡಿದರಾಯಿತು ಎಂಬ ಧೋರಣೆ ಬೇಡ. ಹಳೆಯ ಬಾಕಿ ಹಣ ವಾಪಸ್ ಬರುವ ಸೂಚನೆ ಇದೆ, ಆ ಕಡೆ ಪ್ರಯತ್ನ ಪಡುವುದು ಮುಖ್ಯ. ಕಣ್ಣಿನ ಆರೋಗ್ಯದ ಕಡೆ ಗಮನ ಇರಲಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಮಾಡುತ್ತಿರುವ ಪ್ರಯತ್ನ ಹಾಗೂ ಹಾಕುತ್ತಿರುವ ಶ್ರಮಕ್ಕೆ ಪ್ರತಿಫಲವು ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಆದರೆ ದೀರ್ಘಾವಧಿಗೆ ಇದು ನಿಮ್ಮ ಕೈ ಹಿಡಿಯಲಿದೆ. ನಿಮ್ಮ ಸಾಧನೆಯನ್ನು ಬಾಯಿ ಬಿಟ್ಟು ಹೇಳುವ ಅಗತ್ಯ ಇಲ್ಲದಂತೆ ಸಂಬಂಧಪಟ್ಟವರ ಗಮನಕ್ಕೆ ಬರಲಿದೆ. ಒಂದು ಕೆಲಸಕ್ಕೆ ಇತರರ ಮೇಲೆ ಅವಲಂಬಿತರಾಗುವ ಮೊದಲಿಗೆ ನಿಮ್ಮ ಮನಸ್ಸು ಹೇಳುವ ಮಾತನ್ನು ಸಹ ಕೇಳಿಸಿಕೊಳ್ಳಿ. ಹಣ ಬರುವುದೊಂದೇ ಕೆಲಸದಲ್ಲಿ ಸಿಗುವ ತೃಪ್ತಿ ಅಲ್ಲ ಎಂಬುದು ಈ ದಿನ ಹಲವು ಸಲ ನಿಮಗೆ ಅನಿಸುತ್ತದೆ. ಅದೇ ವೇಳೆ, ಅದರಾಚೆಗೆ ಬೇರೆ ಏನೋ ಇದೆ ಎಂಬ ಹುಡುಕಾಟ ಹೊಸ ಎತ್ತರಕ್ಕೆ ಏರುವುದಕ್ಕೆ ಸ್ಫೂರ್ತಿ ಆಗಲಿದೆ. ಅನುಭವದಿಂದ ನೀವು ಕಲಿತ ಪಾಠವನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿ. ಅತ್ಯುತ್ಸಾಹದಲ್ಲಿ ಈ ಹಿಂದೆ ಯಾವಾಗಲೋ ನೀಡಿದ್ದ ಮಾತನ್ನು ಈಡೇರಿಸವುದಕ್ಕೆ ಬಹಳ ಶ್ರಮ ಹಾಕುವಂತೆ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಆತ್ಮವಿಶ್ವಾಸ ಇರುವಂಥ ಕೆಲಸ- ಕಾರ್ಯ ಮಾಡುವುದಕ್ಕೂ ಒಂದು ಬಗೆಯ ಹಿಂಜರಿಕೆ ಕಾಡಲಿದೆ. ಯಾವುದಕ್ಕೂ ಇರಲಿ ಸ್ನೇಹಿತರ ಸಲಹೆಯನ್ನು ಕೇಳೋಣ ಎಂಬ ಪರಿಸ್ಥಿತಿ ಉದ್ಭವಿಸುತ್ತದೆ. ‘ನನ್ನಿಂದ ಆದ ಸಹಾಯವನ್ನು ನಿಮಗೆ ಮಾಡಲಾ?’ ಎಂಬ ಪ್ರಶ್ನೆಯನ್ನು ಯಾರಿಗೇ ಕೇಳಬೇಕಾದರೂ ಸಾವಿರ ಬಾರಿ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಇದೊಂದು ಮಾತು ನಿಮ್ಮ ಇಡೀ ದಿನದ ಸಮಯವನ್ನು ತೆಗೆದುಕೊಂಡು ಬಿಡಬಹುದು. ಸಂಬಂಧಗಳ ವಿಚಾರ ಬಂದಾಗ ಮೌನವಾಗಿ ಇದ್ದುಬಿಡುವುದೇ ಪರಿಹಾರ ಎಂದು ನೀವೇನಾದರೂ ಭಾವಿಸಿದ್ದಲ್ಲಿ ದೀರ್ಘಾವಧಿ ಸಮಸ್ಯೆಗಳನ್ನು ಅನುಭವಿಸುತ್ತೀರಿ. ವಿವಾಹ ವಯಸ್ಸಿನ ಮಕ್ಕಳಿದ್ದು, ಅವರ ಮದುವೆಗೆ ಪ್ರಯತ್ನ ಮಾಡುತ್ತಾ ಇದ್ದೀರಿ ಎಂದಾದಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಬಂಧದ ರೆಫರೆನ್ಸ್ ಸ್ನೇಹಿತರ ಮೂಲಕ ಬರಲಿದೆ. ಪ್ರಯಾಣ ಮಾಡುವಂಥವರು ನೀರು- ಆಹಾರದ ಸೇವನೆ ಮೇಲೆ ಸರಿಯಾದ ಗಮನವನ್ನು ನೀಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನೀವು ಕೊಟ್ಟಿದ್ದೇನು ಹಾಗೂ ನಿಮಗೆ ಸಿಕ್ಕಿದ್ದೇನು ಎಂಬ ವಿಚಾರವೇ ಬಹುವಾಗಿ ಕಾಡುತ್ತದೆ. ಇದು ಇನ್ನು ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರದಲ್ಲಿ ಅಳತೆಗೋಲಿನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಿನಿಮಾ, ರೆಸ್ಟೋರೆಂಟ್, ರೆಸಾರ್ಟ್ ಇಂಥ ಕಡೆಗೆ ಕುಟುಂಬದ ಜೊತೆಗೆ ತೆರಳುವಂಥ ಯೋಗ ಇದೆ. ಫ್ಯಾಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಏರಿಕೆ ಆಗುವ ಕೆಲವು ಆಫರ್ ಗಳು ಹುಡುಕಿಕೊಂಡು ಬರಲಿವೆ. ಇನ್ನು ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸ್ನೇಹಿತರು ಅಥವಾ ಸಂಬಂಧಿಗಳಿಂದ ಬಹಳ ಮುಖ್ಯವಾದ ಮಾಹಿತಿ ದೊರೆಯಲಿದ್ದು, ಅದರಿಂದ ಅನುಕೂಲ ಆಗಲಿದೆ. ಆಹಾರ ಪಥ್ಯದಲ್ಲಿ ಜಾಗ್ರತೆಯಿಂದ ಇರಬೇಕು. ವೈದ್ಯರು ಸೂಚಿಸಿದಂಥ ಆಹಾರ ಕ್ರಮವನ್ನು ಕಡ್ಡಾಯವಾಗಿ ಅನುಸರಿಸಿ. ಕ್ರೆಡಿಟ್ ಕಾರ್ಡ್ ಬಳಸಿ ಖರ್ಚು ಮಾಡುತ್ತಾ ಇದ್ದೀರಿ ಅಂತಾದಲ್ಲಿ ಅಗತ್ಯದಷ್ಟು ಮಾತ್ರ ಖರೀದಿ ಮಾಡಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಯಾವುದು ನಿಮಗೆ ಒತ್ತಡ ಹಾಗೂ ಯಾವುದು ನಿಮ್ಮ ಪರವಾಗಿ ಇರುವ ಸನ್ನಿವೇಶ ಎಂಬುದನ್ನು ನಿರ್ಧರಿಸುವುದಕ್ಕೆ ಸಾಧ್ಯ ಆಗುವುದಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಆಗಿದೆ ಎಂಬ ಕಾರಣಕ್ಕೆ ಆಲೋಚನೆಯಲ್ಲಿ- ನಿರ್ಧಾರದಲ್ಲಿಯೂ ನಿಮಗೆ ಅನುಕೂಲ ಆಗುವಂತೆ ನಡೆದುಕೊಂಡಲ್ಲಿ ದೀರ್ಘಾವಧಿಗೆ ಪರಿಣಾಮ ಬೀರುತ್ತದೆ ಎಂಬುದು ನೆನಪಿನಲ್ಲಿ ಇರಲಿ. ಮಕ್ಕಳ ಶಿಕ್ಷಣಕ್ಕೆ ಬೇಕಾದ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧತೆಯನ್ನು ಆರಂಭಿಸುತ್ತೀರಿ. ಆದಾಯಕ್ಕೆ ಬೇಕಾದಂಥ ಮೂಲಗಳನ್ನು ಮಾಡಿಕೊಳ್ಳಲು ಪ್ರಯತ್ನ ಮಾಡಲಿದ್ದೀರಿ. ಮನೆದೇವರ ಪೂಜೆ, ಉತ್ಸವ, ಜಾತ್ರೆ ಇಂಥವುಗಳಿಗೆ ದೇಣಿಗೆಯನ್ನು ನೀಡುವಂಥ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಇನ್ನು ಯಾಕೆ, ಏನು ಮತ್ತು ಎಲ್ಲಿ ಈ ರೀತಿ ಪ್ರಶ್ನೆಗಳನ್ನು ಕೇಳದೆ ಯಾವುದೇ ಕೆಲಸ- ಕಾರ್ಯವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮ ವಿಶ್ಲೇಷಣೆ, ಯಾವುದೇ ವಿಷಯವನ್ನು ಆಳಕ್ಕೆ ಹೋಗಿ ನೋಡುವ ರೀತಿ ಒಳ್ಳೆ ರಿಟರ್ನ್ಸ್ ನೀಡಲಿದೆ. ನಿಮಗೇ ಕಿರಿಕಿರಿ ಆಗುವಂಥ ಸನ್ನಿವೇಶ ಸಹ ನಿಭಾಯಿಸುವ ರೀತಿಯಲ್ಲಿ ಯಶಸ್ಸು ಪಡೆದುಕೊಳ್ಳುತ್ತೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಹೊಸದರ ಕಡೆಗೆ ಹೊರಳುವಂಥ ಯೋಗ ಇದೆ. ಹೂಡಿಕೆಯಲ್ಲಿ ಸ್ವಲ್ಪ ಭಾಗವನ್ನು ಹಿಂತೆಗೆದುಕೊಂಡು ಕೆಲವು ಪ್ರಯೋಗ ಮಾಡಲು ಮನಸ್ಸು ಮಾಡಲಿದ್ದೀರಿ. ಅದರಲ್ಲೂ ಹೋಟೆಲ್, ಹೋಮ್ ಸ್ಟೇ, ಸರ್ವೀಸ್ ಅಪಾರ್ಟ್ ಮೆಂಟ್ ಇಂಥವುಗಳನ್ನು ಮಾಡುತ್ತಾ ಇರುವವರಿಗೆ ಪ್ರಮುಖವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ವಹಿಸ ಬೇಕೆಂದಿದ್ದ ಕೆಲಸವೊಂದನ್ನು ಕೊನೆ ಕ್ಷಣದಲ್ಲಿ ಬೇರೆಯವರು ಪಡೆದುಕೊಂಡರು ಎಂಬ ಮಾಹಿತಿ ನಿಮ್ಮ ಕಿವಿಗೆ ಬೀಳಲಿದ್ದು, ಇಂಥವುಗಳಿಗೆ ಹೆಚ್ಚು ರಿಯಾಕ್ಟ್ ಮಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಆದಾಯ ದೊಡ್ಡ ಮಟ್ಟದಲ್ಲಿ ಹೆಚ್ಚಳ ಆಗುವುದಕ್ಕೆ ದಾರಿ ತೆರೆದುಕೊಳ್ಳುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ಹುಡುಕಿಕೊಂಡು ಬರಲಿದೆ. ಮಕ್ಕಳ ಮೇಲೆ ಈ ದಿನ ಸಿಟ್ಟು ಮಾಡಿಕೊಳ್ಳಬೇಡಿ. ಸಾಧ್ಯವಾದಷ್ಟು ಪ್ರೀತಿಯ ಮಾತಿನಿಂದಲೇ ಅವರಿಗೆ ಅರ್ಥ ಮಾಡಿಸುವುದಕ್ಕೆ ಪ್ರಯತ್ನಿಸಿ. ಕೃಷಿಕರು ಜಮೀನಿನಲ್ಲಿ ತಂತಿ- ಬೇಲಿ ಹಾಕಿಸುವುದು, ಬೋರ್ ವೆಲ್ ಕೊರೆಸುವುದು ಇಂಥ ಕೆಲವು ಕೆಲಸ- ಕಾರ್ಯ ಮಾಡಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ಸಾಲ ಪಡೆದುಕೊಳ್ಳುವ ಆಲೋಚನೆ ಸಹ ಬರಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಉದ್ಯೋಗದ ಆಫರ್ ಹುಡುಕಿಕೊಂಡು ಬರಲಿದೆ. ಅದನ್ನು ಒಪ್ಪಿಕೊಳ್ಳಬೇಕಾ ಬೇಡವಾ ಎಂಬ ವಿಚಾರಕ್ಕೆ ಸ್ವಲ್ಪ ಮಟ್ಟಿಗೆ ಗೊಂದಲ ಏರ್ಪಡಲಿದೆ.

ಲೇಖನ- ಎನ್‌.ಕೆ.ಸ್ವಾತಿ