ದೀಪಾವಳಿ ಎಂದ ತಕ್ಷಣ ಎಲ್ಲಾ ಕಡೆಗಳಲ್ಲೂ ದೀಪಹಚ್ಚಿ ಸಂಭ್ರಮಿಸುವ ಹಿಂದೂಗಳ ಅತೀ ದೊಡ್ಡ ಹಬ್ಬ. ಹಿಂದೂಗಳು ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ,ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ ಶ್ರೀರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ದಿನ, ಮತ್ತು ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ದೀಪಾವಳಿಯನ್ನು ಆಚರಿಸುತ್ತಾರೆ. ಕೇವಲ ಹಿಂದೂಗಳು ಮಾತ್ರ ಆಚರಿಸದೆ ಸಿಖ್ ಮತ್ತು ಬೌದ್ಧ ಧರ್ಮದವರು ಇದನ್ನು ಆಚರಿಸುತ್ತಾರೆ.
ಸಿಖ್ ಧರ್ಮದಲ್ಲಿ ಸಿಖ್ಖರ ಆರನೇ ಗುರು ಹರಗೋಬಿಂದ್ ಸಿಂಗ್ ರವರು ಬಂಧನದಿಂದ ಬಿಡುಗಡೆ ಆದ ದಿನವೆಂದು .. ಜೈನ್ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಮಾಸದ ಚತುರ್ದಶಿಯಂದು ಮೋಕ್ಷ ಹೊಂದಿದ ದಿನವಾಗಿ ಕಾರ್ತಿಕ ಮಾಸದ ಮೂರು ದಿನ ದೀಪಾವಳಿ ಆಚರಿಸುತ್ತಾರೆ.
1) ಮೇಷ:-ದೀಪಾವಳಿಯು ಈ ರಾಶಿಗೆ ಅದೃಷ್ಟ ನೀಡುವುದು ಖಚಿತ ಈ ರಾಶಿಯವರ ಆರೋಗ್ಯ ಉತ್ತಮವಾಗಿ ಇರುವುದು,ಉದ್ಯೋಗದಲ್ಲಿ ಉತ್ತಮವಾದ ಅವಕಾಶ ಒದಗಿ ಬರುತ್ತದೆ , ನೂತನವಾದ ಹೊಸ ಕೆಲಸಕ್ಕೆ ಕೈ ಹಾಕುವಿರಿ, ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು, ಬೆಲೆಬಾಳುವ ವಸ್ತು ಪ್ರಾಪ್ತಿ ಅಥವಾ ಖರೀದಿ ಮಾಡುವಿರಿ , ಉದ್ಯೋಗಿಗಳಿಗೆ ಸ್ವಲ್ಪ ಒತ್ತಡ ಮತ್ತು ಓಡಾಟ ಇರುತ್ತದೆ, ತ್ರಿದೋಷದಿಂದ ಆರೋಗ್ಯ ಕಿರಿಕಿರಿ ಅನಿಸಬಹುದು. ಒಟ್ಟಾರೆ ದೀಪಾವಳಿಯು ಈ ರಾಶಿಗೆ ಶುಭವನ್ನೆ ನೀಡುತ್ತಿದೆ.
2)ವೃಷಭ:- ಈ ರಾಶಿಯ ವ್ಯಾಪಾರಿಗಳು,ಉದ್ಯೋಗಿಗಳಿಗೆ ಪ್ರಗತಿಯಾಗುವುದು,ಶತ್ರುಗಳು ಮಿತ್ರರಗುವರು, ಸರಕಾರಿ ಹಾಗೂ ಸಮಾಜದವರಿಂದ ಅನುಕೂಲ ಆಗುವುದು,ಸ್ವಲ್ಪ ಆರೋಗ್ಯದಲ್ಲಿ ವೆತ್ಯಾಸ ಆಗುವ ಸಾಧ್ಯತೆ ಇದೆ, ಈ ಹಿಂದೆ ಮಾಡಿದ ಕೆಲಸದ ಫಲ ಈಗ ದೊರಕಲಾರಂಭಿಸುವುದು, ವ್ಯವಹಾರ ಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳುವಿರಿ,ವಿಶೇಷವಾಗಿ ಈ ವರ್ಷದ ದೀಪಾವಳಿ ನಿಮಗೆ ಶುಭ ಸಮಾಚಾರವನ್ನು ಕೇಳುವಂತೆ ಮಾಡುತ್ತದೆ…
3)ಧನು:- ಈ ರಾಶಿಯ ಜನರಿಗೆ ಸೇವಕರಿಂದ ಲಾಭ ದೊರಕುವುದು, ಧನುರ್ ರಾಶಿಯ ಉದ್ಯೋಗಿಗಳಿಗೆ ಪದವಿ,ಅಧಿಕಾರ ಪ್ರಾಪ್ತಿ ಆಗುವುದು,ಸಾಧು ಸಂತರನ್ನು ಪರಿಚಯ ಮಾಡುವುದು ಅಥವಾ ಬೇಟಿ ಮಾಡುವಿರಿ, ಸರಕಾರದಿಂದ ಸಹಾಯ ದೊರಕುತ್ತದೆ, ಭೂ ಸಂಪತ್ತಿನಲ್ಲಿ ಅಭಿವೃದ್ಧಿ ದೊರಕುವುದು,ನಿಮ್ಮ ಕೆಲಸಕ್ಕೆ ತಕ್ಕಂತೆ ಫಲ ಖಂಡಿತ ದೊರಕುವುದು, ಹೊಸದಾದ ಪದವಿ , ಗೌರವವನ್ನು ದೀಪಾವಳಿಯು ನಿಮಗೆ ನೀಡುತ್ತಿದೆ.
4) ಮಕರ:- ಈ ರಾಶಿಯ ಜನರು ದೀಪಾವಳಿಯ ನಂತರ ಮಹತ್ವದ ಜಟಿಲವಾದ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳುವರು , ಅಂದುಕೊಂಡ ಗುರಿಯನ್ನು ಸುಲಭವಾಗಿ ತಲುಪುತ್ತಾರೆ, ವೈಭೋಗದ ಜೀವನ ಶೈಲಿಯನ್ನು ಇನ್ನೂ ಅಭಿವೃದ್ಧಿ ಮಾಡುವಿರಿ, ಅವಮಾನದ ಭಯ ಇದ್ದರೂ 2023 ರ ದೀಪಾವಳಿಯು ಹೆಚ್ಚಿನ ಶುಭವನ್ನೇ ಈ ರಾಶಿಗೆ ನೀಡುತ್ತಿದೆ…
ಲೇಖನ: ಮಂಜುನಾಥ ಭಟ್, ಕೋಗೋಡು
8277173283
ಮತ್ತಷ್ಟು ಜ್ಯೋತಿಷ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Thu, 9 November 23