AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಡಿಸೆಂಬರ್​​ನ 4ನೇ ವಾರ ಈ ರಾಶಿಯ ಪ್ರೇಮ ಜೀವನಕ್ಕೆ ಮಹತ್ವದ ತಿರುವು ನೀಡುವ ವಾರ

ಡಿಸೆಂಬರ್ ನಾಲ್ಕನೇ ವಾರದಲ್ಲಿ ಶುಕ್ರನ ಪ್ರಭಾವದಿಂದ ಪ್ರೀತಿ, ಪ್ರೇಮ, ವಿವಾಹ ಸಂಬಂಧಗಳಲ್ಲಿ ವಿಶಿಷ್ಟ ಬದಲಾವಣೆಗಳಾಗಲಿವೆ. ಕೆಲ ರಾಶಿಗಳಿಗೆ ಸ್ಥಿರತೆ, ನಂಬಿಕೆ ಹೆಚ್ಚಿದರೆ, ಮತ್ತೆ ಕೆಲವು ರಾಶಿಗಳಿಗೆ ಭಾವನಾತ್ಮಕ ಕಲಹ ಅಥವಾ ಹೊಸ ಆಕರ್ಷಣೆ ಇರಲಿದೆ. ಪ್ರತಿಯೊಂದು ರಾಶಿಯು ಪ್ರಿಯರ ಭಾವನೆಗಳನ್ನು ಗೌರವಿಸಿ, ಅಹಂಕಾರ ತ್ಯಜಿಸಿ ಸಕಾರಾತ್ಮಕವಾಗಿ ಯೋಚಿಸಿದರೆ ಸಂಬಂಧಗಳು ಗಟ್ಟಿಯಾಗುತ್ತವೆ. ಇದು ನಿಮ್ಮ ಪ್ರೇಮ ಜೀವನಕ್ಕೆ ಮಹತ್ವದ ತಿರುವನ್ನು ನೀಡುವ ವಾರ.

Weekly Love Horoscope: ಡಿಸೆಂಬರ್​​ನ 4ನೇ ವಾರ ಈ ರಾಶಿಯ ಪ್ರೇಮ ಜೀವನಕ್ಕೆ ಮಹತ್ವದ ತಿರುವು ನೀಡುವ ವಾರ
ವಾರ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 20, 2025 | 10:24 AM

Share

ಡಿಸೆಂಬರ್ ತಿಂಗಳ ನಾಲ್ಕನೇ ವಾರ ಪ್ರೀತಿ, ಪ್ರೇಮ, ವಿವಾಹ, ಆಕರ್ಷಣೆ, ಸುಖ, ಭೋಗಗಳಿಗೆ ಮೂಲನಾದ ಶುಕ್ರನು ಕೆಲವನ್ನು ಕೊಟ್ಟು ಕಸಿಯುವುದೂ ಕಸಿದು ಪುನಃ ಕೊಡುವುದೂ ಇದೆ. ಕಸಿದಾಗ ಉತ್ತಮವಾದುದನ್ನು ಕೊಡುತ್ತಾನೆ ಎಂಬ ಸಕಾರಾತ್ಮಕ ಚಿಂತನೆ ನಿಮ್ಮಲ್ಲಿ ಬಂದಾಗ ಮನಸ್ಸು ಹಗುರವಾಗಲಿದೆ. ದುಃಖದಿಂದ ದೂರವುಳಿಯಲು ಸಾಧ್ಯ. ದೈತ್ಯರ ಗುರುವಾದ ಶುಕ್ರನು ಎಲ್ಲರಿಗೂ ಬೇಕಾದ ಸುಖವನ್ನು ಮಾತ್ರ ಕೊಡಲಿ.

ಮೇಷ ರಾಶಿ:

ನಾಲ್ಕನೇ ವಾರ ಮೊದಲ ರಾಶಿಯವರಿಗೆ ಶುಕ್ರನ ಸಂಚಾರದಿಂದ ನಿಮ್ಮ ಪ್ರೇಮ ಜೀವನದಲ್ಲಿ ಉತ್ಸಾಹ ಮತ್ತು ತೀವ್ರತೆ ಕಡಿಮೆಯಾಗಲಿದೆ. ಆಕರ್ಷಣೆಯಿಂದ ತಕ್ಷಣ ಹುಟ್ಟುವ ಸ್ವಭಾವದಿಂದ ಹೊಸ ಸಂಬಂಧಗಳು ಆರಂಭವಾಗುವ ಸಾಧ್ಯತೆ ಇದೆ. ಆದರೆ ಅತಿಯಾದ ಆತುರ ಮತ್ತು ಸ್ವಾರ್ಥದಿಂದ ಪ್ರೇಮದಲ್ಲಿ ಸಣ್ಣ ಕಲಹಗಳು ಉಂಟಾಗಬಹುದು. ಈ ವಾರ ಪ್ರಿಯ ವ್ಯಕ್ತಿಯ ಭಾವನೆಗಳನ್ನು ಗೌರವಿಸಿದರೆ ಸಂಬಂಧ ಗಾಢವಾಗುತ್ತದೆ. ವಿವಾಹದ ವಿಚಾರದಲ್ಲಿ ಚರ್ಚೆಗಳು ನಡೆಯಬಹುದು.

ವೃಷಭ ರಾಶಿ:

ಶುಕ್ರನ ಆಧಿಪತ್ಯದ ಈ ರಾಶಿಗೆ ಶುಕ್ರನ ಅನುಗ್ರಹದಿಂದ ಪ್ರೇಮದಲ್ಲಿ ಸ್ಥಿರತೆ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಹೃದಯದಿಂದ ನೀಡಿದ ಪ್ರೀತಿ ಮತ್ತು ಮೃದುತ್ವ ತರುತ್ತದೆ. ಹಳೆಯ ಸಂಬಂಧಗಳು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳಿ. ಪ್ರೇಮ ವಿವಾಹ ಅಥವಾ ದಾಂಪತ್ಯ ಸುಖಕ್ಕೆ ಉತ್ತಮ ಕಾಲ. ಪ್ರಿಯರೊಂದಿಗೆ ಕಾಲ ಕಳೆಯಲು ಇದು ಅನುಕೂಲವಾದ ವಾರ.

ಮಿಥುನ ರಾಶಿ:

ನಾಲ್ಕನೇ ವಾರ ಪ್ರೇಮದಲ್ಲಿ ಮಾತುಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಶುಕ್ರನ ಸಂಚಾರದಿಂದ ನಿಮ್ಮ ಚತುರ ಮಾತುಗಳು ಆಕರ್ಷಣೆಯಾಗುತ್ತವೆ. ಆದರೆ ಅಜಾಗರೂಕ ಮಾತುಗಳು ದೂರವನ್ನೂ ಸೃಷ್ಟಿಸಬಹುದು. ಪ್ರೇಮ ಸಂಬಂಧದಲ್ಲಿ ಸ್ಪಷ್ಟತೆ ಅಗತ್ಯ. ಸಂದೇಶ ಅಥವಾ ಕರೆಗಳ ಮೂಲಕ ಹಳೆಯ ಪ್ರೀತಿ ಮತ್ತೆ ಜೀವ ಪಡೆಯುವ ಸೂಚನೆ.

ಕರ್ಕಾಟಕ ರಾಶಿ:

ಈ ರಾಶಿಯವರಿಗೆ ಡಿಸೆಂಬರ್ ನ ಈ ವಾರ ಭಾವನೆಗಳು ತುಂಬಾ ಆಳವಾಗಿ ಕೆಲಸ ಮಾಡಲಿದೆ. ಶುಕ್ರನ ಪ್ರಭಾವದಿಂದ ಮನಸ್ಸಿನೊಳಗೆ ಮರೆಮಾಚಿದ ಪ್ರೇಮ ಭಾವನೆಗಳು ಹೊರಬರುವ ಸಾಧ್ಯತೆ. ಹಳೆಯ ನೆನಪುಗಳು ಮತ್ತೆ ಕಾಡಬಹುದು. ನಿಮಗೆ ಪ್ರೇಮದಲ್ಲಿ ಭದ್ರತೆ ಬೇಕೆಂಬ ಆಸೆ ಹೆಚ್ಚಾಗುತ್ತದೆ. ಭಾವನಾತ್ಮಕ ಅವಲಂಬನೆ ಹೆಚ್ಚದಂತೆ ಎಚ್ಚರಿಕೆಯೂ ಅಗತ್ಯ.

ಸಿಂಹ ರಾಶಿ:

ಈ ವಾರ ಶುಕ್ರನ ಸಂಚಾರದಿಂದ ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗುತ್ತದೆ. ಪ್ರೇಮದಲ್ಲಿ ಗಮನ ನಿಮ್ಮ‌ ಮೇಲೆ ಕೇಂದ್ರೀಕೃತವಾಗಬೇಕು ಎಂಬ ಬಯಕೆ ಹೆಚ್ಚಬಹುದು. ಪ್ರಿಯ ವ್ಯಕ್ತಿಯಿಂದ ಗೌರವ ನಿರೀಕ್ಷೆ ಅಧಿಕವಾಗುತ್ತದೆ. ಅಹಂಕಾರವನ್ನು ಕಡಿಮೆ ಮಾಡಿ ಪ್ರೀತಿಯನ್ನು ಹಂಚಿಕೊಂಡರೆ ಸಂಬಂಧ ಇನ್ನಷ್ಟು ಹೊಳಪು. ಪ್ರೇಮವನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕಾಗಬಹುದು.

ಕನ್ಯಾ ರಾಶಿ:

ಈ ವಾರ ಪ್ರೇಮವನ್ನು ನೀವು ತರ್ಕದ ಕಣ್ಣಿನಿಂದ ನೋಡುವ ಪ್ರವೃತ್ತಿ ಹೆಚ್ಚಾಗುತ್ತದೆ. ಶುಕ್ರನ ಪ್ರಭಾವದಿಂದ ಹೃದಯ ಮತ್ತು ಬುದ್ಧಿಯ ನಡುವೆ ಸಂಘರ್ಷ ಉಂಟಾಗಬಹುದು. ಅತಿಯಾದ ವಿಮರ್ಶೆ ಪ್ರೀತಿಯ ಮಧುರತೆಯನ್ನು ಕಡಿಮೆ ಮಾಡಬಹುದು. ಸಣ್ಣ ತಪ್ಪುಗಳನ್ನು ಕ್ಷಮಿಸುವ ಮನೋಭಾವ ಬೆಳೆಸಿದರೆ ಸಂಬಂಧಕ್ಕೆ ಮಾರ್ಗ ಸುಗಮ.

ತುಲಾ ರಾಶಿ:

ಶುಕ್ರನ ಸ್ವಾಮಿತ್ವದ ರಾಶಿಯವರಿಗೆ ಅನುಕೂಲ ಸ್ಥಿತಿಯಲ್ಲಿ ಇರುವುದರಿಂದ ಪ್ರೇಮ ಜೀವನ ಅತ್ಯಂತ ಸುಂದರವಾಗಿ ಸಾಗಲು ಬೇಕಾದ ಅವಕಾಶಗಳು ಸಿಗಲಿದೆ. ಆಕರ್ಷಣೆ ಇಬ್ಬರಲ್ಲೂ ಸಮತೋಲನದಲ್ಲಿದ್ದು ಪರಸ್ಪರ ಗೌರವವನ್ನು ಕೊಟ್ಟರೆ ಮಧುರತೆ ಇಬ್ಬರಲ್ಲಿಯೂ ಹೆಚ್ಚಾಗುತ್ತದೆ. ಹೊಸ ಪ್ರೇಮ ಆರಂಭಕ್ಕೂ, ವಿವಾಹ ಸಂಬಂಧದ ಮಾತುಕತೆಗೆ ಅತ್ಯುತ್ತಮ ಕಾಲ. ಅತಿಪ್ರಿಯರೊಂದಿಗೆ ಸೌಂದರ್ಯ ಕ್ಷಣಗಳನ್ನು ಹಂಚಿಕೊಳ್ಳುವಿರಿ.

ವೃಶ್ಚಿಕ ರಾಶಿ:

ಈ ರಾಶಿಯವರಿಗೆ ಪ್ರೇಮದಲ್ಲಿ ಸ್ವಾಮ್ಯಭಾವ ಹೆಚ್ಚಾಗಬಹುದು. ಶುಕ್ರನ ಸಂಚಾರದಿಂದ ಆಂತರಿಕ ಅಸೂಯೆ ಮತ್ತು ಸಂಶಯಗಳು ಮೇಲಕ್ಕೆ ಬರಲಿದೆ. ಇದನ್ನು ನಿಯಂತ್ರಿಸಿದರೆ ಸಂಬಂಧ ಅತ್ಯಂತ ಆಳವಾಗಿ ರೂಪುಗೊಳ್ಳುತ್ತದೆ. ನಿಮ್ಮ ಮೇಲೆ ಗುಪ್ತ ಪ್ರೇಮ ಅಥವಾ ರಹಸ್ಯ ಸಂಬಂಧಗಳ ಸೂಚನೆಯೂ ಸಿಗಲಿದೆ.

ಧನು ರಾಶಿ:

ಇದು ಸ್ವಾತಂತ್ರ್ಯ ಮತ್ತು ಪ್ರೇಮ ಎರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳಬೇಕಾದ ವಾರ. ಶುಕ್ರನು ನಿಮ್ಮ ರಾಶಿಯಲ್ಲಿಯೇ ಇರುವ ಕಾರಣ ದೂರದ ವ್ಯಕ್ತಿಯೊಂದಿಗೆ ಪ್ರೇಮ ಬೆಳೆಯಬಹುದು. ಪ್ರವಾಸ, ಅಧ್ಯಯನ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಪರಿಚಯವಾಗುವ ಸಾಧ್ಯತೆ. ಪ್ರೇಮದಲ್ಲಿ ತಾತ್ವಿಕ ಚರ್ಚೆಗಳು ಹೆಚ್ಚಾಗಿರುವುದು.

ಮಕರ ರಾಶಿ:

ಈ ವಾರ ಒಪ್ಪಿತ ಪ್ರೇಮದಲ್ಲಿ ಜವಾಬ್ದಾರಿ ಮತ್ತು ಭವಿಷ್ಯದ ಯೋಜನೆಗಳು ಮುಖ್ಯವಾಗುತ್ತವೆ. ಶುಕ್ರನ ಸಂಚಾರದಿಂದ ಗಂಭೀರ ಸಂಬಂಧಗಳು ಸ್ಥಿರ ರೂಪ ಪಡೆಯುತ್ತವೆ. ಪ್ರೇಮ ವಿವಾಹದ ಬಗ್ಗೆ ಕುಟುಂಬದೊಂದಿಗೆ ಮಾತುಕತೆ ನಡೆಯಲಿದ್ದು ಭಾವನೆಗಳನ್ನು ವ್ಯಕ್ತಪಡಿಸಲು ಸ್ವಲ್ಪ ಹಿಂಜರಿಕೆ ಕಾಣಬಹುದು, ಆದರೆ ಅಂತರಂಗ ಗಟ್ಟಿಯಾಗಿರಲಿ.

ಕುಂಭ ರಾಶಿ:

ಪ್ರೇಮದಿಂದ ಸ್ನೇಹಕ್ಕೆ ಬದಲಾವಣೆ ಆಗುವ ಸಾಧ್ಯತೆ ಇರುವ ವಾರ. ಶುಕ್ರನು ವಿಭಿನ್ನ ಆಲೋಚನೆಗಳಿರುವ ವ್ಯಕ್ತಿಯತ್ತ ಆಕರ್ಷಣೆ ಮಾಡಿಸುವನು. ಸಾಮಾಜಿಕ ಜಾಲತಾಣ ಅಥವಾ ಸಮೂಹ ಚಟುವಟಿಕೆಗಳಿಂದ ಪ್ರೇಮ ಆರಂಭ. ಸಂಪ್ರದಾಯ ಬದ್ಧತೆಯಿಂದ ಭಿನ್ನವಾದ ಸಂಬಂಧಗಳಲ್ಲಿ ಭಿನ್ನಮತ ಪ್ರಕಟ.

ಮೀನ ರಾಶಿ:

ಈ ವಾರ ಶುಕ್ರನ ಉನ್ನತ ಪ್ರಭಾವದಿಂದ ಪ್ರೇಮ ಅತ್ಯಂತ ಮೃದು, ಕರುಣಾಮಯ ಅನುಭವವಾಗುತ್ತದೆ. ಈ ವಾರ ಆಕಸ್ಮಿಕವಾಗಿ ಆದ ಪರಿಚಯ ಕಾರಣಾಂತರಗಳಿಂದ ಮುಂದುವರಿಯುವುದು. ಆರಂಭದಲ್ಲಿ ಯಾವ ಭಾವನೆಯೂ ಇಲ್ಲದೇ ಇರುವ ನಿಮಗೆ ಅನಂತರ ಸಂದೇಹ ಆರಂಭವಾಗಲಿದೆ. ಸಹವರ್ತಿಗಳೂ ಅದಕ್ಕೆ ಸಹಕಾರವನ್ನು ನೀಡುವರು. ಗುರು ಹಿರಿಯರ ಸಮಕ್ಷದಲ್ಲಿ ವಿವಾಹಕ್ಕೂ ನಿಶ್ಚಯವಾಗಲಿದೆ.

– ಲೋಹಿತ ಹೆಬ್ಬಾರ್ – 8762924271 (what’s app only)