ದ್ವಾದಶಿ ತಿಥಿ ಹಾಗೂ ಶ್ರವಣಾ ನಕ್ಷತ್ರಗಳ ಅಪರೂಪದ ಸಂಯೋಗ ಇಂದು ಹೀಗೆ ಮಾಡಿದರೆ ಒಳಿತು

| Updated By: ವಿವೇಕ ಬಿರಾದಾರ

Updated on: Sep 15, 2024 | 6:27 AM

ಪಂಚಾಂಗದಲ್ಲಿ ತಿಥಿ ವಾರ ನಕ್ಷತ್ರಗಳು ಬಹಳ ಮುಖ್ಯವಾದವು. ಅವುಗಳ ಆಧಾರದ ಮೇಲೆ ಹೊಸ ಕಾರ್ಯಗಳ ಆರಂಭ, ಸಮೃದ್ಧಿ ಎಲ್ಲವೂ ಆಗುವುದು. ಏಕೆಂದರೆ ಅವುಗಳ ದೇವತಾ ಶಕ್ತಿಗಳು ಇವೆ. ಆ ಶಕ್ತಿಗಳೇ ಇಡೀ ದಿನವನ್ನು ರಕ್ಷಿಸುವುದು.

ದ್ವಾದಶಿ ತಿಥಿ ಹಾಗೂ ಶ್ರವಣಾ ನಕ್ಷತ್ರಗಳ ಅಪರೂಪದ ಸಂಯೋಗ ಇಂದು ಹೀಗೆ ಮಾಡಿದರೆ ಒಳಿತು
ರಾಶಿ ಭವಿಷ್ಯ
Follow us on

ಪಂಚಾಂಗದಲ್ಲಿ ತಿಥಿ ವಾರ ನಕ್ಷತ್ರಗಳು ಬಹಳ ಮುಖ್ಯವಾದವು. ಅವುಗಳ ಆಧಾರದ ಮೇಲೆ ಹೊಸ ಕಾರ್ಯಗಳ ಆರಂಭ, ಸಮೃದ್ಧಿ ಎಲ್ಲವೂ ಆಗುವುದು. ಏಕೆಂದರೆ ಅವುಗಳ ದೇವತಾ ಶಕ್ತಿಗಳು ಇವೆ. ಆ ಶಕ್ತಿಗಳೇ ಇಡೀ ದಿನವನ್ನು ರಕ್ಷಿಸುವುದು.

ದ್ವಾದಶೀ ತಿಥಿಯ ಅಧಿಪತಿ ವಿಷ್ಣು ಹಾಗೂ ಶ್ರವಣಾ ನಕ್ಷತ್ರದ ಅಧಿಪತಿಯೂ ವಿಷ್ಣುವೇ. ಇವೆರಡೂ ಒಟ್ಟಿಗೇ ಬಂದಿರುವುದು ಅಪರೂಪ. ಈ ದಿನ ಸಂಪೂರ್ಣ ವಿಷ್ಣುವಿನ ಸಾನ್ನಿಧ್ಯವಿರುವ ದಿನವು ಇದಾಗಿದೆ. ಈ ದಿನಕ್ಕೆ ಇನ್ನಷ್ಟು ಮಹತ್ವದ ಕೊಡುವುದು ಭಾದ್ರಪದ ಮಾಸ ಮತ್ತು ಭಾನುವಾರ ಬಂದಿರುವುದು. ಅಷ್ಟೇ ಅಲ್ಲ ವಿಷ್ಣು ತನ್ನ ಯೋಗನಿದ್ರೆಯ ಪಾರ್ಶ್ವವನ್ನು ಬದಲಾಯಿಸಿಕೊಳ್ಳುವ ವಿಷ್ಣುಪರಿವರ್ತನಮ್ ಇದೇ ಆಗಿದೆ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಯಾರು ಏಕಾದಶಿಯಂದು ಉಪವಾಸ ಮಾಡಿ ಮರುದಿನ ಮಹಾವಿಷ್ಣುವನ್ನು ಪೂಜಿಸುವರೋ ಅವರಿಗೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುವುದು ಎನ್ನುತ್ತದೆ ವರಾಹ ಪುರಾಣ.

ಮೂರುಲೋಕವನ್ನು ಸಂಚಾರ ಮಾಡುವ ದೇವಿಯು ನಿನಗೆ ಸದಾ ಪ್ರಿಯಳು. ಅವಳು ದ್ವಾದಶೀ ತಿಥಿಯಂದು ತನಗೆ ಇಷ್ಟಪಟ್ಟ ರೂಪವನ್ನು ಧರಿಸುವವಳು ಆಗಿದ್ದಾಳೆ. ಯಾರು ದ್ವಾದಶಿಯಲ್ಲಿ ತುಪ್ಪವನ್ನು ಸ್ತ್ರೀ ಆಗಲಿ ಪುರುಷರಾಗಲಿ ಸೇವಿಸುವರೋ ಆವರು ಸ್ವರ್ಗವಾಸಿಯಾಗುವರು.

ದ್ವಾದಶೀ ತಿಥಿಯಲ್ಲಿ ನಕ್ಷತ್ರವೂ ತಿಥಿಯೂ ಎರಡೂ ಬಂದಾಗ ಏಕಾದಶಿಗೆ ಮಾಡುವ ಉಪವಾಸವನ್ನು ದ್ವಾದಶಿಗೆ ಮಾಡಬಹುದು ಎನ್ನುತ್ತದೆ ಸ್ಮೃತಿ. ಇನ್ನು ಮಾರ್ಕಂಡೇಯ ಪುರಾಣವು ಯಾರು ಶ್ರವಣಾ ಹಾಗೂ ದ್ವಾದಶೀಯುಕ್ತ ದಿನದಂದು ಉಪವಾಸ ಮಾಡಿದರೆ ರಾಜನಾಗುತ್ತಾನೆ ಅಥವಾ ರಾಜನಿಗೆ ಸಮಾನವಾದ ಸಂಪತ್ತನ್ನು ಪಡೆಯುತ್ತಾನೆ.

ಹೀಗೆ ಕಾಲವೇ ಮನುಕುಲವು ಅತಿಶಯವಾದ ಸಂಪತ್ತು, ಸುಖ, ಅಧಿಕಾರವನ್ನು ಪಡೆಯಲು ಒಳ್ಳೆಯದನ್ನು ಮಾಡಿಕೊಡಲಿದೆ. ಇದೆಲ್ಲವೂ ಕಾಲದ ಕರುಣೆಯಾಗಿದೆ.

ಲೋಹಿತ ಹೆಬ್ಬಾರ್ – 8762924271

Published On - 6:24 am, Sun, 15 September 24