AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 15: ಕೊನೆಯ ಹಂತಕ್ಕೆ ಬಂದಿರುವ ನಿಮ್ಮ ಕಾರ್ಯಗಳು ಕೆಡಬಹುದು. ಮನೆಯ ಕಾರ್ಯಗಳು ಇಂದು ಬಹಳ ಇರಲಿದೆ. ವಾಹನವನ್ನು ಖರೀದಿಸಲು ಬೇರೆ ಊರಿಗೆ ಹೋಗಬೇಕಾದೀತು. ಹಾಗಾದರೆ ಸೆಪ್ಟೆಂಬರ್​ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ
ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ
TV9 Web
| Edited By: |

Updated on: Sep 15, 2024 | 12:10 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಅತಿಗಂಡ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:32 ಗಂಟೆ, ರಾಹು ಕಾಲ ಸಂಜೆ 05:02 ರಿಂದ 06:33, ಯಮಘಂಡ ಕಾಲ ಮಧ್ಯಾಹ್ನ 12:28 ರಿಂದ 01:59ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:30 ರಿಂದ ಸಂಜೆ 05:02ರ ವರೆಗೆ.

ಸಿಂಹ ರಾಶಿ: ಯಾರ ಜೀವನವನ್ನೂ ಸಣ್ಣದಾಗಿ ಕಾಣುವುದು ಬೇಡ. ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಮಕ್ಕಳು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಅನಿರೀಕ್ಷಿತವಾದ ಮಿತ್ರನ ಭೇಟಿಯು ಸಂತೋಷವನ್ನು ಕೊಡಲಿದೆ. ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಬರಲಿದೆ. ಯಾವುದಕ್ಕೂ ಅವಸರಪಡದೇ ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸಿ. ಇಂದು ಮನೋರಂಜನೆಯ ಜೊತೆ ಕಾಲ ಕಳೆಯುವಿರಿ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಇಂದಿನ‌ ಅನುಭವವು ನಿಮಗೆ ಅನೇಕ‌ ಪಾಠವನ್ನು ಕಲಿಸುವುದು. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಸಜ್ಜನರ ಭೇಟಿಯು ಅಕಸ್ಮಾತ್ ಆಗಿ ಆಗುವುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ.

ಕನ್ಯಾ ರಾಶಿ: ನಿಮ್ಮ ಇಂದಿನ ಮೌನವೂ ಇನ್ನೊಬ್ಬರಿಗೆ ಚಿಂತೆಯಾಗುವುದು. ನಿಮ್ಮ ಸುಳ್ಳು ಯಾರಿಂದಲಾದರೂ ತಿಳಿದುಬರುವುದು. ಇಂದು ಕೆಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು. ವಾಹನ ಖರೀದಿಯನ್ನು ಸಾಲ‌ಮಾಡಿ ಮಾಡುವಿರಿ.‌ ಇದು ನಿಮ್ಮ ಹೊಸ ಉದ್ಯಮಕ್ಕೆ ನಾಂದಿಯನ್ನು ಹಾಡಲಿದೆ. ವಿದ್ಯಾರ್ಥಿಗಳು ಓದುವ ವಿಚಾರದಲ್ಲಿ ಹಿಂಜರಿದರೂ ಪ್ರೋತ್ಸಾಹದಿಂದ ಅಭ್ಯಾಸವನ್ನು ಮಾಡುವರು. ಪ್ರೇಮದಲ್ಲಿ ಬಿದ್ದು ಸಿಕ್ಕಿಕೊಂಡು ಕಷ್ಟಪಡುವಿರಿ. ನಮಗೆ ನೀವೇ ಸೂಕ್ತವಾದ ಚೌಕಟ್ಟು ಹಾಕಿಕೊಂಡರೆ ಒಳ್ಳೆಯದು. ನೀವು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶುಭಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ. ವೈಯಕ್ತಿಕ ವಿಚಾರದಲ್ಲಿ ಯಾರ ಮಧ್ಯಪ್ರವೇಶವನ್ನೂ ಸಹಿಸಲಾರಿರಿ.

ತುಲಾ ರಾಶಿ: ಭೂಮಿಯ ಖರೀದಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರೂ ಅದನದನು ನಿಮ್ಮದಾಗಿಸಿಕೊಳ್ಳುವುದು ಇಂದು ಕಷ್ಟ. ಇಂದು ನಿಮ್ಮ ಬೆಳವಣಿಗೆಗೆ ಪೂರಕವಾದ ಸಂದರ್ಭಗಳು ಬಂದರೂ ಅದನ್ನು ನಿರ್ಲಕ್ಷ್ಯ ಮಾಡುವಿರಿ. ಒಮ್ಮೆಲೆ ಬರುವ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಕಷ್ಟವಾಗುವುದು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ಹಣಕ್ಕೆ ಆಸೆಪಟ್ಟು ಮೋಸಹೋಗಬಹುದು. ಸಂಗಾತಿಯ ಜೊತೆ ಸಮಯವನ್ನು ಇಂದು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆ ಉಂಟಾಗಬಹುದು.‌ ಇಂದು ನಿಮಗೆ ಇಷ್ಟವಾದವರ ಜೊತೆ ಹರಟೆ ಹೊಡೆಯುವಿರಿ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ನಿಮ್ಮ ಪೂರ್ಣ ಸಾಮರ್ಥ್ಯವನ್ನು ಇಂದು ತೋರಿಸಲಾರಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು.

ವೃಶ್ಚಿಕ ರಾಶಿ: ಯಾರನ್ನೂ ನೀವು ಹೀಗೆ ಎಂದು ಫಲಕವನ್ನು ಅಂಟಿಸಲು ಸಾಧ್ಯವಾಗದು. ಇಂದು ನಿಮಗೆ ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಅವಕಾಶವಿರುವುದು. ಉದ್ಯೋಗವನ್ನು ಪಡೆಯುವ ಉತ್ಸಾಹದಿಂದ ಪ್ರಯಾಣ ಮಾಡುವಿರಿ. ಆದರೆ ಹತಾಶರಾಗುವಿರಿ. ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂಷಿಸುವರು. ಕೊನೆಯ ಹಂತಕ್ಕೆ ಬಂದಿರುವ ನಿಮ್ಮ ಕಾರ್ಯಗಳು ಕೆಡಬಹುದು. ಮನೆಯ ಕಾರ್ಯಗಳು ಇಂದು ಬಹಳ ಇರಲಿದೆ. ವಾಹನವನ್ನು ಖರೀದಿಸಲು ಬೇರೆ ಊರಿಗೆ ಹೋಗಬೇಕಾದೀತು. ಹೊಸ ಉದ್ಯಮವನ್ನು ಆರಂಭಿಸುವ ಯೋಜನೆಯನ್ನು ಆಪ್ತರಿಗೆ ಹೇಳಿ, ಸಹಾಯವನ್ನೂ ಬಯಸುವಿರಿ. ಸಾಲ ಮರುಪಾವತಿಯ ಆಗದೇ ಆತಂಕವಾಗಲಿದೆ. ಅಕ್ಕಪಕ್ಕದವರು ನಿಮ್ಮ ಸ್ಥಿತಿಯನ್ನು ಕಂಡು ಆಡಿಕೊಳ್ಳುವ ಸಾಧ್ಯತೆ ಇದೆ. ಅನಿವಾರ್ಯ ನಿರ್ಧಾರಗಳನ್ನು ತೆಗೆದುಕೊಂಡು ಅನಂತರ ಪಶ್ಚಾತ್ತಾಪಪಡುವಿರೊ. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ.

ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್!
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ